ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಂದ ಜಿ-20 ಶೃಂಗಸಭೆಯ ಮುಂದಿನ ವಿಷಯಗಳ ಪರಿಶೀಲನೆ
ಎಲ್ಲಾ ಕಾರ್ಯನಿರತ ಗುಂಪುಗಳು ತಮ್ಮ ಪರಿಶೀಲನೆ ಸಭೆಯ ಚರ್ಚೆಯ ನಿರ್ಧಾರಗಳ ಕುರಿತು ಪ್ರತಿ ತಿಂಗಳು ಮಾಹಿತಿ ಕಳುಹಿಸುವುದು.
ಜಿ-20 ನಾಯಕರ ಶೃಂಗಸಭೆಯ ಮುಂದಿನ ವಿಷಯಗಳನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ ಪಿ ಕೆ ಮಿಶ್ರಾ ಅವರು ಜಿ-20ಯ ನಾಯಕರ ಶೃಂಗಸಭೆಯ ಉನ್ನತ ಮಟ್ಟದ ಸಭೆಯಲ್ಲಿ ಪರಿಶೀಲನೆ ನಡೆಸಿದ್ದು, ಸಭೆಯಲ್ಲಿ ಜಿ-20 ಶೆರ್ಪಾ ಶ್ರೀ ಅಮಿತಾಬ್ ಕಾಂತ್, ವಿದೇಶಾಂಗ ಕಾರ್ಯದರ್ಶಿ ಶ್ರೀ ವಿನಯ್ ಮೋಹನ್ ಕ್ವತ್ರ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀ ಅಜಯ್ ಸೇತ್ ಭಾಗವಹಿಸಿದ್ದರು.
ಜಿ-20 ಶೃಂಗಸಭೆ ಒಂದು ಸಲಕ್ಕೆ ಮುಗಿಯುವ ಸಂಬಂಧವಲ್ಲ. ಈ ಬಾರಿ ಜಿ20 ಅಧ್ಯಕ್ಷ ಸ್ಥಾನ ವಹಿಸಿದ ಭಾರತವು ದೃಢ ಫಲಿತಾಂಶವನ್ನು ನೀಡಿದ್ದು, ಅದನ್ನು ಮುಂದುವರಿಸಿ ಚರ್ಚಿಸಲಾಗುತ್ತಿದ್ದು, ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿವಿಧ ಕಾರ್ಯ ಗುಂಪುಗಳನ್ನು ಮುನ್ನಡೆಸುವ ಎಲ್ಲಾ ಸಂಬಂಧಪಟ್ಟ ಸಚಿವಾಲಯಗಳು ತಮ್ಮ ವಲಯಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಮೇಲೆ ಉತ್ತಮ ಫಲಿತಾಂಶ ಕಂಡುಕೊಳ್ಳಲು ಕಾರ್ಯಗತಗೊಳಿಸಲು ಕಾರ್ಯನಿರ್ವಹಿಸುತ್ತಿವೆ. ಉನ್ನತ ಮಟ್ಟದ ಮೇಲ್ವಿಚಾರಣಾ ತಂಡವನ್ನು ಸಹ ರಚಿಸಲಾಗುತ್ತಿದೆ ಎಂದು ಡಾ ಮಿಶ್ರಾ ತಿಳಿಸಿದರು.
ಸಭೆಯಲ್ಲಿ ಡಾ.ಪಿ.ಕೆ.ಮಿಶ್ರಾ ಈ ಹಿಂದೆ ಪ್ರಧಾನ ಮಂತ್ರಿಗಳು ಘೋಷಿಸಿದ್ದ ಜಿ-20 ವರ್ಚುವಲ್ ಶೃಂಗಸಭೆಗೆ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ-20 ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೀಗೆ ಎಲ್ಲರೂ ವರ್ಚುವಲ್ ಜಿ20ಯನ್ನು ತಲುಪಿಸಲು ನಿಕಟವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಘೋಷಣೆಗಳು ಮತ್ತು ಹಿಂದಿನ ಸಚಿವಾಲಯ/ಕಾರ್ಯಕಾರಿ ಗುಂಪು ಸಭೆಗಳಿಂದ ತಲುಪಿಸಬಹುದಾದವುಗಳ ಮೇಲೆ ಕೇಂದ್ರೀಕರಿಸುವಂತೆ ಡಾ ಮಿಶ್ರಾ ಎಲ್ಲಾ ಸಚಿವಾಲಯಗಳಿಗೆ ನಿರ್ದೇಶಿಸಿದರು. ಪಾಲುದಾರರೊಂದಿಗೆ ವೆಬ್‌ನಾರ್‌ಗಳನ್ನು ನಡೆಸುವಂತೆ ಮತ್ತು ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಚಿಂತಕ-ಚಾವಡಿಗಳು ಒಳಗೊಳ್ಳುವಂತೆ ಅವರು ಸಚಿವಾಲಯಗಳಿಗೆ ಸೂಚಿಸಿದರು.
ನಿರ್ದಿಷ್ಟವಾಗಿ ಆಫ್ರಿಕನ್ ಒಕ್ಕೂಟಕ್ಕೆ ಮತ್ತು ಸಾಮಾನ್ಯವಾಗಿ ಗ್ಲೋಬಲ್ ಸೌತ್ ಗೆ ನಮ್ಮ ಬೆಂಬಲವು ಎಲ್ಲಾ ಕಾರ್ಯಗಳಲ್ಲಿ ಮುಂದುವರಿಯಬೇಕು ಎಂದು ಡಾ. ಮಿಶ್ರಾ ಹೇಳಿದರು. ಆಫ್ರಿಕಾ ಒಕ್ಕೂಟಕ್ಕೆ ತಲುಪಲು ನಾವು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಾಗಿದೆ ಎಂದು ಕೂಡ ಹೇಳಿದರು.
ವಿದೇಶಾಂಗ ಸಚಿವಾಲಯವು ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದೆ ಎಂದು ಸಭೆಯಲ್ಲಿ ತಿಳಿಸಲಾಗಿದ್ದು, ಅದು ಪ್ರಧಾನಮಂತ್ರಿಗಳಿಗೆ ಬಹಳ ಪ್ರಿಯವಾದ ವಿಷಯವಾಗಿದೆ. ಜಿ20 ಕಾರ್ಯಸೂಚಿಯಲ್ಲಿ ಗ್ಲೋಬಲ್ ಸೌತ್ ಗೆ ಬೆಂಬಲ ಮತ್ತು ಅದರ ಪ್ರತಿಪಾದನೆಯ ವಿಷಯದಲ್ಲಿ ಭಾರತದ ಅಧ್ಯಕ್ಷತೆಯು ಅದ್ಭುತ ಸಾಧನೆಗಳನ್ನು ಹೊಂದಿದೆ.