ವಾಹನಗಳನ್ನು ಹೊಂದಿರುವ ರಾಜ್ಯದ ಜನತೆ ಕಳೆದ 2 ತಿಂಗಳಿಂದ ತಲೆ ಕೆಡಿಸಿಕೊಂಡು ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದಾರೆ. ಇನ್ನೇನು ರಾಜ್ಯದಲ್ಲಿನ ವಾಹನಗಳಿಗೆ HSRP(HSRP Number Plate) ಹಾಕಿಸಲು ಇದೇ ನವೆಂಬರ್ 17 ಕೊನೆಯ ದಿನವಾಗಿತ್ತು. ಇನ್ನು ಕೆಲವೇ ಕೆಲವು ದಿನ ಬಾಕಿಯಿದೆ, ಆದ್ರೆ ಇನ್ನೂ HSRP ನಂಬರ್ ಪ್ಲೇಟ್ ಹಾಕಿಸಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ?ಆದರೆ ಅದರ ಟೆನ್ಷನ್ ಈಗ ಬೇಡ. ನವೆಂಬರ್ 17 ಬದಲಿಗೆ ಫೆಬ್ರವರಿ 17ರವರೆಗೂ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯಾವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ.
ಅಧಿಕೃತ ಗೆಜೆಟ್ ನೋಟಿಫಿಕೇಶನ್ : ಈ ಕುರಿತು ಅಧಿಕೃತ ಗೆಜೆಟ್ ನೋಟಿಫಿಕೇಶನ್ ಸದ್ಯವೇ ಬಿಡುಗಡೆಯಾಗಲಿದ್ದು, ವಾಹನಗಳ ಮಾಲೀಕರು ತಲೆಬಿಸಿ ಬಿಟ್ಟು ಹೊಸ ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಾಗಿದೆ.
ದೇಶದಲ್ಲಿ ಈ ಟ್ರಾಫಿಕ್ (traffic), ಟೋಲ್ ಗೇಟ್ (Toll Gate) ಎಲ್ಲಾ ವಾಹನ ಸವಾರರಿಗೆ ಒಂದು ದೊಡ್ಡ ಸವಾಲಾಗಿದೆ. ಸರ್ಕಾರಗಳು (Government) ಕೂಡ ಇವುಗಳ ಹೊರೆಯನ್ನು ಹೇಗಾದರೂ ತಪ್ಪಿಸಬೇಕೆಂಬ ನಿಟ್ಟಿನಲ್ಲಿ ಹೊಸ ಹೊಸ ಉಪಕ್ರಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೇಶವನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಕೆಲಸ ಮಾಡುತ್ತಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಹೀಗಾಗಿ ಟೋಲ್‌ಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸುವ ಬಗ್ಗೆ ಯೋಜನೆ ಆರಂಭಿಕ ಹಂತದಲ್ಲಿದೆ. ಈ ವ್ಯವಸ್ಥೆಯಲ್ಲಿ ಉಪಗ್ರಹ ಆಧಾರಿತ ಟೋಲ್-ಸಿಸ್ಟಮ್‌ನಲ್ಲಿ ಜಿಪಿಎಸ್ ಅನ್ನು ಕಾರಿನಲ್ಲಿ ಅಳವಡಿಸಲಾಗುವುದು ಮತ್ತು ಅದರಿಂದ ಟೋಲ್ ಅನ್ನು ಕಡಿತಗೊಳಿಸಲಾಗುತ್ತದೆ.
ಈಗ ಎಲ್ಲಾ ಹಳೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸುವುದಾಗಿ ಕೇಂದ್ರ ಹೇಳಿದೆ. ತಯಾರಕರು ಕೂಡ ಈ ನಂಬರ್ ಪ್ಲೇಟ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಹಳೆಯ ನಂಬರ್ ಪ್ಲೇಟ್‌ಗಳನ್ನು ಹೊಸ ನಂಬರ್ ಪ್ಲೇಟ್‌ಗಳೊಂದಿಗೆ ಬದಲಾಯಿಸಿ ನಂಬರ್ ಪ್ಲೇಟ್‌ನಲ್ಲಿ ಸ್ವಯಂಚಾಲಿತ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಮತ್ತು ಸಾಫ್ಟ್‌ವೇರ್ ಅನ್ನು ಲಗತ್ತಿಸಲಾಗುವುದು, ಇದರಿಂದ ಸ್ವಯಂಚಾಲಿತವಾಗಿ ಟೋಲ್ ಅನ್ನು ಕಡಿತಗೊಳಿಸಲಾಗುತ್ತದೆ.
ಹೊಸ ಮಾದರಿ, ಹಲವು ಪ್ರಯೋಜನ: ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಟೋಲ್‌ನಲ್ಲಿ ದೀರ್ಘ ಸರತಿ ಸಾಲುಗಳಲ್ಲಿ ಅಥವಾ ಹೆಚ್ಚು ಸಮಯ ಕಾಯುವ ತಾಪತ್ರಯ ಇರುವುದಿಲ್ಲ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಯಾವುದೇ ನಿಲುಗಡೆ ಇರುವುದಿಲ್ಲ. ಇದರಿಂದಾಗಿ ಕಡಿಮೆ ಮಾಲಿನ್ಯ ಕೂಡ ಸಂಭವಿಸುತ್ತದೆ. ಮುಖ್ಯವಾಗಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವುದರಿಂದ ನೀವು ಹೆದ್ದಾರಿಗಳಲ್ಲಿ ಪ್ರಯಾಣಿಸಲು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಂದರೆ ಈ ಹೊಸ ವ್ಯವಸ್ಥೆಯು ನಿಮ್ಮ ಖಾತೆಯಿಂದ ಇನ್ನಷ್ಟು ಸುಲಭವಾಗಿ ಹಣವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ.