Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಮೂವರು ವಿಜ್ಞಾನಿಗಳಿಗೆ 2023ರ ಭೌತಶಾಸ್ತ್ರದ ನೊಬೆಲ್‌ ಬಹುಮಾನ ಘೋಷಣೆ

ಮೂವರು ವಿಜ್ಞಾನಿಗಳಿಗೆ 2023ರ ಭೌತಶಾಸ್ತ್ರದ ನೊಬೆಲ್‌ ಬಹುಮಾನ ಘೋಷಣೆ

2023ರ ಭೌತಶಾಸ್ತ್ರದ ನೊಬೆಲ್‌ ಬಹುಮಾನವನ್ನು ಘೋಷಣೆ ಮಾಡಲಾಗಿದ್ದು, ವಿಜ್ಞಾನಿಗಳಾದ ಪಿಯರೆ ಅಗೊಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್ ಹುಲ್ಲಿಯರ್ ಅವರು ಭೌತಶಾಸ್ತ್ರದ ನೊಬೆಲ್‌ ಬಹುಮಾನಕ್ಕೆ ಪಾತ್ರರಾಗಿದ್ದಾರೆ.

ಭೌತ ಶಾಸ್ತ್ರದಲ್ಲಿ ಅಗ್ರ ಸಾಧನೆ ಮಾಡಿದವರಿಗೆ ಈ ಬಹುಮಾನ ನೀಡಲಾಗುತ್ತದೆ. 2023ರ ನೊಬೆಲ್ ಪ್ರಶಸ್ತಿಯನ್ನು ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ನಾಡಿಗಳನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ನೀಡಲಾಗಿದೆ ಎಂದು ಹೇಳಲಾಗಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಬಹುಮಾನವನ್ನು ನೀಡಲಿದೆ. ಇದು ಈ ವಾರದಲ್ಲಿ ಘೋಷಣೆಯಾದ ಎರಡನೇ ನೋಬೆಲ್‌ ಬಹುಮಾನವಾಗಿದೆ.

ನಿನ್ನೆಯಷ್ಟೇ ಕೋವಿಡ್ -19 ವಿರುದ್ಧ ಹೋರಾಡಲು ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ.

ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಬಹುಮಾನ ವಿಜೇತರಿಗೆ 18.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.

RELATED ARTICLES
- Advertisment -
Google search engine

Most Popular

Recent Comments