Thursday, November 30, 2023
Homeಇದೀಗ ಬಂದ ತಾಜಾ ಸುದ್ದಿಭಾರತದ ಅತ್ಯಂತ ಶಕ್ತಿಯುತ 5ಜಿ ಸ್ಮಾರ್ಟ್‌ಫೋನ್‌: ಮೋಟೋ ಜಿ54 5ಜಿ

ಭಾರತದ ಅತ್ಯಂತ ಶಕ್ತಿಯುತ 5ಜಿ ಸ್ಮಾರ್ಟ್‌ಫೋನ್‌: ಮೋಟೋ ಜಿ54 5ಜಿ

ಮೊಟೊರೊಲಾದಿಂದ ಮೋಟೋ ಜಿ54 5ಜಿ: ಭಾರತದ ಅತ್ಯಂತ ಶಕ್ತಿಯುತ 5ಜಿ ಸ್ಮಾರ್ಟ್‌ಫೋನ್‌, ಸೆಗ್ಮೆಂಟ್‌ನಲ್ಲೇ ಪ್ರಥಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ ಬಿಲ್ಟ್‌ 12 ಜಿಬಿ ರ್‍ಯಾಮ್‌ ಮತ್ತು 256 ಜಿಬಿ ಸ್ಟೊರೇಜ್‌ ಒಳಗೊಂಡಿದ್ದು, ಭಾರತದ ಮೊದಲ ಮತ್ತು ಸೆಗ್ಮೆಂಟ್‌ನಲ್ಲೇ ಅತ್ಯಂತ ಶಕ್ತಿಯುತ ಮೀಡಿಯಾಟೆಕ್‌ ಡಿಮೆನ್ಸಿಟಿ 7020, ಸೆಗ್ಮೆಂಟ್‌ನಲ್ಲೇ ಪ್ರಥಮ ಶೇಕ್‌ ಫ್ರೀ ಕ್ಯಾಮೆರಾ ಮತ್ತು ಭಾರಿ 6000 ಎಂಎಎಚ್‌ ಬ್ಯಾಟರಿ ಇದ್ದು, ಕೇವಲ 17,499 ರೂ. ಬೆಲೆ ಇದೆ*

ಮೈಸೂರು ,6 ಸೆಪ್ಟೆಂಬರ್ 2023 -ಭಾರತದ ಉತ್ತಮ 5ಜಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಮೊಟೊರೊಲಾ ಇಂದು 5ಜಿ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ಕ್ರಾಂತಿ ಎಬ್ಬಿಸುವ ಮೋಟೋ ಜಿ54 5ಜಿ ಬಿಡುಗಡೆ ಮಾಡಿದೆ. ಇದು ಈ ಸೆಗ್ಮೆಂಟ್‌ನಲ್ಲೇ ಅತ್ಯಂತ ಶಕ್ತಿಯುತ 5ಜಿ ಸ್ಮಾರ್ಟ್‌ಫೋನ್ ಆಗಿದೆ. ಮೋಟೊ ಜಿ84 20 ಸಾವಿರ ರೂ. ಬೆಲೆಯೊಳಗಿನ ಎಲ್ಲ ಮೇರೆಗಳನ್ನೂ ಮೀರಿ, ಅದ್ಭುತವಾದ 12ಜಿಬಿ ರ್‍ಯಾಮ್ ಮತ್ತು 256 ಜಿಬಿ 5ಜಿ ಸ್ಟೊರೇಜ್ ಅನ್ನು ಹೊಂದಿದೆ. ಅಲ್ಲದೆ ಭಾರತದ ಪ್ರಥಮ ಮತ್ತು ಅತ್ಯಂತ ಶಕ್ತಿಯುತ ಮೀಡಿಯಾಟೆಕ್ ಡಿಮೆನ್ಸಿಟಿ 7020 ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಸೆಗ್ಮೆಂಟ್‌ನಲ್ಲೇ ಅತ್ಯಂತ ಶಕ್ತಿಯುತ 6,000 ಎಂಎಎಚ್‌ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 18,999 ರೂ. (ಕೊಡುಗೆಗಳಿಂದಾಗಿ ರೂ. 17,499) ಮತ್ತು 8ಜಿಬಿ ಮತ್ತು 128 ಜಿಬಿ ವೇರಿಯಂಟ್‌ನ ಸೆಗ್ಮೆಂಟ್‌ನಲ್ಲೇ ಪ್ರಥಮ 50ಎಂಪಿ ಶೇಕ್‌ ಫ್ರೀ ಕ್ಯಾಮೆರಾ ರೂ. 15,999 (ಕೊಡುಗೆಗಳೊಂದಿಗೆ 14,499 ರೂ.) ಆಗಿದೆ.

ಬಿಡುಗಡೆಯ ಬಗ್ಗೆ ಮಾತನಾಡಿದ ಮೊಟೊರೊಲಾ ಏಷ್ಯಾ ಪೆಸಿಫಿಕ್‌ ಕಾರ್ಯಕಾರಿ ನಿರ್ದೇಶಕ ಪ್ರಶಾಂತ್ ಮಣಿ ಮಾತನಾಡಿ “ತಂತ್ರಜ್ಞಾನವನ್ನು ವಿಕೇಂದ್ರೀಕರಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ಅತ್ಯಂತ ಕೈಗೆಟಕುವ ಬೆಲೆಯಲ್ಲಿ ಅತ್ಯಂತ ಸುಧಾರಿತ 5ಜಿ ಸಾಧನಗಳನ್ನು ಭಾರತೀಯ ಗ್ರಾಹಕರಿಗೆ ಒದಗಿಸುವ ಮೂಲಕ ಮೋಟೋ ಜಿ54 5ಜಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಮೋಟೋ ಜಿ54 5ಜಿ ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿದ ಉತ್ಪನ್ನವಾಗಿದೆ. ಸೆಗ್ಮೆಂಟ್‌ನ ಉತ್ತಮ ಪರ್ಫಾರ್ಮೆನ್ಸ್‌, 5ಜಿ ಕನೆಕ್ಟಿವಿಟಿ, ಕ್ಯಾಮೆರಾ ಮತ್ತು ಮನರಂಜನೆ ಅನುಭವ ಹಾಗೂ ಅತ್ಯಂತ ಸುಧಾರಿತ ಸಾಫ್ಟ್‌ವೇರ್ ಫೀಚರ್‌ ಇದರಲ್ಲಿದೆ. ಈ ಬಿಡುಗಡೆಯೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಕ್ಕಿಂತ ವಿಶಿಷ್ಟವಾದುದನ್ನು ನಾವು ಒದಗಿಸುತ್ತಿದ್ದೇವೆ ಮತ್ತು ಹಿಂದೆಂದಿಗಿಂತಲೂ ವಿಭಿನ್ನವಾಗಿ ಸಂಪರ್ಕ ಸಾಧಿಸಲು ಮತ್ತು ಅನ್ವೇಷಿಸಲು ಜನರಿಗೆ ಅನುವು ಮಾಡುತ್ತಿದ್ದೇವೆ.”

ಮೋಟೋ ಜಿ54 5ಜಿ ಸೆಗ್ಮೆಂಟ್‌ನ ಅತ್ಯಂತ ಶಕ್ತಿಯುತ ಮೀಡಿಯಾಟೆಕ್ ಡಿಮೆನ್ಸಿಟಿ 7020 ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೋಟೋ ಜಿ54 5ಜಿಯಲ್ಲಿ ಪರಿಚಯಿಸಲಾಗಿದೆ. ಈ ಅದ್ಭುತ ಪ್ರೋಸೆಸರ್ ಅತ್ಯಂತ ವೇಗದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಗೇಮಿಂಗ್‌ ಮತ್ತು ಮಲ್ಟಿ ಟಾಸ್ಕಿಂಗ್ ಅನ್ನು ಇದು ಸುಲಭವಾಗಿಸುವುದಲ್ಲದೆ, ಕ್ಯಾಮೆರಾ ಐಎಸ್‌ಪಿಗಳ ಸುಧಾರಣೆ ಮತ್ತು ಎಐ ಸಾಮರ್ಥ್ಯಗಳಿಂದಾಗಿ ಉತ್ತಮ ಕ್ಯಾಮೆರಾ ಪರ್ಫಾರ್ಮೆನ್ಸ್ ನೀಡುತ್ತದೆ. 6ಎನ್‌ಎಂ ಆರ್ಕಿಟೆಕ್ಚರ್ ಅನ್ನು ಇದು ಹೊಂದಿದ್ದು, ದಕ್ಷ ಬ್ಯಾಟರಿ ಆಪ್ಟಿಮೈಸೇಶನ್ ಸಿಗುತ್ತದೆ. 14 5ಜಿ ಬ್ಯಾಂಡ್‌ಗಳಿಗೆ ಇದು ಬೆಂಬಲ ಒದಗಿಸುತ್ತದೆ. 3 ಕ್ಯಾರಿಯರ್ ಅಗ್ರಗೇಶನ್ ಕೂಡ ಇದೆ. ವಿಒಎನ್‌ಆರ್‌ಗೆ ಬೆಂಬಲ ಹೊಂದಿದೆ. ಅಲ್ಲದೆ, ಶಕ್ತಿಯುತ ಮೀಡಿಯಾಟೆಕ್ ಡಿಮೆನ್ಸಿಟಿ 7020 ಪ್ರೋಸೆಸರ್ ಅನ್ನು ಒಳಗೊಂಡಿದೆ. ಈ ಸೆಗ್ಮೆಂಟ್‌ನಲ್ಲಿ ಉತ್ತಮ 5ಜಿ ಪರ್ಫಾರ್ಮೆನ್ಸ್ ಅನ್ನು ಮೋಟೋ54 5ಜಿ ಡೆಲಿವರಿ ಮಾಡುತ್ತದೆ.

ಮಧ್ಯಮ ಪ್ರಮಾಣದಿಂದ ಭಾರಿ ಬಳಕೆ ಮಾಡಿದರೂ ಕೂಡ ಹಲವು ದಿನಗಳವರೆಗೆ ಬಾಳಿಕೆ ಬರುವ ಭಾರಿ 6000 ಎಂಎಎಚ್‌ ಬ್ಯಾಟರಿಯನ್ನು ಈ ಸಾಧನ ಹೊಂದಿದೆ. ಟರ್ಬೋಪವರ್ 33 ವ್ಯಾ ಚಾರ್ಜರ್‌ನಿಂದ ವೇಗವಾಗಿ ಚಾರ್ಜ್ ಆಗುತ್ತದೆ. ಹೀಗಾಗಿ, ಕೆಲವೇ ನಿಮಿಷಗಳವರೆಗೆ ಚಾರ್ಜ್‌ ಮಾಡಿದರೆ ಮೋಟೋ ಜಿ54 5ಜಿ ದೀರ್ಘಕಾಲದವರೆಗೆ ಬಳಕೆ ಮಾಡಬಹುದಾಗಿದೆ.

ಮೋಟೋ ಜಿ54 5ಜಿ ಯಲ್ಲಿ ಸುಧಾರಿತ 50 ಎಂಪಿ ಕ್ಯಾಮೆರಾ ಇದೆ. ಅಲ್ಲದೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ತಂತ್ರಜ್ಞಾನ ಇದೆ. ಹೀಗಾಗಿ ಸಂಪೂರ್ಣವಾಗಿ ಶೇಕ್‌ ಫ್ರೀ ವೀಡಿಯೋಗಳು ಮತ್ತು ಚಿತ್ರಗಳನ್ನು ಸೆರೆಹಿಡಿಯಬಹುದು. ಈ ಫೀಚರ್‌ನಿಂದಾಗಿ ಪ್ರತಿ ಚಿತ್ರ ಮತ್ತು ವೀಡಿಯೋ ಹರಿತ, ಪ್ರಕಾಶಮಾನ ಮತ್ತು ಬ್ಲರ್‌ನಿಂದ ಮುಕ್ತವಾಗಿರುತ್ತದೆ. ಇದರ ಜೊತೆಗೆ, ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯನ್ನೂ ಹೊಂದಿದ್ದು, ಯಾವುದೇ ಸ್ಥಿತಿಯಲ್ಲೂ ಅತಿ ಕಡಿಮೆ ಬೆಳಕಿನ ಚಿತ್ರಗಳನ್ನು ಅದ್ಭುತವಾಗಿ ಸೆರೆಹಿಡಿಯುತ್ತದೆ. ಸೆಕೆಂಡರಿ 8ಎಂಪಿ ಆಟೋಫೋಕಸ್ ಕ್ಯಾಮೆರಾ 118 ಡಿಗ್ರಿ ಅಲ್ಟ್ರಾ ವೈಡ್ ಆಂಗಲ್‌ ಲೆನ್ಸ್‌ ಹೊಂದಿದೆ. ಸ್ಟಾಂಡರ್ಡ್‌ ಲೆನ್ಸ್‌ಗೆ ಹೋಲಿಸಿದರೆ 4 ಪಟ್ಟು ಅಗಲವಾದ ದೃಶ್ಯವನ್ನು ಸೆರೆಹಿಡಿಯುತ್ತದೆ. ಅಷ್ಟೇ ಅಲ್ಲ, 8ಎಂಪಿ ಸೆನ್ಸರ್‌ ಮ್ಯಾಕ್ರೋವಿಷನ್ ಮತ್ತು ಡೆಪ್ತ್‌ ಸೆನ್ಸರ್‌ ಆಗಿ ಕೆಲಸ ಮಾಡುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಬಹುದಾದಂತಹ ಕ್ಷಣಗಳನ್ನು ಇದು ಅತ್ಯಂತ ದಕ್ಷವಾಗಿ ಸೆರೆಹಿಡಿಯುತ್ತದೆ. ಈ ಅದ್ಭುತ ಕ್ಯಾಮೆರಾ ಸಿಸ್ಟಮ್‌ನಲ್ಲಿ ವಿವಿಧ ಸುಧಾರಿತ ಸಾಫ್ಟ್‌ವೇರ್ ಫೀಚರ್‌ಗಳೂ ಇವೆ. ಸ್ಲೋ ಮೋಶನ್, ಹೈಪರ್ ಲ್ಯಾಪ್ಸ್, ಆಟೋ ಸ್ಮೈಲ್‌ ಕ್ಯಾಪ್ಚರ್‌, ಶಾಟ್ ಆಪ್ಟಿಮೈಸೇಶನ್ ಮತ್ತು ಇತರ ಸೌಲಭ್ಯಗಳಿವೆ. ಮುಂಭಾಗದಲ್ಲಿ 16 ಎಂಪಿ ಸೆಲ್ಫೀ ಕ್ಯಾಮೆರಾವನ್ನು ಸಾಧನ ಹೊಂದಿದೆ.
.

ಮೋಟೋ ಜಿ54 5ಜಿಯಲ್ಲಿ ಮನರಂಜನೆಯನ್ನು ಅದ್ಭುತವಾಗಿ ಆನಂದಿಸಬಹುದು. ಇದು 6.5″ ಎಫ್‌ಎಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 30 ರಿಂದ 120 ಹರ್ಟ್ಸ್‌ ಅಡಾಪ್ಟಿವ್ ರಿಫ್ರೆಶ್‌ ದರ ಇದೆ. ಹೀಗಾಗಿ, ಬಳಕೆದಾರರ ಮೆಚ್ಚಿನ ಗೇಮ್‌ಗಳಿಗೆ ಜೀವ ತುಂಬಬಹುದು. ಈ ಇಮ್ಮರ್ಸಿವ್ ವೀಕ್ಷಣೆ ಅನುಭವದ ಜೊತೆಗೆ ಎರಡು ದೊಡ್ಡ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಡಾಲ್ಬಿ ಆಟಮೋಸ್, ಮೋಟೋ ಸ್ಪಾಶಿಯಲ್ ಸೌಂಡ್‌ ಇದೆ. ಇದು ಸುಧಾರಿತ ಬೇಸ್‌, ಸ್ವಚ್ಛ ವೋಕಲ್‌ಗಳು ಮತ್ತು ಸುಧಾರಿತ ಸ್ಪಾಶಿಯಲ್ ಸೆನ್ಸ್‌ ಜೊತೆಗೆ ಉನ್ನತ ಗುಣಮಟ್ಟದ ಆಡಿಯೋ ಅನ್ನು ಒದಗಿಸುತ್ತದೆ. ಇದರ ಜೊತೆಗೆ, ಬಳಕೆದಾರರಿಗೆ ಉತ್ತಮ ಡೆಪ್ತ್‌, ಕ್ಲಾರಿಟಿ ಮತ್ತು ಡೀಟೇಲ್ ಆದ ಸಂಗೀತ ಮತ್ತು ಶಬ್ದವನ್ನು ಅನುಭವಿಸಲು ಅವಕಾಶವಾಗುತ್ತದೆ. ಮೋಟೋ ಜಿ54 5ಜಿ ಅತ್ಯಂತ ಸಣ್ಣ ಬೆಝೆಲ್ ಇದೆ. ಹೀಗಾಗಿ, ಇದು ವರ್ಚುವಲ್ ಆಗಿ ಬಾರ್ಡರ್‌ಲೆಸ್ ಆಗಿದೆ.

ಮೋಟೋ ಜಿ54 5ಜಿ ಅತ್ಯಂತ ತೆಳ್ಳನೆಯ ಮತ್ತು ಪ್ರೀಮಿಯಂ ಭಾವವನ್ನು ಮೂಡಿಸುತ್ತದೆ. ಏಕೆಂದರೆ ಇದು ಸ್ಟೈಲಿಶ್ ಆದ 3ಡಿ ಅಕ್ರಿಲಿಕ್ ಗ್ಲಾಸ್ (ಪಿಎಂಎಂಎ) ಫಿನಿಶ್ ಹೊಂದಿದ್ದು, ಹಿಡಿದುಕೊಳ್ಳಲು ಅತ್ಯಂತ ಉತ್ತಮ ಭಾವವನ್ನು ಮೂಡಿಸುತ್ತದೆ. ಸಾಧನ ಪ್ರೀಮಿಯಂ ಮತ್ತು ಕ್ಲಾಸ್ಸೀ ಆಗಿ ಕಾಣಿಸುವುದಷ್ಟೇ ಅಲ್ಲ, 192 ಗ್ರಾಂ ಅಷ್ಟೇ ಇರುವುದರಿಂದ ಹಗುರವಾಗಿಯೂ ಇದೆ. ಇದು 6000 ಎಂಎಎಚ್‌ ಬ್ಯಾಟರಿಯನ್ನು ಇದು ಹೊಂದಿದೆ. ಜಿ54 5ಜಿ ವಾಟರ್ ರಿಪೆಲ್ಲೆಂಟ್ ಆಗಿದ್ದು, ಐಪಿ52 ರೇಟಿಂಗ್‌ ಹೊಂದಿದೆ. ಹೀಗಾಗಿ ಚೆಲ್ಲುವುದು ಮತ್ತು ಸ್ಪ್ಲಾಶ್‌ನಿಂದ ಸುರಕ್ಷಿತವಾಗಿರುತ್ತದೆ.

ಮೋಟೋ ಜಿ54 5ಜಿ ಆಕರ್ಷಕ ಶೇಡ್‌ಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಮಿಡ್‌ನೈಟ್‌ ಬ್ಲ್ಯೂ, ಪರ್ಲ್ ಬ್ಲ್ಯೂ ಮತ್ತು ಮಿಂಟ್‌ ಗ್ರೀನ್‌. ಪ್ರತಿಯೊಂದೂ ವಿಶಿಷ್ಟ ಸ್ಟೈಲ್‌ ಅನ್ನು ಪ್ರತಿನಿಧಿಸುತ್ತದೆ.

ಮೋಟೋ ಸಂಪ್ರದಾಯವನ್ನು ಅನುಸರಿಸುತ್ತಿರುವ ಮೋಟೋ ಜಿ54 5ಜಿ ನಿಯರ್ ಸ್ಟಾಕ್ ಆಂಡ್ರಾಯ್ಡ್ 13 ಅನುಭವವನ್ನು ಒದಗಿಸುತ್ತದೆ. ಅಲ್ಲದೆ, ವಿವಿಧ ಸ್ಟಾಂಡ್‌ಔಟ್ ಅನುಭವಗಳನ್ನೂ ನೀಡುತ್ತದೆ. ಬ್ಯುಸಿನೆಸ್ ಗ್ರೇಡ್‌ ಸೆಕ್ಯುರಿಟಿ ಅನ್ನು ಒದಗಿಸುವ ಥಿಂಕ್‌ಶೀಲ್ಡ್‌ ಫಾರ್ ಮೊಬೈಲ್‌, ನಿಮ್ಮ ಎಲ್ಲ ಫೋನ್‌ನ ಪ್ರಮುಖ ಭದ್ರತೆ ಮತ್ತು ಗೌಪ್ಯತೆ ವೈಶಿಷ್ಟ್ಯಗಳನ್ನು ಹೊಂದಿರುವ ಮೋಟೋ ಸೆಕ್ಯೂರ್ ಅನ್ನು ಇದು ಒಳಗೊಂಡಿದೆ. ಮಕ್ಕಳ ಕಲಿಕೆ ಮತ್ತು ಆಟವಾಡುವುದಕ್ಕೆಂದೇ ಪ್ರತ್ಯೇಕವಾದ ಸುರಕ್ಷಿತ ಸ್ಥಳವನ್ನು ಒದಗಿಸುವುದಕ್ಕೆ ಫ್ಯಾಮಿಲಿ ಸ್ಪೇಸ್ ಅಪ್ಲಿಕೇಶನ್ ವಿನ್ಯಾಸ ಮಾಡಲಾಗಿದೆ. ಇದರ ಜೊತೆಗೆ, ಮೈ ಯುಎಕ್ಸ್‌ ಮೂಲಕ, ವಿಶಿಷ್ಟ ಮತ್ತು ವಿಭಿನ್ನ ನೋಟವನ್ನು ಸಾಧಿಸಲು ಸ್ಮಾರ್ಟ್‌ಫೋನ್ ಅನ್ನು ಬಳಕೆದಾರರು ಪರ್ಸನಲೈಸ್ ಮಾಡಿಕೊಳ್ಳಬಹುದಾಗಿದೆ. ಕ್ವಿಕ್ ಕ್ಯಾಪ್ಚರ್, ಫಾಸ್ಟ್‌ ಟಾರ್ಚ್‌, ಸ್ವೈಪ್‌ ಟು ಸ್ಪ್ಲಿಟ್‌ ಮತ್ತು ಗೇಮ್‌ಟೈಮ್ ಸೇರಿದಂತೆ ಮೋಟೋ ಜೆಶ್ಚರ್ ಅನ್ನು ಇದು ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್ 8ಜಿಬಿ ರ್‍ಯಾಮ್ ಮತ್ತು 12ಜಿಬಿ ಸ್ಟೊರೇಜ್ ವೇರಿಯಂಟ್‌ನಲ್ಲೂ ಲಭ್ಯವಿದೆ. ಎರಡೂ ವೇರಿಯಂಟ್‌ಗಳು ಮೈಕ್ರೋಎಸ್‌ಡಿ ಕಾರ್ಡ್‌ ಬಳಸಿಕೊಂಡು 1 ಟಿಬಿ ವರೆಗೆ ಸ್ಟೊರೇಜ್‌ ವಿಸ್ತರಣೆಯನ್ನು ಬೆಂಬಲಿಸುತ್ತದೆ.

RELATED ARTICLES
- Advertisment -
Google search engine

Most Popular

Recent Comments