Thursday, November 30, 2023
Homeಇದೀಗ ಬಂದ ತಾಜಾ ಸುದ್ದಿITC Sunfeast ಬೇಕ್ಡ್ ಕ್ರಿಯೇಷನ್ಸ್ ರುಚಿಕರ ಸಿರಿಧಾನ್ಯ-ಆಧಾರಿತ ಸತ್ಕಾರಗಳನ್ನು ಒಳಗೊಂಡ ಮಿಲೆಟ್‌ವರ್ಸ್‌

ITC Sunfeast ಬೇಕ್ಡ್ ಕ್ರಿಯೇಷನ್ಸ್ ರುಚಿಕರ ಸಿರಿಧಾನ್ಯ-ಆಧಾರಿತ ಸತ್ಕಾರಗಳನ್ನು ಒಳಗೊಂಡ ಮಿಲೆಟ್‌ವರ್ಸ್‌

ITC Sunfeast ಬೇಕ್ಡ್ ಕ್ರಿಯೇಷನ್ಸ್ ರುಚಿಕರ ಸಿರಿಧಾನ್ಯ-ಆಧಾರಿತ ಸತ್ಕಾರಗಳನ್ನು ಒಳಗೊಂಡ ಮಿಲೆಟ್‌ವರ್ಸ್‌ ಅನ್ನು ಪ್ರಕಟಿಸಿದೆ

ಈ ರೇಂಜ್‌ನಲ್ಲಿ ಫಿಂಗರ್ ಮಿಲೆಟ್ ಕ್ಯಾರಮೆಲ್ ಬ್ರೌನಿ, ಡಾರ್ಕ್ ಫ್ಯಾಂಟಸಿ ಚಾಕೊಫಿಲ್ ಮಿಲೆಟ್ ಬ್ರೌನಿ, ಮಲ್ಟಿಗ್ರೇನ್ ಮಿಲೆಟ್ ವೆಲ್ನೆಸ್ ಬ್ರೆಡ್ ಮತ್ತು ಪಾರ್ಮೆಸನ್ & ಪೆಪ್ಪರ್ ಮಿಲೆಟ್ ಸೌರ್ಡಫ್‌ ಕ್ರ್ಯಾಕರ್ಸ್‌ ವಿತ್ ಪೆಸ್ಟೋ ಡಿಪ್‌ಗಳು ಸೇರಿಕೊಂಡಿವೆ.

ಬೆಂಗಳೂರು, ಅಕ್ಟೋಬರ್ 12, 2023: Sunfeast ಬೇಕ್ಡ್ ಕ್ರಿಯೇಷನ್ಸ್, ITCಯ ಗೌರ್ಮೆಟ್ ಬೇಕರಿ ಮತ್ತು ಡೆಸರ್ಟ್ಸ್ ಬ್ರ್ಯಾಂಡ್ ಗಳು ಮಿಲೆಟ್ ವರ್ಸ್‌ ಎಂಬ ಹೊಸತನದ ಹೊಸ ರೇಂಜ್‌ನ ಕೊಡುಗೆಯನ್ನು ಬಿಡುಗಡೆ ಮಾಡಿದೆ. ಇದು ಅಂತರರಾಷ್ಟ್ರೀಯ ಸಿರಧಾನ್ಯ ವರ್ಷದ ಸ್ಮರಣೀಯ ಕೊಡುಗೆಯಾಗಿದೆ. ಜೊತೆಗೆ ಗ್ರಾಹಕರಿಗೆ ಆರೋಗ್ಯಕರ, ಪೌಷ್ಟಿಕ ತಿಂಡಿ ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಮಿಲೆಟ್‌ವರ್ಸ್‌ ಶ್ರೇಣಿಯು ಫಿಂಗರ್ ಮಿಲೆಟ್ ಕ್ಯಾರಮೆಲ್ ಬ್ರೌನಿ, ಡಾರ್ಕ್ ಫ್ಯಾಂಟಸಿ ಚಾಕೊಫಿಲ್ ಮಿಲೆಟ್ ಬ್ರೌನಿ, ಮಲ್ಟಿಗ್ರೇನ್ ಮಿಲೆಟ್ ವೆಲ್ನೆಸ್ ಬ್ರೆಡ್ ಮತ್ತು ಪಾರ್ಮೆಸನ್ & ಪೆಪ್ಪರ್ ಮಿಲೆಟ್ ಸೌರ್ಡಫ್‌ ಕ್ರ್ಯಾಕರ್ಸ್‌ ವಿತ್ ಪೆಸ್ಟೋ ಡಿಪ್‌ ವಿವಿಧ ಸಿರಿಧಾನ್ಯ-ಆಧಾರಿತ ಸತ್ಕಾರಗಳನ್ನು ಒದಗಿಸುತ್ತದೆ. ಈ ರುಚಿಕರ ಆಯ್ಕೆಗಳು ಕಡುಬಯಕೆಗಳನ್ನು ಮಾತ್ರ ಪೂರೈಸುವುದಲ್ಲ, ರುಚಿ ಮತ್ತು ಪೌಷ್ಟಿಕಾಂಶ ಎರಡನ್ನೂ ಹುಡುಕುವ ಗ್ರಾಹಕರಿಗೆ ಪೋಷಣೆಯನ್ನೂ ಒದಗಿಸುತ್ತದೆ.

ಮಿಲೆಟ್‌ವರ್ಸ್‌ ರೇಂಜ್‌ನಲ್ಲಿರುವ ಪ್ರತಿಯೊಂದು ಉತ್ಪನ್ನವನ್ನು ಕೇವಲ ಧಾನ್ಯಗಳಿಗಿಂತ ಸಿರಿಧಾನ್ಯ ಮಿಗಿಲಾದುದು ಎಂಬ ಆಳ ತಿಳಿವಳಿಕೆಯೊಂದಿಗೆ ಚಿಂತನಶೀಲವಾಗಿ ಸಂಗ್ರಹಿಸಲಾಗಿದೆ. ಈ ರೇಂಜ್‌ನಲ್ಲಿರುವ ಉತ್ಪನ್ನಗಳಿವು:

1. ಫಿಂಗರ್ ಮಿಲೆಟ್ ಕ್ಯಾರಮೆಲ್ ಬ್ರೌನಿ: ಫಿಂಗರ್ ಮಿಲೆಟ್‌ ಹಿಟ್ಟಿನ ಪೌಷ್ಟಿಕಾಂಶದ ಒಳ್ಳೆಯತನದೊಂದಿಗೆ ಕ್ಯಾರಮೆಲ್ ಫ್ಲೇವರ್ ಅನ್ನು ಸಂಯೋಜಿಸುವ ರೀತಿಯಲ್ಲಿ ಬ್ರೌನಿಯನ್ನು ನಿಖರವಾಗಿ ರಚಿಸಲಾಗಿದೆ. ಈ ಬ್ರೌನಿಯಲ್ಲಿ ಖಂಡಿತವಾಗಿಯೂ ರುಚಿ ಮೊಗ್ಗುಗಳನ್ನು ಮೆಚ್ಚಿಸುವ ಅಂಶವಿದೆ. ನಮ್ಮ ಗ್ರಾಹಕರ ಆರೋಗ್ಯ ಅವಶ್ಯಕತೆಗಳನ್ನು ಬೆಂಬಲಿಸುವಂತೆಯೇ ಇದೆ.
2. ಡಾರ್ಕ್ ಫ್ಯಾಂಟಸಿ ಚಾಕೊಫಿಲ್ ಮಿಲೆಟ್ ಬ್ರೌನಿ: ಈ ಬ್ರೌನಿಯು ಡಾರ್ಕ್ ಫ್ಯಾಂಟಸಿ ಚಾಕೊಫಿಲ್ ಬಿಸ್ಕೆಟ್‌ಗಳಿಂದ ತಯಾರಾಗಿದ್ದು, ಮುಂಚೂಣಿಯಲ್ಲಿ ಎದ್ದು ಕಾಣುತ್ತದೆ. ಪ್ರತಿ ತುತ್ತಿನಲ್ಲೂ ಚಾಕೊಲೇಟ್ ಮತ್ತು ಕುರುಕುಲಾದ ಒಳ್ಳೆಯತನದ ಸಂಯೋಜನೆಯನ್ನು ಒದಗಿಸುತ್ತದೆ. ಸಿರಿಧಾನ್ಯದ ಪ್ರಯೋಜನಗಳೊಂದಿಗೆ ಈ ಟೆಕಶ್ಚರ್ ಮತ್ತು ಸುವಾಸನೆಗಳ ಸಮ್ಮಿಳನವು ಸಿರಿಧಾನ್ಯ ಆಧಾರಿತ ಸತ್ಕಾರಗಳ ಸಾಲಿನಲ್ಲಿ ತಡೆಯಲಾಗದ ಮತ್ತು ಆನಂದದಾಯಕ ಅನುಭವ ನೀಡುವ ಉತ್ಪನ್ನವಾಗಿ ಸೇರ್ಪಡೆಯಾಗಿದೆ.
3. ಮಲ್ಟಿಗ್ರೇನ್ ಮಿಲೆಟ್ ವೆಲ್ನೆಸ್ ಬ್ರೆಡ್: ಈ ರುಚಿಕರ ಮತ್ತು ಪೋಷಣೆಯ ಬ್ರೆಡ್ ಪ್ರತಿ ಸ್ಲೈಸ್‌ನಲ್ಲಿ ಸಿರಿಧಾನ್ಯ ಮತ್ತು ಧಾನ್ಯಗಳ ಮಿಶ್ರಣವನ್ನು ಹೊಂದಿರುತ್ತದೆ. ಜೋಳ, ನವಣೆ, ಬಜ್ರಾ, ರಾಗಿ ಮತ್ತು ಕ್ವಿನೋವಾವನ್ನು ಒಟ್ಟಿಗೆ ಬೆರೆಸಿ, ಈ ಬ್ರೆಡ್ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇರಿಸಲು ರುಚಿಕರವಾದ ಮಾರ್ಗವನ್ನು ನೀಡುತ್ತದೆ.
4. ಪಾರ್ಮೆಸನ್ & ಪೆಪ್ಪರ್ ಮಿಲೆಟ್ ಸೌರ್ಡಫ್‌ ಕ್ರ್ಯಾಕರ್ಸ್‌ ವಿತ್ ಪೆಸ್ಟೋ ಡಿಪ್‌: ಈ ಹಗುರ ಮತ್ತು ಗರಿಗರಿಯಾದ ಕ್ರ್ಯಾಕರ್ಸ್ ಅನ್ನು ಸಿರಿಧಾನ್ಯದ ಒಳ್ಳೆಯತನ ಮತ್ತು ದಪ್ಪ, ಕಾಳುಮೆಣಸುಗಳ ಸುವಾಸನೆಯೊಂದಿಗೆ ಎಚ್ಚರಿಕೆಯಿಂದ ರೂಪಿಸಲಾಗಿದೆ. ಖುಷಿಕೊಡುವ ಪೆಸ್ಟೊ ರೋಸ್ಸೋ ಡಿಪ್‌ ಜೊತೆಗೆ ಅವುಗಳನ್ನು ಸಂಪೂರ್ಣವಾಗಿ ಜೋಡಿಸಿ. ಸಿರಿಧಾನ್ಯಗಳನ್ನು ಸಂಯೋಜಿಸುವ ಮೂಲಕ, ಈ ಕ್ರ್ಯಾಕರ್‌ಗಳು ಆರೋಗ್ಯಕರ ಸತ್ಕಾರಗಳನ್ನು ನೀಡುವ ಮಿಲ್ಲೆಟ್‌ವರ್ಸ್‌ನ ಮಿಷನ್‌ನೊಂದಿಗೆ ಹೊಂದಿಕೆಯಾಗುತ್ತವೆ.

ಈ ಖಾದ್ಯಗಳು ಬೆಂಗಳೂರು ಮತ್ತು ಚೆನ್ನೈನಲ್ಲಿ ಸ್ವಿಗ್ಗಿ ಮತ್ತು ಜೊಮಾಟೊದಲ್ಲಿ ಲಭ್ಯವಿವೆ.

RELATED ARTICLES
- Advertisment -
Google search engine

Most Popular

Recent Comments