ಮತ್ತು ವೀರ ಸಿಂಧೂರ ಲಕ್ಷ್ಮಣ ಬಗ್ಗೆ ವಿವರಣೆ ಮಾಡಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಸಿಂಧೂರ ಲಕ್ಷ್ಮಣನ ಕೊಡುಗೆ ಅಪಾರವಾದದ್ದು. ಬ್ರಿಟಿಷರು ಆಗಿನ ಕಾಲದಲ್ಲಿ ಬಡಜನರಿಂದ ಹೆಚ್ಚಿನ ಕಂದಾಯ ವಸೂಲಿ ಮಾಡಿ ತಮ್ಮ ಖಜಾನೆಯಲ್ಲಿ ಬಚ್ಚಿಡುತಿದ್ದ ಸಂಪತ್ತನ್ನು ವೀರ ಸಿಂಧೂರ ಲಕ್ಷ್ಮಣ ಖಜಾನೆಯನ್ನು ಲೂಟಿ ಮಾಡಿ ಬಡಜನರಿಗೆ ಹಂಚುತ್ತಿದ್ದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಬಡಜನರಿಗೆ ಸಿಂಧೂರ ಲಕ್ಷ್ಮಣ ದೇವರಾಗಿದ್ದರು ಹಾಗೂ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿ ನಮ್ಮ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದರು.
ಈ ಮಹಾಶೂರನ ಇತಿಹಾಸ ಬಹುದೊಡ್ಡದು. ಆದರೆ ಇಂತಹ ಒಬ್ಬ ಸ್ವತಂತ್ರ ಹೋರಾಟಗಾರರನ್ನು ಸರ್ಕಾರ ಗುರುತಿಸಲು ವಿಫಲವಾಗಿದೆ. ಸ್ವತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಹೆಸರಲ್ಲಿ ಯಾವುದೇ ಮುಖ್ಯ ಸ್ಥಳಗಳಿಗೆ ರೈಲು ನಿಲ್ದಾಣಗಳಿಗೆ ರೈಲುಗಳಿಗೆ ಹಾಗೂ ವಿಮಾನ ನಿಲ್ದಾಣಗಳಿಗೆ ಮೇಲ ಸೇತುವೆ ಗಳಿಗೆ ಹೆಸರಿಲ್ಲ ವೀರ ಸಿಂಧೂರ ಲಕ್ಷ್ಮಣನನ್ನೂ ಕಡೆಗಣಿಸಿದ್ದು ಖಂಡನೀಯ.
ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಸಿಂಧೂರ ಲಕ್ಷ್ಮಣನಿಗೆ ಸರಕಾರ ಗೌರವ ನೀಡಬೇಕು. ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣ ಎಂದು ಹೆಸರು ನಾಮಕರಣ ಮಾಡಿ ಬೆಳಗಾವಿ ರೈಲು ನಿಲ್ದಾಣ ಆವರಣದ ಮುಂಭಾಗದಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಈಗಾಗಲೆ 3 ವರ್ಷಗಳಿಂದ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಇದ್ದ ಸಚಿವರುಗಳಿಗೆ ಬೆಳಗಾವಿ ಯಲ್ಲಿ ಇರುವ ಸಿಂಧೂರ ಲಕ್ಷ್ಮಣ ಅಭಿಮಾನಿ ಬಳಗದಿಂದ ಹಾಗೂ ವಿವಿಧ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಮನವಿ ಮಾಡಿದ್ದಾರೆ.
ಈ ಎಲ್ಲ ಮನವಿ ಪತ್ರಗಳನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ ರವರಿಗೆ ಮತ್ತು ಪ್ರಧಾನಿ ಮಂತ್ರಿ ಮೋದಿ ರವರಿಗೆ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ರವರಿಗೆ ಮನವಿ ಮಾಡಲಾಗಿದೆ. ಎಂದು ಈಗಿನ ಪ್ರಸ್ತುತ 2024ರ ಕೇಂದ್ರ ಸರ್ಕಾರದ ಸಂಸದರು ಕರ್ನಾಟಕ ರಾಜ್ಯದ ರೈಲ್ವೆ ಸಚಿವರಾದ ವಿ ಸೋಮಣ್ಣ ರವರಿಗೆ ವಿವರಣೆ ನೀಡಿ ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವಂತೆ ಮನವಿ ಮಾಡಲಾಯಿತು.