ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ವಯಸ್ಸಾದ ಮಹಿಳೆಯರು ಮತ್ತು ವೃದ್ಧರು ಮತ್ತು ವಿಕಲಚೇತನರು ನಮಗೆ ಮಾಸಾಸನ ಬರಲು ಇದಕ್ಕೆ ಯಾವ ದಾಖಲೆಗಳು ಒದಗಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಕರವೇ ಕಾರ್ಯಕರ್ತರಿಗೆ ಫೋನ್ ಬಂದ ಕಾರಣ ಕರವೇ ಕಾರ್ಯಕರ್ತರು ಅವರನ್ನು ಸಂಪರ್ಕಿಸಿ ಅವರ ದಾಖಲೆಗಳನ್ನು ನೋಡಿ ಅದರಲ್ಲಿ ಆಧಾರ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಮತ್ತು ಬ್ಯಾಂಕ್ ಖಾತೆ ಇಲ್ಲದವರಿಗೆ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟು ಕರವೇ ಕಾರ್ಯಕರ್ತರು ಇವರ ಅರ್ಜಿಗಳನ್ನು ಭರ್ತಿ ಮಾಡಿ ಒಟ್ಟು 17 ಜನರಿಗೆ ವೃದ್ಧಾಪ್ಯ ವೇತನಕ್ಕಾಗಿ ಶನಿವಾರಸಂತೆ ಕಂದಾಯ ಅಧಿಕಾರಿಗಳ ಮುಂದೆ ಇವರ ದಾಖಲೆಗಳನ್ನು ಕೊಟ್ಟು ಶನಿವಾರಸಂತೆ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿ ದಾಖಲೆ ಸರಿ ಇದೆ ತಿಳಿದ್ದು ತುಂಬು ಹೃದಯದಿಂದ ಈ 17 ಬಡ ಜನರ ಮಾಸಾಸನ ಮಾಡಿಕೊಟ್ಟಿರುತ್ತಾರೆ. ಮತ್ತು ವೃದ್ಯಾಪ ವೇತನ ದ ಆರ್ಡರ್ ಕಾಪಿ ಯನ್ನು ಸಹ ಫಲಾನುಭವಿಗಳಿಗೆ ಉಪ ತಹಸಿಲ್ದಾರ್ ನಾಗರಾಜ್ ರವರು 17 ಜನರಿಗೆ ವೃದ್ಧಾಪ್ಯ ವೇತನ ಫಲಾನುಭವಿಗಳಿಗೆ ಆರ್ಡರ್ ಕಾಫಿ ಯನ್ನು ವಿತರಿಸಿದರು ವೃದ್ಯಾಪ ವೇತನ ವನ್ನು ಮಾಡಿಸಿ ಕೊಟ್ಟಂತಹ ಉಪ ತಹಶೀಲ್ದಾರ್ ನಾಗರಾಜ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಹಾಗೆಯೇ ಕಂದಾಯ ಪರಿವೀಕ್ಷಕರಾದ ಮಂಜುನಾಥ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಹಾಗೆಯೇ ಗ್ರಾಮ ಗ್ರಾಮಲೆಕ್ಕಿಗ ರವರಿಗೆ ಮತ್ತು ಗ್ರಾಮ ಸಹಾಯಕರಿಗೆ ಮತ್ತು ನೆಮ್ಮದಿ ಕೇಂದ್ರ ಸಿಬ್ಬಂದಿಯವರಿಗೆ ಮತ್ತು ಶನಿವಾರಸಂತೆ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ..
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ನಾಗರಾಜ್ ಮತ್ತು ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಶನಿವಾರಸಂತೆ ಹೋಬಳಿಯಉಪಾಧ್ಯಕ್ಷರಾದ ರಫೀಕ್ ಮತ್ತು ಶನಿವಾರಸಂತೆ ನಗರ ಘಟಕದ ಅಧ್ಯಕ್ಷ ಇಜಾರ್ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ಮತ್ತು ಕಂದಾಯ ಇಲಾಖೆ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು..