ಭಾರತದಲ್ಲಿ ವಹಿವಾಟು ಆರಂಭಿಸಿ 6 ವರ್ಷಗಳನ್ನು ಪೂರೈಸಿದ ಅಮೆಜಾನ್ ಬ್ಯುಸಿನೆಸ್‌; ಔದ್ಯಮಿಕ ಗ್ರಾಹಕರಿಗೆ ಇನ್‌ಸ್ಟಂಟ್ ಸಾಲವನ್ನು ಒದಗಿಸಲು ಅಮೆಜಾನ್ ಪೇ ಲೇಟರ್‌ ಸೌಲಭ್ಯದ ಪರಿಚಯ

0
35

6ನೇ ವಾರ್ಷಿಕೋತ್ಸವದಲ್ಲಿ ಅಮೆಜಾನ್ ಬ್ಯುಸಿನೆಸ್‌ನಿಂದ ತನ್ನ ಗ್ರಾಹಕರಿಗೆ ಅಮೆಜಾನ್ ಪೇ ಲೇಟರ್ ಸೌಲಭ್ಯದ ಪರಿಚಯ

• 2017 ರಲ್ಲಿ 14 ಸಾವಿರ ಸೆಲ್ಲರ್‌ಗಳಿಂದ ಆರಂಭಿಸಿದ ಅಮೆಜಾನ್ ಬ್ಯುಸಿನೆಸ್ ಇಂದು 10 ಲಕ್ಕಷಕ್ಕೂ ಹೆಚ್ಚು ಮಾರಾಟಗಾರರನ್ನು ಒಳಗೊಂಡಿರುವ 19 ಕೋಟಿಗೂ ಹೆಚ್ಚು ಜಿಎಸ್‌ಟಿ ಸೌಲಭ್ಯವಿರುವ ಉತ್ಪನ್ನಗಳನ್ನು ಹೊಂದಿರುವ ಅತಿದೊಡ್ಡ ಅಗ್ರಿಗೇಟರ್
• ಲ್ಯಾಪ್‌ಟಾಪ್‌ಗಳು, ಎಲೆಕ್ಟ್ರಾನಿಕ್ಸ್, ಕಚೇರಿ ಸಾಮಗ್ರಿಗಳು, ಔದ್ಯಮಿಕ ಸಾಮಗ್ರಿಗಳು, ರಿಪೇರಿ ಮತ್ತು ನಿರ್ವಹಣೆ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ಪನ್ನಗಳನ್ನು ಬ್ಯುಸಿನೆಸ್ ಗ್ರಾಹಕರು ಖರೀದಿ ಮಾಡಬಹುದಾಗಿದೆ ಮತ್ತು ದೇಶದ 99.5% ಪಿನ್‌ಕೋಡ್‌ಗಳಿಗೆ ತ್ವರತಿ ಡೆಲಿವರಿ ಸೌಲಭ್ಯವನ್ನು ಪಡೆಯಬಹುದು
• ಹಲವು ಸೌಲಭ್ಯಗಳನ್ನು ಕಾಲಕಾಲಕ್ಕೆ ಅಮೆಜಾನ್ ಬ್ಯುಸಿನೆಸ್ ಪರಿಚಯಿಸುತ್ತಿದ್ದು, ಕೋಟ್ ಆನ್ ಬಲ್ಕ್ ಆರ್ಡರ್‌ ಸೌಲಭ್ಯ, ಐಒಎಸ್ ಮತ್ತು ಆಂಡ್ರಾಯ್ಡ್ ಆಪ್ಟಿಮೈಸ್ಡ್ ಎಬಿ ಮೊಬೈಲ್‌ ಆಪ್‌, ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಮೂಲಕ ಪಾವತಿ, ಸುಧಾರಿತ ಖಾತೆ ಸುರಕ್ಷತೆ ಮತ್ತು ಅನುಸರಣೆ ಮತ್ತು ಬ್ಯುಸಿನೆಸ್ ಅನಾಲಿಟಿಕ್ಸ್ ಟೂಲ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿದೆ
• ಅಮೆಜಾನ್ ಪೇ ಲೇಟರ್‌ ಅನ್ನು ಪರಿಚಯಿಸಿರುವುದರಿಮದಾಗಿ, ಗ್ರಾಹಕರು ಡಿಜಿಟಲ್ ರೂಪದಲ್ಲಿ ಸೈನ್ ಅಪ್ ಮಾಡಿಕೊಂಡು, ಇನ್‌ಸ್ಟಂಟ್ ಸಾಲ ಸೌಲಭ್ಯವನ್ನು ಪಡೆಯಬಹುದು ಮತ್ತು ಈ ಮೂಲಕ ಎಲ್ಲ ವಿಭಾಗಗಳಲ್ಲೂ ಸರಾಗವಾಗಿ ಖರೀದಿಗಳನ್ನು ಮಾಡಬಹುದಾಗಿದೆ

ಬೆಂಗಳೂರು, ಸೆಪ್ಟೆಂಬರ್ 20, 2023: 2017 ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ ಅಮೆಜಾನ್ ಬ್ಯುಸಿನೆಸ್ ತನ್ನ ಆರು ವರ್ಷಗಳನ್ನು ಪೂರೈಸಿದ್ದು, ಭಾರತದಲ್ಲಿ ಔದ್ಯಮಿಕ ಗ್ರಾಹಕರಿಗೆ ನೆರವಾಗಿದೆ ಮತ್ತು ಸರಾಗ ಮತ್ತು ದಕ್ಷವಾದ ಇ-ಖರೀದಿಗೆ ನೆರವಾಗಿದೆ. ಅಮೆಜಾನ್ ಬ್ಯುಸಿನೆಸ್ ಆರಂಭವಾದಾಗಿನಿಂದಲೂ, ಉದ್ಯಮಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮತ್ತು ಖರೀದಿ ಮಾಡುವ ವಿಧಾನವನ್ನೇ ಬದಲಿಸಿದೆ. 10 ಲಕ್ಷ ಮಾರಾಟಗಾರರಿಂದ 19 ಕೋಟಿ ರೂ. ಗೂ ಹೆಚ್ಚು ಜಿಎಸ್‌ಟಿಯನ್ನು ಪಾವತಿ ಮಾಡಿರುವ ಅಮೆಜಾನ್ ಬ್ಯುಸಿನೆಸ್‌ ಇಂದು ದೇಶಾದ್ಯಂತ 99.5% ಗೂ ಹೆಚ್ಚು ಪಿನ್‌ಕೋಡ್‌ಗಳಿಗೆ ಸೇವೆ ಸಲ್ಲಿಸುತ್ತದೆ ಮತ್ತು ಎಲ್ಲ ಔದ್ಯಮಿಕ ಖರೀದಿ ಅಗತ್ಯಗಳನ್ನು ಒಂದೇ ಕಡೆ ಪೂರೈಸುತ್ತಿದೆ. ಬಲ್ಕ್‌ ಆರ್ಡರ್‌ಗಳಿಗೆ ಕೋಟ್ ಮಾಡುವ ಅವಕಾಶ, ವಿವಿಧ ವಿಳಾಸಗಳಿಗೆ ಶಿಪ್‌ ಮಾಡುವ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಇದು ಒದಗಿಸಿದೆ. ಇವೆಲ್ಲವನ್ನೂ ಅಮೆಜಾನ್ ಬ್ಯುಸಿನೆಸ್‌ನ ಐಒಎಸ್ ಮತ್ತು ಆಂಡ್ರಾಯ್ಡ್ ಆಪ್ಟಿಮೈಸ್ಡ್‌ ಮೊಬೈಲ್‌ ಆಪ್‌ನಲ್ಲೇ ಮಾಡಬಹುದಾಗಿದೆ. ಆರು ವರ್ಷಗಳ ಈ ಪಯಣವನ್ನು ಸಂಭ್ರಮಿಸುವುದಕ್ಕಾಗಿ, ಅಮೆಜಾನ್ ಬ್ಯುಸಿನೆಸ್ ಈಗ ಅಮೆಜಾನ್ ಪೇ ಲೇಟರ್‌ ಅನ್ನೂ ಅಳವಡಿಸಿಕೊಂಡಿದೆ. ಅರ್ಹ ಬ್ಯುಸಿನೆಸ್ ಗ್ರಾಹಕರಿಗೆ ವರ್ಚುವಲ್ ಕ್ರೆಡಿಟ್ ಅನ್ನು ಇದು ನೀಡುತ್ತಿದೆ. 2023-24 ರ ಬಜೆಟ್‌ನಲ್ಲಿ ಎಂಎಸ್‌ಎಂಇ ವಲಯಕ್ಕೆ ಕ್ರೆಡಿಟ್ ಗ್ಯಾರಂಟಿ ಸ್ಕೀಮ್‌ ಅನ್ನು ನೀಡುವ ಭಾರತ ಸರ್ಕಾರದ ಧ್ಯೇಯಕ್ಕೆ ಅನುಗುಣವಾಗಿ, ಅಮೆಜಾನ್ ಪೇ ಲೇಟರ್ ಅನ್ನು ಅಳವಡಿಸಲಾಗಿದೆ. ದೇಶಾದ್ಯಂತ ಔದ್ಯಮಿಕ ಗ್ರಾಹಕರನ್ನು ಡಿಜಿಟಲೀಕರಿಸುವ ಅಮೆಜಾನ್ ಬ್ಯುಸಿನೆಸ್‌ನ ಗುರಿಯನ್ನು ಇದು ಇನ್ನಷ್ಟು ಪ್ರೋತ್ಸಾಹಿಸಲಿದೆ. ಅಲ್ಲದೆ, ಕಿರಿಕಿರಿ ಇಲ್ಲದ ಪಾವತಿ ಅನುಭವವನ್ನು ಒದಗಿಸುವುದರ ಜೊತೆಗೆ ಎಂಎಸ್ಎಂಇಗೆ ಸಾಲ ಲಭ್ಯತೆಯನ್ನೂ ಇದು ಹೆಚ್ಚಿಸಲಿದೆ.

ಅಮೆಜಾನ್ ಪೇ ಲೇಟರ್‌ನ ಇನ್‌ಸ್ಟಂಟ್ ಕ್ರೆಡಿಟ್‌ಗೆ ಡಿಜಿಟಲ್ ರೂಪದಲ್ಲಿ ಸೈನ್ ಅಪ್ ಆಗಿ, ಬಳಕೆ ಮಾಡಬಹುದು. ಈ ಮೂಲಕ ಎಲ್ಲ ವಿಭಾಗಗಳಲ್ಲಿನ ಉತ್ಪನ್ನಗಳನ್ನು ಸರಾಗವಾಗಿ ಖರೀದಿ ಮಾಡಬಹುದು. ಸರಾಗ ಪಾವತಿ ಅನುಭವದ ಜೊತೆಗೆ, Amazon.in ನಲ್ಲಿ ಬಿಲ್ ಪೇಮೆಂಟ್ ಮಾಡಲು, ಅಮೆಜಾನ್ ಪೇ ಕಾರ್ಪೊರೇಟ್ ಗಿಫ್ಟ್ ಕಾರ್ಡ್‌ಗಳನ್ನು ಖರೀದಿ ಮಾಡಲು, ಟ್ರಾವೆಲ್, ವಿಮೆ ಖರೀದಿ ಮಾಡಲು ಕೂಡಾ ಅವರಿಗೆ ಸಾಧ್ಯವಾಗುತ್ತದೆ. ದೈನಂದಿನ ಅಗತ್ಯಗಳು, ಎಲೆಕ್ಟ್ರಾನಿಕ್ಸ್‌, ಕಾರ್ಪೊರೇಟ್‌ ಗಿಫ್ಟ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಲ್ಕ್‌ ಆಗಿ ಖರೀದಿ ಮಾಡಲು ತಮ್ಮ ಮಾಸಿಕ ಬಜೆಟ್‌ಗಳನ್ನು ವಿಸ್ತರಿಸಿಕೊಳ್ಳಲು ಗ್ರಾಹಕರಿಗೆ ನೆರವು ನೀಡುವ ಉದ್ದೇಶವನ್ನು ಇದು ಹೊಂದಿದೆ. ಬಳಸಿದ ಕ್ರೆಡಿಟ್ ಅನ್ನು ಮುಂದಿನ ತಿಂಗಳು ಮರುಪಾವತಿ ಮಾಡಬಹುದಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 12 ತಿಂಗಳವರೆಗಿನ ಇಎಂಐ ಕೂಡಾ ಇದರಲ್ಲಿ ಲಭ್ಯವಿದೆ. ಇದರಲ್ಲಿ ಯಾವುದೇ ಗೌಪ್ಯ ಶುಲ್ಕ ಇರುವುದಿಲ್ಲ.

ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಅಮೆಜಾನ್ ಬ್ಯುಸಿನೆಸ್‌ನ ನಿರ್ದೇಶಕ ಸುಚಿತ್‌ ಸುಭಾಸ್‌, “ನಮ್ಮ ಗ್ರಾಹಕರು ಮತ್ತು ಸೆಲ್ಲಿಂಗ್ ಪಾರ್ಟ್ನರ್‌ಗಳಿಂದ ಕಳೆದ ಆರು ವರ್ಷಗಳಲ್ಲಿ ನಾವು ಪಡೆದ ಬೆಂಬಲಕ್ಕೆ ಆಭಾರಿಯಾಗಿದ್ದೇವೆ. ಆರಂಭದಿಂದಲೂ, ಜಿಎಸ್‌ಟಿ ಸೌಲಭ್ಯವನ್ನು ಹೊಂದಿರುವ ದೊಡ್ಡ ಮಟ್ಟದ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಉದ್ದೇಶಿಸಿದ್ದೆವು. ಇದರಲ್ಲಿ ಸ್ಫರ್ಧಾತ್ಮಕತೆ ಮತ್ತು ಪಾರದರ್ಶಕ ಬೆಲೆ, ವಿಶಾಲವಾದ ಡೆಲಿವರಿ ಕವರೇಜ್‌ ಮತ್ತು ಡಿಜಿಟಲ್ ಖರೀದಿಯಲ್ಲಿ ಅನ್ವೇಷಣೆ ಎಲ್ಲವೂ ಇವೆ. ಇದರಿಂದಾಗಿ ಉದ್ಯಮಗಳು ಖರೀದಿ ಮಾಡುವುದು ಸರಳ ಮತ್ತು ಹೆಚ್ಚು ದಕ್ಷ ಆಗಿರಲಿದೆ. ನಮ್ಮ ಗ್ರಾಹಕರಿಗೆ ನಾವು ಆದ್ಯತೆ ನೀಡಿದ್ದು, ಔದ್ಯಮಿಕ ಗ್ರಾಹಕರಿಗೆ ಸಾಲ ಪಡೆಯುವುದಕ್ಕಾಗಿ ಅಮೆಜಾನ್ ಪೇ ಲೇಟರ್ ಸೌಲಭ್ಯವನ್ನು ಪರಿಚಯಿಸುತ್ತಿದ್ದೇವೆ. ಈ ಮೂಲಕ ಅವರಿಗೆ ಉತ್ಪನ್ನಗಳು ಇನ್ನಷ್ಟು ಕೈಗೆಟಕುವಂತೆ ಮಾಡುತ್ತಿದ್ದೇವೆ.”

ಅಮೆಜಾನ್ ಬ್ಯುಸಿನೆಸ್‌ನ ಪಯಣವು ತನ್ನ ಗ್ರಾಹಕರಿಗೆ ಡಿಜಿಟಲ್ ಸೌಲಭ್ಯವನ್ನು ಒದಗಿಸುವುದು ಮತ್ತು ಅವರ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುವುದನ್ನು ಕೇಂದ್ರೀಕರಿಸಿದೆ. ಅವರ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ನವೀಕರಣಗೊಳ್ಳುತ್ತಲೇ ಇದೆ. ಬಿಲ್‌ ಟು ಶಿಪ್‌ ಟು ಸೌಲಭ್ಯವನ್ನು ಇದು ಪರಿಚಯಿಸಿದೆ. ಇದರಿಂದ ಗ್ರಾಹಕರು ತಮ್ಮ ಪ್ಯಾನ್ ಇಂಡಿಯಾ ಶಿಪ್‌ಮೆಂಟ್‌ಗಳಿಗೆ ಬಿಲ್ಲಿಂಗ್ ವಿಳಾಸದ ಮೇಲೆ ಜಿಎಸ್‌ಟಿ ಕ್ರೆಡಿಟ್ ಕ್ಲೇಮ್ ಮಾಡುವುದಕ್ಕೆ ಅನುಕೂಲವಾಗಿದೆ. 2022 ರಲ್ಲಿ, ಆಂಡ್ರಾಯ್ಡ್ ಮತ್ತು ಐಒಎಸ್‌ ಆಪ್ಟಿಮೈಸ್ಡ್ ಮೊಬೈಲ್ ಆಪ್‌ ಅನ್ನೂ ಇದು ಬಿಡುಗಡೆ ಮಾಡಿದೆ. ಬ್ಯುಸಿನೆಸ್ ಗ್ರಾಹಕರ ಖರೀದಿ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಸೆಲ್ಲರ್ ಪಾರ್ಟ್ನರ್‌ಗಳಿಗೆ, Amazon.in ನಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದ್ದು, ತಮ್ಮ ಲಕ್ಷಾಂತರ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಇದು ಅನುಕೂಲಕರವಾಗಿದೆ. ರಿಕ್ವೆಸ್ಟ್ ಫಾರ್ ಕ್ವಾಂಟಿಟಿ ಡಿಸ್ಕೌಂಟ್‌ ಮತ್ತು ಬಲ್ಕ್‌ ಖರೀದಿಗಳ ಮೇಲೆ ರಿಯಾಯಿತಿ ಸೌಲಭ್ಯವು ಲಕ್ಷಾಂತರ ಆರ್ಡರ್‌ಗಳನ್ನು ನಿರ್ವಹಣೆ ಮಾಡಲು ಅನುಕೂಲಕರವಾಗಿದೆ.

ಈ ಗ್ರಾಹಕ ಕೇಂದ್ರಿತ ಸೌಲಭ್ಯವು ಕಳೆದ 6 ವರ್ಷಗಳಲ್ಲಿ ಅಪಾರವಾಗಿ ಬೆಳೆಯುವುದಕ್ಕೆ ಅಮೆಜಾನ್ ಬ್ಯುಸಿನೆಸ್‌ಗೆ ಅನುವು ಮಾಡಿಕೊಟ್ಟಿದೆ. ಗ್ರಾಹಕರ ಸಿಎಜಿಆರ್‌ನಲ್ಲಿ 150% ಏರಿಕೆಯಾಗಿದೆ ಮತ್ತು ಸೇಲ್ಸ್‌ನಲ್ಲಿ 145% ಏರಿಕೆಯಾಗಿದೆ. 2 ಮತ್ತು 3ನೇ ಹಂತದ ನಗರಗಳೂ ಕೂಡಾ ಈ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ. 65% ಖರೀದಿದಾರರು ಸಣ್ಣ ನಗರಗಳವರಾಗಿದ್ದಾರೆ. ಕಳೆದ ವರ್ಷಗಳಲ್ಲಿ, ನಮ್ಮ 33% ಗ್ರಾಹಕರು ನಿಷ್ಠ ಖರೀದಿದಾರರಾಗಿದ್ದು, ಅಮೆಜಾನ್ ಬ್ಯುಸಿನೆಸ್‌ನಿಂದ ಅವರು ಪದೇ ಪದೇ ಖರೀದಿ ಮಾಡಿದ್ದಾರೆ. 60% ಖರೀದಿದಾರರು 2 ಮತ್ತು 3ನೇ ಹಂತದ ನಗರಗಳಿಂದ ಬಂದಿದ್ದಾರೆ.

ಆನಿವರ್ಸರಿ ಕೊಡುಗೆಯಾಗಿ, ಬ್ಯುಸಿನೆಸ್ ಗ್ರಾಹಕರು ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು ಮತ್ತು ಅಮೆಜಾನ್ ಬ್ಯುಸಿನೆಸ್‌ನಲ್ಲಿ ಕ್ಯಾಶ್‌ಬ್ಯಾಕ್‌ಗಳನ್ನೂ ಪಡೆಯಬಹುದು.