Thursday, November 30, 2023
Homeರಾಜ್ಯಬೆಂಗಳೂರು ಗ್ರಾಮಾಂತರಪೈರಸಿಯಿಂದ ವಾರ್ಷಿಕ 20,000 ಕೋಟಿ ರೂ. ನಷ್ಟ: ಉದ್ಯಮಕ್ಕಾಗುತ್ತಿರುವ ನಷ್ಟ ಎದುರಿಸಲು ಪ್ರಮುಖ ಕ್ರಮ

ಪೈರಸಿಯಿಂದ ವಾರ್ಷಿಕ 20,000 ಕೋಟಿ ರೂ. ನಷ್ಟ: ಉದ್ಯಮಕ್ಕಾಗುತ್ತಿರುವ ನಷ್ಟ ಎದುರಿಸಲು ಪ್ರಮುಖ ಕ್ರಮ

ಪೈರಸಿ ಮಾಡಿದ ಸಿನಿಮಾ ಕಟೆಂಟ್‌ ಇರುವ ವೆಬ್ ಸೈಟ್/ಆಪ್/ ಲಿಂಗ್ ಬ್ಲಾಕ್ ಮಾಡುವ/ ಅದನ್ನು ತೆಗೆದುಹಾಕುವಂತೆ ಸಿಬಿಎಫ್ ಸಿ ಮತ್ತು ಐ ಅಂಡ್ ಬಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಅಧಿಕಾರ

ಪೈರಸಿಯಿಂದಾಗಿ ಪ್ರತಿ ವರ್ಷ ಚಲನಚಿತ್ರೋದ್ಯಮ ಸುಮಾರು 20,000 ಕೋಟಿ ರೂ.ಗಳವರೆಗೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದೇಶದಲ್ಲಿ ಫಿಲಂ ಪೈರಸಿಯನ್ನು ತಡೆಯಲು ದೃಢ ಕ್ರಮಗಳನ್ನು ಕೈಗೊಂಡಿದೆ. ಈ ವರ್ಷದ ಮುಂಗಾರು ಅಧಿವೇಶನದಲ್ಲಿ ಸಂಸತ್ತು, ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯಿದೆ 1952 ಅನ್ನು ಅಂಗೀಕರಿಸಿದ ನಂತರ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪೈರಸಿ ವಿರುದ್ಧ ದೂರುಗಳನ್ನು ಸ್ವೀಕರಿಸಲು ಮತ್ತು ಡಿಜಿಟಲ್ ವೇದಿಕೆ (ಪ್ಲಾಟ್‌ಫಾರ್ಮ್)ಗಳಲ್ಲಿನ ಪೈರೇಟೆಡ್ ಕಂಟೆಂಟ್ (ವಸ್ತುವನ್ನು) ತೆಗೆದುಹಾಕಲು ಮಧ್ಯವರ್ತಿಗಳಿಗೆ ನಿರ್ದೇಶನ ನೀಡಲು ನೋಡಲ್ ಅಧಿಕಾರಿಗಳ ಸಾಂಸ್ಥಿಕ ಕಾರ್ಯತಂತ್ರವನ್ನು ಸ್ಥಾಪಿಸಿದೆ.
ಸದ್ಯ ಹಕ್ಕುಸ್ವಾಮ್ಯ(ಕಾಪಿರೈಟ್) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದನ್ನು ಹೊರತುಪಡಿಸಿ ಪೈರೇಟೆಡ್ ಚಲನಚಿತ್ರ ವಿಷಯದ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳಲು ಯಾವುದೇ ಸಾಂಸ್ಥಿಕ ಕಾರ್ಯ ವಿಧಾನವಿಲ್ಲ. ಅಂತರ್ಜಾಲ ಪ್ರಸರಣ ವ್ಯಾಪಕವಾಗಿರುವುದರಿಂದ ಮತ್ತು ಬಹುತೇಕ ಎಲ್ಲರೂ ಚಲನಚಿತ್ರ ಕಟೆಂಟ್ ಅನ್ನು ಉಚಿತವಾಗಿ ವೀಕ್ಷಿಸಲು ಆಸಕ್ತಿ ಹೊಂದಿರುವುದರಿಂದ, ಪೈರಸಿಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಈ ಮೇಲಿನ ಕ್ರಮದಿಂದಾಗಿ ಪೈರಸಿ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ತಕ್ಷಣದ ಕ್ರಮಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ಉದ್ಯಮಕ್ಕೆ ಪರಿಹಾರವನ್ನು ನೀಡುತ್ತದೆ.
ಸಂಸತ್ತಿನಲ್ಲಿ ಮಸೂದೆ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್, ಇದು ಚಲನಚಿತ್ರೋದ್ಯಮದ ಬಹುಕಾಲದ ಬೇಡಿಕೆಯಾದ ಚಲನಚಿತ್ರ ಪೈರಸಿಯನ್ನು ತಡೆಯುವ ಉದ್ದೇಶವನ್ನು ಈ ಕಾಯಿದೆಯು ಹೊಂದಿದೆ ಎಂದು ಹೇಳಿದ್ದರು. 1984ರಲ್ಲಿ ಕೊನೆಯ ಮಹತ್ವದ ತಿದ್ದುಪಡಿಗಳನ್ನು ಮಾಡಿದ ಬಳಿಕ ಸುಮಾರು 40 ವರ್ಷಗಳ ನಂತರ ಡಿಜಿಟಲ್ ಪೈರಸಿ ಸೇರಿದಂತೆ ಚಲನಚಿತ್ರ ಪೈರಸಿ ವಿರುದ್ಧ ನಿಬಂಧನೆಗಳನ್ನು ಅಳವಡಿಸಲು ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯು ಕನಿಷ್ಟ 3 ತಿಂಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ದಂಡ ವಿಧಿಸಬಹುದಾಗಿದೆ, ಜತೆಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷಗಳವರೆಗೆ ಮತ್ತು ದಂಡದ ಪ್ರಮಾಣ ಒಟ್ಟು ಉತ್ಪಾದನಾ ವೆಚ್ಚದ ಲೆಕ್ಕಪರಿಶೋಧನಾ ವರದಿಯ ಶೇ.5ವರೆಗೆ ದಂಡವನ್ನು ವಿಸ್ತರಿಸಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು? ಮೂಲ ಹಕ್ಕುಸ್ವಾಮ್ಯ ಹೊಂದಿರುವವರು ಅಥವಾ ಈ ಉದ್ದೇಶಕ್ಕಾಗಿ ಅವರಿಂದ ನಿಯೋಸ್ಪಲ್ಪಟ್ಟ ಯಾವುದೇ ವ್ಯಕ್ತಿ ಪೈರೇಟೆಡ್ ಕಂಟೆಂಟ್ ಅನ್ನು ತೆಗೆದುಹಾಕಲು ನೋಡಲ್ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಹಕ್ಕುಸ್ವಾಮ್ಯವನ್ನು ಹೊಂದಿರದ ಅಥವಾ ಹಕ್ಕುಸ್ವಾಮ್ಯ ಹೊಂದಿರುವವರು ನಿಯೋಜಿಸಿದ ವ್ಯಕ್ತಿಯಿಂದ ದೂರಗಳನ್ನು ಸ್ವೀಕರಿಸಿದರೆ ಅಂತಹ ಸಂದರ್ಭಗಳಲ್ಲಿ ನೋಡಲ್ ಅಧಿಕಾರಿಯು ಯಾವುದೇ ನಿರ್ದೇಶನಗಳನ್ನು ನೀಡುವ ಮುನ್ನ ದೂರಿನ ನೈಜತೆಯನ್ನು ನಿರ್ಧರಿಸಲು ಪ್ರತಿಯೊಂದು ಪ್ರಕರಣಗಳಲ್ಲಿ ಅವುಗಳ ಆಧಾರದ ಮೇಲೆ ವಿಚಾರಣೆಗಳನ್ನು ನಡೆಸಬಹುದು.
ಕಾನೂನು ಪ್ರಕಾರ ನೋಡಲ್ ಅಧಿಕಾರಿಗಳಿಂದ ನಿರ್ದೇಶನಗಳನ್ನು ನೀಡಲ್ಪಟ್ಟ ನಂತರ, 48 ಗಂಟೆಗಳೊಳಗೆ ಪೈರೆಟೆಡ್ ಕಂಟೆಂಟ್‌ ಒಳಗೊಂಡಿರುವ ಇಂಟರ್ ನೆಟ್ ಲಿಂಕ್ ಗಳನ್ನು ತೆಗೆದು ಹಾಕುವುದು ಕಡ್ಡಾಯವಾಗಿದೆ.
ಸಂಸತ್ 2023 ರ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯಿದೆ, 2023 (12 ರ 2023) ಚಲನಚಿತ್ರ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿದೆ, ಇದರಲ್ಲಿ ಅನಧಿಕೃತ ಧ್ವನಿಮುದ್ರಣ ಮತ್ತು ಚಲನಚಿತ್ರಗಳ ಪ್ರದರ್ಶನ ಮತ್ತು ಇಂಟರ್ನೆಟ್ ಮೂಲಕ ಅನಧಿಕೃತ ಪ್ರತಿಗಳನ್ನು ರವಾನಿಸುವುದು ಸೇರಿದಂತೆ ಎಲ್ಲ ರೀತಿಯ ಚಲನಚಿತ್ರ ಪೈರಸಿಯನ್ನು ತಡೆಯಲು ಕಠಿಣ ದಂಡವನ್ನು ವಿಧಿಸುವುದು ಒಳಗೊಂಡಿದೆ. ಈ ತಿದ್ದುಪಡಿಗಳು, ಚಲನಚಿತ್ರ ಪೈರಸಿ ಸಮಸ್ಯೆಯನ್ನು ಪರಿಹರಿಸಲು ಹಾಲಿ ಚಾಲ್ತಿಯಲ್ಲಿರುವ ಕಾನೂನುಗಳು ಅಂದರೆ, ಹಕ್ಕುಸ್ವಾಮ್ಯ ಕಾಯಿದೆ 1957 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ (ಐಟಿ) 2000 ನೊಂದಿಗೆ ಸಾಮರಸ್ಯ ಬಾಂಧವ್ಯವನ್ನು ಹೊಂದಿದೆ.
ಸಿನಿಮಾಟೋಗ್ರಾಫ್ ಕಾಯ್ದ 1952ಗೆ ಹೊಸದಾಗಿ ಸೇರ್ಪಡೆ ಮಾಡಲಾದ ಸೆಕ್ಷನ್ 6ಎಬಿ, ಈ ಕಾಯಿದೆಯಡಿಯಲ್ಲಿ ಅಥವಾ ಅದರಡಿ ಮಾಡಿರುವ ನಿಯಮಗಳಡಿ ಪರವಾನಗಿ ಪಡೆಯದ ಪ್ರದರ್ಶನ ಸ್ಥಳದಲ್ಲಿ ಸಾರ್ವಜನಿಕರ ಲಾಭಕ್ಕಾಗಿ ಪ್ರದರ್ಶಿಸಲು ಯಾವುದೇ ಚಲನಚಿತ್ರದ ನಕಲು ಪ್ರತಿಯನ್ನು ಯಾವುದೇ ವ್ಯಕ್ತಿ ಬಳಸಬಾರದು ಅಥವಾ ಪ್ರದರ್ಶಿಸಬಾರದು ಎಂದು ನಿರ್ಬಂಧಿಸುತ್ತದೆ; ಅಥವಾ ಹಕ್ಕುಸ್ವಾಮ್ಯ ಕಾಯಿದೆ 1957 ಅಥವಾ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ನಿಬಂಧನೆಗಳಡಿಯಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಯನ್ನು ಮಾಡಬಾರದೆಂದು ಹೇಳುತ್ತದೆ. ಅಲ್ಲದೆ, ಸಿನಿಮಾಟೋಗ್ರಾಫ್ ಕಾಯಿದೆಯಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾದ ಸೆಕ್ಷನ್ 7(1ಬಿ)(ii) ಸೆಕ್ಷನ್ ಅಡಿಯಲ್ಲಿ ಮೇಲೆ ಉಲ್ಲೇಖಿಸಿದ 6ಎಬಿ ಮೇಲೆ ವ್ಯತಿರಿಕ್ತ ರೀತಿಯಲ್ಲಿ ಇಂಟರ್ ಮೀಡಿಯರಿ ಫ್ಲಾರ್ಟ್ ಫಾರ್ಮ್ ಗಳಲ್ಲಿ ನಿಯಮ ಉಲ್ಲಂಘಿಸಿ ಪ್ರದರ್ಶಿಸಲಾದ/ಹೋಸ್ಟ್ ಮಾಡಲಾದ ನಕಲು ಪ್ರತಿಯನ್ನು ತೆಗೆದುಹಾಕಲು/ದುರ್ಬಲಗೊಳಿಸಲು(ಡಿಸೇಬಲ್) ಮಾಡಲು ಸರ್ಕಾರವು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬಹುದು.

RELATED ARTICLES
- Advertisment -
Google search engine

Most Popular

Recent Comments