Wednesday, November 29, 2023
Homeಇದೀಗ ಬಂದ ತಾಜಾ ಸುದ್ದಿಕಿತ್ತೂರು ರಾಣಿ ಚನ್ನಮ್ಮನ ಉತ್ಸವ-2023 ನಿಮಿತ್ತ ವೀರ ಜ್ಯೋತಿ ಯಾತ್ರೆ

ಕಿತ್ತೂರು ರಾಣಿ ಚನ್ನಮ್ಮನ ಉತ್ಸವ-2023 ನಿಮಿತ್ತ ವೀರ ಜ್ಯೋತಿ ಯಾತ್ರೆ

ಕಿತ್ತೂರು ರಾಣಿ ಚನ್ನಮ್ಮನ ಉತ್ಸವ-2023 ನಿಮಿತ್ತ ವೀರ ಜ್ಯೋತಿ ಯಾತ್ರೆ ವಾಹನವು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದೆ. ಇಂದು ಬೆಂಗಳೂರು ನಗರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಭಾಗ ನೆಲಮಂಗಲದ ಅರಿಶಿನಕುಂಟೆ ಪ್ರವೇಶಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಅದ್ದೂರಿಯಾಗಿ ಬರ ಮಾಡಿಕೊಂಡರು. ವೀರ ಜ್ಯೋತಿ ಯಾತ್ರೆ ವಾಹನಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿ ಯಾತ್ರೆ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿ, ಚಾಲನೆ ನೀಡಿ ತುಮಕೂರು ಜಿಲ್ಲೆಗೆ ತೆರಳಲು ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರ ಶಾಸಕರಾದ ಎನ್.ಶ್ರೀನಿವಾಸ್, ನೆಲಮಂಗಲ ನಗರಸಭಾ ಅಧ್ಯಕ್ಷರಾದ ಲತಾ ಹೇಮಂತ್ ಕುಮಾರ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್‌, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments