ಬೆಂಗಳೂರಿನಲ್ಲಿ ರಾಷ್ಟ್ರೀಯ ಚಿಂತನಮಂಥನ: ಕೀಟಗಳ ಜೀನೋಮಿಕ್ಸ್ ಮತ್ತು ಕೀಟ ನಿರ್ವಹಣೆಯಲ್ಲಿ ಅದರ ಭವಿಷ್ಯ

Kalabandhu Editor
2 Min Read

ಕೀಟಗಳ ಜೀನೋಮಿಕ್ಸ್ ಮತ್ತು ಕೀಟ ನಿರ್ವಹಣೆಯಲ್ಲಿ ಅದರ ಭವಿಷ್ಯ ಕುರಿತು ಬೆಂಗಳೂರಿನಲ್ಲಿ ರಾಷ್ಟ್ರೀಯ ಚಿಂತನಮಂಥನ ಕಾರ್ಯಕ್ರಮ

ಬೆಂಗಳೂರಿನ ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರಲ್ ಇನ್ಸೆಕ್ಟ್ರಿಸೋರ್ಸಸ್ (ಐಸಿಎಆರ್), 23ನೇ ಆಗಸ್ಟ್ 2024 ರಂದು “ಕೀಟಗಳ ಜೀನೋಮಿಕ್ಸ್ ಮತ್ತು ಕೀಟ ನಿರ್ವಹಣೆಯಲ್ಲಿ ಅದರ ಭವಿಷ್ಯ” ಕುರಿತು ಒಂದು ದಿನದ ರಾಷ್ಟ್ರೀಯ ಚಿಂತನಮಂಥನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.
ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿಯ ನಿರ್ದೇಶಕ ಡಾ. ರಾಕೇಶ್ ಮಿಶ್ರಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮತ್ತು ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಎಲ್.ಎಸ್.ಶಶಿಧರ ಹಾಗೂ ಐಸಿಎಆರ್ – ಎನ್ ಬಿ ಎ ಐ ಆರ್ ನಿರ್ದೇಶಕ ಡಾ.ಎಸ್.ಎನ್. ಸುಶೀಲ್ ಕಾರ್ಯಕ್ರಮದ ಸಹ ಅಧ್ಯಕ್ಷತೆ ವಹಿಸಿದ್ದರು.
ಡಾ. ಸುಶೀಲ್ ಅವರು ಐಸಿಎಆರ್ – ಎನ್ ಬಿ ಎ ಐ ಆರ್ ನ ಪ್ರಮುಖ ಸಾಧನೆಗಳ ಬಗ್ಗೆ ವಿವರಿಸಿದರು ಮತ್ತು ಸುಸ್ಥಿರ ಕೃಷಿಗಾಗಿ ಕೀಟಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಬ್ಯೂರೋದ ಬದ್ಧತೆಯನ್ನು ಪುನರುಚ್ಚರಿಸಿದರು.
ರಾಸಾಯನಿಕ ಕೀಟನಾಶಕಗಳ ದುಷ್ಪರಿಣಾಮವನ್ನು ಕಡಿಮೆ ಮಾಡಲು ಪರಿಸರ ಸ್ನೇಹಿ ಕೀಟ ನಿರ್ವಹಣೆ ತಂತ್ರಗಳನ್ನು ಅಭಿವೃದ್ಧಿಪಡಿಸಲು ನವೀನ ಆಣ್ವಿಕ ತಂ

ತ್ರಗಳನ್ನು ಅನ್ವೇಷಿಸುವ ಪ್ರಾಮುಖ್ಯತೆಯನ್ನು ಡಾ. ರಾಕೇಶ್ ಮಿಶ್ರಾ ಒತ್ತಿ ಹೇಳಿದರು. ಆಣ್ವಿಕ ಮೂಲದ ತಂತ್ರಜ್ಞಾನಗಳಿಗೆ ನಿಯಂತ್ರಕ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಅವರು ಹೇಳಿದರು. ಡಾ. ಎಲ್. ಎಸ್. ಶಶಿಧರ ಅವರು ಕೀಟ ನಿರ್ವಹಣೆಗಾಗಿ ಡಿ ಎಸ್ ಆರ್ ಎನ್ ಎ ಸಿಂಪಡಿಸಬಹುದಾದ ಕೀಟನಾಶಕಗಳು ಮತ್ತು ಜೀನ್-ಡ್ರೈವ್ ತಂತ್ರಜ್ಞಾನಗಳ ಮಹತ್ವವನ್ನು ಒತ್ತಿ ಹೇಳಿದರು. ಜೀನೋಮಿಕ್ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಡಾ. ಟಿ. ವೆಂಕಟೇಶನ್ ಅವರು ಐಸಿಎಆರ್ – ಎನ್ ಬಿ ಎ ಐ ಆರ್ ನಲ್ಲಿ ಜೀನೋಮಿಕ್ ಸಂಶೋಧನೆಯ ಅವಲೋಕನ ಮತ್ತು ಸ್ಥಿತಿಯನ್ನು ಪ್ರಸ್ತುತಪಡಿಸಿದರು ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಸ್ತುತ ಇರುವ ಮಾರ್ಗಸೂಚಿಗಳನ್ನು ವಿವರಿಸಿದರು.

 

ನಾಗಪುರದ ಐಸಿಎಆರ್–ಸಿಐಸಿಆರ್ ನ ನಿರ್ದೇಶಕ ಡಾ. ವೈ.ಜಿ. ಪ್ರಸಾದ್; ನವದೆಹಲಿಯ ಐಸಿಎಆರ್–ಐಎಆರ್ಐ ಜಂಟಿ ನಿರ್ದೇಶಕ ಡಾ. ಸಿ. ವಿಶ್ವನಾಥನ್; ನವದೆಹಲಿಯ ಐಸಿಎಆರ್–ಎನ್ ಐ ಪಿ ಬಿ ನಿರ್ದೇಶಕ ಡಾ.ಆರ್.ಸಿ. ಭಟ್ಟಾಚಾರ್ಯ; ಬಯೋಟೆಕ್ ಕನ್ಸೋರ್ಟಿಯಂ ಇಂಡಿಯಾ ಲಿಮಿಟೆಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಡಾ. ವಿಭಾ ಅಹುಜಾ ಮತ್ತು ಬೆಂಗಳೂರಿನ ಆರ್ ಪಿ ಕ್ಯೂ

 

ಎಸ್, ಜಂಟಿ ನಿರ್ದೇಶಕ (ಕೀಟಶಾಸ್ತ್ರ) ಡಾ.ಡಿ.ಕೆ. ನಾಗರಾಜು ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಿದರು. ವಿವಿಧ ಕೀಟ ಪ್ರಭೇದಗಳ ಮೇಲೆ ಆರ್ ಎನ್ ಎ ಐ ಮತ್ತು ಸಿ ಆರ್ ಎಸ್ ಪಿ ಆರ್ನಂತಹ ಜೀನೋಮಿಕ್ ತಂತ್ರಗಳ ಬಳಕೆ, ಕೀಟಗಳ ಅಣ್ವಿಕ ಸಂಶೋಧನೆಯಲ್ಲಿನ ಸವಾಲುಗಳು, ಡಿ ಎಸ್ ಆರ್ ಎನ್ ಎ ಸಿಂಪಡಿಸಬಹುದಾದ ಕೀಟನಾಶಕಗಳ ಮಾರ್ಗಸೂಚಿಗಳು, ಕೀಟ ನಿರ್ವಹಣೆಯಲ್ಲಿ ನವೀನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಕೀಟ ಜಿನೊಮ್ ಎಡಿಟಿಂಗ್ನಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಮೇಲೆ ಚರ್ಚೆಗಳು ನಡೆದವು.
ಸಹಯೋಗದ ವೇದಿಕೆಗಳ ಮೂಲಕ ಕೀಟಗಳ ಜೀನೋಮಿಕ್ ಡೇಟಾವನ್ನು ಹಂಚಿಕೊಳ್ಳಲು, ನೈತಿಕ ಮತ್ತು ನಿಯಂತ್ರಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಭವಿಷ್ಯದ ಕ್ರಿಯಾ ಯೋಜನೆಗಳಿಗೆ ನೀತಿಗಳನ್ನು ರೂಪಿಸಲು ಶಿಫಾರಸುಗಳೊಂದಿಗೆ ಅಧಿವೇಶನವು ಮುಕ್ತಾಯವಾಯಿತು. ಈ ಅಧಿವೇಶನವು ಸುಮಾರು ಐವತ್ತು ಮಂದಿ ಭಾಗವಹಿಸುವವರು ಮತ್ತು ಐ ಸಿ ಎ ಆರ್-ಐ ಎ ಆರ್ ಐ, ನವದೆಹಲಿ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳ ಇಪ್ಪತ್ತು ಪರಿಣಿತ ತಜ್ಞರನ್ನು ಒಂದೆಡೆ ಸೇರಿಸಿತು.

Share this Article