Wednesday, November 29, 2023
Homeದೇಶಅರ್ತ್ ಚಾಂಪಿಯನ್ಸ್ (Earth Champions) ಪ್ರಾರಂಭಿಸಿದ ಸೋನಿ ಬಿಬಿಸಿ ಅರ್ತ್

ಅರ್ತ್ ಚಾಂಪಿಯನ್ಸ್ (Earth Champions) ಪ್ರಾರಂಭಿಸಿದ ಸೋನಿ ಬಿಬಿಸಿ ಅರ್ತ್

~ 3-ನಿಮಿಷಗಳ ಸರಣಿ ಕ್ಯಾಪ್ಸ್ಯೂಲ್ಸ್‌ನಲ್ಲಿ ತೊಡಗಿಕೊಳ್ಳುವಂತಹ ಹೊಸ ಯುಗವನ್ನು ಸ್ವಾಗತಿಸಿದ ಚಾನೆಲ್ ~

ಬೆಂಗಳೂರು: ಮನಸೆಳೆಯುವ ಕಥೆಹೇಳುವೆಡೆ ಮಹತ್ತರವಾದ ಹೆಜ್ಜೆಗಳನ್ನು ಇಡುತ್ತಾ, ಸೋನಿ ಬಿಬಿಸಿ ಅರ್ತ್, ತನ್ನ ಮಾರ್ಕೀ ಸಂಪತ್ತು”ಅರ್ತ್ ಚಾಂಪಿಯನ್ಸ್”ನ ಬಿಡುಗಡೆಯನ್ನು ಘೋಷಿಸಿದೆ. ಇನ್ಸ್‌ಟಾಗ್ರಾಮ್ ನೇರಪ್ರಸಾರದ ಅಧಿವೇಶನವಾಗಿ ಆರಂಭವಾದ ಅರ್ತ್ ಚಾಂಪಿಯನ್ಸ್, ಈಗ 3-ನಿಮಿಷಗಳ ಆಸಕ್ತಿಪೂರ್ಣವಾದ ಕ್ಯಾಪ್ಸ್ಯೂಲ್‌ಗಳ ರೂಪದಲ್ಲಿ ಪ್ರೇಕ್ಷಕರಿಗೆ ಪ್ರೇರಣೆ ಒದಗಿಸಿ, ಪ್ರಕೃತಿಯ ಚಿತ್ರಣದ ಮೂಲಕ ಅವರನ್ನು ಅದ್ವಿತೀಯವಾದ ಪಯಣಕ್ಕೆ ಕರೆದೊಯ್ಯಲಿದೆ. ನವಂಬರ್ 6, 2023ರಂದು ಈ ಸಂಪತ್ತು ವಾಹಿನಿಯಲ್ಲಿ ನೇರಪ್ರಸಾರಗೊಳ್ಳಲಿದೆ.

’ಅರ್ತ್ ಚಾಂಪಿಯನ್ಸ್’, ಜೀವನ ಎಲ್ಲಾ ಸ್ತರದ ಸಾಮಾನ್ಯ ಜನರಿಗೆ ಪ್ರಕೃತಿಯ ಉಪಾಸಕರ ಕಥೆಯನ್ನು ಹೇಳುತ್ತಾ, ಸಂಘಟಿತವಾಗಿ ಒಂದು ಧನಾತ್ಮಕ ಬದಲಾವಣೆಯಾಗುವಂತಹ ವೈಯಕ್ತಿಕ ಕ್ರಿಯೆಗಳ ಅದ್ಭುತ ಶಕ್ತಿಯ ಮೇಲೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದೆ. ಪ್ರತಿತಿಂಗಳೂ, ವೈಯಕ್ತಿಕ, ಮನೆ ಅಥವಾ ಸಮುದಾಯ ಮಟ್ಟದಲ್ಲಿ ವನ ಪುನಶ್ಚೇತನ, ತ್ಯಾಜ್ಯ ನಿರ್ವಹಣೆ, ಜಲ ಮತ್ತು ಗಾಳಿ ಶುದ್ಧೀಕರಣದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಜ ಜೀವನದ ಹೀರೋಗಳನ್ನು ಗೌರವಿಸಿ ಆಚರಿಸುವುದು ಸೋನಿ ಬಿಬಿಸಿ ಅರ್ತ್‌ನ ಗುರಿಯಾಗಿದೆ.

ಸಮೂಹ ಮಾಧ್ಯಮದಾದ್ಯಂತ ಜಾಹೀರಾತುಗಳೊಂದಿಗೆ ಆನ್-ಏರ್ ಸಂಪತ್ತಾಗಿ ಪ್ಯಾಕೇಜ್ ಮಾಡಲಾಗಿರುವ ಸೋನಿ ಬಿಬಿಸಿ ಅರ್ತ್ ಅವರ ಅರ್ತ್ ಚಾಂಪಿಯನ್ಸ್ ಸೆರೆಹಿಡಿಯುವ ಕಥೆಯೊಂದಿಗೆ ಹೆಣೆಯಲಾಗಿರುವ ಸೂಕ್ತ ಸಂಗೀತದೊಂದಿಗೆ ಮೂಲ ಮಾರ್ಪಾಡಿಗೆ ಒಳಗಾಗಿದೆ. ಅರ್ತ್ ಚಾಂಪಿಯನ್ಸ್‌ನ ಪ್ರಾರಂಭಿಕ(ಪರಿಚಯ)ಎಪಿಸೋಡ್, ಭಾರತದ ವನಮನುಷ್ಯ(ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ)” ಎಂದೇ ಹೆಸರುವಾಸಿಯಾಗಿರುವ ಶ್ರೀ ಜಾದವ್ ಪಾಯೆಂಗ್ ಅವರನ್ನು ಒಳಗೊಂಡಿರುತ್ತದೆ. ಅಸ್ಸಾಂನವರಾದ ಶ್ರೀ ಪಾಯೆಂಗ್, ಒಣ ಭೂಮಿಯನ್ನು ಕಂಗೊಳಿಸುವ ಮಾನವ-ನಿರ್ಮಿತ ವನವನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ನಿಸ್ವಾರ್ಥ ಹಾಗೂ ಅವಿಶ್ರಾಂತ ಶ್ರಮಕ್ಕಾಗಿ ಇವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯ ಹೆಮ್ಮೆಯ ಭಾಜನರೂ ಆಗಿದ್ದಾರೆ.

ತನ್ನ ಪ್ರಮುಖ ಶೋ ಗಳಾದ ಬ್ಲ್ಯ್ ಪ್ಲಾನೆಟ್-2, ಕ್ಲೈಮೇಟ್ ಚೇಂಗ್: ದಿ ಫ್ಯಾಕ್ಟ್ಸ್ ಮತ್ತು ಎ ಪರ್ಫೆಕ್ಟ್ ಪ್ಲಾನೆಟ್ ಮೂಲಕ ಸೋನಿ ಬಿಬಿಸಿ ಅರ್ತ್ ರಾಷ್ಟ್ರಾದ್ಯಂತ ಸಂಗಟಿತ ವೀಕ್ಷಕರಣನ್ನು ಹೊಂದಿ, ಪ್ರಾಕೃತಿಕ ಜಗತ್ತಿನೊಂದಿಗೆ ಆಳವಾದ ಸಂಬಂಧವನ್ನು ಪ್ರೋತ್ಸಾಹಿಸುತ್ತಿದೆ. ವಾಹಿನಿಯು, ತನ್ನ ವಿವಿಧ ಉಪಕ್ರಮಗ್ಳ ಮೂಲಕ, ದೀರ್ಘಸ್ಥಾಯಿತ್ವದ ಅನಿವಾರ್ಯತೆ ಮತ್ತು ಅಭಿಮಾನಿಗಳ ಸಮುದಾಯ ನಿರ್ಮಾಣ ಮಾಡುವುದರ ಕುರಿತು ಜಾಗೃತಿ ಹೆಚ್ಚಿಸುತ್ತಾ ಬಂದಿದೆ.

RELATED ARTICLES
- Advertisment -
Google search engine

Most Popular

Recent Comments