ಸ್ವಂತ2ಸಾರ್ವಜನಿಕ ಸಾರಿಗೆ: ಬೆಂಗಳೂರು ನಗರದ 3,855 ಪ್ರತಿಕ್ರಿಯೆಗಳಲ್ಲಿ ಶೇ.95 ರಷ್ಟು ಪ್ರಯಾಣಿಕರು ಸ್ವಂತ ವಾಹನಗಳಿಂದ ಮೆಟ್ರೋಗೆ ಬದಲಾಗಲು ಉತ್ಸುಕರಾಗಿದ್ದಾರೆ

0
4

ಬೆಂಗಳೂರು:ಬೆಂಗಳೂರಿನಲ್ಲಿ ಪ್ರಸ್ತುತ ಕಚೇರಿಗಳನ್ನು ತಲುಪಲು ಖಾಸಗಿ ವಾಹನಗಳನ್ನು ಬಳಸುತ್ತಿರುವ 3,855 ಜನರಲ್ಲಿ 95% ಪ್ರತಿಶತದಷ್ಟು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಖಾಸಗಿ ವಾಹನಗಳಿಂದ ಮೆಟ್ರೋಗೆ ಬದಲಾಗಲು ಸಿದ್ಧರಿದ್ದಾರೆ ಎಂದು #ಸ್ವಂತ2ಸಾರ್ವಜನಿಕ ಸಾರಿಗೆ ಪ್ರಶ್ನಾವಳಿಯಲ್ಲಿ ಕಂಡುಬಂದಿರುತ್ತದೆ.

 #ಸ್ವಂತ2ಸಾರ್ವಜನಿಕ ಸಾರಿಗೆ ಅಭಿಯಾನವು ವಾರಕ್ಕೆ ಕನಿಷ್ಠ ಎರಡು ಬಾರಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರಯಾಣಿಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು ನಾಗರಿಕ ನೇತೃತ್ವದ ಉಪಕ್ರಮವಾಗಿದ್ದು, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್), ಡಬ್ಲ್ಯುಆರ್‌ಐ ಇಂಡಿಯಾ, ಹಲವಾರು ಕಾರ್ಪೊರೇಟ್ ಸಂಸ್ಥೆಗಳು, ನಾಗರಿಕ ಮತ್ತು ಅಪಾರ್ಟ್ಮೆಂಟ್ ಸಂಘಗಳು, ಆಟೋ ಚಾಲಕ ಸಂಘಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಹಕಾರ ನೀಡಿವೆ. ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ಮಾರ್ಗಗಳು ಸೆಪ್ಟೆಂಬರ್ 2023 ಹಾಗೂ ಜನವರಿ 2024 ರಲ್ಲಿ ಕಾರ್ಯಾರಂಭಿಸುವ ನಿರೀಕ್ಷೆಯಿದ್ದು, ನಗರದಲ್ಲಿ ಮೆಟ್ರೋ ಜಾಲ ~93 ಕಿಮೀಗೆ ಹೆಚ್ಚಾಗಲಿದೆ. ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಇದು ಸೂಕ್ತ ಸಮಯವಾಗಿದೆ.

ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆಯತ್ತ ಬದಲಾಗುವ ಪ್ರಯತ್ನದಲ್ಲಿ ಪ್ರಯಾಣಿಕರು ಎದುರಿಸುವ ಪ್ರಮುಖ ಸಮಸ್ಯೆಗಳನ್ನು ಮತ್ತು ಪ್ರಯಾಣಿಕರ ಸಾರಿಗೆ ಮಾದರಿಗಳನ್ನು ತಿಳಿಯಲು 2023 ಜುಲೈನಲ್ಲಿ ಈ ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಲಾಯಿತು ಪ್ರಶ್ನಾವಳಿಯು ನಗರದ ಎಲ್ಲಾ ನಾಗರೀಕರಿಗೆ ಪ್ರತಿಕ್ರಿಯಿಸುವ ಅವಕಾಶ ಕಲ್ಪಿಸಲಾಗಿದ್ದರೂ, ನಿರ್ದಿಷ್ಟವಾಗಿ ವೈಟ್‌ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊರ ವರ್ತುಲ ರಸ್ತೆ (ಒಆರ್‌ಆರ್‌) ಪ್ರದೇಶಗಳಲ್ಲಿನ ಪ್ರಯಾಣಿಕರು ಮತ್ತು ನಿವಾಸಿಗಳು ಸಮೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಭಾಗವಹಿಸಿರುವುದು ಕಂಡುಬಂದಿರುತ್ತದೆ. ನಗರದ ಈ ಪ್ರದೇಶಗಳಲ್ಲಿ ಸರಿಸುಮಾರು 10 ಲಕ್ಷ ಕ್ಕೂ ಹೆಚ್ಚು ಉದ್ಯೋಗಿಗಳು ನೆಲೆಸಿದ್ದಾರೆ ಹಾಗೂ ಈ ಪ್ರದೇಶಗಳು ಮುಂಬರುವ ದಿನಗಳಲ್ಲಿ ಮೆಟ್ರೋ ಮಾರ್ಗಗಳ ಸಂಪರ್ಕವನ್ನು ಹೊಂದಲಿವೆ. ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 3,855 ಪ್ರಯಾಣಿಕರಲ್ಲಿ ಶೇ.೬೦ರಷ್ಟು ಪ್ರಯಾಣಿಕರು ಖಾಸಗಿ ವಾಹನಗಳನ್ನು ಪ್ರತಿದಿನ ಪ್ರಯಾಣಕ್ಕಾಗಿ ಬಳಸುತ್ತಾರೆ – 1,172 ಪ್ರಯಾಣಿಕರು ಕಾರು ಬಳಕೆದಾರರಾಗಿದ್ದರೆ 1,046 ಮಂದಿ ದ್ವಿಚಕ್ರ ವಾಹನ ಬಳಕೆದಾರರು.

ಈ ಹಿಂದೆ ತಿಳಿಸಿದ ಪ್ರದೇಶಗಳಿಗೆ ತೆರಳುವಾಗ, ಒಂದು ದಿಕ್ಕಿನ ಪ್ರಯಾಣವನ್ನು ಖಾಸಗಿ ದ್ವಿಚಕ್ರ ಮತ್ತು ಕಾರಿನಲ್ಲಿ ಕ್ರಮಿಸಿದರೆ 1 ರಿಂದ 1.5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದೇ ಪ್ರಯಾಣ ಮೆಟ್ರೋ ಮೂಲಕವಾದರೆ 45 ನಿಮಿಷಗಳಿಂದ 1 ಗಂಟೆಯಲ್ಲಿ ಕ್ರಮಿಸಬಹುದು ಎಂಬುದು ಪ್ರಶ್ನಾವಳಿಯ ಪ್ರತಿಕ್ರಿಯೆಗಳಲ್ಲಿಕಂಡುಬಂದಿರುತ್ತದೆ.

ಕಾರು ಮತ್ತು ದ್ವಿಚಕ್ರ ವಾಹನ ಬಳಕೆದಾರರು ಮನೆಯಿಂದ ಕಚೇರಿಗೆ ಕ್ರಮಿಸುವ ದೈನಂದಿನ ಪ್ರಯಾಣದ ಸಮಯ ಈಗಿರುವ ಸ್ಥಿತಿಗಿಂತ ಕಡಿಮೆಯಾಗುವುದಾದರೆ, ಮೆಟ್ರೋ ಮೂಲಕ ಕ್ರಮಿಸಲು ಒಪ್ಪಿಗೆ ಸೂಚಿಸಿರುವ ಅಂಶ ಕಂಡುಬಂದಿದೆ. ಮತ್ತೊಂದು ಮುಖ್ಯ ಅಂಶವೇನೆಂದರೆ,  ಪ್ರಯಾಣದ ವೆಚ್ಚಕ್ಕಿಂತ ಕಡಿಮೆ ಸಮಯದಲ್ಲಿ ಕ್ರಮಿಸುವ ವ್ಯವಸ್ಥೆ ಮತ್ತು ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಯಸುತ್ತಾರೆ.

 

ಪ್ರಸ್ತುತ ಸಾರ್ವಜನಿಕ ಸಾರಿಗೆಯನ್ನು ಬಳಸುವವರಲ್ಲಿ 62% ಷ್ಟು ಜನರು ಉತ್ತಮ ಪಾದಚಾರಿ ಮಾರ್ಗಗಳನ್ನು ಬಯಸುತ್ತಿದ್ದಾರೆ. ಅವರಲ್ಲಿ 33% ಷ್ಟು ಜನರು ನಿಯಮಿತ ಸ್‌ಗಳ ಪ್ರಮಾಣವನ್ನು ಹೆಚ್ಚಿಸಲು ಬಯಸಿದ್ದಾರೆ. ತಡೆರಹಿತ ಬಹು-ಮಾದರಿ ಏಕೀಕರಣದೊಂದಿಗೆ, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸಿದರೆ ಹೆಚ್ಚಿನ ಜನರನ್ನು ಸಾರ್ವಜನಿಕ ಸಾರಿಗೆಯತ್ತ ಪ್ರೋತ್ಸಾಹಿಸುತ್ತದೆ ಎಂದು  ಸಾರ್ವಜನಿಕ ಸಾರಿಗೆ ಬಳಸುತ್ತಿರುವವರು ಮತ್ತು ಬಳಕೆದಾರರಲ್ಲದವರು ನಿಸ್ಸಂಶಯವಾಗಿ ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸುಮಾರು 50% ಮಹಿಳಾ ಪ್ರತಿಕ್ರಿಯೆದಾರರು ತಮ್ಮ ಪ್ರಯಾಣಕ್ಕಾಗಿ ಖಾಸಗಿ ಸಾರಿಗೆಗಳಿಗಿಂತ ಲಭ್ಯವಿರುವ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಮಹಿಳಾ ಪ್ರಯಾಣಿಕರು ಆ್ಯಪ್ ಆಧಾರಿತ ಆಟೋ ಮತ್ತು ಕಾರ್‌ ಸೇವೆಗಳಿಗಿಂತ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂಬ ಅಂಶ ಕಂಡುಬಂದಿದೆ.

40% ಮಹಿಳಾ ಪ್ರತಿಕ್ರಿಯೆದಾರರು ಈಗಿರುವ ಸಾರಿಗೆ ವ್ಯವಸ್ಥೆಯಲ್ಲಿ ಬಹುಮುಖ್ಯವಾಗಿ ಕಂಡುಬಂದಿರುವ ನ್ಯೂನ್ಯತೆಗಳನ್ನು ಸೂಚಿಸಿದ್ದು ಅವು ಹೀಗಿವೆ: ವಿಶ್ವಾಸಾರ್ಹ ಮೊದಲ ಮತ್ತು ಕೊನೆಯ ಮೈಲಿ ಸೇವೆಗಳ ಕೊರತೆತಡೆರಹಿತ ಸಂಪರ್ಕ, ಒಂದೇ ಟಿಕೆಟ್‌ನಲ್ಲಿ ವಿವಿಧ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಅವಕಾಶವಿಲ್ಲದಿರುವುದು.

ಆನ್ಲೈನ್ ಪ್ರಶ್ನಾವಳಿಯ ಹೊರತಾಗಿ, #ಸ್ವಂತ2ಸಾರ್ವಜನಿಕ ಸಾರಿಗೆ ತಂಡವು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಉತ್ತೇಜಿಸಲು ನಾಗರೀಕರಿಗಾಗಿ ಸೆಮಿನಾರ್‌ಗಳು ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಕಾರು ಬಳಕೆದಾರರನ್ನು ಸಾರ್ವಜನಿಕ ಸಾರಿಗೆಗೆ ಬದಲಾಗುವಂತೆ ಪ್ರೇರೇಪಿಸಲು ನಗರದ ಸಾರಕ್ಕಿ ವೃತ್ತದಲ್ಲಿ ನಾಗರೀಕರನ್ನೊಳಗೊಂದಂತೆ ಖಾಸಗಿ ವಾಹನ ಪ್ರಯಾಣಿಕರಿಗೆ ಅರಿವು ಮೂಡಿಸುವ ಕಾಋಯಚಟುವಟಿಕೆಗಳನ್ನು ಕೈಗೊಂಡಿರುತ್ತಾರೆ. ಪ್ರಶ್ನಾವಳಿಯಿಂದ ದೊರೆತ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಿ ಸಂಸ್ಥೆಗಳಾದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್ಟಿ), ಬೆಂಗಳೂರು ಸಂಚಾರ ಪೊಲೀಸ್ (ಬಿಟಿಪಿ)  ಪ್ರತಿನಿಧಿಗಳಿಗೆ ನೀಡಲಾಗುವುದು.

ಬಿ.ಪ್ಯಾಕ್ ಗೌರವ ವ್ಯವಸ್ಥಾಪಕ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್ ಮಾತನಾಡಿ, “ಈ ಸಮೀಕ್ಷೆಯಿಂದ ದೊರೆತಿರುವ ಉತ್ತರಗಳು  ನಾಗರಿಕರು ತಮ್ಮ ದೈನಂದಿನ ಪ್ರಯಾಣದ ವಾಸ್ತವತೆಯನ್ನು ತಿಳಿಸುತ್ತದೆ. ಬೆಂಗಳೂರಿನ ನಾಗರಿಕರು ಖಾಸಗಿ ವಾಹನಗಳಿಂದ ದೂರ ಸರಿದು ಸಾರ್ವಜನಿಕ ಸಾರಿಗೆಯಲ್ಲಿ ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸಲು ಸಿದ್ಧರಿದ್ದಾರೆ ಎಂದು ಬೆಂಗಳೂರು ಪ್ರಯಾಣಿಕರ ಸಮೀಕ್ಷೆಯ ಫಲಿತಾಂಶಗಳು ಮತ್ತೊಮ್ಮೆ ಸ್ಪಷ್ಟವಾಗಿ ಸಾಬೀತುಪಡಿಸಿವೆ. ಸರ್ಕಾರಿ ಸಂಸ್ಥೆಗಳು ಜೊತೆಗೂಡಿ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ,  ತಡೆರಹಿತ, ಊಹಿಸಬಹುದಾದ ಮತ್ತು ಆರಾಮದಾಯಕ ಪ್ರಯಾಣವನ್ನು ನಾಗರೀಕರಿಗೆ ಆದಷ್ಟು ಶೀಘ್ರದಲ್ಲಿ ಒದಗಿಸಬೇಕಿದೆ. ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳನ್ನು ಸರ್ಕಾರದ ಅಂಗಸಂಸ್ಥೆಗಳಿಗೆ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ. ಹಾಗೂ  ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಆಗ ಮಾತ್ರ ಬೆಂಗಳೂರಿಗರ ನಿರೀಕ್ಷೆಗಳನ್ನು ಪೂರೈಸಬಹುದು” ಎಂದು ಹೇಳಿದರು.

ಡಬ್ಲ್ಯುಆರ್‌ಐ ಇಂಡಿಯಾದ ಫೆಲೋ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, “ಸಂಚಾರ ಸಮಸ್ಯೆಗೆ ಏಕೈಕ ದೀರ್ಘಕಾಲೀನ ಪರಿಹಾರವೆಂದರೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು. ವೈಟ್‌ಫೀಲ್ಡ್ ಅನ್ನು ನಗರದ ಇತರ ಭಾಗಗಳಿಗೆ ಮೆಟ್ರೋ ಸಂಪರ್ಕಿಸುವುದರಿಂದ 2023 ಬ್ರಾಂಡ್ ಬೆಂಗಳೂರಿಗೆ ಮೈಲಿಗಲ್ಲು ವರ್ಷವಾಗಲಿದೆ.  #ಸ್ವಂತ2ಸಾರ್ವಜನಿಕ ಸಾರಿಗೆ ಉಪಕ್ರಮವು ಕಾರ್ಪೊರೇಟ್ ಸಂಸ್ಥೆಗಳು, ಆಟೋ ಯೂನಿಯನ್ಗಳು ಮತ್ತು ನಾಗರಿಕ ಗುಂಪುಗಳ ಸಕ್ರಿಯ ಭಾಗವಹಿಸುವಿಕೆಯಿಂದ ಬಹುದೊಡ್ಡ ನಾಗರಿಕರ ಆಂದೋಲನವಾಗಿ ಹೊರಹೊಮ್ಮಿದೆ. ಸರ್ಕಾರಿ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಮೂಲಕ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರ ದೈನಂದಿನ ಪ್ರಯಾಣವನ್ನು ವಿಶ್ವಾಸಾರ್ಹ ಮತ್ತು ತಡೆರಹಿತವಾಗಿಸಿದರೆ ಬೆಂಗಳೂರಿಗರು ಸಾರ್ವಜನಿಕ ಸಾರಿಗೆಗೆ ಬದಲಾಗುತ್ತಾರೆ ಎಂದು ಪ್ರತಿಕ್ರಿಯೆಗಳು ಸ್ಪಷ್ಟಪಡಿಸಿವೆ. ನಗರದ ಹೊರವರ್ತುಲ ರಸ್ತೆಯು ಗರಿಷ್ಠ ಸಂಖ್ಯೆಯ ದೈನಂದಿನ ಪ್ರಯಾಣಿಕರನ್ನು ಹೊಂದಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ನಿಲ್ದಾಣಗಳಿಂದ ಹೊರವರ್ತುಲ ರಸ್ತೆಯಲ್ಲಿ ನೆಲೆಸಿರುವ ಟೆಕ್ ಪಾರ್ಕ್ಗಳಿಗೆ ಫೀಡರ್ ಬಸ್ಗಳ ಸಂಪರ್ಕವನ್ನು ಕಲ್ಪಿಸುವುದರಿಂದ ಸಕಾರಾತ್ಮಕ ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ. ಪ್ರಯಾಣಿಕರಿಗೆ ನಮ್ಮ ಪ್ರಾಮಾಣಿಕ ಮನವಿಯೆಂದರೆ ವಾರದಲ್ಲಿ ಕನಿಷ್ಠ ಎರಡು ದಿನಗಳಾದರೂ ನಿಮ್ಮ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂಬುದಾಗಿದೆ.