ಲಿಂಗ-ಸಂವೇದನೆ ಸುಸ್ಥಿರ ಪರಿವರ್ತನೆಗೆ ಚಾಲನೆ

0
96

ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಕಾರ್ಯಸೂಚಿಗೆ ಪ್ರಮುಖ ಉತ್ತೇಜನ; ಮಹಿಳೆಯರು ಅಭಿವೃದ್ಧಿಯ ನಾಯಕರಾಗಲು ಮುಂದೆ ಬರಲು ಇದು ಸಕಾಲ
– ಸಂಗೀತಾ ರೆಡ್ಡಿ
ಜಿ-20 ಎಂಪವರ್ (ಸಬಲೀಕರಣ) ಎಂಬುದು ಜಾಗತಿಕ ಉಪಕ್ರಮವಾಗಿದ್ದು, ಅದು ಶಿಕ್ಷಣ ಮತ್ತು ಆರ್ಥಿಕ ಸಹಭಾಗಿತ್ವದ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಜಿ-20 ರಾಷ್ಟ್ರಗಳ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳನ್ನು ಒಗೂಡಿಸುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಮಹಿಳೆಯರ ನೇತೃತ್ವದ ಅಭಿವೃದ್ಧಿ’ ಪರಿಕಲ್ಪನೆಯನ್ನು ಪರಿಚಯಿಸಿದ ನಂತರ ಮಹಿಳೆಯರ ಸಬಲೀಕರಣ ವ್ಯಾಖ್ಯಾನವೇ ಸಂಪೂರ್ಣ ಬದಲಾಯಿತು. ಈ ವಿನೂತನ ಉಪಕ್ರಮ, ಭಾರತಕ್ಕೆ ನಿರ್ದಿಷ್ಟವಾದುದು ಮತ್ತು ಅದು ಇದೀಗ ಜಿ-20 ಎಂಪವರ್‌ ನ ಹಂಚಿಕೆಯ ನಿಘಂಟಿನ ಭಾಗವಾಗಿದೆ. ಇದು ಕೇವಲ ಮಹಿಳೆಯರನ್ನು ಸಬಲೀಕರಣಗೊಳಿಸುವುದಲ್ಲದೆ ಮಹಿಳೆಯರು ಕೇವಲ ಫಲಾನುಭವಿಗಳೆಂದು ಪರಿಗಣಿಸಿದೆ ಅವರನ್ನು ಅಭಿವೃದ್ಧಿಯ ನಾಯಕರಾಗುವ ವಾತಾವರಣವನ್ನು ಸೃಷ್ಟಿಸುವತ್ತ ಗಮನಹರಿಸಿದೆ.
ಭಾರತದ ಜಿ-20 ಎಂಪವರ್ ಅಧ್ಯಕ್ಷತೆಯಡಿಯಲ್ಲಿ ನಾವು ಈ ಪರಿಕಲ್ಪನೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇವೆ ಮತ್ತು ಈ ನಿರೂಪಣೆಯ ಬದಲಾವಣೆಯನ್ನು ಪ್ರತಿಬಿಂಬಿಸುವ ನೀಲನಕ್ಷೆಯನ್ನು ರೂಪಿಸಲು ಶ್ರಮಿಸಿದ್ದೇವೆ. ನಮ್ಮ ಗಮನವು ಮೂರು ವಿಷಯಗಳನ್ನಾಧರಿಸಿದೆ: ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಎಲ್ಲಾ ಹಂತಗಳಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸಲು ಪಾಲುದಾರಿಕೆಯನ್ನು ಸೃಷ್ಟಿಸುವುದು. ಡಿಜಿಟಲ್ ಸೇರ್ಪಡೆಯು ಈ ವಲಯಗಳಾದ್ಯಂತ ಒಂದಕ್ಕೊಂದು ಸಂಬಂಧವಿರುವ ವಿಷಯವಾಗಿದೆ ಎಂದು ನಾವು ನಂಬಿದ್ದೇವೆ ಮತ್ತು ಮಹಿಳೆಯರು ಯಶಸ್ವಿಯಾಗಲು ಅಗತ್ಯವಿರುವ ಡಿಜಿಟಲ್ ಸಾಧನಗಳು ಮತ್ತು ಸಂಪನ್ಮೂಲಗಳ ಸಮಾನ ಲಭ್ಯತೆಯನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ.
ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಟೆಮ್ ಶಿಕ್ಷಣ ಮತ್ತು ಉನ್ನತ ಬೆಳವಣಿಗೆಯ ಹೆಚ್ಚಿನ ಉದ್ಯೋಗಾವಕಾಶಗಳನ್ನು ವೃದ್ಧಿಸಲು ನಾವು ಪ್ರತಿಪಾದಿಸುತ್ತಿದ್ದೇವೆ.  ಪಠ್ಯಕ್ರಮ ಸೇರಿದಂತೆ ಅಪ್ರೆಂಟಿಶಿಪ್ ಕಾರ್ಯಕ್ರಮ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ನಾವು ನಿಗಮಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಅಲ್ಲದೆ ಸ್ಪಷ್ಟ ನೀತಿ ಮತ್ತು ಕಾನೂನು ಚೌಕಟ್ಟು ಒಳಗೊಂಡಂತೆ ಮಹಿಳೆಯರು ಮತ್ತು ಬಾಲಕಿಯರ ನಿರಂತರ ಕಲಿಕೆ ಉತ್ತೇಜಿಸುವ ಸಂಪೂರ್ಣ ಸರ್ಕಾರದ ವಿಧಾನವನ್ನು ಅಳವಡಿಸಿಕೊಳ್ಳಲು ನಾವು ಸರ್ಕಾರಗಳಿಗೆ ಆಗ್ರಹಿಸುತ್ತಿದ್ದೇವೆ.
ಮಹಿಳೆಯರ ಉದ್ಯಮಶೀಲತೆಗೆ ಸಂಬಂಧಿಸಿದಂತೆ  ನಾವು ಮಹಿಳಾ ಉದ್ಯಮಿಗಳನ್ನು, ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು(ಎಂಎಸ್ಎಂಇ) ಉದ್ಯಮಿಗಳಲ್ಲಿ ಏಳಿಗೆಗೆ ಸಮಗ್ರ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದ್ದೇವೆ. ಮಹಿಳಾ ಉದ್ಯಮಿಗಳನ್ನು ಆರ್ಥಿಕತೆಯ ಸದೃಢ ಆಧಾರ ಸ್ಥಂಬಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಇಬ್ಬರಿಗೂ ಗೆಲ್ಲುವ ಸನ್ನಿವೇಶವನ್ನು ಸೃಷ್ಟಿಸಿದ್ದೇವೆ. ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಲಿಂಗ ಸಮಾನತೆಯನ್ನು ವೃದ್ಧಿಸಲಾಗಿದೆ. ನಾವು ಖಾಸಗಿ ವಲಯವನ್ನು ಕೇವಲ ಹಣಕಾಸು ಒದಗಿಸುವುದು ಮತ್ತು ಖರೀದಿಸುವುದಕ್ಕೆ ಸೀಮಿತಗೊಳಿಸದೆ, ಅದು ಮಾರ್ಗದರ್ಶಿಗಳು ಮತ್ತು ಪ್ರಗತಿಯ  ಶಕ್ತರನ್ನಾಗಿ ಮಾಡುವಂತೆ ನಾವು ಉತ್ತೇಜನ ನೀಡುತ್ತಿದ್ದೇವೆ.
ಎಲ್ಲಾ ಹಂತಗಳಲ್ಲಿ ನಾವು ಮಹಿಳಾ ನಾಯಕತ್ವವನ್ನು ಉತ್ತೇಜಿಸಲು ಬದ್ಧವಾಗಿದ್ದೇವೆ. ನಿರ್ಧಾರಗಳನ್ನು ಕೈಗೊಳ್ಳುವ ಹಂತದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ನಾವು ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳನ್ನು ಅಭಿವೃದ್ಧಿಗೊಳಿಸಿದ್ದೇವೆ. ಎಲ್ಲವನ್ನೊಳಗೊಂಡ ದುಡಿಯುವ ಸ್ಥಳಗಳ ನೀತಿಗಳು, ನಿರಂತರ ಪರಿಶೀಲನಾ ಸಭೆಗಳು ಮತ್ತು ಲಿಂಗ ವೈವಿಧ್ಯತೆ ಅಂಕಿ-ಅಂಶಗಳನ್ನು ಪ್ರಕಟಿಸುವುದು ಮತ್ತು ಮಹಿಳಾ ನೌಕರರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ಮಹಿಳೆಯರನ್ನು ನಿಜವಾಗಿಯೂ ಸಬಲಗೊಳಿಸಲು ನಾವು ಸಮಾಜದ ಎಲ್ಲ ಹಂತಗಳಲ್ಲಿ, ಎಲ್ಲ ವಲಯಗಳಲ್ಲಿ ನಿರ್ಧಾರ ಕೈಗೊಳ್ಳುವುದು ಮತ್ತು ನಾಯಕತ್ವದ ಪಾತ್ರಗಳನ್ನು ಪೋಷಿಸುವುದು ಅಗತ್ಯವಿದೆ.
ಭಾರತದ ಜಿ-20 ಅಧ್ಯಕ್ಷತೆಯ ಉಪಕ್ರಮದಲ್ಲಿ 6 ಸ್ಪಷ್ಟವಾದ ಫಲಿತಾಂಶಗಳನ್ನು ಕಾಣುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಮೊದಲಿಗೆ ನಾವು ಟೆಕ್ ಈಕ್ವಿಟಿ ಫ್ಲಾಟ್ ಫಾರಂ(ತಂತ್ರಜ್ಞಾನ ಸಮಾನತೆ ವೇದಿಕೆ) ಎಂಬ ಅನನ್ಯ ವಿನೂತನ ಡಿಜಿಟಲ್ ವೇದಿಕೆಯನ್ನು ಮಹಿಳೆಯರ ಜ್ಞಾನವೃದ್ಧಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಿದ್ದೇವೆ. ಇದು 120 ಭಾಷೆಗಳಲ್ಲಿ ಲಭ್ಯವಿದ್ದು, ಈ ವೇದಿಕೆ ಮುಂದಿನ ಆರು ತಿಂಗಳಲ್ಲಿ ಕನಿಷ್ಠ ಒಂದು ಮಿಲಿಯನ್ ಮಹಿಳೆಯರನ್ನು ತಲುಪುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.
ಎರಡನೆಯದಾಗಿ ನಾವು ಕೆಪಿಐ ಡ್ಯಾಶ್ ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದು, ಅದು ಮಹಿಳೆಯರ ಸಬಲೀಕರಣ ಮತ್ತು ಪ್ರಾತನಿಧ್ಯ ಪ್ರಗತಿಯ ಮೇಲೆ ಅಳೆಯಬಹುದಾದ ಮತ್ತು ವ್ಯವಸ್ಥಿತ ರೀತಿಯಲ್ಲಿ ನಿಗಾವಹಿಸುತ್ತದೆ. ಉತ್ಕೃಷ್ಟ ವಿಧಾನಗಳನ್ನು ಬಳಸಿಕೊಂಡು ನಿರಂತರವಾಗಿ ಈ ಅಂಕಿ-ಅಂಶಗಳ ಮೇಲ್ವಿಚಾರಣೆಯನ್ನು ನಾವು ವಿಧಾನಗಳನ್ನು, ತಳಮಟ್ಟದ ಕಾರಣಗಳನ್ನು ಮತ್ತು ಎಲ್ಲ ಹಂತದಲ್ಲಿ ಮಹಿಳೆಯರ ಭಾಗೀದಾರಿಕೆ ಹೆಚ್ಚಿಸಲು ಸಂಭಾವ್ಯ ಮಧ್ಯಪ್ರವೇಶಗಳನ್ನು ಕೈಗೊಳ್ಳಲು ನೆರವಾಗಲಿದೆ.
ಮೂರನೆಯದಾಗಿ ನಾವು ಅತ್ಯುತ್ತಮ ವಿಧಾನಗಳ ಕೃತಿ(ಬೆಸ್ಟ್ ಪ್ರಾಕ್ಟೀಸಸ್ ಪ್ಲೇಬುಕ್) ಎಂಬ ಸಮೀಕ್ಷೆ ಆಧಾರಿತ ವಿಶ್ಲೇಷಣಾತ್ಮಕ ಸಾಧನವನ್ನು ಸೃಷ್ಟಿಸಿದ್ದು, ಅದರಲ್ಲಿ ಅತ್ಯುತ್ತಮ ವಿಧಾನಗಳನ್ನು ಕ್ರೂಢೀಕರಿಸಲಾಗಿದೆ ಮತ್ತು ಜಗತ್ತಿನಾದ್ಯಂತ ಇರುವ ಪರಿಣಾಮಕಾರಿ ಕಾರ್ಯತಂತ್ರಗಳು ಮತ್ತು ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. 2023ನೇ ಆವೃತ್ತಿಯ  ಪ್ಲೇಬುಕ್ ನಲ್ಲಿ 19 ಜಿ-20 ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳ 149 ಅತ್ಯುತ್ತಮ ವಿಧಾನಗಳನ್ನು ಒಳಗೊಂಡಿವೆ.
ನಾಲ್ಕನೆಯದಾಗಿ ಜಿ-20 ಎಂಪವರ್ ವೆಬ್ ಸೈಟ್ ನಲ್ಲಿ ನಾವು ಸ್ಫೂರ್ತಿದಾಯಕ ಕತೆಗಳ ವಿಶೇಷ ವಿಭಾಗವನ್ನು ರೂಪಿಸಿದ್ದೇವೆ. ಇದರಲ್ಲಿ ಜಿ-20 ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳಾದ್ಯಂತ ಇರುವ ಮಹಿಳಾ ಸಾಧಕಿಯರ ಯಶೋಗಾಥೆಗಳನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. ಜಿ-20 ಎಂಪವರ್ ವೆಬ್ ಸೈಟ್ ನಲ್ಲಿ 10 ರಾಷ್ಟ್ರಗಳ 73 ಸ್ಫೂರ್ತಿದಾಯಕ ಕತೆಗಳನ್ನು ಪ್ರತಿಬಿಂಬಿಸಲಾಗಿದೆ.
ಐದನೆಯದಾಗಿ, ನಮ್ಮ ಅಧ್ಯಕ್ಷತೆಯಲ್ಲಿ ಭಾರತ ಜಿ-20 ಎಂಪವರ್ ಉಪಕ್ರಮಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಿದೆ ಮತ್ತು ವಕೀಲರ ಜಾಲ ವಿಸ್ತರಣೆ ಹಾಗೂ ಸಂಕಲ್ಪ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಜಿ-20 ಎಂಪವರ್ ನಲ್ಲಿ ವಕೀಲರ ಜಾಲವಿದ್ದು, ಅದರಡಿ ಪ್ರಭಾವಿ ಸಂಸ್ಥೆಗಳಲ್ಲಿ ಲಿಂಗಸಮಾನತೆ ಉತ್ತೇಜಿಸುವುದು ಒಳಗೊಂಡಿದ್ದು, ಅದು ತನ್ನ ವಿಸ್ತರಣೆಯನ್ನು ಮುಂದುವರಿಸಿದ್ದು, ಜಿ-20 ರಾಷ್ಟ್ರಗಳಾದ್ಯಂತ 500 ವಕೀಲರನ್ನು ತಲುಪಿದೆ.
ಇದಲ್ಲದೆ ಈ ಎಲ್ಲ ಉಪಕ್ರಮಗಳು ಗಾಂಧಿನಗರ ಘೋಷಣೆಯಲ್ಲಿ ನಾವು ಪರಿಚಯಿಸಿದ್ದು, ಲಿಂಗಸಮಾನತೆಗ ಖಾಸಗಿ ವಲಯದಿಂದಲೂ ಗಮನಾರ್ಹ ಬದ್ಧತೆ ಕಂಡುಬಂದಿದೆ.
ಈ ಘೋಷಣೆಯಡಿ ಕಂಪನಿಗಳು ತಮ್ಮ ಕಾರ್ಯಪಡೆಯ ಅಥವಾ ದುಡಿಯುವ ಶಕ್ತಿಯ ಕನಿಷ್ಠ ಶೇಕಡ 30ರಷ್ಟು ಮಹಿಳೆಯರನ್ನು ಉದ್ಯೋಗಿಗಳನ್ನಾಗಿ ಹೊಂದುವ ಖಾತ್ರಿಯ ಸಂಕಲ್ಪ ಮಾಡಿವೆ. ಈಗಾಗಲೇ ಶೇಕಡ 30ರಷ್ಟು ಮಹಿಳಾ ದುಡಿಯುವ ಶಕ್ತಿಯನ್ನು ಹೊಂದಿರುವ ವಲಯಗಳಲ್ಲಿ ಸಂಸ್ಥೆಯ ಎಲ್ಲ ಹಂತಗಳಲ್ಲಿ ಶೇಕಡ 30ಕ್ಕೂ ಅಧಿಕ ಮಹಿಳೆಯರನ್ನು ಖಾತ್ರಿಪಡಿಸುವ ಸಂಕಲ್ಪ ಮಾಡಲಾಗಿದೆ.
2030ರ ವೇಳೆಗೆ ಸಾಧಿಸುವ ಗುರಿಯನ್ನು ಹೊಂದಿರುವ ಈ ಪ್ರಬಲ 30ರಿಂದ 30 ಘೋಷಣೆಯು ಹೆಚ್ಚ ಸಮಾನ ಮತ್ತು ಅಂತರ್ಗತ ಕಾರ್ಯಪಡೆಯನ್ನು ರಚಿಸುವ ನಮ್ಮ ಸಾಮೂಹಿಕ ಬದ್ಧತೆಗೆ ಸಾಕ್ಷಿಯಾಗಿದೆ.
(ಲೇಖಕರು ಜಿ-20 ಎಂಪವರ್ ನ ಅಧ್ಯಕ್ಷರು ಮತ್ತು ಎಫ್‌ ಐಸಿಸಿಐನ ಮಾಜಿ ಅಧ್ಯಕ್ಷರು’: ಅನಿಸಿಕೆಗಳನ್ನು ಅವರ ವೈಯಕ್ತಿಕವಾದವು)