SachMeinTooMuch 2.0 ಅಭಿಯಾನವನ್ನು ಘೋಷಿಸಿದ ಅಮೆಜಾನ್ ಪ್ರೈಮ್
ಪ್ರೈಮ್ ಸದಸ್ಯರಿಗೆ ಹಲವು ಶಾಪಿಂಗ್, ಉಳಿತಾಯ ಮತ್ತು ಮನರಂಜನೆ ಪ್ರಯೋಜನಗಳ ಘೋಷಣೆ
ಬೆಂಗಳೂರು, ಜೂನ್ 24, 2024: ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಪಡೆಯುವ ಭಾವಕ್ಕೆ ಅಮೆಜಾನ್ ಪ್ರೈಮ್ ಪ್ರೋತ್ಸಾಹ ನೀಡುತ್ತದೆ. ಒಂದೇ ಸದಸ್ಯತ್ವದಲ್ಲಿ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯಬಹುದು. ಓದುವುದು, ಗೇಮಿಂಗ್, ಸಂಗೀತ ಕೇಳುವುದು, ಶಾಪಿಂಗ್, ಶಿಪ್ಪಿಂಗ್, ಮನರಂಜನೆ ಸೇರಿದಂತೆ ಹಲವು ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಸಮಗ್ರ ಸದಸ್ಯತ್ವವು “#SachMeinTooMuch,” ಎಂಬ ಭಾವಕ್ಕೆ ಪೂರಕವಾಗಿದ್ದು, ವ್ಯಕ್ತಿಯ ಜೀವನದ ಪ್ರತಿ ಹಂತವನ್ನೂ ಇದು ಸ್ಪರ್ಶಿಸುತ್ತದೆ. ಈ ಚಿಂತನೆಗೆ ಪೂರಕವಾಗಿ ಯಶಸ್ವಿ ಅಭಿಯಾನದ ಎರಡನೇ ಕಂತು ಸಚ್ ಮೆ ಟೂ ಮಚ್ ಅನ್ನು ಅನಾವರಣಗೊಳಿಸಲಾಗಿತ್ತು. ಇದು ಟೆಲಿವಿಷನ್ ಮತ್ತು ಡಿಜಿಟಲ್ ಕಮರ್ಷಿಯಲ್ ಆಗಿದೆ ಮತ್ತು ನೆರೆಹೊರೆಯವರ ಜೊತೆಗಿನ ಸನ್ನಿವೇಶಗಳನ್ನು ಅನಾವರಣಗೊಳಿಸುತ್ತದೆ. ಪ್ರೈಮ್ ಸದಸ್ಯತ್ವದಲ್ಲಿ ಉಚಿತ ಏಕ ದಿನದ ಡೆಲಿವರಿ, ಅನಿಯಮಿತ ಉಳಿತಾಯ ಮತ್ತು ಅದ್ಭುತ ಮನರಂಜನೆ ಸಿಗುತ್ತದೆ.
ಹೊಸ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ಪಡೆಯುವುದಕ್ಕೆ ಪ್ರೋತ್ಸಾಹವನ್ನು ಈ ಅಭಿಯಾನವು ಮೂಡಿಸುತ್ತದೆ. ಅದರ ಜೊತೆಗೆ ಈಗಾಗಲೇ ಗ್ರಾಹಕರು ಪಡೆಯುತ್ತಿರುವ ಪ್ರಯೋಜನಗಳನ್ನೂ ಇದು ಒತ್ತಿ ಹೇಳುತ್ತದೆ. ಎರಡು ಟಿವಿಸಿಗಳನ್ನು (ಮಲ್ಟಿ ಬೆನಿಫಿಟ್ ಹಾಗೂ ಸ್ಪೀಡ್) ಬಿಡುಗಡೆ ಮಾಡಲಾಗಿದ್ದು, ಇವು ವೇಗ, ಉಳಿತಾಯ ಮತ್ತು ಅದ್ಭುತ ಮನರಂಜನೆಯ ಪ್ರಯೋಜನಗಳನ್ನು ಹೇಳುತ್ತವೆ. ಒಂದೇ ದಿನದೊಳಗೆ ಡೆಲಿವರಿ, ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್, ಅಪಾರ ಆಯ್ಕೆ ಮತ್ತು ಮನರಂಜನೆಯ ವಿಷಯಗಳನ್ನು ಎರಡೂ ವೀಡಿಯೋಗಳು ಹೇಳುತ್ತವೆ. ಅಮೆಜಾನ್ ಪ್ರೈಮ್ ಮಾಸ್ಕಟ್‌ಗಳಾದ ಬಾಕ್ಸ್‌ಟ್ರೋಪೊಲಿಸ್ ಅನ್ನೂ ಕೂಡಾ ಅಭಿಯಾನವು ಹೊಂದಿದ್ದು, ಇದು ಹೆಚ್ಚು ವೈವಿಧ್ಯಮಯ ಮತ್ತು ಸಂವಾದಾತ್ಮಕವಾಗಿದೆ.
ಪ್ರೈಮ್ ಪ್ರಯೋಜನಗಳು
ಉಚಿತ ಅನ್‌ಲಿಮಿಟೆಡ್ ಅದೇ ದಿನ/1 ದಿನದ ಡೆಲಿವರಿ
ಪ್ರೈಮ್ ವೀಡಿಯೋ, ಅಮೆಜಾನ್ ಮ್ಯೂಸಿಕ್, ಪ್ರೈಮ್ ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಮೂಲಕ ಅದ್ಭುತ ಮನರಂಜನೆ
ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೇಲೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಮೂಲಕ ಭಾರಿ ಉಳಿತಾಯ
ಅಭಿಯಾನದ ಬಿಡುಗಡೆ ಬಗ್ಗೆ ಮಾತನಾಡಿದ ಅಮೆಜಾನ್ ಇಂಡಿಯಾದ ಗ್ರೋತ್ ಮತ್ತು ಕನ್ಸ್ಯೂಮರ್ ಮಾರ್ಕೆಟಿಂಗ್ ನಿರ್ದೇಶಕ ಪ್ರಜ್ಞಾ ಶರ್ಮಾ “ನಾವು ಅತ್ಯಂತ ಡೈನಾಮಿಕ್ ಆದ ಗ್ರಾಹಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಾಗಿ, ನಾವು ನಿರಂತರವಾಗಿ ಸುಧಾರಣೆ ಮಾಡುತ್ತಿರಬೇಕು ಮತ್ತು ಅನ್ವೇಷಿಸುತ್ತಿರಬೇಕು. ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೊಳ್ಳುತ್ತಿರಬೇಕು. ನಮ್ಮ #ಸಚ್‌ಮೆಟೂಮಚ್ ಅಭಿಯಾನದ ಎರಡನೇ ಹಂತವು ನಮ್ಮ ಪ್ರೈಮ್ ಗ್ರಾಹಕರಿಗೆ ಲಭ್ಯವಾಗುತ್ತಿರುವ ಮೌಲ್ಯವನ್ನು ಒತ್ತಿ ಹೇಳುತ್ತದೆ.”
ಈ ಅಭಿಯಾನದ ಬಗ್ಗೆ ಮಾತನಾಡಿದ, #ಸಚ್‌ಮೆಟೂಮಚ್ ಅಭಿಯಾನವನ್ನು ಅನಾವರಣಗೊಳಿಸಲು ನೆರವಾದ ಕ್ರಿಯಾಶೀಲ ಪಾಲುದಾರರಾಗಿರುವ ಮೀಡಿಯಾ ಮಾಂಕ್ಸ್ ಮಾತನಾಡಿ “ಮೀಡಿಯಾ ಮಾಂಕ್ಸ್ ಇಂಡಿಯಾ ಅಮೆಜಾನ್ ಪ್ರೈಮ್‌ನ ಹೊಸ ಅಭಿಯಾನದಲ್ಲಿ ಈ ವರ್ಷವೂ ಭಾಗವಹಿಸಿದ್ದು, ಪ್ರತಿ ಗ್ರಾಹಕರ ಜೀವನದ ಪ್ರತಿ ದಿನದಲ್ಲೂ ‘ಸಚ್ ಮೆ ಟೂ ಮಚ್’ ಎಂಬ ಚಿಂತನೆಯು ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ. ದಂಪತಿಯ ಮಧ್ಯೆ ನಡೆಯುವ ಸಂವಾದ ಮತ್ತು ಸನ್ನಿವೇಶದ ಮೂಲಕ ಇದನ್ನು ಕಟ್ಟಿಕೊಡಲಾಗಿದೆ. ಪ್ರೈಮ್ ಪಾತ್ರಗಳು ಮನುಷ್ಯರ ಜೊತೆಗೆ ಸಂವಾದ ನಡೆಸಿ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದು ಈ ಅಭಿಯಾನದ ಧ್ಯೇಯವಾಗಿದೆ. ಇದನ್ನು ಮೀಡಿಯಾ ಮಾಂಕ್ಸ್ ಆನಿಮೇಶನ್ ಮತ್ತು ವಿಎಫ್‌ಎಕ್ಸ್ ತಂಡದ ಪರಿಣಿತರು ರಚಿಸಿದ್ದು, ಅತ್ಯಂತ ಆನಂದದಾಯಕ ಅಭಿಯಾನವಾಗಿ ಹೊರಹೊಮ್ಮಿದೆ.”
ಒಂದೇ ಸದಸ್ಯತ್ವದಲ್ಲಿ ಹಲವಾರು ಪ್ರಯೋಜನಗಳನ್ನು ಒದಗಿಸುವುದಕ್ಕೆಂದು ಅಮೆಜಾನ್ ಪ್ರೈಮ್ ಅನ್ನು ರೂಪಿಸಲಾಗಿದೆ.