ಬೆಂಗಳೂರು : ಇತ್ತೀಚಿನ ಮಾಸ್ಟರ್‌ಷೆಫ್ ಇಂಡಿಯಾ ಸ್ಪರ್ಧೆ ಕೌತುಕ ಘಟ್ಟವನ್ನು ತಲುಪಿದೆ. ಮಾಸ್ಟರ್‌ಷೆಫ್ ಇಂಡಿಯಾ ತಮಿಳು ಸ್ಪರ್ಧೆಯಲ್ಲಿ, ಬಾಣಸಿಗರಾದ ಕೌಶಿಕ್ ಎಸ್, ರಾಕೇಶ್ ರಘುನಾಥನ್ ಮತ್ತು ಶ್ರೀಯಾ ಅಡ್ಕಾ ಅತಿಥಿ ತೀರ್ಪುಗಾರರಾಗಿ ಅಡುಗೆಮನೆಯನ್ನು ಅಲಂಕರಿಸಿದ್ದರಿಂದ ಸ್ಪರ್ಧೆಯು ರೋಮಾಂಚನಕಾರಿ ತಿರುವು ಪಡೆದಿದೆ. ಸ್ಪರ್ಧೆಗೆ ಅನಿರೀಕ್ಷಿತ ತಿರುವನ್ನು ನೀಡಿದ ಅವರು ಎಲಿಮೆಂಟ್ಸ್ ಚಾಲೆಂಜ್ ಅನ್ನು ಪ್ರಸ್ತುತಪಡಿಸುವ ಮೂಲಕ ಮನೆ ಅಡುಗೆಯವರಲ್ಲಿ ಸುಪ್ತವಾಗಿದ್ದ ಪಾಕ ಪ್ರಾವೀಣ್ಯವನ್ನು ಹೊಸ ಮಜಲಿಗೆ ಒಯ್ದಿದ್ದಾರೆ.
ಸಮಯದ ವಿರುದ್ಧದ ಈ ಸ್ಪರ್ಧೆಯಲ್ಲಿ, ಹೋಂ ಕುಕ್ ಗಳಿಗೆ ಮೂರು ರಹಸ್ಯ ಪೆಟ್ಟಿಗೆಗಳನ್ನು ನೀಡಲಾಗುತ್ತದೆ. ಇವು ಬೆಂಕಿ, ನೀರು ಮತ್ತು ಭೂಮಿ… ಈ ಮೂರು ವಿಭಿನ್ನ ಭೂತಗಳನ್ನು (ಎಲಿಮೆಂಟ್ಸ್) ಪ್ರತಿನಿಧಿಸುತ್ತವೆ. ಮಾಸ್ಟರ್‌ಷೆಫ್ ಇಂಡಿಯಾ – ತಮಿಳು, ತೀರ್ಪುಗಾರರು ನೀಡುವ ಈ ಪೆಟ್ಟಿಗೆಗಳಲ್ಲಿ ವಿಶಿಷ್ಟವಾದ ಅಡುಗೆ ಅನುಭವದ ಕೀಲಿಕೈ ಅಡಗಿರುತ್ತದೆ. ಸವಾಲಿಗೆ ಈ ಹೋಂ ಕುಕ್ ಗಳು ಪ್ರತಿ ರಹಸ್ಯ ಪೆಟ್ಟಿಗೆಯಿಂದ ಕನಿಷ್ಠ ಒಂದು ಪದಾರ್ಥವನ್ನು ಬಳಸಿಕೊಂಡು 60 ನಿಮಿಷಗಳ ಒಳಗೆ ತಮ್ಮ ಭಕ್ಷ್ಯವನ್ನು ಸಿದ್ಧಪಡಿಸಬೇಕಾಗುತ್ತದೆ.
ಬಾಣಸಿಗ ಕೌಶಿಕ್ ಎಸ್ ಎಲಿಮೆಂಟ್ಸ್ ಚಾಲೆಂಜ್ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸಿದರು: “ಹೋಂ ಕುಕ್ ಗಳು ಪ್ರತಿ ಅಂಶದ ಸೂಕ್ಷ್ಮಗಳನ್ನು ಅರಿತು ಅದನ್ನು ತಮ್ಮ ಭಕ್ಷ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಅವರ ಪಾಕ ಕೌಶಲ್ಯವನ್ನು ಮಾತ್ರವಲ್ಲದೆ ಅವರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನೂ ತೋರಿಸುತ್ತದೆ. ಪ್ರತಿ ಹೋಂ ಕುಕ್, ಜಗತ್ತಿನ ಸಾರಸರ್ವಸ್ವವಾದ ಪಂಚ ಭೂತನಗಳನ್ನು ಪ್ರತಿನಿಧಿಸುವ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ತಮ್ಮ ಗುರಿಯನ್ನು ತಲುಪಿದರು ಎಂಬುದನ್ನು ನೋಡುವುದು ಬಹಳ ಸ್ವಾರಸ್ಯಕರವಾಗಿತ್ತು. ಮಾಸ್ಟರ್‌ಷೆಫ್ ಇಂಡಿಯಾ ಅಡುಗೆಮನೆಯಲ್ಲಿ ಹೋಂ ಕುಕ್ ಗಳನ್ನು ವೀಕ್ಷಿಸಿದ ನಂತರ, ಮಾಸ್ಟರ್‌ಷೆಫ್ ಇಂಡಿಯಾ – ತಮಿಳು ನಲ್ಲಿನ ಮ್ಯಾಜಿಕನ್ನು ಯಾವಾಗ ವೀಕ್ಷಿಸುವೆನೋ ಎಂದು ಚಡಪಡಿಸುತ್ತಿದ್ದೇನೆ.”
ಬಾಣಸಿಗ ರಾಕೇಶ್ ರಘುನಾಥನ್: “ಎಲಿಮೆಂಟ್ಸ್ ಚಾಲೆಂಜ್, ಸ್ಪರ್ಧೆಗೆ ಹೊಸದೊಂದು ಆಯಾಮವನ್ನು ನೀಡಿದೆ. ಹೋಂ ಕುಕ್ ಗಳು ಸವಾಲನ್ನು ಸ್ವೀಕರಿಸಿ ಬೆಂಕಿ, ನೀರು ಮತ್ತು ಭೂಮಿಯ ಅಂಶಗಳಿಂದ ಸ್ಫೂರ್ತಿ ಪಡೆಯುವುದನ್ನು ನಾವು ವೀಕ್ಷಿಸಿದ್ದೇವೆ. ಇದು ಸ್ಪರ್ಧಿಗಳಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತಂದಿದೆ. ಈ ಸವಾಲು, ಈ ಋತುವಿನ ಸ್ಮರಣೀಯ ಹೈಲೈಟ್‌ಗಳಲ್ಲಿ ಒಂದಾಗಿದೆ.”
ಬಾಣಸಿಗ ಶ್ರೀಯಾ ಅಡ್ಕಾ: “ಮಾಸ್ಟರ್‌ಷೆಫ್ ಇಂಡಿಯಾದಲ್ಲಿ ಭಾಗವಹಿಸುವುದು ಯಾವಾಗಲೂ ಒಂದು ವಿಶೇಷವೇ. ಮತ್ತು ಈ ಸಲದ ಎಲಿಮೆಂಟ್ಸ್ ಚಾಲೆಂಜ್, ಹೋಂ ಕುಕ್ ಗಳ ಜಾಣ್ಮೆಯನ್ನು ವೀಕ್ಷಿಸಲು ಒಂದು ಸುವರ್ಣಾವಕಾಶವಾಗಿದೆ. ಈ ಸವಾಲು, ಅವರನ್ನು ಸಾಂಪ್ರದಾಯಿಕ ಮಿತಿಗಳನ್ನು ಮೀರಿ ಯೋಚಿಸಲು ಮತ್ತು ಹೊಸ ಪಾಕಶಾಲೆಯ ಹೊಸ ಎಲ್ಲೆಗಳನ್ನು ಅನ್ವೇಷಿಸುವಂತೆ ಮಾಡಿದೆ. ಇದರ ಪರಿಣಾಮವಾಗಿ ಕೆಲವು ಗಮನಾರ್ಹ ಮತ್ತು ನವೀನ ಭಕ್ಷ್ಯಗಳು ಸೃಷ್ಟಿಯಾಗಿವೆ.”
ಮತ್ತೊಂದೆಡೆ, ಮನೆಯ ಅಡುಗೆಯ ಹರೀಶ್ ಕ್ಲೋಸ್‌ಪೇಟ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡರು, “ಇದು ನನ್ನಲ್ಲಿ ಒಂದು ಪರಿವರ್ತನೆಯನ್ನು ತಂದಿದೆ. ವೀಳ್ಯದೆಲೆ, ಕಪ್ಪು ದ್ರಾಕ್ಷಿ ಮತ್ತು ಪರ್ಪಲ್ ಯಾಮ್ ಗಳನ್ನು ಒಗ್ಗೂಡಿಸಿ ಭಕ್ಷ್ಯವಾಗಿಸುವುದಕ್ಕೆ ನಿಜಕ್ಕೂ ಚಿಂತನಶೀಲರಾಗಿರಬೇಕಾಗುತ್ತದೆ. ಇದು ಖಂಡಿತವಾಗಿಯೂ ನನ್ನ ಅಡುಗೆ ಕೌಶಲ ಮತ್ತು ತಾಳ್ಮೆಯನ್ನು ಪರೀಕ್ಷಿಸಿದೆ, ಹೊಸ ಸ್ವಾದ ಮತ್ತು ತಂತ್ರಗಳ ಸಂಯೋಜನೆಗಳನ್ನು ಅನ್ವೇಷಿಸುವಂತೆ ನನ್ನನ್ನು ಉತ್ತೇಜಿಸಿದೆ. ನಾನು ನನ್ನ ಆರಾಮ ವಲಯದಿಂದ ಹೊರದೂಡಲ್ಪಟ್ಟಿದ್ದೇನೆ ಮತ್ತು ಫಲಿತಾಂಶಗಳು ನಿಜಕ್ಕೂ ತೃಪ್ತಿಕರವಾಗಿವೆ.”
ಎಲಿಮೆಂಟ್ಸ್ ಚಾಲೆಂಜ್‌ಗೆ ತೆರೆ ಬೀಳುತ್ತಿದ್ದಂತೆ, ಮಾಸ್ಟರ್‌ಷೆಫ್ ಇಂಡಿಯಾ, ಪಾಕಶಾಲೆಯ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರೆಸಿದೆ. ವಾಸ್ತವವಾಗಿ ಮಾಸ್ಟರ್‌ಷೆಫ್ ಇಂಡಿಯಾ – ತಮಿಳು ಮತ್ತು ತೆಲುಗು ಆವೃತ್ತಿಗಳು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿವೆ.
ರಾತ್ರಿ 8 ಗಂಟೆಗೆ ಸೋನಿ ಲೈವ್ ನಲ್ಲಿ ಮಾಸ್ಟರ್‌ಷೆಫ್ ಇಂಡಿಯಾ ವೀಕ್ಷಿಸಲು ಮರೆಯಬೇಡಿ!
ಮಾಸ್ಟರ್‌ಷೆಫ್ ಇಂಡಿಯಾ – ತಮಿಳು: ಎಲಿಮೆಂಟ್ಸ್ ಚಾಲೆಂಜ್ ಮೂಲಕ ತೀರ್ಪುಗಾರರಿಂದ ಹೋಂ ಕುಕ್ ಗಳ ಸಾಮರ್ಥ್ಯ ಪರೀಕ್ಷೆ
RELATED ARTICLES