Thursday, November 30, 2023
Homeಆರೋಗ್ಯ & ಸದೃಡತೆ'ಅಭಿವೃದ್ಧಿ' ಒಂದು ಸಾಮೂಹಿಕ ಆಂದೋಲನವಾದಾಗ: ರಾಷ್ಟ್ರೀಯ ಏಕತಾ ದಿವಸ್‌ನ ಸಾರ

‘ಅಭಿವೃದ್ಧಿ’ ಒಂದು ಸಾಮೂಹಿಕ ಆಂದೋಲನವಾದಾಗ: ರಾಷ್ಟ್ರೀಯ ಏಕತಾ ದಿವಸ್‌ನ ಸಾರ

“ಈ ದೇಶವನ್ನು ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ವೇದಕಾಲದಲ್ಲಿ ನಮಗೆ ಒಂದೇ ಒಂದು ಮಂತ್ರ ಹೇಳಲಾಯಿತು … ನಾವು ಕಲಿತಿದ್ದೇವೆ, ನಾವು ಕಂಠಪಾಠ ಮಾಡಿದ್ದೇವೆ – “ಸಂಘಚ್ಛಧ್ವಂಸಂವಾದಧ್ವಂಸಂ ವೋ ಮನನ್ಸಿ ಜಾನತಾಂ” – ನಾವು ಒಟ್ಟಿಗೆ ನಡೆಯುತ್ತೇವೆ, ನಾವು ಒಟ್ಟಿಗೆ ಚಲಿಸುತ್ತೇವೆ, ನಾವು ಒಟ್ಟಿಗೆ ಆಲೋಚಿಸುತ್ತೇವೆ, ನಾವು ಒಟ್ಟಾಗಿ ನಿರ್ಧರಿಸುತ್ತೇವೆ ಮತ್ತು ಒಟ್ಟಾಗಿ ನಾವು ಈ ದೇಶವನ್ನು ಮುನ್ನಡೆಸುತ್ತೇವೆ.
– ಶ್ರೀ ನರೇಂದ್ರ ಮೋದಿ”

– ಶ್ರೀ ಜಿ. ಕಿಶನ್ ರೆಡ್ಡಿ,
– ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು

2014ರಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು, ನವಭಾರತ ಕಟ್ಟುವ ತಮ್ಮ ದೂರದೃಷ್ಟಿಯನ್ನು ನಿರರ್ಗಳವಾಗಿ ಮಂಡಿಸಿದರು, ಅಲ್ಲಿ ಅಭಿವೃದ್ಧಿಯು ಕೇವಲ ಕಾರ್ಯಸೂಚಿಯಲ್ಲ, ಆದರೆ ಅದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ. ಜನ್ ಭಾಗಿದಾರಿ ನಮ್ಮ ಪ್ರಬಲ ಅಸ್ತ್ರವಾಗಿ ಹೊರಹೊಮ್ಮುವ ಭವಿಷ್ಯದ ಬಗ್ಗೆ ಅವರು ಸುಳಿವು ನೀಡಿದರು ಮತ್ತು ಭಾರತವು ವಿಶ್ವ ಗುರು ಸಿಂಹಾಸನಕ್ಕೆ ಕೂರಬೇಕೆಂಬ ನಮ್ಮ ಹಕ್ಕು ಪ್ರತಿಪಾದಿಸಿದರು.
ಅದೇ ವರ್ಷ, ಗೌರವಾನ್ವಿತ ಪ್ರಧಾನ ಮಂತ್ರಿ ಕ್ಯಾಲೆಂಡರ್‌ನಲ್ಲಿ ಮಹತ್ವದ ದಿನಾಂಕವನ್ನು ಕೆತ್ತಿಸಿದರು – ಅಕ್ಟೋಬರ್ 31ರಂದು ‘ರಾಷ್ಟ್ರೀಯ ಏಕತಾ ದಿವಸ್ ಆಚರಿಸುವ ಕುರಿತು. ಇದು ಭಾರತದ “ಉಕ್ಕಿನ ಮನುಷ್ಯ” ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉದಾತ್ತ ಪರಂಪರೆಗೆ ನೀಡುವ ಗೌರವವಾಗಿದೆ. ಆದಾಗ್ಯೂ, ಇದು ಕೇವಲ ದಿನಾಂಕಕ್ಕಿಂತ ಹೆಚ್ಚಿನದನ್ನು ಸೂಚಿಸುತ್ತದೆ; ಸರ್ದಾರ್ ಪಟೇಲ್ ಅವರು ಕಲ್ಪಿಸಿಕೊಂಡ ಏಕತೆ ಮತ್ತು ಏಕೀಕರಣದ ಮೂಲತತ್ವ ಪುನರುಜ್ಜೀವನಗೊಳಿಸುವ ಗಂಭೀರ ಬದ್ಧತೆಯನ್ನು ಅದು ಸಾಕಾರಗೊಳಿಸಿತು. ಇದು ಒಂದು ಭರವಸೆ, ಅವರ ಹೆಜ್ಜೆಗಳನ್ನು ಅನುಸರಿಸುವ ಸಂಕಲ್ಪ, ಒಗ್ಗಟ್ಟು ಮತ್ತು ಸಾಮೂಹಿಕ ಪ್ರಯತ್ನಗಳ ಕಾಲಾತೀತ ಮೌಲ್ಯಗಳಲ್ಲಿ ಮುನ್ನಡೆಯುತ್ತಿದೆ.
ಒಂದು ದಶಕದ ನಂತರ ನಾವು ರಾಷ್ಟ್ರೀಯ ಏಕತಾ ದಿವಸ್ ಆಚರಿಸುತ್ತಿರುವಾಗ, ಏಕತೆಯ ನಿರಂತರ ತತ್ವಗಳು ಮತ್ತು ಸಹಭಾಗಿತ್ವದ ಪ್ರಬಲ ಶಕ್ತಿಯಿಂದ ಪ್ರಕಾಶಿಸಲ್ಪಟ್ಟ ಹಾದಿಯಲ್ಲಿ ಭಾರತ ಕೈಗೊಂಡಿರುವ ಗಮನಾರ್ಹವಾದ ಸಮುದ್ರಯಾನವನ್ನು ಪುನರ್ವಿಮರ್ಶಿಸಲು ಇದು ಸೂಕ್ತ ಸಮಯವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಕೇಂದ್ರಿತ ಆಡಳಿತದ ನೀತಿಯ ಅಡಿ, ಭಾರತವು ಜಾಗತಿಕ ಸರದಾರನಾಗಿ ಪರಿವರ್ತನೆಗೊಂಡಿದೆ, “ದುರ್ಬಲ 5″ರಿಂದ ವಿಶ್ವದ ಅಗ್ರ 5 ಆರ್ಥಿಕತೆಗಳಿಗೆ ಏರಿದೆ. 2023ರಲ್ಲಿ 3.75 ಟ್ರಿಲಿಯನ್ ಡಾಲರ್ ಮೌಲ್ಯದ ಜಿಡಿಪಿಯೊಂದಿಗೆ, ನಮ್ಮ ರಾಷ್ಟ್ರವು 2004-2014ರ “ಕಳೆದುಹೋದ ದಶಕ”ದಿಂದ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಾ ಪ್ರಕಾಶಮಾನವಾಗಿ ಹೊಳೆಯುತ್ತಿದೆ.
ಗೌರವಾನ್ವಿತ ಪ್ರಧಾನ ಮಂತ್ರಿ ಅವರ ನಾಯಕತ್ವದಲ್ಲಿ ವಾರ್ಷಿಕ ಹಣಕಾಸು ಬಜೆಟ್ ಕೇವಲ ಹಣಕಾಸಿನ ನೀಲನಕ್ಷೆಯಿಂದ ಕ್ರಿಯಾತ್ಮಕ ನೀತಿ ದಾಖಲೆಯಾಗಿ ರೂಪಾಂತರಗೊಂಡಿದೆ, ಇದು ಜನರ ಆಕಾಂಕ್ಷೆಗಳಿಗೆ ಆಧಾರವಾಗಿದೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ. “ಜನರ ಬಜೆಟ್” ತನ್ನ ಹಣಕಾಸಿನ ನಿರ್ಧಾರಗಳಿಗೆ ಸರ್ಕಾರವನ್ನು ಹೊಣೆಗಾರನಾಗಿ ಮಾಡಲು ನಾಗರಿಕರಿಗೆ ಅಧಿಕಾರ ನೀಡಲಾಗಿದೆ, ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಬಜೆಟ್, ಸಕ್ರಿಯವಾಗಿ ಭಾಗವಹಿಸುತ್ತದೆ ಮತ್ತು ಸಮರ್ಥ ಸಂಪನ್ಮೂಲ ಬಳಕೆಯನ್ನು ಖಚಿತಪಡಿಸುತ್ತದೆ.
ನಮ್ಮ ಗಮನಾರ್ಹ ಬೆಳವಣಿಗೆಯು ರಾಷ್ಟ್ರೀಯ ಹೆಮ್ಮೆ, ನವೀಕರಿಸಿದ ಘನತೆ ಮತ್ತು ಹಂಚಿಕೆಯ ಮಾಲೀಕತ್ವವನ್ನು ಹೆಚ್ಚಿಸಿದೆ. ನೆಲಗಟ್ಟಿನಲ್ಲಿ ತಂದಿರುವ ಉಪಕ್ರಮಗಳ ಮೂಲಕ ಜನರು ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸಿದ್ದಾರೆ. ‘ಸ್ವಚ್ಛ ಭಾರತ ಅಭಿಯಾನದಲ್ಲಿ ಸುಮಾರು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿ, ಬಯಲು ಶೌಚವನ್ನು ನಿರ್ಮೂಲನೆ ಮಾಡಲಾಗಿದೆ; ‘ಬೇಟಿ ಬಚಾವೊ ಬೇಟಿ ಪಢಾವೊ ಹೆಣ್ಣು ಮಕ್ಕಳ ಹಕ್ಕುಗಳನ್ನು ಗೆಲ್ಲುವುದಾಗಿದೆ. ‘ಗಿವ್ ಇಟ್ ಅಪ್ ಆಂದೋಲನವು ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಸ್ವಯಂಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿಗಳನ್ನು ಕಡಿಮೆಗೊಳಿಸಿದೆ. ಇದು ‘ಜನ ಭಾಗಿದಾರಿ ಮತ್ತು ‘ರಾಷ್ಟ್ರೀಯ ಏಕತಾದ ಕೆಲವು ಉಜ್ವಲ ಉದಾಹರಣೆಗಳಾಗಿವೆ.
ಮೇಕ್ ಇನ್ ಇಂಡಿಯಾ’ ಮತ್ತು ‘ಲೋಕಲ್ ಫಾರ್ ವೋಕಲ್’ ನಮ್ಮ ಭಾರತೀಯತೆಯನ್ನು ಪುನರುಜ್ಜೀವನಗೊಳಿಸಿತು. ರಾಷ್ಟ್ರವ್ಯಾಪಿ ಜನಪ್ರಿಯ ಭಾಗವಹಿಸುವಿಕೆ-ಆಧಾರಿತ ಆಂದೋಲನವನ್ನು ಹುಟ್ಟುಹಾಕಿತು. ನಾವು ನಮ್ಮ ಎಂಎಸ್‌ಎಂಇಗಳನ್ನು ಬೆಂಬಲಿಸಿದ್ದೇವೆ, ಅವುಗಳನ್ನು ಚಾಂಪಿಯನ್ ಮಾಡಿದ್ದೇವೆ, ಉದ್ಯಮಶೀಲತೆ ಪ್ರೇರೇಪಿಸಿದ್ದೇವೆ ಮತ್ತು ಭಾರತದ ಅನನ್ಯ ಕೌಶಲ್ಯಗಳು ಮತ್ತು ಹೇರಳವಾಗಿರುವ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. ಈ ತತ್ವಶಾಸ್ತ್ರವು ಆಮದುದಾರ ರಾಷ್ಟ್ರವಾಗಿದ್ದ ಭಾರತವನ್ನು ಪ್ರಮುಖ ಜಾಗತಿಕ ಮೊಬೈಲ್ ಫೋನ್ ಉತ್ಪಾದನೆಯ ಗಮ್ಯತಾಣವಾಗಿ ಮರುರೂಪಿಸಿತು, 2014ರಿಂದ ತಯಾರಿಕೆ ಮತ್ತು ಉತ್ಪಾದನೆಯಲ್ಲಿ 300% ಏರಿಕೆಯಾಗಿದೆ. ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ಪೇಟೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಹಣಕಾಸು ವರ್ಷ 2022-23ರಲ್ಲಿ ದಾಖಲೆಯ ಪ್ರಮಾಣದಲ್ಲಿ ಸರಕುಗಳ ರಫ್ತು ಮಾಡಿ, 448 ಶತಕೋಟಿ ಡಾಲರ್ ವಹಿವಾಟು ನಡೆದಿದೆ.
‘ಡಿಜಿಟಲ್ ಇಂಡಿಯಾ’ ಪ್ರತಿನಿಧಿಸುವ ಡಿಜಿಟಲ್ ಕ್ರಾಂತಿ ಮತ್ತು ‘ನಗದು ಆರ್ಥಿಕತೆಯು ಡಿಜಿಟಲ್ ಪಾವತಿಗಳ ವ್ಯಾಪಕ ಸ್ವೀಕಾರ ಉತ್ತೇಜಿಸುವ ಸಾಮಾನ್ಯ ನಾಗರಿಕರ ಸರ್ಕಾರಿ ರಹಿತ ಪಾಲುದಾರಿಕೆಯನ್ನು ಒತ್ತಿ ಹೇಳುತ್ತಿದೆ. ವಿಶ್ವದ ಅತಿದೊಡ್ಡ ಡಿಜಿಟಲ್ ಮಾರುಕಟ್ಟೆಗಳಲ್ಲಿ ಭಾರತದ ಹಣಕಾಸು ತಂತ್ರಜ್ಞಾನ ಅಳವಡಿಕೆ ದರವು 87%ರಷ್ಟಿದೆ, ಇದು ವಿಶ್ವದ ಸರಾಸರಿ 64% ದಾಟಿದೆ. ಇದೊಂದು ಹೊಸ ದಾಖಲೆಯಾಗಿದೆ.
2014ರಿಂದ ಆರಂಭವಾಗಿರುವ ಭ್ರಷ್ಟಾಚಾರ-ವಿರೋಧಿ ಹೋರಾಟವು ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮಿದೆ. 2015ರಿಂದ 2022ರ ವರೆಗೆ ಜೆಎಎಂ(ಜನ್ ಧನ್, ಆಧಾರ್ ಮತ್ತು ಮೊಬೈಲ್ ಫೋನ್‌ಗಳು) ಮೂಲಕ 2.73 ಲಕ್ಷ ಕೋಟಿ ರೂಪಾಯಿ ಮರುಪಾವತಿಸಿದೆ. ನಕಲಿ ಫಲಾನುಭವಿಗಳನ್ನು ಬಹಿರಂಗಪಡಿಸುವುದು ಮತ್ತು ವಿತರಣಾ ವ್ಯವಸ್ಥೆಯ ಸೋರಿಕೆಯನ್ನು ತಡೆಗಟ್ಟಲಾಗಿದೆ. 2014ರ ಮೊದಲು ಅವು ವಿಪರೀತವಾಗಿದ್ದವು.
ಕೋವಿಡ್-19 ಸಾಂಕ್ರಾಮಿಕದ ನಡುವೆ, ಭಾರತದ ಒಗ್ಗಟ್ಟು ಮತ್ತು ಜನ್ ಭಾಗಿದಾರಿ ಮತ್ತೊಮ್ಮೆ ಮಿಂಚಿತು. ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಾಗಿ ರಾಷ್ಟ್ರವು ಮುಂಜಾಗ್ರತಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲು ಕಾರಣವಾಯಿತು. ಕೋವಿಡ್ ಯೋಧರು ಹೊರಹೊಮ್ಮಿದರು, ಸರ್ಕಾರದೊಂದಿಗೆ ಕೈಜೋಡಿಸಿ, ಇಡೀ ಅವ್ಯವಸ್ಥೆಗಳನ್ನು ಸ್ಥಿರತೆಗೆ ತಂದರು. ತರುವಾಯ, ಕ್ಷಿಪ್ರ ಲಸಿಕೆ ಉತ್ಪಾದನೆಯು ಸಶಕ್ತ ಭಾರತವನ್ನು ವಿಶ್ವಕ್ಕೆ ಪ್ರದರ್ಶಿಸಿತು ಆತ್ಮರಕ್ಷಣೆಯ ಜತೆಗೆ, ಏಕಕಾಲದಲ್ಲಿ ಇಡೀ ಜಗತ್ತಿಗೆ ಬೆಂಬಲ ನೀಡಿತು.
ಭಾರತದ ಜಿ-20 ಅಧ್ಯಕ್ಷತೆಗೆ ಅದರ ಒಂದು ಕೋಟಿಗೂ ಹೆಚ್ಚು ನಾಗರಿಕರಿಂದ ಬೆಂಬಲ ಸಿಕ್ಕಿತು. ಇದು ವಾಸ್ತವ ಕ್ರಿಯೆಯಲ್ಲಿ “ರಾಷ್ಟ್ರೀಯ ಏಕತೆ”ಯನ್ನು ಪ್ರದರ್ಶಿಸಿತು. ಶೃಂಗಸಭೆಯು ಭಾರತದ ಜಾಗತಿಕ ಸ್ಥಾನಮಾನ ಮತ್ತು “ವಸುಧೈವ ಕುಟುಂಬಕಂ” ಜಾಗತಿಕ ಆಡಳಿತವನ್ನು ಮರುರೂಪಿಸುವ ದಿಕ್ಸೂಚಿ ಎಂದು ದೃಢಪಡಿಸಿತು. “ಪೀಪಲ್ಸ್ ಜಿ-20″ರಲ್ಲಿ ಒಳಗೊಳ್ಳುವಿಕೆ ಮತ್ತು ಜನ-ಕೇಂದ್ರಿತ ನಾಯಕತ್ವವನ್ನು ಖಾತ್ರಿಪಡಿಸಿತು.
“ರಾಷ್ಟ್ರೀಯ ಏಕತಾ ದಿವಸ್” ಕೇವಲ ಸ್ಮರಣಾರ್ಥವಲ್ಲ, ಇದು ಜನರನ್ನು ಸಶಕ್ತಗೊಳಿಸುವ ಆಳವಾದ ತತ್ವಶಾಸ್ತ್ರವಾಗಿದೆ, ಮತ್ತು ಹಳೆಯ ಅಭ್ಯಾಸಗಳಿಂದ ಮುಕ್ತವಾಗಿದೆ. ಭಾರತ ಮಾತೆಯ ವಿಶಾಲವಾದ ಭೌಗೋಳಿಕ-ಸಾಂಸ್ಕೃತಿಕ-ರಾಜಕೀಯ ಭೂದೃಶ್ಯದ ಭವ್ಯವಾದ ಏಕೀಕರಣದ ಸರ್ದಾರ್ ಪಟೇಲ್ ಅವರ ದೃಷ್ಟಿಗೆ ಹೋಲುವ ಪ್ರಜಾಪ್ರಭುತ್ವ ಇಲ್ಲಿ ಕಾರ್ಯರೂಪದಲ್ಲಿದೆ. ಪ್ರತಿ ಧ್ವನಿಯನ್ನು ಆಡಳಿತದಲ್ಲಿ ಸಂಯೋಜಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಈ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ. ಇದು ರಾಷ್ಟ್ರೀಯ ಹೆಮ್ಮೆ, ವೈವಿಧ್ಯಮಯ ರಾಷ್ಟ್ರವನ್ನು ಒಂದುಗೂಡಿಸುವುದು, ಸರ್ದಾರ್ ಪಟೇಲ್ ಅವರ ಅಖಂಡ ಭಾರತದ ಕನಸನ್ನು ಪ್ರತಿಧ್ವನಿಸುತ್ತಿದೆ, ಅದೇ ಭಾರತ! ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆಯು ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಒಳಗೊಳ್ಳುವಿಕೆ, ವೈವಿಧ್ಯತೆ ಮತ್ತು ಸಾಮೂಹಿಕ ಶಕ್ತಿಯನ್ನು ಪೋಷಿಸುತ್ತದೆ.
ಈ ರಾಷ್ಟ್ರೀಯ ಏಕತಾ ದಿವಸದಂದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ನಿಜವಾಗಿಯೂ ಅರಿತುಕೊಂಡ ಮತ್ತು ಪೂರೈಸಿದ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಸಬಲೀಕರಣದ ಅರ್ಹತೆಯನ್ನು ಮೀರಿದ ತತ್ವಶಾಸ್ತ್ರಕ್ಕೆ ನಮ್ಮನ್ನು ನಾವು ಮತ್ತೆ ಸಮರ್ಪಿಸಿಕೊಳ್ಳೋಣ, ಅಮೃತ ಕಾಲದ ಭರವಸೆಯ ಯುಗಕ್ಕೆ ನಮ್ಮನ್ನು ಮುನ್ನಡೆಸೋಣ.
(ಲೇಖಕರು ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರು)

RELATED ARTICLES
- Advertisment -
Google search engine

Most Popular

Recent Comments