Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಬೆಂಗಳೂರಿನಲ್ಲಿ ಸ್ಯಾಮ್‌ಸಂಗ್‌ ಮತ್ತು ಕೆ-ಪಾಪ್‌ ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆ

ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್‌ ಮತ್ತು ಕೆ-ಪಾಪ್‌ ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆ

ಸ್ಯಾಮ್‌ಸಂಗ್ನ ವಿಶಿಷ್ಟ ಎಕ್ಸ್‌ಪೀರಿಯೆನ್ಸ್ ಸ್ಟೋರ್ ಸ್ಯಾಮ್‌ಸಂಗ್ ಒಪೆರಾ ಹೌಸ್‌ಗೆ 5 ವರ್ಷ, ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್‌ ಮತ್ತು ಕೆ-ಪಾಪ್‌ ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆ

• ಸ್ಯಾಮ್‌ಸಂಗ್‌ ಇಂಡಿಯಾದಿಂದ ಕೆ ಫಿಯೆಸ್ಟಾ ಎಂಬ ಕೆ-ಪಾಪ್‌ ಥೀಮ್‌ನ ಸಾಂಸ್ಕೃತಿಕ ಕಾರ್ಯಕ್ರಮ
• ಹೊಸ ತಂತ್ರಜ್ಞಾನ ಅನುಭವ ಮತ್ತು ಸಂದರ್ಶಕರಿಗೆ ಪ್ರತ್ಯೇಕ ವಲಯಗಳನ್ನು ರೂಪಿಸಿ ಬೆಂಗಳೂರಿನ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಇತ್ತೀಚೆಗೆ ಹೊಸ ರೂಪ ನೀಡಲಾಗಿದೆ

ಬೆಂಗಳೂರು, ಭಾರತ – ಸೆಪ್ಟೆಂಬರ್ 25, 2023 – ಸ್ಯಾಮ್‌ಸಂಗ್‌ ಇಂಡಿಯಾದ ವಿಶಿಷ್ಟ ಎಕ್ಸ್‌ಪೀರಿಯನ್ಸ್‌ ಸ್ಟೋರ್ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ಬೆಂಗಳೂರು ಇದೀಗ ಐದು ವರ್ಷಗಳನ್ನು ಪೂರೈಸಿದೆ. ಈ ಸಮಯದಲ್ಲಿ, ಇದು ತಂತ್ರಜ್ಞಾನ, ಅನ್ವೇಷಣೆ, ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಹೊರಹೊಮ್ಮಿದೆ. ಈ ಮೈಲಿಗಲ್ಲನ್ನು ಕೆ ಫಿಯೆಸ್ಟಾ ಎಂಬ ಕೆ-ಪಾಪ್‌ ಥೀಮ್‌ನ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ಯಾಮ್‌ಸಂಗ್‌ ಆಚರಣೆ ಮಾಡಿತು. ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ನ ಯುವ ಅಭಿಮಾನಿಗಳು ಮತ್ತು ಕೆ-ಪಾಪ್ ಅಭಿಮಾನಿಗಳು ನೇರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದು ಸಾಂಸ್ಕೃತಿಕ ಸಮ್ಮಿಳನಕ್ಕೆ ಒಂದು ದ್ಯೋತಕವಾಗಿತ್ತು.

ಈ ವರ್ಷದ ಥೀಮ್‌ ‘ಕೊರಿಯಾ ಪಾಪ್‌ ಸಂಸ್ಕೃತಿಯ ವಿಜೃಂಭಣೆ’ ಆಗಿತ್ತು ಮತ್ತು ಸ್ಯಾಮ್‌ಸಂಗ್‌ ಒಪೆರಾ ಹೌಸ್ ಹಲವು ಕಾರ್ಯಕ್ರಮಗಳನ್ನು ಇದರ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇವು ಕೊರಿಯಾ ಸಂಸ್ಕೃತಿಯ ಸ್ವಾದವನ್ನು ಮನರಂಜನೆ ಮತ್ತು ಅಡುಗೆಯ ಮೂಲಕ ಪರಿಚಯಿಸಿತು. ಕೆ-ಪಾಪ್ ಸಂಸ್ಕೃತಿ ಬಗ್ಗೆ ಇರುವ ಟ್ರಿವಿಯಾ ಕ್ವಿಜ್‌ ಮತ್ತು ಗೇಮ್ಸ್‌ ಸೆಶನ್‌ ಮೂಲಕ ಕಾರ್ಯಕ್ರಮ ಆರಂಭವಾಯಿತು. ತಮ್ಮ ಜ್ಞಾನವನ್ನು ಪ್ರದರ್ಶಿಸಿ ಆಕರ್ಷಕ ಬಹುಮಾನವನ್ನು ಗೆಲ್ಲುವುದಕ್ಕೆ ಭಾಗವಹಿಸಿದವರಿಗೆ ಇದು ಅವಕಾಶ ಮಾಡಿಕೊಟ್ಟಿತು. ಇದರ ನಂತರದಲ್ಲಿ ಡ್ಯಾನ್ಸ್ ಬ್ಯಾಟಲ್ ನಡೆಯಿತು. ಇದರಲ್ಲಿ ನೃತ್ಯಗಾರರು ಅದ್ಭುತವಾಗಿ ಪ್ರದರ್ಶನ ನೀಡಿದರೆ ಮತ್ತು ವಾಯ್ಸ್‌ ಬ್ಯಾಟಲ್‌ನಲ್ಲಿ ಗಾಯನ ಕಾರ್ಯಕ್ರಮವೂ ನಡೆಯಿತು.

ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನ ಒಳಗೆ ಇರುವ ಹೋಮ್‌ ಥಿಯೇಟರ್ ವಲಯದಲ್ಲಿ, ಸಿನಿಪ್ರಿಯರಿಗಾಗಿ ಎಕ್ಸ್‌ಕ್ಲೂಸಿವ್ ಆದ ಕೊರಿಯನ್‌ ಸಿನಿಮಾ ಪ್ರದರ್ಶನವನ್ನು ನಡೆಸಲಾಯಿತು. ಈ ಮಧ್ಯೆ ಶೇಫ್‌ ಕಿಚನ್‌ ಝೋನ್‌ ಆಹಾರ ಪ್ರಿಯರಿಗೆ ಮತ್ತು ಶೆಫ್‌ಗಳಿಗೆ ಆಕರ್ಷಣೀಯವಾಗಿತ್ತು. ಚೆರ್ರಿ ಬ್ಲಾಸಮ್ ಹಿನ್ನೆಲೆ ಇರುವ ಫೋಟೋ ಬೂತ್‌ನಲ್ಲಿ ಅಭಿಮಾನಿಗಳು ಫೊಟೋ ಸೆರೆಹಿಡಿದುಕೊಂಡರು. ಅಲ್ಲದೆ, ಅಕ್ಸೆಸರಿ ವರ್ಕ್‌ಶಾಪ್‌ಗೆ ಹಾಜರಾದರು.

ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಸುಮಾರು 5000 ಕ್ಕೂ ಹೆಚ್ಚು ಸ್ಯಾಮ್‌ಸಂಗ್‌ ಮತ್ತು ಕೆ ಪಾಪ್‌ ಅಭಿಮಾನಿಗಳು ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಭೇಟಿ ನೀಡಿದ್ದರು. ಕೆ-ಫಿಯೆಸ್ಟಾ ಸಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಯಾಮ್‌ಸಂಗ್ ಜ್ಯೂರಿ ಸದಸ್ಯರು ಜಡ್ಜ್‌ ಆಗಿದ್ದರು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನೂ ಅವರು ಪ್ರದಾನ ಮಾಡಿದರು.

“ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ಬೆಂಗಳೂರಿನಲ್ಲಿ ಆರಂಭವಾದಾಗಿನಿಂದ ಈವರೆಗೆ ಅದ್ಬುತ ಪಯಣವನ್ನು ಸಾಗಿಸಿದೆ. ಇದು ಇಂದು ತಂತ್ರಜ್ಞಾನ, ಅನ್ವೇಷಣೆ, ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಹೊಸ ತಲೆಮಾರಿನ ಗ್ರಾಹಕರಂತೂ ಕಳೆದ ಐದು ವರ್ಷಗಳಿಂದಲೂ ಈ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗೆ ಆಗಮಿಸುವುದಕ್ಕೆ ಅತ್ಯಂತ ಕಾತರದಿಂದ ಕಾಯುತ್ತಿರುತ್ತಾರೆ. ಅವರಿಗೆ ನಾವು ಆಕರ್ಷಕ ಹೊಸ ತಂತ್ರಜ್ಞಾನ ಅನುಭವವನ್ನು ಒದಗಿಸುತ್ತಲೇ ಇದ್ದೇವೆ” ಎಂದು ಸ್ಯಾಮ್‌ಸಂಗ್‌ ಇಂಡಿಯಾ ಹಿರಿಯ ನಿರ್ದೇಶಕ ಸುಮಿತ್‌ ವಾಲಿಯಾ ಹೇಳಿದ್ದಾರೆ.

ಬೆಂಗಳೂರಿನ ಮಧ್ಯಭಾಗದಲ್ಲಿರುವ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಇತ್ತೀಚೆಗೆ ಸ್ಯಾಮ್‌ಸಂಗ್‌ ಇಂಡಿಯಾ ಹೊಸ ರೂಪ ನೀಡಿದೆ. ಇದರಲ್ಲಿ ಹೊಸ ತಂತ್ರಜ್ಞಾನ ಅನುಭವಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ವಲಯಗಳು ತಲೆ ಎತ್ತಿವೆ. ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಭೇಟಿ ನೀಡುವ ಗ್ರಾಹಕರು ಇಂದು ಸ್ಯಾಮ್‌ಸಂಗ್‌ನ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ನೋಡಬಹುದು. ಅಲ್ಲದೆ ಕನೆಕ್ಟೆಡ್‌ ಲಿವಿಂಗ್‌, ಗೇಮಿಂಗ್‌ ಅರೆನಾ, ಆಡಿಯೋ, ಹೋಮ್‌ ಥಿಯೇಟರ್‌ ಮತ್ತು ಲೈಫ್‌ಸ್ಟೈಲ್‌ ಟಿವಿಗಳು ಇತ್ಯಾದಿ ಹೊಸ ವಲಯಗಳಿವೆ. ಇವು ಸ್ಮಾರ್ಟ್‌ಥಿಂಗ್ಸ್‌ ಜೊತೆಗೆ ಹಲವು ಸಾಧನಗಳನ್ನು ಸಂಪರ್ಕಿಸುವುದು ಹೇಗೆ ಎಂಬುದನ್ನು ತೋರಿಸುತ್ತವೆ. ಇವೆಲ್ಲವನ್ನೂ ಒಂದು ಕಪ್ ಕಾಫಿಯ ಜೊತೆಗೆ ಆನಂದಿಸಬಹುದು.

ಸ್ಯಾಮ್‌ಸಂಗ್‌ ಒಪೆರಾ ಹೌಸ್‌ 2018 ರಲ್ಲಿ ಆರಂಭವಾಯಿತು. ಇದು ಬೆಂಗಳೂರಿನಲ್ಲಿ ಅನ್ವೇಷಣೆ, ಜೀವನಶೈಲಿ, ಮನರಂಜನೆ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಇದರಲ್ಲಿರುವ ವಿಶಾಲವಾದ ಪ್ಲಾಜಾ ಸ್ಥಳದಲ್ಲಿ ಇಡೀ ವರ್ಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಐದು ವರ್ಷಗಳ ಹಿಂದೆ ಆರಂಭವಾದಾಗಿನಿಂದಲೂ, 1,000 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಪನ್ನದ ಅನುಭವ, ಗ್ರಾಹಕರ ಎಂಗೇಜ್‌ಮೆಂಟ್ ಮತ್ತು ಮನರಂಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಫೊಟೋಗ್ರಫಿ, ಡೂಡ್ಲಿಂಗ್‌, ವೀಡಿಯೋ ಎಡಿಟಿಂಗ್‌ ಬಗ್ಗೆ ಗ್ಯಾಲಾಕ್ಸಿ ವರ್ಕ್‌ಶಾಪ್‌ಗಳು, ಟೆಡ್‌ ಟಾಕ್‌, ಫ್ಯಾಷನ್ ಶೋಗಳು, ಬೇಕಿಂಗ್ ವರ್ಕ್‌ಶಾಪ್‌ಗಳು, ಸಿನಿಮಾ ಸ್ಕ್ರೀನಿಂಗ್‌ ಇತ್ಯಾದಿ ನಡೆಸಲಾಯಿತು.

ಇಂದು, ನಗರದ ಹೊಸ ತಲೆಮಾರಿನ ಜನರಿಗೆ ಇದು ಭೇಟಿ ನೀಡಲೇಬೇಕಾದ ಒಂದು ಸ್ಥಳವಾಗಿದೆ. ಇಲ್ಲಿ ಆಕರ್ಷಕ ತಂತ್ರಜ್ಞಾನ ಸೌಕರ್ಯದ ಅನುಭವ ಮತ್ತು ಮನರಂಜನೆಯೆರಡೂ ಸಿಗುತ್ತದೆ. ಇಲ್ಲಿಗೆ ಭೇಟಿ ನೀಡಿದವರು ಗೇಮಿಂಗ್‌ನ ವಿಶ್ವದಲ್ಲಿ ಮುಳುಗೇಳಬಹುದು, ಹೋಮ್‌ ಥಿಯೇಟರ್ ಝೋನ್‌ನಲ್ಲಿ ಅದ್ಭುತ ಆಡಿಯೋ ಅನುಭವ ಪಡೆಯಬಹುದು ಮತ್ತು ಇನ್ ಹೌಸ್ ಶೆಫ್‌ ನಡೆಸಿಕೊಡುವ ಕಿಚನ್‌ ವರ್ಕ್‌ಶಾಪ್‌ನಲ್ಲಿ ಅಡುಗೆ ಕೌಶಲವನ್ನೂ ಕಲಿಯಬಹುದು. ಇದೆಲ್ಲವನ್ನೂ, ಇಡೀ ನಗರದಲ್ಲೇ ಸಿಗುವ ಉತ್ತಮ ಕಾಫಿ ಹೀರುತ್ತಾ ಪಡೆಯಬಹುದು.

ಗ್ರಾಹಕರ ಅನುಭವವನ್ನು ಸುಧಾರಿಸುವುದರ ಮೇಲೆ ಸ್ಯಾಮ್‌ಸಂಗ್‌ ಹೆಚ್ಚಿನ ಒತ್ತು ನೀಡಿದೆ. ಎಕ್ಸ್‌ಪೀರಿಯನ್ಸ್‌ ಸ್ಟೋರ್‌ನ ಲುಕ್‌ ಮತ್ತು ಫೀಲ್‌ ಅನ್ನು ಸುಧಾರಿಸುವುದರ ಜೊತೆಗೆ, ವಿವಿಧ ಉತ್ಪನ್ನಗಳು ಒದಗಿಸುವ ಇಮ್ಮರ್ಸಿವ್ ಅನುಭವದ ಮೂಲಕ ಗ್ರಾಹಕರ ಅನುಭವವನ್ನು ಸುಧಾರಿಸಲಾಗಿದೆ. ಇದರಲ್ಲಿ ಕ್ಯೂಎಲ್‌ಇಡಿ ಟಿವಿಗಳು, ದಿ ಫ್ರೇಮ್ ಲೈಫ್‌ಸ್ಟೈಲ್ ಟಿವಿಗಳು, ಅಮೋಘ ರೆಫ್ರಿಜರೇಟರ್‌ಗಳು, ಎಕೋಬಬಲ್‌ ವಾಶಿಂಗ್‌ ಮಶಿನ್‌ಗಳು, ಮೈಕ್ರೋವೇವ್‌ಗಳು ಇದರಲ್ಲಿವೆ. ಅಲ್ಲದೆ, ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ ಆಕ್ಟಿವಿಟಿ ಝೋನ್ ಕೂಡಾ ಇದೆ.

ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ಸಮಗ್ರ ಗ್ರಾಹಕ ಸೇವೆ ಕೇಂದ್ರವನ್ನು ಹೊಂದಿದೆ. ಇದರಲ್ಲಿ ಪರ್ಸನಲೈಸೇಶನ್‌ ಕೌಂಟರ್ ಕೂಡಾ ಇದೆ. ಇಲ್ಲಿ ಗ್ರಾಹಕರು ತಮ್ಮ ಫೋನ್ ಸ್ಕಿನ್ ಆಯ್ಕೆ ಮಾಡಿಕೊಳ್ಳುವ ಮತ್ತು ಕವರ್‌ಗಳ ಮೇಲೆ ಕೆತ್ತನೆ ಮಾಡಿಸಿಕೊಳ್ಳುವ ಅವಕಾಶ ಇದೆ.

ಬ್ರಿಟಿಷರ ಕಾಲದಲ್ಲಿ ನಾಟಕ ಮತ್ತು ಒಪೆರಾಗಳನ್ನು ಮಾಡುತ್ತಿದ್ದ 33,000 ಚದರಡಿ ಪ್ರತ್ಯೇಕ ಸ್ಥಳವನ್ನು ಸ್ಯಾಮ್‌ಸಂಗ್‌ ಎರಡು ವರ್ಷಗಳ ಪ್ರಯತ್ನದಿಂದ ಪುನಃಶ್ಚೇತನಗೊಳಿಸಿ, 2018 ರಲ್ಲಿ ತೆರೆದಿತ್ತು. ಇದರ ಕಮಾನು ಇಂದಿಗೂ ಮೂಲ ನೋಟವನ್ನು ಹೊಂದಿದೆ. ಒಳಭಾಗದಲ್ಲಿ ಆಧುನಿಕತೆ ಇದ್ದು, ಇದರ ಮರುನಿರ್ಮಾಣದಲ್ಲಿ ತಂತ್ರಜ್ಞಾನವನ್ನು ಅಪಾರವಾಗಿ ಬಳಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular

Recent Comments