Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಡಾ|| ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ನೂತನ ಬಿ.ಇ ತರಗತಿಗಳಿಗೆ ಸಭಾಪತಿ ಯು.ಟಿ.ಖಾದರ್ ಚಾಲನೆ

ಡಾ|| ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ನೂತನ ಬಿ.ಇ ತರಗತಿಗಳಿಗೆ ಸಭಾಪತಿ ಯು.ಟಿ.ಖಾದರ್ ಚಾಲನೆ

ಬೆಂಗಳೂರು : ಕರ್ನಾಟಕದ ಸುಪ್ರಸಿದ್ಧ ವಿದ್ಯಾ ಸಂಸ್ಥೆಯಾದ ಡಾ|| ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯವು ಸೆಪ್ಟಂಬರ್ 25ರಂದು 2023-2024 ಸಾಲಿನ ಮೊದಲನೇ ವರ್ಷದ ಬಿ.ಇ ತರಗತಿಗಳ ಉಧ್ಘಾಟನಾ ಸಮಾರಂಭವನ್ನು ಜೆ.ಪಿ.ಎನ್ ಸಭಾಂಗಣದಲ್ಲಿ ಆಯೋಜಿಸಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಯು.ಟಿ.ಖಾದರ್ ಫರೀದ್, ಸನ್ಮಾನ್ಯ ಸಭಾಪತಿಗಳು ಕರ್ನಾಟಕ ವಿಧಾನಸಭೆ. ಅವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸೌಹಾರ್ದಯುತ ಕಲಿಕೆ, ಪರಸ್ಪರ ಬಾಂಧವ್ಯ ಹಾಗೂ ಗುರಿ ಕೇಂದ್ರಿತ ಅಧ್ಯಯನದ ಪ್ರಯೋಜನಗಳನ್ನು ಉಲ್ಲೇಖಿಸಿ ಮಾರ್ಗದರ್ಶನ ನೀಡಿದರು. ಉಧ್ಘಾಟನಾ ಭಾಷಣವನ್ನು ಡಾ|| ದೇಬಬ್ರತಾ ದಾಸ್.ನಿರ್ದೇಶಕರು I.I.I.T.B, ಅವರು ಭಾಷಣದಲ್ಲಿ ತಾಂತ್ರಿಕ ಶಿಕ್ಷಣದ ಜೊತೆ A.H.A (ATTITUDE, HEALTH, ACADEMICS) ಬೆಳೆಸಿಕೊಂಡು ಉತ್ತಮ ಮಟ್ಟದ ಪ್ರಜೆಯಾಗಲು ಸಾಧ್ಯ ಎಂದು ತಿಳಿಸಿದರು.

ಪಿ.ವಿ.ಪಿ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಕಾರ್ಯದರ್ಶಿಗಳಾದ ಡಾ|| ಬಿ.ಎನ್.ಉಮೇಶ್ ಅವರು ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣದಲ್ಲಿ, ಅಧ್ಯಯನವು ಏಕಾಗ್ರತೆ ಹಾಗೂ ಕಠಿಣ ಶ್ರಮದಲ್ಲಿ ಕೂಡಿದಲ್ಲಿ ನಿಗದಿತ ಗುರಿಯನ್ನು ತಲುಪಲು ಸಾಧ್ಯವೆಂದು ತಿಳಿಸಿದರು. ಪಿ.ವಿ.ಪಿ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಹಿರಿಯ ಟ್ರಸ್ಟಿಗಳಾದ ಶ್ರೀ ಎಸ್.ಶಿವಮಲ್ಲು ಅವರು ಮಾತನಾಡಿ, ಇಂದಿನ ತಾಂತ್ರಿಕ ಉದ್ಯೋಗಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟು ಅದಕ್ಕೆ ಪೂರಕವಾದ ಜ್ಞಾನವನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಶೋಧನಾ ಸಲಹೆಗಾರರಾದ ಪ್ರೊಫೆಸರ್ ಎಲ್.ಎಮ್.ಪಟ್ನಾಯಕ್, ಪ್ರಾಂಶುಪಾಲರಾದ ಡಾ|| ಎಮ್.ಮೀನಾಕ್ಷಿಯವರು ಉಪಪ್ರಾಂಶುಪಾಲರಾದ ಡಾ|| ಎಮ್.ವಿ.ವಿಜಯ್ ಕುಮಾರ್ ಮತ್ತು ಡೀನ್(ಅ) ಡಾ|| ಕೆ.ಎನ್.ಅನುರಾಧರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments