ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಒಂದು “ಅರೋಗ್ಯ: ಸವಾಲುಗಳು ಮತ್ತು ಅವಕಾಶಗಳು” ವಿಷಯದ ಬಗ್ಗೆ ಜಿ-೨೦ ತಾಂತ್ರಿಕ ಕಾರ್ಯಾಗಾರದ ಸಮಾಪ್ತಿ

0
75

ಭಾರತವು ವಹಿಸಿರುವ ಜಿ-೨೦ ಅಧ್ಯಕ್ಷತೆಯ ಆಶ್ರಯದಲ್ಲಿ, ಬೆಂಗಳೂರಿನಲ್ಲಿ ೨೯ ರಿಂದ ೩೧ ಆಗಸ್ಟ್ ೨೦೨೩ ರವರೆಗೆ ಆಯೋಜಿಸಲ್ಪಟ್ಟ “ಒಂದು ಅರೋಗ್ಯ: ಸವಾಲುಗಳು ಮತ್ತು ಅವಕಾಶಗಳು “ ವಿಷಯದ ಬಗ್ಗೆ ಜಿ-೨೦ ತಾಂತ್ರಿಕ ಕಾರ್ಯಾಗಾರವು ಸು.ಶ್ರೀ. ಶೋಭಾ ಕರಂದ್ಲಾಜೆ, ಮಾನ್ಯ ರಾಜ್ಯ ಮಂತ್ರಿ, ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಇವರಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ , ಭಾರತ ಸರ್ಕಾರದ ಸಚಿವರು (ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗ) ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವ ದೆಹಲಿಯ ಮಹಾ ನಿರ್ದೇಶಕರು ಆದ ಡಾ . ಹಿಮಾಂಶು ಪಾಠಕ್ ಮತ್ತು ಮತ್ಸ್ಯ ಮತ್ತು ಪಶು ವಿಜ್ಞಾನ ವಿಭಾಗದ ಉಪ ಮಹಾ ನಿರ್ದೇಶಕರು , ಡಾ ಜಯಕೃಷ್ಣ ಜೇನಾ, ಹಾಗೂ ಕಾರ್ಯಾಗಾರವನ್ನು ಆಯೋಜಿಸಿದ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯೆ ಸಂಸ್ಥಾನದ ನಿರ್ದೇಶಕರಾದ, ಡಾ ರಾಘವೇಂದ್ರ ಭಟ್ಟ ಅವರು ಉಪಸ್ಥಿತರಿದ್ದರು.

ಕಾರ್ಯಾಗಾರವನ್ನು ಉದ್ಘಾಟಿಸುತ್ತ, ಮಾನ್ಯ ಸಚಿವೆ, ಸು.ಶ್ರೀ. ಶೋಭಾ ಕರಂದ್ಲಾಜೆಯವರು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಆರೋಗ್ಯ ವಲಯವನ್ನು ಬೆಂಬಲಿಸಲು ಮತ್ತು ಮಾನವರ ಆರೋಗ್ಯ ರಕ್ಷೆಯನ್ನು ಖಚಿತಪಡಿಸಿಕೊಳ್ಳಲು, ಒಂದು ಸೂಕ್ತ ವ್ಯವಸ್ಥೆಯನ್ನು ಬಲಪಡಿಸುವ ಆವಶ್ಯಕತೆಯ ಬಗ್ಗೆ ಒತ್ತು ನೀಡಿದರು. ಮಾನ್ಯ ಸಚಿವೆ, ಇತ್ತೀಚೆಗೆ ಕೋವಿಡ್ -೧೯ ಸಾಂಕ್ರಾಮಿಕ ರೋಗವು ಉಂಟು ಮಾಡಿದ ಪಿಡುಗನ್ನು ಉದ್ಧರಿಸಿ, ಈ ಸಂದರ್ಭದಲ್ಲಿ ವಿಶ್ವಾದ್ಯಂತ ಹಲವು ರಾಷ್ಟ್ರಗಳ ಸಹಯೋಗ ಮತ್ತು ಮುಖ್ಯವಾಗಿ, ಭಾರತವು ವ್ಯಾಕ್ಸೀನ್ ತಯಾರಿಕೆಯ ಮೂಲಕ ಈ ಪಿಡುಗನ್ನು ಎದುರಿಸುವಲ್ಲಿ ನಿರ್ಣಾಯಕ ಭೂಮಿಕೆಯನ್ನು ವಹಿಸಿದ್ದನ್ನು ಉಲ್ಲೇಖಿಸಿದರು.

ಈ ಕಾರ್ಯಾಗಾರದಲ್ಲಿ, ೭ ಜಿ-೨೦ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಇಟಲಿ, ಸೌದಿ ಅರೇಬಿಯಾ ಇಂಗ್ಲೆಂಡ್, ಅಮೇರಿಕಾ ಮತ್ತು ಒಮಾನ್ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ರಾಷ್ಟ್ರಗಳ ಪ್ರತಿನಿಧಿಗಳಲ್ಲದೆ, ಆಹಾರ ಮತ್ತು ಕೃಷಿ ಸಂಸ್ಥೆ (FAO) , ವಿಶ್ವ ಅರೋಗ್ಯ ಸಂಸ್ಥೆ (WHO) ಮತ್ತು ಅಂತರ ರಾಷ್ಟ್ರೀಯ ಪಶುಸಂಪತ್ತು ಸಂಶೋಧನಾ ಸಂಸ್ಥೆಗಳಲ್ಲಿ (ILRI) ಸಂಶೋಧನೆಯಲ್ಲಿ ಈಡುಪಟ್ಟಿರುವ ಹಲವಾರು ಪ್ರತಿನಿಧಿಗಳು ಕೂಡ ಸಕ್ರಿಯವಾಗಿ ಭಾಗವಹಿಸಿದರು. ಭಾರತದ ಪರವಾಗಿ, ವಿಜ್ಞಾನ ಮತ್ತು ಕೈಗಾರಿಕಾ ಅನುಸಂಧಾನ ಪರಿಷತ್ (CSIR), ಭಾರತೀಯ ವೈದ್ಯಕೀಯ ಅನುಸಂಧಾನ ಪರಿಷತ್,(ICMR), ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR), ಮತ್ಸ್ಯ, ಪಶುಪಾಲನೆ ಮತ್ತು ಡೇರಿ ವಿಭಾಗದ ಅಧಿಕಾರಿಗಳು, ಹಾಗೂ ಭಾರತ ಸರ್ಕಾರದ ಮುಖ್ಯ್ಯ ವಿಜ್ಞಾನ ಸಲಹೆಗಾರರ ಕಾರ್ಯಾಲಯದ ಅಧಿಕಾರಿಗಳು ಕೂಡ ಪಾಲ್ಗೊಂಡರು. ಕಾರ್ಯಾಗಾರದ ಕಾರ್ಯಸೂಚಿಯು “ಒಂದು ಅರೋಗ್ಯ” ನಿರೂಪಣೆಯ ವಿಷಯವಾಗಿ ನಾಲ್ಕು ಅಧಿವೇಶನಗಳಲ್ಲಿ ಚರ್ಚಿಸಲ್ಪಟ್ಟಿತು, ಮತ್ತು ಇದರಲ್ಲಿ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವೈಜ್ಞಾನಿಕ ಪರಿಣಿತರು ಚರ್ಚೆಗಳಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ವಿವಾದಿಸಿದರು ಎರಡು ದಿನಗಳ ವಿಮರ್ಶಾತ್ಮಕ ಮತ್ತು ಸಫಲಪೂರ್ವಕ ಚರ್ಚೆಗಳ ಬಳಿಕ, ಕಾರ್ಯಾಗಾರವು ಈ ವಿಷಯದಲ್ಲಿ ಮಾನವ , ಪಶು, ಮತ್ಸ್ಯ, ಪಕ್ಷಿ ಸಂಕುಲ, ಮತ್ತು ಸಸ್ಯಜೀವಗಳ ಆರೋಗ್ಯ ರಕ್ಷಣೆಗಾಗಿ ವಿವಿಧ ಅಂಶಗಳನ್ನು ಒಳಗೊಂಡ ಹಲವಾರು ಕಾರ್ಯಕ್ರಮಗಳನ್ನು , ಸಂಶೋಧನೆಗಳನ್ನು ಕೈಗೊಳ್ಳಲು ಬಹುಪಕ್ಷೀಯ ಸಹಯೋಗವನ್ನು ಹೊಂದುವ ಮತ್ತು ಮುಂದುವರೆಸುವ ಬಗ್ಗೆ ನಿರ್ಧಾರಗಳನ್ನು ಮಂಡಿಸಲಾಯಿತು. ಕಾರ್ಯಾಗಾರವು ಒಂದು ಆರೋಗ್ಯವನ್ನು “ಒಂದು ಭೂಮಿ ಮತ್ತು ಒಂದು ಭವಿಷ್ಯ ” ದ ನಿಟ್ಟಿನಲ್ಲಿ ಪರಿಪೇಕ್ಷಿಸಿ ಈ ನಿಟ್ಟಿನಲ್ಲಿ ಆರೋಗ್ಯ ವಲಯದಲ್ಲಿ ಮಹತ್ತರವಾದ ಬಹುಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮತ್ತು ಸಂಶೋಧನೆಗಳನ್ನು ಮುಂದುವರೆಸಲು ನಿರ್ಧರಿಸಲಾಯಿತು. .