Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಸಾಮಾಜಿಕ ಪರಿಣಾಮ ಉಪಕ್ರಮಗಳಲ್ಲಿ ಅನಿಲ್ ಅಗರವಾಲ್ ಫೌಂಡೇಶನ್ 2022-23 ಹಣಕಾಸು ವರ್ಷದಲ್ಲಿ ರೂ. 456 ಕೋಟಿಗಳ...

ಸಾಮಾಜಿಕ ಪರಿಣಾಮ ಉಪಕ್ರಮಗಳಲ್ಲಿ ಅನಿಲ್ ಅಗರವಾಲ್ ಫೌಂಡೇಶನ್ 2022-23 ಹಣಕಾಸು ವರ್ಷದಲ್ಲಿ ರೂ. 456 ಕೋಟಿಗಳ ಕೊಡುಗೆ ನೀಡಿದೆ; 44 ದಶಲಕ್ಷ ಜನರ ಜೀವನವನ್ನು ನಾಟಿದೆ

ಸಾಮಾಜಿಕ ಪರಿಣಾಮ ಉಪಕ್ರಮಗಳಲ್ಲಿ ಅನಿಲ್ ಅಗರವಾಲ್ ಫೌಂಡೇಶನ್ 2022-23 ಹಣಕಾಸು ವರ್ಷದಲ್ಲಿ ರೂ. 456 ಕೋಟಿಗಳ ಕೊಡುಗೆ ನೀಡಿದೆ; 44 ದಶಲಕ್ಷ ಜನರ ಜೀವನವನ್ನು ನಾಟಿದೆ
● CSR ಯೋಜನೆಗಳಾದ್ಯಂತ AAF ಉಪಕ್ರಮಗಳ ಧನಾತ್ಮಕ ಪರಿಣಾಮವನ್ನು ಪ್ರದರ್ಶಿಸುವ ಸಾಮಾಜಿಕ ಪರಿಣಾಮ ವರದಿಯನ್ನು ಪ್ರಸ್ತುತಪಡಿಸಲಾಗುತ್ತಿದೆ.
● ಯೋಜನೆಗಳು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಪ್ರಾಣಿ ಕಲ್ಯಾಣ, ಕ್ರೀಡೆ, ಆರೋಗ್ಯಾರೈಕೆ, ಯುವ ಜನತೆಯ ಕೌಶಲ್ಯ, ಪರಿಸರ ರಕ್ಷಣೆ, ಸಮುದಾಯ ಮೂಲಸೌಕರ್ಯ ಬೆಳವಣಿಗೆ ಮತ್ತು ಸುಸ್ಥಿರ ಜೀವನೋಪಾಯ ಕ್ಷೇತ್ರಗಳಲ್ಲಿ ಗಮನ ಹರಿಸುತ್ತವೆ.

ನವದೆಹಲಿ, ಸೆಪ್ಟೆಂಬರ್ 29, 2023 – ಅನಿಲ್ ಅಗರ್ವಾಲ್ ಫೌಂಡೇಶನ್(AAF), ವೇದಾಂತ ಲಿಮಿಟೆಡ್ ನ ಸಾಮಾಜಿಕ ಪರಿಣಾಮ ಅಂಗಸಂಸ್ಥೆಯು 2022-2023 ಹಣಕಾಸು ವರ್ಷಕ್ಕಾಗಿ ವಾರ್ಷಿಕ ಸಾಮಾಜಿಕ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ದೇಶದಾದ್ಯಂತದ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯಗಳ ಕ್ಷೇಮವನ್ನು ಸುಧಾರಿಸಲು ಫೌಂಡೇಶನ್ ನ ನಿರಂತರ ಪ್ರಯತ್ನಗಳು ಮತ್ತು ಸಾಧನೆಗಳನ್ನು ಒಳಗೊಂಡಿದೆ. AAFನ 2022-23 ರಲ್ಲಿ ರೂ. 454 ಕೋಟಿಗಳನ್ನು ಸಮುದಾಯಗಳನ್ನು ಉನ್ನತೀಕರಿಸುವ ಮತ್ತು ಸಬಲೀಕರಣಗೊಳಿಸುವ ತನ್ನ ಧ್ಯೇಯವನ್ನು ಪುನರುಚ್ಚರಿಸುವ ವೈವಿಧ್ಯಮಯ ಪರಿವರ್ತಕ ಉಪಕ್ರಮಗಳಾದ್ಯಂತ ಮೀಸಲಿಟ್ಟಿದೆ ಎಂದು ಈ ವರದಿಯು ಬಹಿರಂಗಪಡಿಸಿತು. ಕಳೆದ ಆರ್ಥಿಕ ವರ್ಷದಲ್ಲಿ, AAF ನ ಬಹುಮುಖಿ ಕಾರ್ಯಕ್ರಮವು 44 ದಶಲಕ್ಷಕ್ಕಿಂತಲೂ ಹೆಚ್ಚು ಜನರ ಜೀವನವನ್ನು ಉನ್ನತೀಕರಿಸಿದೆ, ಅದರಲ್ಲಿ 4.39 ದಶಲಕ್ಷ ಜನರು 1268 ಭಾರತೀಯ ಹಳ್ಳಿಗಳಲ್ಲಿ AAF ನ ಸಾಮಾಜಿಕ ಪ್ರಭಾವದ ಉಪಕ್ರಮಗಳಿಂದ ನೇರವಾಗಿ ಪ್ರಯೋಜನ ಪಡೆದಿದ್ದಾರೆ.

ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ನ ಅಧ್ಯಕ್ಷೆ, ವೇದಾಂತ ಲಿಮಿಟೆಡ್ ನ ನಾನ್ ಎಕ್ಸೆಕ್ಯುಟಿವ್ ನಿರ್ದೇಶಕಿ ಮತ್ತು ದಿ ಅನಿಮಲ್ ಕೇರ್ ಆರ್ಗನೈಸೇಶನ್(TACO) ನಿರೂಪಕಿಯಾಗಿರುವ ಪ್ರಿಯಾ ಅಗರವಾಲ್ ಹೆಬ್ಬಾರ್, “ವೇದಾಂತದಲ್ಲಿ ನಾವು ಒಂದು ಉದ್ದೇಶದೊಂದಿಗೆ ಬ್ಯುಸಿನೆಸ್ ಮಾಡುವುದರಲ್ಲಿ ನಂಬಿಕೆ ಇಡುತ್ತೇವೆ. ಸಾಮಾಜಿಕ ಪರಿಣಾಮವು ನಾವು ಏನನ್ನು ಮಾಡುತ್ತೇವೆ ಮತ್ತು ಏನಾಗಿದ್ದೇವೆ ಎನ್ನುವುದರ ಜೀವಾಳವಾಗಿದೆ. ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮಹಿಳೆಯರ ಸಬಲೀಕರಣ ಮತ್ತು ಮಕ್ಕಳ ಪೋಷಣೆ ಅಗ್ರ ಸ್ಥಾನ ಪಡೆದಿದೆ. ನಮ್ಮ ಅರ್ಧದಷ್ಟು ಜನಸಂಖ್ಯೆಯು ಮಹಿಳೆಯರನ್ನು ಒಳಗೊಂಡಿದೆ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯು ಕೇವಲ ಕುಟುಂಬಗಳನ್ನಷ್ಟೇ ಅಲ್ಲದೆ ಬದಲಾಗಿ ದೇಶವನ್ನು ಸಹ ಬದಲಿಸುತ್ತದೆ. ಇನ್ನು ಮಕ್ಕಳು ನಮ್ಮ ಭವಿಷ್ಯಕ್ಕಾಗಿ ಅಮೂಲ್ಯ. ನಮ್ಮ ಅಧ್ಯಕ್ಷರಾದ ಶ್ರೀ. ಅನಿಲ್ ಅಗರವಾಲ್ ಅವರ ಬಹುಮೂಲ್ಯ ತತ್ವವೆಂದರೆ ‘ಹಿಂದಿರುಗಿಸುವುದು’. ಸಮುದಾಯಗಳನ್ನು ಪರಿವರ್ತಿಸುವ ಮತ್ತು ನಮ್ಮ ಗ್ರಹವನ್ನು ಸಂರಕ್ಷಿಸುವ ನಮ್ಮ ಬದ್ಧತೆ ಅಚಲವಾಗಿದೆ.” ಎಂದರು.
ಬಿಡುಗಡೆಯಾದ ಸಾಮಾಜಿಕ ಪರಿಣಾಮ ವರದಿ ಪ್ರಕಾರ, 2022-23 ಹಣಕಾಸು ವರ್ಷದಲ್ಲಿ 4500 ನಂದ್ ಘರ್ ಗಳನ್ನು ಅಭಿವೃದ್ಧಿಪಡಿಸಲಾಯಿತು ಇದು ಆರಂಭಿಕ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಾರೈಕೆ, ಪೋಷಣೆ ಮತ್ತು ಕೌಶಲ್ಯಗಳಲ್ಲಿ ಅತ್ಯಧಿಕ ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ಮೂಲಕ ಒಟ್ಟು 1,80,000 ಮಕ್ಕಳು ಮತ್ತು 1,36,000 ಮಹಿಳೆಯರಿಗೆ ಪ್ರಯೋಜನಗಳನ್ನು ಒದಗಿಸಿದೆ. ನಂದ್ ಘರ್ ನ ಪೋಷಣೆ ಸ್ಥಂಭ ಯೋಜನೆಯ ಮೂಲಕ AAF ಸಾಧಿಸಿದ ಮತ್ತೊಂದು ಮೈಲಿಗಲ್ಲು ಎಂದರೆ ಮಕ್ಕಳಲ್ಲಿ ಪೋಷಣೆಯ ಸೇವನೆಯನ್ನು ಸುಧಾರಿಸುವ ದೃಷ್ಟಿಯೊಂದಿಗೆ ಮಕ್ಕಳ ದೈನಂದಿನ ಆಹಾರದ ಪೂರಕವಾಗಿ ಅಂಗನವಾಡಿ ಮಕ್ಕಳಲ್ಲಿ ಕಿರು-ಧಾನ್ಯ ನ್ಯೂಟ್ರಿ ಬಾರ್ ಗಳನ್ನು ಒದಗಿಸುವುದು. ಆರು ತಿಂಗಳ ಈ ಪ್ರಾಯೋಗಿಕ ಯೋಜನೆ ಅಡಿಯಲ್ಲಿ, 9 ದಶಲಕ್ಷ ಬಾರ್ ಗಳನ್ನು ನಂದ್ ಘರ್ ಗಳನ್ನೂ ಒಳಗೊಂಡಂತೆ ವಾರಾಣಸಿಯ ಆರಾಜಿ ಲೈನ್, ಸೇವಾ ಪುರಿ ಮತ್ತು ಕಾಶಿ ವಿದ್ಯಾಪೀಠದ ಮೂರು ಬ್ಲಾಕ್ ಗಳಲ್ಲಿನ ಒಟ್ಟು 1364 ಅಂಗನವಾಡಿ ಕೇಂದ್ರಗಳಲ್ಲಿನ ದಿನನಿತ್ಯ 50 ಸಾವಿರ ಮಕ್ಕಳಲ್ಲಿ ಹಂಚಲಾಯಿತು. ಈ ಕಿರು-ಧಾನ್ಯಗಳ ನ್ಯೂಟ್ರಿ ಬಾರ್‌ಗಳನ್ನು ಅಭಿವೃದ್ಧಿಪಡಿಸಲು AAF ನ್ಯೂಟ್ರಿ-ಹಬ್, IIMR (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್) ಮತ್ತು ಟ್ರೂಗುಡ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿತು. ಮಕ್ಕಳ ಅರಿವಿನ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಅಂಗನವಾಡಿಗಳಲ್ಲಿ ಗೈರುಹಾಜರಿಯನ್ನು ಕಡಿಮೆ ಮಾಡುವಲ್ಲಿ ಈ ಪ್ರಾಯೋಗಿಕ ಯೋಜನೆಯು ಈಗಾಗಲೇ ದೊಡ್ಡ ಯಶಸ್ಸನ್ನು ಸಾಧಿಸಿದೆ.
ಪ್ರಾಣಿ ಆರೋಗ್ಯ ಮತ್ತು ಕ್ಷೇಮದ ಭವಿಷ್ಯವನ್ನು ಸುಧಾರಿಸಲು, ಅನಿಲ್ ಅಗರವಾಲ್ ಫೌಂಡೇಶನ್ 2022ರ ಏಪ್ರಿಲ್ ನಲ್ಲಿ ದಿ ಅನಿಮಲ್ ಕೇರ್ ಆರ್ಗನೈಸೇಶನ್(TACO) ಆರಂಭಿಸಿದೆ. ಇದು ಉನ್ನತ ದರ್ಜೆಯ ಮೂಲಸೌಕರ್ಯ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಆಶ್ರಯವನ್ನು ಒದಗಿಸಲು ‘ಒಂದು ಆರೋಗ್ಯ’ ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ಅನನ್ಯ ಪ್ರಾಣಿ ಕಲ್ಯಾಣ ಯೋಜನೆಯಾಗಿದೆ. ಇದು ಆಶ್ರಯ, ಆಸ್ಪತ್ರೆ, ಶಿಕ್ಷಣ, ವನ್ಯಜೀವಿ ಸಂರಕ್ಷಣೆ, ವಿಕೋಪ ಪರಿಹಾರ ಮತ್ತು ಕ್ಷೇತ್ರೀಯ ತೊಡಗಿಸಿಕೊಳ್ಳುವಿಕೆಯ ಆರು ಸ್ಥಂಭಗಳ ಮೇಲೆ ಗಮನಹರಿಸುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, TACO ಇದುವರೆಗೆ ಫರೀದಾಬಾದ್ ಕೇಂದ್ರದಲ್ಲಿ 115ಕ್ಕಿಂತ ಹೆಚ್ಚಿನ ಪ್ರಾಣಿಗಳಿಗೆ ಆಶ್ರಯ ಮತ್ತು ಚಿಕಿತ್ಸೆ ನೀಡಿದೆ ಹಾಗೂ ಇದು 384 ಪ್ರಾಣಿಗಳನ್ನು ಮತ್ತು 500 ನಾಯಿಗಳಿಗೆ ಲಸಿಕೆಯನ್ನೂ ಸಹ ನೀಡಿದೆ.
ದೇಶದಲ್ಲಿ ಕುಪೋಷಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ವೇದಾಂತ, AAFನ ಮಾತೃ ಸಂಸ್ಥೆಯು ವೇದಾಂತ ದೆಹಲಿ ಹಾಲ್ಫ್ ಮ್ಯಾರಥಾನ್ ಆರಂಭಿಸಲು ಪ್ರೋಕ್ಯಾಮ್ ಜೊತೆಗೆ ಕೈಜೋಡಿಸಿದೆ ಮತ್ತು #RunForZeroHunger ಒಳ್ಳೆಯ ಕಾರಣಕ್ಕಾಗಿ ಜನರನ್ನು ಒಗ್ಗೂಡಿಸಿದೆ. ಜೈಪುರದಲ್ಲಿ ನಡೆದ ವೇದಾಂತ ಪಿಂಕ್ ಸಿಟಿ ಮ್ಯಾರಥಾನ್ ಮತ್ತು ಮುಂಬೈ ಹಾಗೂ ಬೆಂಗಳೂರಿನ ಮ್ಯಾರಥಾನ್ ಗಳೊಂದಿಗಿನ ಸಹಭಾಗಿತ್ವದೊಂದಿಗೆ ಇತರ ದೊಡ್ಡ ಕ್ರೀಡೆಗಳ ಮೂಲಕ ಈ ಕಾರಣವು ತನ್ನ ಲಯವನ್ನು ಪಡೆದುಕೊಂಡಿದೆ. ಓಟಗಾರರು ಓದುವ ಪ್ರತಿಯೊಂದು ಕಿಲೋಮೀಟರಿಗೆ, ವೇದಾಂತ ತನ್ನ ನಂದ್ ಘರ್ ಉಪಕ್ರಮದ ಮೂಲಕ ಒಂದು ಮಗುವಿಗೆ ಒಂದು ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸಲು ಪ್ರತಿಜ್ಞೆ ಮಾಡಿತು. ಈ ಪ್ರತಿಷ್ಠಿತ ಮ್ಯಾರಥಾನ್ ಗಳಲ್ಲಿ ಜಗತ್ತಿನಾದ್ಯಂತದಿಂದ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು, ಒಟ್ಟು 2 ದಶಲಕ್ಷ ಕಿಲೋಮೀಟರುಗಳಷ್ಟು ಓಡಿದರು ಮತ್ತು 2 ದಶ ಲಕ್ಷ ಊಟಗಳನ್ನು ಒದಗಿಸಲಾಯಿತು.
ಭಾರತದಲ್ಲಿನ ಮೂಲಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಕ್ರೀಡೆಗಳನ್ನು ಉತ್ತೇಜಿಸಲು ಬದ್ಧವಾಗಿರುವ ಫೌಂಡೇಶನ್ ಫುಟಬಾಲ್, ಕರಾಟೆ ಮತ್ತು ಬಿಲ್ಲುಗಾರಿಕೆ ಕ್ರೀಡೆಗಳಿಗಾಗಿ ವಿಶೇಷವಾಗಿ ತರಬೇತಿ ಮತ್ತು ಸಿದ್ಧತಾ ಕಾರ್ಯಕ್ರಮಗಳು, ನಾಡಿನಲ್ಲೇ ಅತ್ಯುತ್ತಮವಾಗಿರುವ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಇದುವರೆಗೆ 0.35 ದಶಲಕ್ಷ ಸಮರ್ಥ ಆಟಗಾರರ ಏಳಿಗೆಗಾಗಿ ಬೃಹತ್ ಪರಿಣಾಮವನ್ನು ಬೀರಿದೆ. ನಮ್ಮ ದೇಶದ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು, ಅನಿಲ್ ಅಗರವಾಲ್ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣವನ್ನು ಜೈಪುರದ ಹತ್ತಿರದ ಚೋನ್ಪ್ ನಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಇದು ಭಾರತದ ಎರಡನೆಯ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುತ್ತದೆ.
ಸಾಮಾಜಿಕ ಪರಿಣಾಮ ವರದಿಯು ಹಿಂದುಳಿದ ಪ್ರದೇಶಗಳಲ್ಲಿನ 2.7 ದಶಲಕ್ಷ ಜನರ ಜೀವನ ಮತ್ತು ಒಟ್ಟಾರೆ ಆರೋಗ್ಯ ಕ್ಷೇಮವನ್ನು ಸುಧಾರಿಸುವಲ್ಲಿ ಆರೋಗ್ಯಾರೈಕೆ ಸೇವೆಗಳು, ಅಗತ್ಯ ಔಷಧಿಗಳ ಪೂರೈಕೆ ಮತ್ತು BALCO ವೈದ್ಯಕೀಯ ಕೇಂದ್ರ ಮತ್ತು ವೇದಾಂತ ಆಸ್ಫತ್ರೆಯಲ್ಲಿ ನಿರ್ಣಯಕಾರಿ ಪಾತ್ರವನ್ನು ಒದಗಿಸುವುದರೊಂದಿಗೆ AAFನ ಸಮುದಾಯ ಆರೋಗ್ಯಾರೈಕೆ ಉಪಕ್ರಮಗಳನ್ನು ಸಹ ಪ್ರದರ್ಶಿಸುತ್ತದೆ. ಇದಲ್ಲದೆ, AAF ತನ್ನ ಹಲವಾರು ಸಮುದಾಯ ಮೂಲಸೌಕರ್ಯ ಯೋಜನೆಗಳ ಮೂಲಕ 0.62 ದಶಲಕ್ಷ ಜನರ ಜೀವನವನ್ನು ಸಹ ಅಭಿವೃದ್ಧಿಗೊಳಿಸಿದೆ.
ಫೌಂಡೇಶನ್‌ನಾದ್ಯಂತ ಕೌಶಲ್ಯ ಮತ್ತು ಜೀವನೋಪಾಯ ಯೋಜನೆಗಳ ಮೂಲಕ ಇದುವರೆಗೆ 44 ಸಾವಿರ ಮಹಿಳೆಯರು ಸಶಕ್ತಗೊಂಡಿದ್ದಾರೆ ಮತ್ತು ಇವರು ಸಮುದಾಯದ ನಾಯಕರಾಗಲು ಅವರನ್ನು ತಯಾರಿ ನೀಡಿದೆ. ಇದಲ್ಲದೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದನ್ನು ಖಾತ್ರಿಪಡಿಸುವ ಯೋಜನೆಗಳ ಮೂಲಕ AAF 0.62 ದಶಲಕ್ಷ ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸಿದೆ. ಮಕ್ಕಳ ಶಿಕ್ಷಣ ಮತ್ತು ಯೋಗಕ್ಷೇಮದ ಕಡೆಗಿನ ಯೋಜನೆಗಳು 0.55 ದಶಲಕ್ಷ ಮಕ್ಕಳಿಗೆ ತಲುಪಿದರೆ ಪರಿಸರ ಸಂರಕ್ಷಣೆ ಕಡೆಗಿನ ಸಂಸ್ಥೆಯ ಬದ್ಧತೆಯಿಂದಾಗಿ 0.40 ದಶಲಕ್ಷ ಜನರ ಜೀವನವನ್ನು ಬದಲಾಯಿಸಿದೆ. ಕೃಷಿ ಮತ್ತು ಪಶುಸಂಗೋಪನೆಯಲ್ಲಿನ ಅದರ ಉಪಕ್ರಮಗಳು 94 ಸಾವಿರ ವ್ಯಕ್ತಿಗಳಲ್ಲಿ ಆಶಾಕಿರಣವನ್ನು ತಂದಿದ್ದು ಇದರಿಂದಾಗಿ ಅವರಲ್ಲಿನ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಿದೆ.
ಅನಿಲ್ ಅಗರವಾಲ್ ಫೌಂಡೇಶನ್ ಸಾಮಾಜಿಕ ಪರಿಣಾಮ ವರದಿಯನ್ನು ಸಂಪೂರ್ಣವಾಗಿ ಓದಲು, ದಯವಿಟ್ಟ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.vedantalimited.com/eng/social_impact_overview.php
ಅನಿಲ್ ಅಗರವಾಲ್ ಫೌಂಡೇಶನ್ ಕುರಿತು
ವೇದಾಂತ ಅವರ ಇಡೀ ಸಮುದಾಯ ಮತ್ತು ಸಾಮಾಜಿಕ ಉಪಕ್ರಮಗಳಿಗಾಗಿ ಅನಿಲ್ ಅಗರವಾಲ್ ಫೌಂಡೇಶನ್ ಏಕಮಾತ್ರ ಅಂಗಸಂಸ್ಥೆಯಾಗಿದೆ. ಆರೋಗ್ಯಾರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾಣಿ ಕಲ್ಯಾಣ ಯೋಜನೆಗಳು ಮತ್ತು ಕ್ರೀಡಾ ಉಪಕ್ರಮಗಳು ಫೌಂಡೇಶನ್ ನ ಪ್ರಮುಖ ಕಾರ್ಯಕ್ಷೇತ್ರಗಳಾಗಿವೆ. ಅನಿಲ್ ಅಗರವಾಲ್ ಫೌಂಡೇಶನ್ ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯ ಮೂಲಕ ಸಮುದಾಯಗಳು, ಜನರ ಬದುಕುಗಳ ಪರಿವರ್ತನೆ ಮತ್ತು ರಾಷ್ಟ್ರ ನಿರ್ಮಾಣ ಉತ್ತೇಜಿಸುವಲ್ಲಿ ಗುರಿ ಹೊಂದಿದೆ. ಫೌಂಡೇಶನ್ ಮುಂದಿನ ಐದು ವರ್ಷಗಳಲ್ಲಿ ವಿವಿಧ ಸಾಮಾಜಿಕ ಪರಿಣಾಮ ಕಾರ್ಯಕ್ರಮಗಳಿಗಾಗಿ ರೂ.5000 ಕೋಟಿಯನ್ನು ವಾಗ್ದಾನ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.anilagarwalfoundation.org
ಮಾಧ್ಯಮ ವಿಚಾರಣೆಗಳಿಗಾಗಿ, ದಯವಿಟ್ಟು ಸಂಪರ್ಕಿಸಿ:
ಆರತಿ ಲಕ್ಷ್ಮಣನ್, ಗುಂಪು CSR ಸಂವಹನ ಮುಖ್ಯಸ್ಥ: aarti.laxmanan@vedanta.co.in
ಸಾಮ್ಯಕ್ ಜೈನ್, MSL ಇಂಡಿಯಾ, ಇಮೇಲ್: samyak.jain@mslgroup.com

RELATED ARTICLES
- Advertisment -
Google search engine

Most Popular

Recent Comments