ಬೆಂಗಳೂರು: ಸುಧಾರಿತ ರೈತ ಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಸೂಚನೆ ನೀಡಿದ್ದಾರೆ
ನಿಗಮದ ಅಧ್ಯಕ್ಷರೂ ಅಗಿರುವ ಸಚಿವರು ಅ17 ರಂದು ನಿಗಮದ ಕಚೇರಿಯಲ್ಲಿ 310ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ರೈತರ ಶ್ರೇಯೋಭಿವೃದ್ದಿಗೆ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಕೃಷಿ ಚಟುವಟಿಕೆಗೆ ಬಲ ತುಂಬುವಂತೆ ಸಚಿವರು ತಿಳಿಸಿದರು .
ನಿಗಮದ ಯೋಜನೆಗಳನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಿರ್ದೇಶಕ ಮಂಡಳಿ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದೂ ಸಚಿವರು ಸಲಹೆ ನೀಡಿದರು.
ಕೃಷಿಕರಿಗೆ ಉತ್ತಮ ಬೀಜ ಪೂರೈಕೆ ಮಾಡುವ ಜೊತೆಗೆ ಹೊಸ ಸ್ವರೂಪದ ನೆರವು ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಅದರ ಅನುಕೂಲ ನೇರವಾಗಿ ಫಲಾನುಭವಿಗಳಿಗೆ ತಲುವಂತೆ ನಿಗಾ ವಹಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್ ಪಾಟೀಲ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೇವರಾಜ್, ನಿರ್ದೇಶಕ ರುಗಳಾದ ಡಿ.ಎಲ್ ನಾಗರಾಜ್ .ಎನ್ ಎಸ್ ಹಾವೇರಿ,ಎಸ್ ಎಸ್ ಬೆಲ್ಲದ್ , ಎಸ್. ರಾಜೇಂದ್ರ ಪ್ರಸಾದ್ ಮತ್ತಿತರು ಸಭೆಯಲ್ಲಿ ಹಾಜರಿದ್ದು ಸಲಹೆ ನೀಡಿದರು.