ಬೆಂಗಳೂರು: ಭಾರತದ ಅತಿದೊಡ್ಡ ನವೀಕರಿಸಿದ ದ್ವಿಚಕ್ರ ವಾಹನ ಖರೀದಿದಾರ ಮತ್ತು ಮಾರಾಟಗಾರ ವೇದಿಕೆಯಾಗಿರುವ DriveX ಈ ಹಬ್ಬದ ಸಂಭ್ರಮದಲ್ಲಿ ತನ್ನ ಗ್ರಾಹಕರನ್ನು ಸಂತೋಷಪಡಿಸಲು ವಿನ್ಯಾಸಗೊಳಿಸಲಾದ ಅಮೋಘ ಕೊಡುಗೆಗಳನ್ನು ಗುಚ್ಛಗೊಂದಿಗೆ ಹಬ್ಬದ ಉತ್ಸಾಹವನ್ನು ಹರಡುತ್ತಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ದ್ವಿಚಕ್ರ ವಾಹನಗಳನ್ನು ಸಮಂಜಸವಾದ ಬೆಲೆಯಲ್ಲಿ DriveX ಒದಗಿಸುತ್ತದೆ. ಕಂಪನಿಯ ಸ್ವಾಮ್ಯದ, ಕಂಪನಿ-ಚಾಲಿತ (COCO) ಶೋರೂಮ್‌ಗಳ ಜೊತೆಗೆ ಒಂದು ಫ್ರ್ಯಾಂಚೈಸ್ ಮಾದರಿಯನ್ನೂ DriveX ನಿರ್ವಹಿಸುತ್ತದೆ. ಕಂಪನಿಯ ಮೌಲ್ಯದ ಪ್ರತಿಪಾದನೆಯು ಬಳಸಿದ ದ್ವಿಚಕ್ರ ವಾಹನಗಳ ಮಾರಾಟವನ್ನು ಮೀರಿದ್ದಾಗಿದೆ – ಅದು ಮೂರು ವಿಭಿನ್ನ ತಂತ್ರಗಳನ್ನು ಕೇಂದ್ರೀಕರಿಸಿದೆ – ಮಾನದಂಡವನ್ನು ನಿರ್ಮಿಸಲು ತಂತ್ರಜ್ಞಾನ-ಚಾಲಿತ ಸೋರ್ಸಿಂಗ್, ದಕ್ಷ ಬೆಲೆ ಮತ್ತು ವಾಹನವನ್ನು ಹುಡುಕುವುದಕ್ಕಾಗಿ ಡಿಜಿಟಲ್ ವೇದಿಕೆ ಮತ್ತು ಹಣಕಾಸು ಸಹಯೋಗಗಳ ಮೂಲಕ ವಾಹನದ ಮಾಲೀಕರಾಗುವ ಅನುಕೂಲ.
ಶೂನ್ಯ ಮುಂಗಡ ಪಾವತಿ ಮತ್ತು ವಾಹನ ವಿನಿಮಯ*:
DriveX ಶೂನ್ಯ-ಮುಂಗಡ ಪಾವತಿಯ ಅನುಕೂಲವನ್ನು ನೀಡುತ್ತಿದ್ದು, ಗ್ರಾಹಕರು ಇದನ್ನು ಬಳಸಿಕೊಂಡು ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಬಹುದು. ಸೀಮಿತ ಅವಧಿಯ ಈ ಕೊಡುಗೆಯಲ್ಲಿ, ಗ್ರಾಹಕರು ತಮ್ಮ ಕನಸಿನ ವಾಹನದ ಮೇಲೆ 90% ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು ಮತ್ತು ತಮ್ಮ ಹಳೆಯ ವಾಹನವನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನೂ ಹೊಂದಿರುತ್ತಾರೆ. ಇದು ಗುಣಮಟ್ಟದ ದ್ವಿಚಕ್ರ ವಾಹನಕ್ಕೆ ಜಂಜಾಟವಿಲ್ಲದೆ ಅಪ್-ಗ್ರೇಡ್ ಮಾಡುವ ಸೌಲಭ್ಯದಲ್ಲಿ, ಹೊಸ, ಸೊಗಸಾದ ರೈಡ್‌ನೊಂದಿಗೆ ಹಬ್ಬದ ಉತ್ಸಾಹವನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.
ದಿನವೊಂದಕ್ಕೆ ರೂ. 55 EMI*:
ಕನಸಿನ ವಾಹನವನ್ನು ನಿಮ್ಮದಾಗಿಸಿಕೊಳ್ಳಿ, ದಿನವೊಂದಕ್ಕೆ ರೂ. 55 ರಷ್ಟು ಕಡಿಮೆ EMI ಯಲ್ಲಿ. ಈ ಕೊಡುಗೆ ಮೂರು ವರ್ಷಗಳ ಅವಧಿಗೆ 90% ಸೌಲ ಸೌಲಭ್ಯ ಮತ್ತು ವಾಹನದ ಆನ್-ರೋಡ್ ಮೌಲ್ಯದಲ್ಲಿ 10% ಡೌನ್ ಪೇಮೆಂಟ್ ಅನ್ನು ಒಳಗೊಂಡಿದೆ. ಇದರೊಂದಿಗೆ, ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಉತ್ತಮವಾಗಿ ನವೀಕರಿಸಿ ಹೊಸ ವಾಹನದ ಅನುಭವ ನೀಡಿ ಹಬ್ಬವನ್ನು ಸ್ವಾಗತಿಸುವುದನ್ನು DriveX ಖಚಿತಪಡಿಸುತ್ತದೆ.
2000* ವಿನಿಮಯ ಬೋನಸ್:
ನಿಮ್ಮ ಹಳೆಯ ವಾಹನವನ್ನು DriveX ಪ್ರಮಾಣಿತ ವಾಹನಕ್ಕೆ ವಿನಿಮಯ ಮಾಡಿಕೊಳ್ಳಿ ಮತ್ತು ಹೆಚ್ಚುವರಿ ರೂ. 2000 ಬೋನಸ್ ಪಡೆಯಿರಿ. ಅತ್ಯುತ್ತಮ ಆಯ್ಕೆಗಳನ್ನು ಒದಗಿಸುವ ಮೂಲಕ ತನ್ನ ಗ್ರಾಹಕರು ಸಾಟಿಯಿಲ್ಲದ ಮೌಲ್ಯವನ್ನು ಪಡೆಯುವುದನ್ನು DriveX ಖಚಿತಪಡಿಸುತ್ತದೆ.
3 ದಿನಗಳ ರಿಟರ್ನ್ ಪಾಲಿಸಿ*:
ತನ್ನ ವಾಹನಗಳ ಗುಣಮಟ್ಟದಲ್ಲಿ DriveX ವಿಶ್ವಾಸ ಹೊಂದಿದೆ. ವಿಶೇಷ 3 ದಿನಗಳ ರಿಟರ್ನ್ ಪಾಲಿಸಿ ಇರುವ ಕಾರಣ, ಡೆಲಿವರಿಯ ಬಳಿಕ ಗ್ರಾಹಕರು ಯಾವುದೇ ಚಿಂತೆಯಿಲ್ಲದೆ 100 ಕಿಲೋಮೀಟರ್ ವರೆಗೆ ವಾಹನ ಚಲಾಯಿಸಿ ಪರೀಕ್ಷಿಸಬಹುದು. ಅಪಘಾತಗಳು ಮತ್ತು ಸಾಲದ ಮೂಲಕ ಮಾರಾಟವಾಗುವ ವಾಹನಗಳನ್ನು ಹೊರತುಪಡಿಸಿ, ಈ ಕೊಡುಗೆಯು ಉನ್ನತ ದರ್ಜೆಯ ವಾಹನಗಳನ್ನು ತಲುಪಿಸುವ DriveX ನ ಬದ್ಧತೆಯನ್ನು ಒತ್ತಿಹೇಳುತ್ತದೆ.
ಮಾಲೀಕತ್ವದ ವರ್ಗಾವಣೆ ಮತ್ತು ಸ್ಥಳದಲ್ಲೇ ಸಾಲ ನೀಡುವ ಯೋಜನೆ ಮೇಲೆ ಶೂನ್ಯ ದಾಖಲಾತಿ ಶುಲ್ಕಗಳು*:
ಗ್ರಾಹಕರು ತೊಂದರೆಯಿಲ್ಲದೆ ಖರೀದಿಗಳನ್ನು ಮಾಡುವಂತಾಗಲು, ಮಾಲೀಕತ್ವದ ವರ್ಗಾವಣೆಗಳು ಮತ್ತು ಸ್ಥಳದಲ್ಲೇ ಸಾಲ ಸೌಲಭ್ಯಕ್ಕಾಗಿ DriveX ಯಾವುದೇ ದಾಖಲಾತಿ ಶುಲ್ಕಗಳನ್ನು ವಿಧಿಸುತ್ತಿಲ್ಲ. ಗ್ರಾಹಕರು ತಮ್ಮ ಕನಸಿನ ವಾಹನವನ್ನು ಅತ್ಯಂತ ಅನುಕೂಲಕರವಾಗಿ ಮತ್ತು ಸುಲಭವಾಗಿ ಓಡಿಸುವುದನ್ನು ಇದು ಖಚಿತಪಡಿಸುತ್ತದೆ.
ಆದರೆ ಹಬ್ಬದ ಮೆರಗು ಇಲ್ಲಿಗೇ ಮುಗಿಯುವುದಿಲ್ಲ. ಸಂಭ್ರಮಿಸಲು ಇನ್ನೂ ಹಲವು ಕಾರಣಗಳನ್ನು DriveX ನೀಡುತ್ತದೆ:
ಉನ್ನತ-ಗುಣಮಟ್ಟದ ನವೀಕರಣ:
ತನ್ನ ವಾಹನಗಳ ಗುಣಮಟ್ಟದಲ್ಲಿ DriveX ಗೆ ಹೆಮ್ಮೆಯಿದೆ. ಪ್ರತಿ ದ್ವಿಚಕ್ರ ವಾಹನವು ಉತ್ತಮ ಗುಣಮಟ್ಟದ ನವೀಕರಣಕ್ಕೆ ಒಳಗಾಗುತ್ತದೆ, ಅವು ಅತ್ಯುತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸುತ್ತದೆ. ಈ ಋತುವಿನಲ್ಲಿ, ಉತ್ತಮವಾಗಿ ನಿರ್ವಹಿಸಲಾದ, ಹೊಸದರಂತೆಯೇ ಕಾಣುವ, ಭಾಸವಾಗುವ ಮತ್ತು ಸವಾರಿಯ ಅನುಭವ ನೀಡುವ ವಾಹನವನ್ನು ತಮ್ಮದಾಗಿಸಿಕೊಳ್ಳುವ ಸಂತೋಷವನ್ನು ಗ್ರಾಹಕರು ಅನುಭವಿಸಬಹುದು.
ವೈವಿಧ್ಯಮಯ ಆಯ್ಕೆಗಳು:
ಗ್ರಾಹಕರ ತಮ್ಮ ಆದ್ಯತೆಗಳು ಮತ್ತು ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ವೈವಿಧ್ಯಮಯ ಬ್ರ್ಯಾಂಡ್ ಮತ್ತು ಮಾಡೆಲ್‌ಗಳ ವಾಹನಗಳಿಂದ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ನೀವು ಸ್ಟೈಲಿಶ್ ಸ್ಕೂಟರ್ ಅಥವಾ ಶಕ್ತಿಯುತ ಬೈಕ್ ಹುಡುಕುತ್ತಿರಬಹುದು. ಪ್ರತಿಯೊಬ್ಬರಿಗೂ ಬೇಕಾದ ಎಲ್ಲವೂ DriveX ನಲ್ಲಿದೆ.
1-ವರ್ಷದ ವಾರಂಟಿ:
ವಾಹನಗಳ ಗುಣಮಟ್ಟಕ್ಕೆ DriveX ಬದ್ಧವಾಗಿದೆ. ಗ್ರಾಹಕರು ನಿಶ್ಚಿಂತರಾಗಿರುವಂತೆ ಮಾಡಲು, ಹಬ್ಬದ ಸಂತೋಷವು ಋತುವನ್ನು ಮೀರಿಯೂ ಮುಂದುವರಿಯುವಂತಾಗಲು ಕಂಪನಿಯು 1 ವರ್ಷದ ವಾರಂಟಿಯನ್ನು ನೀಡುತ್ತಿದೆ.
3 ಫ್ರೀ ಸರ್ವೀಸ್‌ಗಳು:
ಗ್ರಾಹಕರ ವಾಹನಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲು DriveX ಮೂರು ಫ್ರೀ ಸರ್ವೀಸ್‌ಗಳ ಅನುಕೂಲವನ್ನು ನೀಡುತ್ತದೆ. ತನ್ನ ಗ್ರಾಹಕರಿಗೆ ಅಸಾಧಾರಣ ಮೌಲ್ಯ ಮತ್ತು ಸೇವೆಯನ್ನು ಒದಗಿಸುವಲ್ಲಿ DriveX ನಂಬಿಕೆ ಇರಿಸಿದೆ.
ಹಬ್ಬದ ಕೊಡುಗೆಗಳ ಕುರಿತು ಮಾತನಾಡಿರುವ DriveX ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ನಾರಾಯಣ್ ಕಾರ್ತಿಕೇಯನ್ ಅವರು, “DriveX ನಲ್ಲಿ, ಹಬ್ಬದ ಡೀಲ್‌ಗಳನ್ನು ನೀಡಲು ನಾವು ರೋಮಾಂಚನಗೊಂಡಿದ್ದೇವೆ. DriveX ಪರಿವಾರವನ್ನು ಸೇರಲು ಮತ್ತು ಬಳಸಿದ ವಾಹನವನ್ನು ಖರೀದಿಸಿ, ತಡೆರಹಿತ, ಜಂಜಾಟವಿಲ್ಲದ ಮತ್ತು ಆಹ್ಲಾದಕರ ಪ್ರಯಾಣವನ್ನು ಅನುಭವಿಸಲು ಎಲ್ಲ ಆಟೋಮೊಬೈಲ್ ಆಸಕ್ತರನ್ನು ನಾವು ಆಹ್ವಾನಿಸುತ್ತೇವೆ. ಪ್ರತಿ ಪ್ರಯಾಣವನ್ನು ಸಂತೋಷದಾಯಕವಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಹಬ್ಬದ ಕೊಡುಗೆಗಳು ನಮ್ಮ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿವೆ” ಎಂದರು.
ಪ್ರಿ-ಓನ್ಡ್ ದ್ವಿಚಕ್ರ ವಾಹನಗಳ ಮೇಲೆ DriveX ಅತ್ಯಂತ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು, ಅವುಗಳ ಮೂಲಕ ಹಬ್ಬದ ಋತುವನ್ನು ಸ್ವಾಗತಿಸಿ. ಸಂತೋಷ, ಸ್ಟೈಲ್ ಮತ್ತು ಪರಿಪೂರ್ಣ ರೈಡ್‌ನೊಂದಿಗೆ ಹಬ್ಬವನ್ನು ಆಚರಿಸಿ.
DriveX ಮತ್ತು ಹಬ್ಬದ ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು DriveX – ಭಾರತದ ಅತಿದೊಡ್ಡ ನವೀಕರಿಸಿದ ದ್ವಿಚಕ್ರ ವಾಹನ ಖರೀದಿದಾರ ಮತ್ತು ಮಾರಾಟಗಾರರ ವೇದಿಕೆಗೆ ಭೇಟಿ ನೀಡಿ! ಅಥವಾ ಸಂಪರ್ಕಿಸಿ:
DriveX ಕುರಿತು:
DriveX ಮೊಬಿಲಿಟಿ ಪ್ರೈ. ಲಿ. ಭಾರತದ ಅತಿದೊಡ್ಡ ನವೀಕರಿಸಿದ ದ್ವಿಚಕ್ರ ವಾಹನ ಖರೀದಿದಾರರ ಮತ್ತು ಮಾರಾಟಗಾರರ ವೇದಿಕೆಯಾಗಿದೆ ಮತ್ತು ಪ್ರಿ-ಓನ್ಡ್ ದ್ವಿಚಕ್ರ ವಾಹನ ವಿಭಾಗದಲ್ಲಿ ಮೊದಲ ಡಿಜಿಟಲ್ ಆಟೋ-ಟೆಕ್ ವೇದಿಕೆಯಾಗಿದೆ. ಇದು ಭಾರತದಲ್ಲಿ ಮೊಬಿಲಿಟಿ ಕ್ಷೇತ್ರದ ಅನನ್ಯ ಅಗತ್ಯಗಳನ್ನು ಕೈಗೆಟುಕುವ ದರಗಳಲ್ಲಿ ಪೂರೈಸುತ್ತದೆ. ಆಟೋಮೋಟಿವ್, ಟೆಕ್ನಾಲಜಿ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಶ್ರೀ ನಾರಾಯಣ್ ಕಾರ್ತಿಕೇಯನ್ ಅವರು ಈ ಕಂಪನಿಯ ಸಂಸ್ಥಾಪಕರಾಗಿದ್ದಾರೆ.
~ DriveX – ಭಾರತದ ನವೀಕರಿಸಿದ ದ್ವಿಚಕ್ರ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ಅತಿದೊಡ್ಡ ವೇದಿಕೆಯಾಗಿದ್ದು, ಹಬ್ಬದ ಸಂದರ್ಭದಲ್ಲಿ ತನ್ನ ವಾಹನಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ~
~ ಆಟೋಮೊಬೈಲ್ ಆಸಕ್ತರಿಗೆ ಜಂಜಾಟ ಮುಕ್ತ ಉನ್ನತ ಗುಣಮಟ್ಟದ ನವೀಕರಿಸಿದ ವಾಹನಗಳ ಅನುಭವಕ್ಕಾಗಿ DriveX ಅನ್ನು ಆಯ್ಕೆ ಮಾಡುವಂತೆ ಜನಪ್ರಿಯ ಮೋಟಾರ್ ಸ್ಪೋರ್ಟ್ಸ್ ರೇಸರ್, DriveX ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ – ನಾರಾಯಣ್ ಕಾರ್ತಿಕೇಯನ್ ಅವರು ಕೋರಿದ್ದಾರೆ ~