Wednesday, November 29, 2023
Homeಇದೀಗ ಬಂದ ತಾಜಾ ಸುದ್ದಿವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳ ಅರ್ಜಿ ಸಲ್ಲಿಸಲು ದಿನಾಂಕ...

ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು (ಡಿ.ಬಿ.ಟಿ- ನೇರ ನಗದು ವರ್ಗಾವಣೆ) ತಂತ್ರಾಂಶದಡಿ ಅನುಷ್ಟಾನಗೊಳಿಸಲಾಗಿರುತ್ತದೆ. ಆಧಾರ ಯೋಜನೆ, ಮೆರಿಟ್ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ ಯೋಜನೆ, ಮರಣ ಪರಿಹಾರ ನಿಧಿ, ವೈದ್ಯಕೀಯ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಸಾಧನೆ ಯೋಜನೆ, ನಿರುದ್ಯೋಗ ಭತ್ಯೆ
ಶಿಶುಪಾಲನಾ ಭತ್ಯೆ ಮೇಲಿನ 08 ಯೋಜನೆಗಳನ್ನು ಸೇವಾ ಸಿಂಧು ಮೂಲಕ ಲೈವ್ ಮಾಡಲಾಗಿದ್ದು, 2023-24ನೇ ಸಾಲಿಗೆ 08 ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ (https://sevasindhu.Karnataka.gov.in/Sevasindhu/Department Service) ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ವಿಸ್ತರಿಸಲಾಗಿದ್ದು, ಅರ್ಹ ವಿಕಲಚೇತನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments