Thursday, November 30, 2023
Homeಇದೀಗ ಬಂದ ತಾಜಾ ಸುದ್ದಿನಾವಿನ್ಯತೆ ಹಾಗೂ ಅಭ್ಯಾಸಕ್ರಮಗಳ ಬಗ್ಗೆ ಅಂತರಾಷ್ಟೀಯ ವಿಚಾರ ಸಂಕಿರಣ

ನಾವಿನ್ಯತೆ ಹಾಗೂ ಅಭ್ಯಾಸಕ್ರಮಗಳ ಬಗ್ಗೆ ಅಂತರಾಷ್ಟೀಯ ವಿಚಾರ ಸಂಕಿರಣ

ದಿನಾಂಕ:27.09.2023 ರಂದು ಇಂದಿರಾನಗರದ ಮಾಂಟ್‌ಫೊರ್ಟ ಕಾಲೇಜಿನಲ್ಲಿ ಜ್ಯೋತಿನಿವಾಸ ಕಾಲೇಜು ಇವರ ಸಹಯೋಗದಲ್ಲಿ ಮನೋವಿಜ್ಞಾನದಲ್ಲಿ ಶಿಕ್ಷಣಶಾಸ್ತ್ರ, ಬೋಧಿಸುವ ಕ್ರಮಗಳು, ನಾವಿನ್ಯತೆ ಹಾಗೂ ಅಭ್ಯಾಸಕ್ರಮಗಳ ಬಗ್ಗೆ ಅಂತರಾಷ್ಟೀಯ ವಿಚಾರ ಸಂಕಿರಣ ನೆಡಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಡಾಮಿನಿಕ್.ಡಿ ಅವರು ಉದ್ಘಾಟಣೆ ಮಾಡಿ, ಬೋಧನೆಯ ತತ್ವಶಾಸ್ತ್ರದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮನೋಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ಶ್ರೀನಿವಾಸ ಅವರು ಮನೋಶಾಸ್ತ್ರವನ್ನು ವಿಭಿನ್ನ ಆಯಾಮಗಳ ಮೂಲಕ ಅಭ್ಯಾಸಿಸಬೇಕು ಎಂದು ತಿಳಿಸಿದರು. ದಿಕ್ಸೂಚಿ ಭಾಷಣ ಮಾಡಿದ ಸ್ಪೇನ್ ದೇಶನ ಬಾಸಿರ್ಲೋನ ವಿಶ್ವವಿದ್ಯಾಯದ  ಪ್ರಾಧ್ಯಾಪಕರಾದ ಡಾ.ಅಸುಂತಾ ಆನೀಷ ಅಲ್ವರೆಜ್ ಅವರು ಮನೋವಿಜ್ಞಾನದಲ್ಲಿ  ಹೊಸ ನವೀನ ಶಿಕ್ಷಣದ ಅಗತ್ಯಗಳ ಬಗ್ಗೆ ತಿಳಿಸಿದರು.

ಮೊದಲನೇ ಗೋಷ್ಠಿಯಲ್ಲಿ ಪಾಂಡಿಚೇರಿ ವಿಶ್ವ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಭರಣಿಕಾಂತ ಅವರು ಮನೋವ್ಶೆಜ್ಞಾನಿಕ ಸಂಶೋಧನೆಯಲ್ಲಿನ ಬೋಧನಾ ಕ್ರಮಗಳು ಹಾಗೂ ಸಂಶೋಧನೆ ದತ್ತಾಂಶ ವಿಶ್ಲೇಷಣೆ ಕುರಿತು ಚರ್ಚೆ ನಡೆಸಿದರು.

ಎರಡನೇ ಗೋಷ್ಠಿಯಲ್ಲಿ ಫ್ಯಾನಲ್ ಚರ್ಚೆ ನಡೆಯಿತು. ಅದರಲ್ಲಿ ಡಾ. ಡೈಸಿ ಹಾಗೂ ಫಾ.ಟಾಮಿ ಜೋಷೆಫವರು ಹಾಗೂ ವಿಷಯ ವಿಸ್ತಾರಕರಾಗಿ ಡಾ.ಮ್ಯಾಕ್ಸಿಂ ಫೆರೆರಾ ಅವರು ಭಾಗವಹಿಸಿ  ಮನೋಶಾಸ್ತ್ರದಲ್ಲಿ ಕೌನ್ಸಲಿಂಗ್ ಮತ್ತು ಕೌಶಲ್ಯಗಳ ಕುರಿತು ಚರ್ಚಿಸಿದರು.

ಎರಡನೇ ಫ್ಯಾನಲ್ ಚರ್ಚೆಯಲ್ಲಿ ಮನೋವಿಜ್ಞಾನದಲ್ಲಿನ ವಿವಿಧ ರೀತಿಯ ಸವಾಲುಗಳ ಬಗ್ಗೆ ವಿವಿಧ ಪ್ರಾಧ್ಯಾಪಕರು ಚರ್ಚೆ ಮಾಡಿದರು ಅದರಲ್ಲಿ ಡಾ. ಎಚ್.ಎಸ್. ಅಶೋಕ ಅವರು ಪ್ರಾಯೋಗಿಕ ಪತ್ರಿಕೆಯನ್ನು ಪ್ರಾಯೋಗಿಕ ರೀತಿಯಲ್ಲಿ ಕಲಿಸುವ ಕುರಿತು ಮಾತನಾಡಿದರು.

ಕೊನೆಯಲ್ಲಿ ಧಾರವಾಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಷನ್ಮುಖ ವಸಂತ ಕಾಂಬ್ಲೆ ಅವರು ಸಮಾರೋಪ ಭಾಷಣ ಮಾಡಿ ಇಡೀ ದಿನ ಚರ್ಚಿಸಿದ ವಿಷಯಗಳ ಕುರಿತು ಪೂರಕವಾಗಿ ಮಾತನಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ಅಧ್ಯಕ್ಷರಾದ ಡಾ.ಬ್ರ.ಅರುಲ್ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರನ್ನು ಅಭಿನಂದಿಸಿ, ಮನೋವಿಜ್ಞಾನದ ಹೋಸ ಸಂಶೋಧನೆ ಮತ್ತು ಬೋಧನಾ ವಿಧಾನಗಳ ಬಗ್ಗೆ  ಹೆಚ್ಚಿನ ಮಟ್ಟದಲ್ಲಿ ಸಂಶೋಧನೆ ನಡೆಯಲಿ ಎಂದು ಎಲ್ಲರನ್ನು ಪ್ರೆರೇಪಿಸಿದರು.

ಈ ಕಾರ್ಯಕ್ರಮದಲ್ಲಿ ಮಾಂಟ್‌ಫೋರ್ಟ ಕಾಲೇಜಿನ ಪ್ರಾಂಶುಪಾಲರಾದ ಡಾ.ಬ್ರ.ವಿಕ್ಟರ್ ರಾಜ್ ಹಾಗೂ ಜ್ಯೋತಿನಿವಾಸ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿಸ್ಟರ್.ಮೇರಿ ಲೂಸಿಯಾ ಹಾಗೂ ಮಾಂಟ್‌ಫೋರ್ಟ ಕಾಲೇಜಿನ ಪಿಜಿ ಸಂಯೋಜಕರಾದ ಡಾ.ಮ್ಯಾಕ್ಸಿಂ ಫೆರೆರಾ, ಐಕ್ಯೂಎಸಿ ಸಂಚಾಲಕರಾದ ಶ್ರೀಮತಿ ಶ್ರೀಥಾ ಸ್ಯಾಂಡನ್, ಡಾ.ಜುಬೇದಾ ಅನ್ವರ್ ಹಾಗೂ ಬೆಂಗಳೂರಿನ ವಿವಿಧ ಕಾಲೇಜಿನ ಮನೋಶಾಸ್ತ್ರ ಪ್ರಾಧ್ಯಾಪಕರು, ವಿಷಯ ತಜ್ಞರು, ವಿವಿಧ ಪ್ರಾಧ್ಯಾಪಕರು, ವಿದ್ಯಾರ್ಥಿಗಳು  ಒಳಗೊಂಡಂತೆ ಸುಮಾರು 70ಕ್ಕೂ ಅಧಿಕ ಜನ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments