ಕದಂಬ ಮರದ ಪೆಟ್ಟಿಗೆಯಲ್ಲಿ ಅಸ್ಸಾಂ ಶಾಲು
ಅಸ್ಸಾಂ ಶಾಲುಗಳು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನೇಯ್ದ ಸಾಂಪ್ರದಾಯಿಕ ಬಟ್ಟೆಗಳಾಗಿವೆ. ಈ ಶಾಲನ್ನು ಮುಗಾ ರೇಷ್ಮೆಯನ್ನು ಬಳಸಿಕೊಂಡು ನುರಿತ ಕುಶಲಕರ್ಮಿಗಳು ರಚಿಸಿದ್ದಾರೆ.
ಈ ಶಾಲುಗಳು ತಮ್ಮ ಸಂಕೀರ್ಣ ವಿನ್ಯಾಸಗಳು ಮತ್ತು ಕಲಾ ಉದ್ದೇಶಗಳಿಗೆ ಹೆಸರುವಾಸಿಯಾಗಿವೆ, ಅವು ಹೆಚ್ಚಾಗಿ ಆ ಪ್ರದೇಶದ ನೈಸರ್ಗಿಕ ಪರಿಸರದಿಂದ ಸ್ಫೂರ್ತಿ ಪಡೆದಿರುತ್ತವೆ, ಹೆಚ್ಚಾಗಿ ಸಸ್ಯ ಮತ್ತು ಪ್ರಾಣಿಗಳ ವಿಷಯಗಳನ್ನು/ ಅಂಶಗಳನ್ನು ಪ್ರದರ್ಶಿಸುತ್ತವೆ. ಅಸ್ಸಾಂ ಶಾಲುಗಳು ಕೇವಲ ಉಡುಪುಗಳಲ್ಲ; ಅವು ಅಸ್ಸಾಮಿ ಜನರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅವರ ನೇಯ್ಗೆ ಸಂಪ್ರದಾಯಗಳನ್ನು ಸಾಕಾರಗೊಳಿಸುತ್ತವೆ.
ಅಸ್ಸಾಂ ಶಾಲುಗಳನ್ನು ಧರಿಸುವುದೆಂದರೆ ಅದು ಕೇವಲ ಬಟ್ಟೆಗಳನ್ನು ಧರಿಸುವುದಲ್ಲ – ಅದು ಭವ್ಯವಾದ ಸಾಂಸ್ಕೃತಿಕ ಪರಂಪರೆ ಮತ್ತು ಕಲಾತ್ಮಕ ಪರಂಪರೆಯನ್ನು ಅಪ್ಪಿಕೊಳ್ಳುವುದಾಗಿದೆ.
ಈ ಶಾಲನ್ನು ಕದಂಬ ಮರದ ಪೆಟ್ಟಿಗೆಯಲ್ಲಿ ಇಟ್ಟು ಉಡುಗೊರೆಯಾಗಿ ನೀಡಲಾಗಿದೆ. ಕದಂಬ (ಬರ್ಫ್ಲರ್ ಮರ) ವೃಕ್ಷವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಭಾರತೀಯ ಧರ್ಮಗಳು ಮತ್ತು ಪುರಾಣಗಳಲ್ಲಿ ಅದರ ಪ್ರಸ್ತಾಪಗಳಿವೆ. ಈ ಪೆಟ್ಟಿಗೆಯನ್ನು ಕರ್ನಾಟಕದ ಕುಶಲಕರ್ಮಿಗಳು ತಯಾರಿಸಿದ್ದಾರೆ.