ಸಂಗೀತ ನಿರ್ದೇಶಕ ಹಂಸಲೇಖ ಅವರ ಮನೆಗೆ ಅವಧೂತ ಗ್ಲೋಬಲ್ ಫೌಂಡೇಶನ್ ನ ಸಂಸ್ಥಾಪಕರಾದ ಡಾ, ಮಹೇಂದ್ರನಾಥ ಶರ್ಮಾ ರವರು ಭೇಟಿ .

0
18

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಂಗೀತ ಸಾಮ್ರಾಟ, ನಾದಬ್ರಹ್ಮ ಹಾಗೂ 2023ರ ನಾಡ ಹಬ್ಬ ಮೈಸೂರು ದಸರಾ ಹಬ್ಬದ ಉದ್ಘಾಟಕರಾಗಿ ಆಯ್ಕೆಯಾಗಿರುವ ಡಾ, ಹಂಸಲೇಖ ಅವರನ್ನು ಇಂದು ಅವರ ಸ್ವ ಗೃಹದಲ್ಲಿ ಭೇಟಿ ಮಾಡಿದ*ಅವಧೂತ ಗ್ಲೋಬಲ್ ಫೌಂಡೇಶನ್ ನ ಸಂಸ್ಥಾಪಕರಾದ ಡಾ, ಮಹೇಂದ್ರನಾಥ ಶರ್ಮಾ ರವರು ಸಂಗೀತ ಸಾಮ್ರಾಟ್ ಡಾ, ಹಂಸಲೇಖ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸುವ ಮೂಲಕ ಶುಭಾಶಯಗಳು ಕೋರಿದರು.
ಇದೇ ಸಂದರ್ಭದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಗುಣವಂತ ಮಂಜು ಮತ್ತು ಅವರ ಕುಟುಂಬ ಹಾಗೂ ಇತರ ಗಣ್ಯರು ಭಾಗವಹಿಸಿ ಸಂಗೀತ ಮಾಂತ್ರಿಕ ನಾದಬ್ರಹ್ಮ ಹಂಸಲೇಖ ಅವರಿಗೆ ಶುಭಾಶಯ ಕೋರಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವಧೂತ ಗ್ಲೋಬಲ್ ಫೌಂಡೇಶನ್ ನ ಸಂಸ್ಥಾಪಕರಾದ ಡಾಕ್ಟರ್ ಮಹೇಂದ್ರನಾಥ ಶರ್ಮಾ ರವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.