Thursday, November 30, 2023
Homeಇದೀಗ ಬಂದ ತಾಜಾ ಸುದ್ದಿವಿಶ್ವ ವೃತ್ತಿ ದಿನಾಚರಣೆ ಪ್ರಯುಕ್ತ ಮೇಳದಲ್ಲಿ ಜನಜಾಗೃತಿ ಅಭಿಯಾನ

ವಿಶ್ವ ವೃತ್ತಿ ದಿನಾಚರಣೆ ಪ್ರಯುಕ್ತ ಮೇಳದಲ್ಲಿ ಜನಜಾಗೃತಿ ಅಭಿಯಾನ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಪ್ರತಿಮಾ ಭೌಮಿಕ್ ಅವರು ಇಂದು ವಿಕಲಚೇತನರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದಿವ್ಯ ಕಲಾ ಮೇಳವನ್ನು ಉದ್ಘಾಟಿಸಿದರು.

ಹತ್ತು ದಿನಗಳ ಕಾಲ ನಡೆಯುವ ಮೇಳದಲ್ಲಿ ವಿಕಲಚೇತನರ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿಕಲಚೇತನರಿಗಾಗಿ ಉದ್ಯೋಗ ಮೇಳವನ್ನೂ ಆಯೋಜಿಸಲಾಗುವುದು.

ಎನ್‌ ಡಿ ಎಫ್‌ ಡಿ ಸಿ ಯೋಜನೆಗಳ ಅಡಿಯಲ್ಲಿ, ವಿಕಲಚೇತನರ ಅನುಕೂಲಕ್ಕಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 25 ಲಕ್ಷ ರೂಪಾಯಿಗಳ ಸಾಲವನ್ನು ಮಂಜೂರು ಮಾಡಲಾಗಿದೆ.

ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ವಿಕಲಚೇತನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಪ್ರತಿಮಾ ಭೌಮಿಕ್ ಅವರು ಭರವಸೆ ನೀಡಿದ್ದಾರೆ. ವಿಕಲಚೇತನರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದಿವ್ಯ ಕಲಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಈ ಜನರಿಗೆ ‘ದಿವ್ಯಾಂಗರು’ ಪದವನ್ನು ನೀಡುವ ಮೂಲಕ ಸಮಾಜದ ಜನರ ಆಲೋಚನೆಯನ್ನು ಬದಲಾಯಿಸಿದರು ಎಂದು ಹೇಳಿದರು. ವಿಶೇಷವಾಗಿ ವಿಕಲಚೇತನರಲ್ಲಿ ಉದ್ಯಮಶೀಲತೆ ಮತ್ತು ಕಸುಬುದಾರಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿದೆ. ವಿಕಲಚೇತನ ಸಹೋದರ ಸಹೋದರಿಯರಿಗೆ ತರಬೇತಿ, ಕೌಶಲ್ಯ ಮತ್ತು ಆರ್ಥಿಕ ನೆರವು ನೀಡಲು ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ವಿಕಲಚೇತನರ ವರ್ಗಗಳನ್ನು 7 ರಿಂದ 21 ಕ್ಕೆ ಹೆಚ್ಚಿಸಿದೆ. ಇದರೊಂದಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಕಲಚೇತನರ ಮೀಸಲಾತಿಯನ್ನು ಶೇಕಡಾ 3 ರಿಂದ ಶೇಕಡಾ 4 ಕ್ಕೆ ಹೆಚ್ಚಿಸಲಾಗಿದೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಮೀಸಲಾತಿಯನ್ನು ಶೇಕಡಾ 3 ರಿಂದ ಶೇಕಡಾ 5 ರವರೆಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ವಿಕಲಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ (ದಿವ್ಯಾಂಗ) ಡಿಡಿಜಿ ಶ್ರೀ ಕಿಶೋರ್ ಬಾಬು ರಾವ್ ಸುರ್ವಾಡೆ ಮಾತನಾಡಿ, ನಾವು ದೇಶದ ಪ್ರತಿ ಪ್ರಮುಖ ನಗರಗಳಲ್ಲಿ ದಿವ್ಯ ಕಲಾ ಮೇಳಗಳನ್ನು ಆಯೋಜಿಸುತ್ತಿದ್ದೇವೆ. ಇದುವರೆಗೆ ಒಟ್ಟು ಎಂಟು ರಾಷ್ಟ್ರೀಯ ಮೇಳಗಳು ಯಶಸ್ವಿಯಾಗಿ ನಡೆದಿವೆ. ಇದು ಒಂಬತ್ತನೇ ಮೇಳವಾಗಿದೆ ಎಂದರು. ಈ ಸಂದರ್ಭದಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ಎನ್‌ ಡಿ ಎಫ್‌ ಡಿ ಸಿ ಯೋಜನೆಗಳ ಅಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 25 ಲಕ್ಷ ರೂ.ಗಳ ಸಾಲವನ್ನು ಮಂಜೂರು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆಲವು ವಿಕಲಚೇತನರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2023 ರ ಅಕ್ಟೋಬರ್ 27 ರಿಂದ ನವೆಂಬರ್ 5 ರವರೆಗೆ ವಿಕಲಚೇತನ ಉದ್ಯಮಿಗಳು/ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಕರಕುಶಲತೆಯನ್ನು ಪ್ರದರ್ಶಿಸಲು ‘ದಿವ್ಯ ಕಲಾ ಮೇಳ’ವನ್ನು ಎಚ್‌ ಎಂ ಟಿ ಮೈದಾನದಲ್ಲಿ ಆಯೋಜಿಸಿದೆ. ಈ ಮೇಳದಲ್ಲಿ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳು ತಮ್ಮ ಅದ್ಭುತವಾದ ಮತ್ತು ಆಕರ್ಷಕವಾದ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು, ಕಸೂತಿ ವಸ್ತುಗಳು ಮತ್ತು ಪ್ಯಾಕೇಜ್ ಮಾಡಿದ ಆಹಾರಗಳು ಇತ್ಯಾದಿಗಳನ್ನು ಪ್ರದರ್ಶಿಸುತ್ತಾರೆ, ಅವುಗಳು ಮಾರಾಟಕ್ಕೂ ಲಭ್ಯವಿವೆ. ಇದು ವಿಕಲಚೇತನರ ಆರ್ಥಿಕ ಸಬಲೀಕರಣಕ್ಕಾಗಿ ಒಂದು ವಿಶಿಷ್ಟ ಉಪಕ್ರಮವಾಗಿದೆ.
ದಿವ್ಯ ಕಲಾ ಮೇಳವು ವಿಕಲಚೇತನರ ಉತ್ಪನ್ನಗಳು ಮತ್ತು ಕೌಶಲ್ಯಗಳಿಗೆ ಮಾರುಕಟ್ಟೆ ಒದಗಿಸಲು ಮತ್ತು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. 2022 ರಲ್ಲಿ ಆರಂಭವಾದ ದಿವ್ಯ ಕಲಾ ಮೇಳಗಳಲ್ಲಿ ಇಂದೋರ್ ಮೇಳವು ಒಂಬತ್ತನೆಯದಾಗಿದೆ. ಇದಕ್ಕೂ ಮೊದಲು ಈ ಮೇಳವನ್ನು ದೆಹಲಿ, ಮುಂಬೈ, ಭೋಪಾಲ್, ಇಂದೋರ್, ಗುವಾಹಟಿ, ಜೈಪುರ, ವಾರಾಣಸಿ ಮತ್ತು ಸಿಕಂದರಾಬಾದ್‌ ನಲ್ಲಿ ಆಯೋಜಿಸಲಾಗಿದೆ. ವಿಕಲಚೇತನರ ಸಬಲೀಕರಣ ಇಲಾಖೆಯು ಈ ಮೇಳವನ್ನು ಆಯೋಜಿಸಲು ರಾಷ್ಟ್ರೀಯ ಅಂಗವಿಕಲ ಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನು ನೋಡಲ್ ಏಜೆನ್ಸಿಯಾಗಿ ಆಯ್ಕೆ ಮಾಡಿದೆ. ದಿವ್ಯ ಕಲಾ ಮೇಳದ ಸಂದರ್ಭದಲ್ಲಿ, ಅಂಗವಿಕಲರ ಸಬಲೀಕರಣ ಇಲಾಖೆಯಿಂದ ಪಾರ್ಶ್ವವಾಯು ಸಮಸ್ಯೆ ಮತ್ತು ಅದರ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮೇಳದ ಸಂದರ್ಭದಲ್ಲಿ ವಿಕಲಚೇತನರಿಗಾಗಿ ಉದ್ಯೋಗ ಮೇಳವನ್ನೂ ಆಯೋಜಿಸಲಾಗುವುದು.
ಸುಮಾರು 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಮಾರು 100 ವಿಕಲಚೇತನ ಕುಶಲಕರ್ಮಿಗಳು/ಕಲಾವಿದರು ಮತ್ತು ಉದ್ಯಮಿಗಳು ದಿವ್ಯ ಕಲಾ ಮೇಳದಲ್ಲಿ ತಮ್ಮ ಉತ್ಪನ್ನಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ. ವಿಕಲಚೇತನ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ದೇಶಾದ್ಯಂತ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಉತ್ತೇಜನ ನೀಡುವ ‘ವೋಕಲ್ ಫಾರ್ ಲೋಕಲ್ʼ ಪರಿಕಲ್ಪನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಈ ಮೇಳವು ಪ್ರಬಲ ಮಾಧ್ಯಮವಾಗಿದೆ.
ಹತ್ತು ದಿನಗಳ ಈ ದಿವ್ಯ ಕಲಾ ಮೇಳವನ್ನು ಬೆಳಿಗ್ಗೆ 10.00 ರಿಂದ ರಾತ್ರಿ 10.00 ರವರೆಗೆ ಆನಂದಿಸಬಹುದು. ಇದಲ್ಲದೇ ದೇಶದ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇಶದ ವಿವಿಧ ರಾಜ್ಯಗಳ ಪ್ರಸಿದ್ಧ ಆಹಾರ ಮಳಿಗೆಗಳು ವಿಶೇಷ ಆಕರ್ಷಣೆಗಳಾಗಿವೆ. ಮೇಳದಲ್ಲಿ ಜನರಿಗಾಗಿ ಹಲವು ಆಕರ್ಷಕ ಸೆಲ್ಫಿ ಪಾಯಿಂಟ್ ಗಳನ್ನು ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments