ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ’ಓಟಿಟಿ ಅಗ್ರಿಗೇಟರ್’ ಸ್ಥಾನ ಭದ್ರವಾಗಿದೆ
ಭಾರತ, ಅಕ್ಟೋಬರ್ 30, 2023: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”), ಇಂದು ತನ್ನ ವೀಡಿಯೊ ಸ್ಟ್ರೀಮಿಂಗ್ ಸೇವೆಯಾದ ಏರ್‌ಟೆಲ್ X-ಸ್ಟ್ರೀಮ್ ಪ್ಲೇ, ಅಕ್ಟೋಬರ್‌ನಲ್ಲಿ ತನ್ನ ಪಾವತಿಸಿದ ಚಂದಾದಾರರ ಸಂಖ್ಯೆ 5+ ಮಿಲಿಯನ್ ಮತ್ತು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಓಟಿಟಿ ಅಗ್ರಿಗೇಟರ್ ಸ್ಥಾನವನ್ನು ಕಾಯ್ದುಕೊಂಡಿದೆ ಎಂಬುದಾಗಿ ಪ್ರಕಟಿಸಿದೆ.
ಏರ್‌ಟೆಲ್ ಎಕ್ಸ್-ಸ್ಟ್ರೀಮ್ ಪ್ಲೇ ಭಾರತದಲ್ಲಿ, ಒಂದೇ ಅಪ್ಲಿಕೇಶನ್ ಮೂಲಕ ಅತಿದೊಡ್ಡ ಓಟಿಟಿ ವಿಷಯವಸ್ತುಗಳ ಗುಚ್ಛವನ್ನು ನೀಡುತ್ತದೆ. ಗ್ರಾಹಕರು 148 ರೂಗಳಷ್ಟು ಅತ್ಯಲ್ಪ ರೀಚಾರ್ಜ್ ಮಾಡಿಸಿ ಏರ್‌ಟೆಲ್ ಎಕ್ಸ್-ಸ್ಟ್ರೀಮ್ ಅಪ್ಲಿಕೇಶನ್ ಮೂಲಕ ಸೋನಿ ಲೈವ್, ಲಯನ್ಸ್ ಗೇಟ್ ಪ್ಲೇ, ಚೌಪಾಲ್, ಹೊಯ್ ಚೊಯ್, ಫ್ಯಾನ್ ಕೋಡ್, ಮನೋರಮಾಮ್ಯಾಕ್ಸ್, ಶೆಮಾರೂಮೀ, ಆಲ್ಟ್ ಬಾಲಾಜಿ, ಅಲ್ಟ್ರಾ, ಎರೊಸ್ ನೌ, ಎಪಿಕಾನ್, ಡಾಕ್ಯುಬೇ, ಪ್ಲೇಫಿಕ್ಸ್ ಮುಂತಾದ 20 ಕಂಟೆಂಟ್ ಪಾಲುದಾರರಿಂದ ಪ್ರೀಮಿಯಂ ವಿಷಯವಸ್ತುವನ್ನು ಮತ್ತು 40,000+ ಚಲನಚಿತ್ರಗಳನ್ನು ಮತ್ತು ಶೋಗಳನ್ನು ವೀಕ್ಷಿಸಬಹುದು.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಏರ್‌ಟೆಲ್ ಡಿಜಿಟಲ್ ಸಿಇಒ ಆದರ್ಶ್ ನಾಯರ್ ಹೀಗೆ ಹೇಳಿದರು: “ಭಾರತದಲ್ಲಿ 40+ ಓಟಿಟಿ ಅಪ್ಲಿಕೇಶನ್‌ಗಳು ಮತ್ತು ಪ್ರೀಮಿಯಂ ವಿಡಿಯೊ ವಿಷಯವಸ್ತುಗಳ ವ್ಯಾಪಕ ಆಯ್ಕೆಗಳಿವೆ. ಆದರೂ, ಈ ವಿಷಯವನ್ನು ಪತ್ತೆಮಾಡುವುದು ಮತ್ತು ಪಾವತಿಸುವುದು ಸವಾಲಿನ ಸಂಗತಿಯೇ ಆಗಿದೆ. ಏರ್‌ಟೆಲ್ ಎಕ್ಸ್-ಸ್ಟ್ರೀಮ್ ಪ್ಲೇ, ಒಂದು ಅಪ್ಲಿಕೇಶನ್ ಮತ್ತು ಒಂದು ಬೆಲೆಯಲ್ಲಿ, ದೊಡ್ಡ ಸಂಖ್ಯೆಯ ಪ್ರೀಮಿಯಂ ಓಟಿಟಿ ಅಪ್ಲಿಕೇಶನ್‌ಗಳನ್ನು ಒಂದೆಡೆ ಲಭಿಸುವಂತೆ ಮಾಡಿದೆ. ಇತ್ತೀಚೆಗೆ ನಾವು ಆಲ್ಟ್ ಬಾಲಾಜಿ, ಫ್ಯಾನ್‌ಕೋಡ್ ಮತ್ತು ಪ್ಲೇಫ್ಲಿಕ್ಸ್ ಅನ್ನು ಸೇರಿಸಿದ್ದೇವೆ. ಇದರಿಂದ ಪ್ರೀಮಿಯಂ ಕಂಟೆಂಟ್ ವ್ಯಾಪ್ತಿ ಇನ್ನೂ ವಿಶಾಲವಾಗಿದೆ ಮತ್ತು ಇಪ್ಪತ್ತು ಮಿಲಿಯನ್ ಚಂದಾದಾರರನ್ನು ಹೊಂದುವ ನಮ್ಮ ಮಹತ್ವಾಕಾಂಕ್ಷೆಗೆ ನಾವಿನ್ನೂ ಹತ್ತಿರವಾಗುವಂತೆ ಮಾಡಿದೆ.”
ಇತ್ತೀಚೆಗೆ ವೈವಿಧ್ಯಮಯ ಸರಣಿಗಳು, ಚಲನಚಿತ್ರಗಳು ಮತ್ತು ಕ್ರೀಡಾ ವಿಷಯಗಳು ಓಟಿಟಿ ವೇದಿಕೆಯ ಬಗ್ಗೆ ಬಳಕೆದಾರರ ಆಸಕ್ತಿಯನ್ನು ಬಹಳಷ್ಟು ಹೆಚ್ಚಿಸಿವೆ. ಚಂದಾದಾದರು ಶೇಕಡಾ ನಲವತ್ತೇಳರಷ್ಟು ಸಮಯವನ್ನು ಸ್ಕ್ಯಾಮ್ 2003 ಮತ್ತು ಸ್ಕ್ಯಾಮ್ 1992 ರಂತಹ ಸರಣಿಗಳ ವೀಕ್ಷಣೆಗೆ ವ್ಯಯಿಸಿದ್ದಾರೆ. ನಂತರ ಸ್ಥಾನದಲ್ಲಿ ಚಲನಚಿತ್ರಗಳು ಬರುತ್ತವೆ (ಶೇ.37 ರಷ್ಟು ಸಮಯ) — ಕ್ಯಾರಿ ಆನ್ ಜಟ್ಟಾ (ಪಂಜಾಬಿ), ಪೋರ್ ತೊಳಿಲ್ (ತಮಿಳು) ಮತ್ತು ವಾಯ್ಸ್ ಆಫ್ ಸತ್ಯನಾಥನ್ (ಮಲಯಾಳಂ) ಗಳಂತಹ ಪ್ರಾದೇಶಿಕ್ ಬ್ಲಾಕ್ ಬಸ್ಟರ್ ಚಿತ್ರಗಳು ಪ್ರಮುಖವಾದವು. ಏಷ್ಯನ್ ಗೇಮ್ಸ್ ಮತ್ತು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಿಂದಾಗಿ ಕ್ರೀಡೆಗಳ ವಿಷಯವೂ ಅಭಿಮಾನಿಗಳ ನೆಚ್ಚಿನ ವಿಷಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.airtelxstream.in/ .
ಏರ್‌ಟೆಲ್ X-ಸ್ಟ್ರೀಮ್ ಪ್ಲೇ ಹೊಸ ಮೈಲಿಗಲ್ಲು: 5-ಮಿಲಿಯನ್-ಪಾವತಿಸಿದ-ಚಂದಾದಾರರು
RELATED ARTICLES