Samsung ನ ಹೊಚ್ಚ ಹೊಸ Bespoke, ಪ್ರೀಮಿಯಂ ಕೊಟ್ಟಾ ಸ್ಟೀಲ್ ವಿನ್ಯಾಸ ಮತ್ತು ಸುಂದರ ಗ್ಲಾಸ್ ಫಿನಿಶ್ ಸಹಿತ ಡಬಲ್ ಡೋರ್ ರೆಫ್ರಿಜರೇಟರ್ ಬಳಸಿ ನಿಮ್ಮ ಅಡುಗೆಮನೆಗೆ ಹೊಸ ಸ್ಟೈಲ್ ನೀಡಿ
• BESPOKE ಪ್ರೀಮಿಯಂ ಕೊಟ್ಟಾ ವೇರಿಯಂಟ್ ಪುರಾತನ ಲುಕ್ ಮತ್ತು ಹೊಸತನ ನೀಡುತ್ತದೆ
• BESPOKE ಪ್ರೀಮಿಯಂ ಕೊಟ್ಟಾ ಸ್ಟೀಲ್ ವೇರಿಯಂಟ್ ಕನ್ವರ್ಟಿಬಲ್ 5 ಇನ್ 1 ಮತ್ತು ಟ್ವಿನ್ ಕೂಲಿಂಗ್ ಪ್ಲಸ್ ಸೌಲಭ್ಯವನ್ನು ಹೊಂದಿದೆ; BESPOKE ಗ್ಲಾಸ್ ಶ್ರೇಣಿಯಲ್ಲಿ ಆಪ್ಟಿಮಲ್ ಫ್ರೆಶ್+, ಸ್ಮಾರ್ಟ್‌ಥಿಂಗ್ಸ್ ಎಐ ಎನರ್ಜಿ ಮೋಡ್ ಇದೆ ಮತ್ತು ಇದು ವೈಫೈ ಎನೇಬಲ್ಡ್ ಆಗಿದೆ
• ರೂ. 30,500 ಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವ ಹೊಸ BESPOKE ಡಬಲ್ ಡೋರ್ ರೆಫ್ರಿಜರೇಟರ್ ರೇಂಜ್ ಭಾರತದಾದ್ಯಂತ ಪ್ರಮುಖ ರಿಟೇಲ್ ಸ್ಟೋರ್‌ಗಳಲ್ಲಿ ಮತ್ತು Samsung.com ನಲ್ಲಿ ಲಭ್ಯವಿರಲಿದೆ
ಬೆಂಗಳೂರು– ಅಕ್ಟೋಬರ್ 9, 2023: ಭಾರತದ ನಂ.1 ರೆಫ್ರಿಜರೇಟರ್ ಬ್ರ್ಯಾಂಡ್ Samsung ಇಂದು ತನ್ನ BESPOKE ಡಬಲ್ ಡೋರ್ ರೆಫ್ರಿಜರೇಟರ್ ರೇಂಜ್ ಅನ್ನು ಅನಾವರಣಗೊಳಿಸಿದೆ. ಇದನ್ನು ಆಧುನಿಕ ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಸುಂದರ ಕಲರ್ ಆಯ್ಕೆಗಳನ್ನು ಹೊಂದಿರುವ ಹೊಸ BESPOKE ರೆಫ್ರಿಜರೇಟರ್‌ಗಳು ನಗರದ ಸೌಂದರ್ಯ ಮತ್ತು ವ್ಯಕ್ತಿತ್ವವನ್ನು ಅಡುಗೆಮನೆಗೆ ನೀಡುತ್ತದೆ.
Samsung ನ ಹೊಚ್ಚ ಹೊಸ BESPOKE ಡಬಲ್ ಡೋರ್ ರೆಫ್ರಿಜರೇಟರ್ ರೇಂಜ್ BESPOKE ಪ್ರೀಮಿಯಂ ಕೊಟ್ಟಾ ಸ್ಟೀಲ್ ಮತ್ತು BESPOKE ಗ್ಲಾಸ್ ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಸುಧಾರಿತ ರೆಫ್ರಿಜರೇಶನ್ ಜೊತೆಗೆ ಸೌಂದರ್ಯವನ್ನೂ ಜೋಡಿಸಿದೆ. ಹೀಗಾಗಿ, ಇದು ಜೀವನವನ್ನು ಇನ್ನಷ್ಟು ಸರಾಗ ಮತ್ತು ಸ್ಟೈಲಿಶ್ ಆಗಿಸುತ್ತದೆ.
BESPOKE ಪ್ರೀಮಿಯಂ ಕೊಟ್ಟಾ ವೇರಿಯಂಟ್ ನಿಮ್ಮ ಅಡುಗೆಮನೆಗೆ ವಿಂಟೇಜ್‌ನ ಹೊಳಪು ಮತ್ತು ಲುಕ್ ಅನ್ನು ನೀಡುತ್ತದೆ. ಇದು ಎರಡು ಕಲರ್ ಆಯ್ಕೆಗಳಾದ ಕೊಟ್ಟಾ ಬೀಜ್ ಮತ್ತು ಚಾರ್ಕೋಲ್ (ಡ್ಯೂಯೆಲ್ ಟೋನ್) ಹಾಗೂ ಕೊಟ್ಟಾ ಚಾರ್ಕೋಲ್‌ನಲ್ಲಿ ಲಭ್ಯವಿದೆ. Bespoke ಗ್ಲಾಸ್ ವೇರಿಯಂಟ್‌ನಲ್ಲೂ ಎರಡೂ ಬಣ್ಣ ಆಯ್ಕೆಗಳಿವೆ. ಅವುಗಳೆಂದರೆ, ಕ್ಲೀನ್ ವೈಟ್ ಮತ್ತು ಪಿಂಕ್ ಗ್ಲಾಸ್ (ಡ್ಯೂಯೆಲ್ ಟೋನ್) ಮತ್ತು ಕ್ಲೀನ್ ಬ್ಲ್ಯಾಕ್ ಗ್ಲಾಸ್.
“ನಮ್ಮ BESPOKE ಡಬಲ್ ಡೋರ್ ರೆಫ್ರಿಜರೇಟರ್‌ಗಳು ಭಾರತೀಯ ಗ್ರಾಹಕರ ವಿಶಿಷ್ಟ ಅಗತ್ಯಗಳು ಮತ್ತು ಆದ್ಯತೆಗಳಿಗೆ ರೂಪಿಸಿದ ಅನ್ವೇಷಣೆಗಳನ್ನು ಹೊಂದಿವೆ. BESPOKE ಪ್ರೀಮಿಯಂ ಕೊಟ್ಟಾ ವೇರಿಯಂಟ್ ಕೊಟ್ಟಾ ವಿನ್ಯಾಸದಿಂದ ಸ್ಫೂರ್ತಿ ಪಡೆದಿದೆ. ಆಧುನಿಕ ಅಡುಗೆಮನೆಗೆ ಪುರಾತನ ಶೈಲಿಯ ಸ್ಪರ್ಶ ನೀಡುತ್ತಿದೆ. ವಿಶಿಷ್ಟ ವಿನ್ಯಾಸದ ಜೊತೆಗೆ, BESPOKE ಪ್ರೀಮಿಯಂ ಕೊಟ್ಟ ವೇರಿಯಂಟ್ ಉದ್ಯಮದಲ್ಲೇ ಉತ್ತಮ ವೈಶಿಷ್ಟ್ಯಗಳಾದ ಕನ್ವರ್ಟಿಬಲ್ 5 ಇನ್ 1 ಅನ್ನು ಹೊಂದಿದೆ. ಹೆಚ್ಚು ಶೇಖರಣೆ ಅವಕಾಶಗಳನ್ನು ಒದಗಿಸುವುದಕ್ಕಾಗಿ ಭಾರತೀಯ ಅಡುಗೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸ ಮಾಡಲಾಗಿದೆ. ಬೆಸ್ಪೋಕ್ ಗ್ಲಾಸ್ ವೇರಿಯಂಟ್‌ನಲ್ಲಿರುವ ಸ್ಮಾರ್ಟ್‌ಥಿಂಗ್ಸ್ ಎಐ ಎನರ್ಜಿ ಮೋಡ್ ಎನರ್ಜಿ ಬಳಕೆಯನ್ನು ದಕ್ಷವಾಗಿ ನಿರ್ವಹಿಸಲು ಬಳಕೆದಾರರಿಗೆ ಅನುವು ಮಾಡುತ್ತದೆ,” ಎಂದು Samsung ಇಂಡಿಯಾದ ಡಿಜಿಟಲ್ ಅಪ್ಲೈಯನ್ಸ್ ಬ್ಯುಸಿನೆಸ್ ವಿಭಾಗದ ಹಿರಿಯ ನಿರ್ದೇಶಕ ಸೌರಭ್ ಬೈಶಾಖಿಯಾ ಹೇಳಿದ್ದಾರೆ.
ಹೊಚ್ಚ ಹೊಸ BESPOKE ಡಬಲ್ ಡೋರ್ ರೆಫ್ರಿಜರೇಟರ್‌ಗಳು ಕಾರ್ಯಾತ್ಮಕತೆಗೆ ಆದ್ಯತೆ ಹೊಂದಿದೆ ಮತ್ತು ಉತ್ತಮ ವಿನ್ಯಾಸ ಹಾಗೂ ತಂತ್ರಜ್ಞಾನದ ಅನ್ವೇಷಣೆಗಳೆರಡೂ ಸೇರಿವೆ. BESPOKE ಪ್ರೀಮಿಯಂ ಕೊಟ್ಟಾ ಮಾಡೆಲ್‌ನಲ್ಲಿ ಕನ್ವರ್ಟಿಬಲ್ 5 ಇನ್ 1 ಇದೆ. ಹೆಚ್ಚು ಸಂಗ್ರಹ ಸ್ಥಳವನ್ನು ಒದಗಿಸಲು ಮತ್ತು ಫ್ಲೆಕ್ಸಿಬಿಲಿಟಿಗಾಗಿ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಐದು ಕನ್ವರ್ಶನ್ ಮೋಡ್‌ಗಳಿವೆ.
BESPOKE ಗ್ಲಾಸ್ ಮಾಡೆಲ್‌ನಲ್ಲಿ ಸ್ಮಾರ್ಟ್‌ಥಿಂಗ್ಸ್ ಎಐ ಎನರ್ಜಿ ಮೋಡ್ ಇದ್ದು, ಇದು ಬಳಕೆದಾರರು ತಮ್ಮ ರೆಫ್ರಿಜರೇಟರ್‌ನ ಎನರ್ಜಿ ಬಳಕೆಯನ್ನು ಮಾನಿಟರ್ ಮಾಡಲು ಮತ್ತು ಆಪ್ಟಿಮೈಸ್ ಮಾಡಲು ಅನುವು ಮಾಡುತ್ತದೆ. ಇದರಿಂದ ಅವರು ವಿದ್ಯುತ್ ಬಿಲ್‌ಗಳಲ್ಲಿ ಉಳಿತಾಯ ಮಾಡಬಹುದು. ಆಪ್ಟಿಮಲ್ ಫ್ರೆಶ್+ ವೈಶಿಷ್ಟ್ಯವು ಭಾರತೀಯ ಕುಟುಂಬಗಳ ವಿಸ್ತರಿಸಿದ ಅವಧಿಗೆ ತಮ್ಮ ಮೆಚ್ಚಿನ ತಿನಿಸುಗಳನ್ನು ಶೇಖರಿಸಬಹುದು ಮತ್ತು ಆನಂದಿಸಬಹುದು ಎಂಬುದನ್ನು ಖಚಿತಪಡಿಸುತ್ತವೆ.
ಬೆಲೆ ಮತ್ತು ಲಭ್ಯತೆ
ರೂ. 30,500 ರಿಂದ ಬೆಲೆ ಹೊಂದಿರುವ ಹೊಸ BESPOKE ಡಬಲ್ ಡೋರ್ ರೆಫ್ರಿಜರೇಟರ್‌ಗಳು ಎಲ್ಲ ಪ್ರಮುಖ ಎಲೆಕ್ಟ್ರಾನಿಕ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ ಮತ್ತು Samsung ನ ಸ್ವಂತ ಆನ್‌ಲೈನ್ ಪ್ಲಾಟ್‌ಫಾರಂ Samsung ಶಾಪ್‌ನಲ್ಲೂ ಲಭ್ಯವಿದೆ. BESPOKE ಪ್ರೀಮಿಯಂ ಕೊಟ್ಟಾ ಮಾಡೆಲ್ 236L, 256L, 301L ಮತ್ತು 322L ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಇದರ ಬೆಲೆ ಶ್ರೇಣಿಯು ರೂ. 30,500 ಇಂದ ರೂ. 42,500 ಆಗಿದೆ. BESPOKE ಗ್ಲಾಸ್ ವೇರಿಯಂಟ್ 415 ಲೀ. ಮತ್ತು 465 ಲೀ. ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಬೆಲೆ ಶ್ರೇಣಿಯು 54,000 ಮತ್ತು ರೂ. 57,800 ಆಗಿರಲಿದೆ.
BESPOKE ವಿನ್ಯಾಸ
Samsung ನ ಹೊಸ BESPOKE ಡಬಲ್ ಡೋರ್ ರೆಫ್ರಿಜರೇಟರ್‌ಗಳು ಸುಂದರ, ವಾರ್ಮ್ ಆದ ಮತ್ತು ಟ್ರೆಂಡೀ ಕಲರ್‌ಗಳನ್ನು ಹೊಂದಿರುತ್ತವೆ ಮತ್ತು ಆಕರ್ಷಕ ಟೆಕ್ಷ್‌ಚರ್‌ಗಳನ್ನು ಹೊಂದಿರುತ್ತವೆ. ಇದು ಗ್ರಾಹಕರ ಅಡುಗೆಮನೆಯು ಅವರ ವೈಯಕ್ತಿಕ ಆಸಕ್ತಿಯನ್ನು ಪ್ರತಿಬಿಂಬಿಸುವಂತೆ ಮತ್ತು ಅವರ ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಹೊಂದುವಂತೆ ಇರುತ್ತದೆ.
ಕನ್ವರ್ಟಿಬಲ್ 5-ಇನ್-1
ಈ ವೈಶಿಷ್ಟ್ಯವು ಗ್ರಾಹಕರಿಗೆ ಹೆಚ್ಚು ಸ್ಥಳಾವಕಾಶವನ್ನು ನೀಡುತ್ತದೆ ಮತ್ತು ಅತ್ಯಂತ ಹೆಚ್ಚು ಅನುಕೂಲವನ್ನು ಒದಗಿಸುತ್ತದೆ. ಐದು ಕನ್ವರ್ಶನ್ ಮೋಡ್‌ಗಳಾದ ನಾರ್ಮಲ್, ಸೀಸನಲ್, ಎಕ್ಸ್‌ಟ್ರಾ ಫ್ರಿಡ್ಜ್, ವೆಕೇಶನ್ ಮತ್ತು ಹೋಮ್ ಅಲೋನ್ ಇವೆ. ಸೀಸನ್ ಬದಲಾದಾಗ ಸೀಸನಲ್ ಮೋಡ್‌ಗೆ ಬದಲಿಸಿದರೆ ಸಾಕು. ಇದು ಫ್ರಿಜ್ ಆನ್ ಮಾಡಿರುತ್ತದೆ ಮತ್ತು ಫ್ರೀಜರ್ ಅನ್ನು ಆಫ್ ಮಾಡುತ್ತದೆ. ಹೆಚ್ಚಿನ ದಿನಸಿ ಸಾಮಗ್ರಿಗಳನ್ನು ತಂದಾಗ ‘ಎಕ್ಸ್‌ಟ್ರಾ ಫ್ರಿಜ್ ಮೋಡ್’ ಅನ್ಉ ಆನ್ ಮಾಡಿ. ರಜೆ ಸಮಯದಲ್ಲಿ ನೀವು ಹೊರಗೆ ಹೋಗುತ್ತಿದ್ದೀರಿ ಎಂದಾದರೆ, ಫ್ರೀಜರ್‌ನಲ್ಲಿ ಆಹಾರವನ್ನು ಸ್ಟೋರ್ ಮಾಡಿಡಬೇಕು ಎಂದಾದರೆ, ವೆಕೇಶನ್ ಮೋಡ್ ಆನ್ ಮಾಡಿರಿ. ಇದು ಫ್ರೀಜರ್ ಅನ್ನು ಮಾತ್ರ ಆನ್ ಮಾಡಿ, ಫ್ರಿಜ್ ಕಂಪಾರ್ಟ್‌ಮೆಂಟ್ ಆಫ್ ಆಗಿರುತ್ತದೆ. ಮನೆಯಲ್ಲಿ ಒಬ್ಬರೇ ಇದ್ದಾಗ, ಹೆಚ್ಚು ಸಾಮಗ್ರಿಗಳನ್ನು ಸಂಗ್ರಹಿಸುವ ಅಗತ್ಯ ಇಲ್ಲದಿದ್ದಾಗ, ‘ಹೋಮ್ ಅಲೋನ್ ಮೋಡ್’ ಅನ್ನು ಆನ್ ಮಾಡಿಕೊಳ್ಳಿ. ಇದು ಫ್ರಿಜ್ ಸ್ವಿಚ್ ಆಫ್ ಮಾಡುತ್ತದೆ ಮತ್ತು ಫ್ರೀಜರ್ ಕಂಪಾರ್ಟ್‌ಮೆಂಟ್ ಅನ್ನು ಫ್ರಿಜ್ ಆಗಿ ಬದಲಿಸುತ್ತದೆ.
ಟ್ವಿನ್ ಕೂಲಿಂಗ್ ಪ್ಲಸ್ ™
ಟ್ವಿನ್ ಕೂಲಿಂಗ್ ಪ್ಲಸ್ ತಂತ್ರಜ್ಞಾನವು ಸ್ವತಂತ್ರ ಕೂಲಿಂಗ್ ಸಿಸ್ಟಮ್ ಆಗಿ ಕೆಲಸ ಮಾಡುತ್ತದೆ. ಫ್ರಿಜ್ ಮತ್ತು ಫ್ರೀಜರ್‌ಗೆ ಪ್ರತ್ಯೇಕ ಏರ್‌ಫ್ಲೋಗಳು ಇರುತ್ತವೆ. ಇದರಿಂದ ಬೇರೆ ಬೇರೆ ಆಹಾರ ಸಾಮಗ್ರಿಗಳ ವಾಸನೆಯು ಫ್ರಿಜ್ ಮತ್ತು ಫ್ರೀಜರ್‌ಗೆ ಹೋಗುವುದಿಲ್ಲ. ಎರಡು ಪ್ರತ್ಯೇಕ ಎವಾಪೊರೇಟರ್‌ಗಳು ಫ್ರಿಜ್ ಮತ್ತು ಫ್ರೀಜರ್ ಪ್ರದೇಶವನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತದೆ ಮತ್ತು ಸೂಕ್ತ ಆರ್ದ್ರತೆ ಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಇದರಿಂದ ದೀರ್ಘಕಾಲದವರೆಗೆ ತಾಜಾತನ ಇರುತ್ತದೆ ಮತ್ತು ಆಹಾರ ನಷ್ಟ ಕಡಿಮೆಯಾಗುತ್ತದೆ.
ಆಪ್ಟಿಮಲ್ ಫ್ರೆಶ್+
ಈ ವೈಶಿಷ್ಟ್ಯದಿಂದ ಆಹಾರ ದುಪ್ಪಟ್ಟು ಅವಧಿಗೆ ತಾಜಾ ಆಗಿರುತ್ತದೆ. ವಿವಿಧ ರೀತಿಯ ಆಹಾರವನ್ನು ಸಂಗ್ರಹಿಸಲು 4 ಮೋಡ್‌ಗಳನ್ನು ಆಪ್ಟಿಮಲ್ ಫ್ರೆಶ್+ ಡ್ರಾಯರ್ ಒದಗಿಸುತ್ತದೆ. ಸಾಫ್ಟ್ ಫ್ರೀಜ್ ಮೋಡ್‌ನಲ್ಲಿ, ಸೂಕ್ಷ್ಮ ಆಹಾರ ಸಾಮಗ್ರಿಗಳಾದ ಮಾಂಸ ಮತ್ತು ಮೀನಿನ ತಾಜಾತನವನ್ನು ದುಪ್ಪಟ್ಟು ಅವಧಿಗೆ ಸಾಮಾನ್ಯ ಕೂಲಿಂಗ್‌ಗಿಂತ ಹೆಚ್ಚಿನ ಅವಧಿಗೆ ಇಡುತ್ತದೆ. ಇದರಿಂದ ಅವುಗಳ ನೈಸರ್ಗಿಕ ಸ್ವಾದ ಹಾಗೆಯೇ ಇರುತ್ತದೆ.
SmartThings AI ಎನರ್ಜಿ ಮೋಡ್
ಈ ವೈಶಿಷ್ಟ್ಯವನ್ನು ಬಳಸಿಕೊಂಡು ಗ್ರಾಹಕರು ಎನರ್ಜಿಯನ್ನು ಮಾನಿಟರ್ ಮಾಡಬಹುದು ಮತ್ತು ಉಳಿತಾಯ ಮಾಡಬಹುದು. SmartThings AI ಎನರ್ಜಿ ಮೋಡ್ ನಿಮ್ಮ ರೆಫ್ರಿಜರೇಟರ್ ಬಳಕೆ ವಿಧಾನವನ್ನು ವಿಶ್ಲೇಷಿಸುತ್ತದೆ ಮತ್ತು ಎಐ ತಂತ್ರಜ್ಞಾನವನ್ನು ಆಧರಿಸಿ ಪವರ್ ಬಳಕೆಯನ್ನು ಅಂದಾಜು ಮಾಡುತ್ತದೆ. ನಿಮ್ಮ ಪ್ರೀಸೆಟ್ ಟಾರ್ಗೆಟ್‌ಗಿಂತ ಅಂದಾಜು ವಿದ್ಯುತ್ ಬಿಲ್ ಹೆಚ್ಚಾದರೆ, ಎನರ್ಜಿ ಬಳಕೆಯನ್ನು ಕಡಿಮೆ ಮಾಡಲು ‘ಉಳಿತಾಯ ಮೋಡ್’ ಸಕ್ರಿಯಗೊಳಿಸುವಂತೆ ನಿಮಗೆ ಶಿಫಾರಸು ಮಾಡುತ್ತದೆ.
Wi-Fi ಸೌಲಭ್ಯ
ಇದು Wi-Fi ಸೌಲಭ್ಯವನ್ನು ಹೊಂದಿರುವುದರಿಂದ ಸ್ಮಾರ್ಟ್‌ಥಿಂಗ್ಸ್ ಆಪ್ ಬಳಸಿ ಗ್ರಾಹಕರು ತಮ್ಮ ರೆಫ್ರಿಜರೇಟರ್ ಅನ್ನು ಟ್ರ್ಯಾಕ್ ಮಾಡಬಹುದು ಮತ್ತು ಅದರ ಕಾರ್ಯಕ್ಷಮತೆಯನ್ನು ಹೊಂದಿಸಬಹುದು.
ಪವರ್ ಕೂಲ್
ಪವರ್ ಕೂಲ್ ವೈಶಿಷ್ಟ್ಯವು ಕೂಲಿಂಗ್ ಕಾರ್ಯಕ್ಷಮತೆಯನ್ನು ತ್ವರಿತಗೊಳಿಸುತ್ತದೆ. ಆಹಾರ ಮತ್ತು ಪಾನೀಯವನ್ನು ವೇಗವಾಗಿ ತಂಪಾಗಿಸಲು ಇದು ಸಹಾಯ ಮಾಡುತ್ತದೆ. ಒಂದು ಬಟನ್ ಅನ್ನು ಅಟಚ್ ಮಾಡಿದರೆ ಸಾಕು, ಈ ವೈಶಿಷ್ಟ್ಯವು ಅತ್ಯಂತ ತಂಪಾದ ಗಾಳಿಯನ್ನು ಫ್ರಿಜ್‌ಗೆ ಕಳುಹಿಸುತ್ತದೆ. ಗ್ರಾಹಕರು ತಮ್ಮ ವಾರದ ದಿನಸಿಗಳನ್ನು ತ್ವರಿತವಾಗಿ ತಂಪಾಗಿಸಿ, ಅವುಗಳ ತಾಜಾತನ ಮತ್ತು ಸ್ವಾದವನ್ನು ಹಿಡಿದಿರಬಹುದು ಅಥವಾ ತಮ್ಮ ಮೆಚ್ಚಿನ ಪಾನೀಯವನ್ನು ಪಾರ್ಟಿ ಅಥವಾ ಊಟಕ್ಕೆ ತಂಪಾಗಿಸಬಹುದು.
Samsung ಎಲೆಕ್ಟ್ರಾನಿಕ್ಸ್ ಕೊ., ಲಿ. ಕುರಿತು:
Samsung ಜಗತ್ತಿಗೆ ಸ್ಪೂರ್ತಿಯನ್ನು ನೀಡುತ್ತಿದೆ ಮತ್ತು ಪರಿವರ್ತಕ ಕಲ್ಪನೆಗಳು ಮತ್ತು ತಂತ್ರಜ್ಞಾನದ ಮೂಲಕ ಭವಿಷ್ಯವನ್ನು ನಿರ್ಮಿಸುತ್ತಿದೆ. ಟಿವಿ, ಸ್ಮಾರ್ಟ್ ಫೋನ್, ಧರಿಸುವಂತಹ ಸಾಧನಗಳು, ಟ್ಯಾಬ್ಲೆಟ್ ಗಳು, ಡಿಜಿಟಲ್ ಅಲ್ಲಯನ್ಸಸ್, ನೆಟ್ವರ್ಕ್ ಸಿಸ್ಟಮ್ಸ್ ಮತ್ತು ಮೆಮೊರಿ, ಸಿಸ್ಟಮ್ ಎಲ್.ಎಸ್.ಐ, ಫೌಂಟ್ರಿ ಮತ್ತು ಎಲ್.ಇ.ಡಿ. ಸಲ್ಯೂಶನ್ಸ್ ಜಗತ್ತಿಗೆ ಕಂಪನಿಯು ಹೊಸ ವ್ಯಾಖ್ಯಾನವನ್ನು ನೀಡುತ್ತಿದೆ. ಸ್ಯಾಮ್ಸಂಗ್ ಇಂಡಿಯಾದ ಇತ್ತೀಚಿನ ಸುದ್ದಿಗಳಿಗಾಗಿ Samsung ಇಂಡಿಯಾದ ನ್ಯೂಸ್ ರೂಮ್ http://news.samsung.com/in ಅನ್ನು ಸಂಪರ್ಕಿಸಿ. ಹಿಂದಿ ಭಾಷೆಗಾಗಿ Samsung ನ್ಯೂಸ್ ರೂಮ್ ಭಾರತ್ https://news.samsung.com/bharat ಅನ್ನು ಸಂಪಕ್ತಿಸಿ. ನಮ್ಮನ್ನು ಟ್ವಿಟರ್ ನಲ್ಲಿಯೂ ಹಿಂಬಾಲಿಸಬಹುದು @SamsungNewsIN