Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಅಕ್ಟೋಬರ್ 1 ರಂದು “ಹಿರಿಯರ ಹಬ್ಬ” ಆಯೋಜನೆ : ಅಡುಗೆ ಆಯೋಜನೆ. ಅಜ್ಜ – ಅಜ್ಜಿಯರಿಗಾಗಿ...

ಅಕ್ಟೋಬರ್ 1 ರಂದು “ಹಿರಿಯರ ಹಬ್ಬ” ಆಯೋಜನೆ : ಅಡುಗೆ ಆಯೋಜನೆ. ಅಜ್ಜ – ಅಜ್ಜಿಯರಿಗಾಗಿ ಪ್ಯಾಷನ್ ಶೋ : ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ

ಬೆಂಗಳೂರು, ಸೆ, 28 ಹಿರಿಯ ನಾಗಕರನ್ನು ಸಮಾಜದಲ್ಲಿ ಗೌರವಯುತವಾಗಿ ನೋಡಿಕೊಳ್ಳುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ, ಅವರದೇ ಆದ ಮೋಜು – ಮಸ್ತಿಯಲ್ಲಿ ಕುಣಿದು ಕುಪ್ಪಳಿಸಲು ವಯಾ ವಿಕಾಸ್  ಸಂಸ್ಥೆ ಅಂತರರಾಷ್ಟ್ರೀಯ ವಿಶ್ವ ಹಿರಿಯರ  ನಾಗರಿಕರ ದಿನಾಚರಣೆ ದಿನವಾದ  ಅಕ್ಟೋಬರ್ 1 ರಂದು ನಗರದಲ್ಲಿ “ಹಿರಿಯರ ಹಬ್ಬ” ಆಚರಿಸುತ್ತಿದೆ.

ಸೇಂಟ್ ಜೋಸೆಫ್ ಇನ್ಟ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್  ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಹಿರಿಯ ಜೀವಗಳನ್ನು ಒಂದೇ ವೇದಿಕೆ ಕರೆ ತಂದು ಸಡಗರ, ಸಂಭ್ರದಿಂದ ನಲಿದಾಡಲು ವ್ಯವಸ್ಥೆ ಮಾಡಿದೆ. ಹಿರಿಯರ ಅಡುಗೆ ಸ್ಪರ್ಧೆ  ಆಯೋಜನೆ. ಅಜ್ಜ – ಅಜ್ಜಿಯರಿಗಾಗಿ ಪ್ಯಾಷನ್ ಶೋ, ಹತ್ತು ಹಲವಾರು ವೈಶಿಷ್ಟ್ಯಗಳು, ವಿಭಿನ್ನತೆಗಳನ್ನು ಇದು ಒಳಗೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಯೋ ವಿಕಾಸ್ ಸಂಸ್ಥೆಯ ಸಿ.ಇ.ಓ ಜಮುನ ರವಿ ಮತ್ತು ವಯೋ ವಿಕಾಸ್ ಸಂಸ್ಥೆ ಸಿ.ಓ.ಓ. ಪವಿತ್ರ ರೆಡ್ಡಿ, ಅಂತರ ಸಿನೀಯರ್ ಕೇರ್ ಸಂಸ್ಥೆಯ ರೋಹಿತ್ ಕಟು, ಬೆಂಗಳೂರಿನಂತಹ ಕಾಸ್ಮೋಪಾಟಿನ್ ನಗರದಲ್ಲಿ ಹಿರಿಯರು ಮನೆಯಿಂದ ಹೊರಗಡೆ ಬರಲು ಸಾಧ್ಯವಾಗದ ವಾತಾವರಣ ಇದ್ದು, ಹಿರಿಯರ ಪ್ರತಿಭೆಯನ್ನು ಅನಾವರಣಗೊಳಿಸುವ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಆಯೋಜಿಸಿರುವ ಹಬ್ಬವನ್ನು ಹಿರಿಯ ನಾಗರಿಕರ ಬ್ರ್ಯಾಂಡ್ ರಾಯಭಾರಿ, ಚಲನಚಿತ್ರ ನಟ ಸಿಹಿ ಕಹಿ ಚಂದ್ರು ಮತ್ತು ವಯೋ ವಿಕಾಸ್ ಸಂಸ್ಥೆಯ ಮಂಡಳಿ ಸದಸ್ಯ ಡಾ. ಅಲೆಕ್ಸಾಂಡರ್ ಥಾಮಸ್ ಉದ್ಘಾಟಿಸಲಿದ್ದಾರೆ ಎಂದರು.

ಹಿರಿಯ ಹಬ್ಬದಲ್ಲಿ ಸಂಭ್ರಮದ ಜೊತೆಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನಾಣ್ಯ, ಇತರೆ ಬಹುಮಾನ ಗೆಲ್ಲಲು ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಕುಟುಂಬ ಸದಸ್ಯರಿಗಾಗಿ ಈ ಹಬ್ಬದ ವ್ಯವಸ್ಥೆ ಮಾಡಲಾಗಿದೆ. ಸುಮಾರು 3500 ಹಿರಿಯ ನಾಗರಿಕರು ಭಾಗವಹಿಸುವ ನಿರೀಕ್ಷೆ ಇದೆ. ಜ್ಞಾನ-ಹಂಚಿಕೆಯ ವಿಚಾರಗೋಷ್ಠಿಗಳು, ಆರೋಗ್ಯ ಪ್ರದರ್ಶನಗಳು, ದೈಹಿಕ ಸದೃಢತೆಯ ಪ್ರಾತ್ಯಕ್ಷಿಕೆಗಳು, ಮನೋರಂಜನಾ ಪ್ರದರ್ಶನಗಳು ನಡೆಯಲಿವೆ ಎಂದರು.

ಹಿರಿಯರಿಂದ ಮನೋರಂಜನೆ, ಕಲಾ ಪ್ರದರ್ಶನಗಳು, ಶಂಕರ್ ಮಹಾದೇವನ್ ಅಕಾಡೆಮಿಯಿಂದ ಸಂಗೀತಗೋಷ್ಠಿ, ವಯಸ್ಸಿನ ಆಕರ್ಷಣೆ ಕುರಿತು ಎರಡು ವಿಚಾರ ಗೋಷ್ಠಿ, ತಂತ್ರಜ್ಞಾನದ ಮೂಲಕ ಸಾಮಾಜಿಕವಾಗಿ ಒಳಗೊಳ್ಳುವಿಕೆ ಮತ್ತಿತರೆ ಚಟುವಟಿಕೆಗಳು ಇಲ್ಲಿ ನಡೆಯಲಿವೆ.  ಹಿರಿಯ ನಾಗರಿಕರು ರಚಿಸಿದ ಕಲಾಕೃತಿಗಳು ಮತ್ತು ಇತರ ಆಸಕ್ತಿದಾಯಕ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು, ಹಿರಿಯರಿಗಾಗಿ ಸರ್ಕಾರಿ ಯೋಜನೆಗಳಂತಹ ವಿಷಯ ಕುರಿತು ಮಾಹಿತಿ ಒದಗಿಸಲಾಗುತ್ತದೆ ಎಂದು ಹೇಳಿದರು.

 

ವಯಾ ವಿಕಾಸ್ ಎಂಬುದು ನೋಂದಾಯಿತ ಟ್ರಸ್ಟ್ ಆಗಿದ್ದು, ಹಿರಿಯರಿಗಾಗಿ ಸೂಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಬಲಪಡಿಸುವ ಕನಸಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಯಸ್ಸಾದವರು ಸಹ ಉತ್ಪಾದಕ ಮತ್ತು ಅರ್ಥಪೂರ್ಣ ಜೀವನ  ನಡೆಸಬೇಕು ಎಂಬುದು ನಮ್ಮ ಆಶಯವಾಗಿದೆ.  ಅಂತರಾ ಸೀನಿಯರ್ ಕೇರ್ ಮ್ಯಾಕ್ಸ್ ಇಂಡಿಯಾ ಲಿಮಿಟೆಡ್‌,, ಖಯಾಲ್ ಸ್ಪರ್ಶಿ ಆಸ್ಪತ್ರೆ, ಸೋಲಿಸ್ ಹೆಲ್ತ್ ಬ್ರಿಡ್ಜ್ ಮತ್ತಿತರ ಸಂಸ್ಥೆಗಳು ಈ ಕಾರ್ಯಕ್ರಮದ ಸಹ ಆಯೋಜಕರಾಗಿವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments