ನಿಧಿ ಶ್ರೇಯಾ ಹುಟ್ಟಿದ್ದು 26.03.2008 ರಂದು ಹುಟ್ಟುತ್ತಲೇ ಮನೆಯ ಲಕ್ಷ್ಮಿ ಯಾಗಿ ಬೆಳೆಯುತ್ತಾ ಹೋದಂತೆ ಟಿವಿ ಯಲ್ಲಿ ಬರುವ ಹಾಡಿಗೆ ತಕ್ಕಂತೆ ಕೈಕಾಲು ಹಾಡಿ ಸುತ್ತ ಬೆಳೆದ ಮಗು ಮುಂದೆ 4 ನೇವರ್ಷಕ್ಕೆ ಭರತ ನಾಟ್ಯ ಕಲಿಯಲು ಪ್ರಾರಂಭಿಸಿದಳು
ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ದಲ್ಲಿ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುತ್ತ ಬಂದಳು. ಓದಿನ ಜೊತೆಗೆ ಭರತನಾಟ್ಯ ದಲ್ಲೂ ಸದಾ ಮುಂದೆ ಭರತನಾಟ್ಯ ಜೂನಿಯರ್ ಪರೀಕ್ಷೆ ಯಲ್ಲಿ ರಾಜ್ಯ ಕ್ಕೆ ನಾಲ್ಕನೇ ಯವಳಾಗಿ ಉತ್ತೀರ್ಣಳಾದಳು
ಭರತನಾಟ್ಯ ದಲ್ಲಿ ಮಾತ್ರವಲ್ಲದೆ ಯೋಗ. ಚಿತ್ರಕಲೆ,ಕ್ರೀಡೆ ಯಲ್ಲು ಸದಾಮುಂದು.
ಈಗಾಗಲೇ ನಾಟ್ಯ ಪ್ರದರ್ಶನದಲ್ಲಿ ಮೈಸೂರು ದಸರಾ. ಶ್ರೀರಂಗಪಟ್ಟಣ ದಸರಾ,ನಂಜನಗೂಡು ದಸರಾ, ಕೊಡಗು ದಸರಾ ಗಳಲ್ಲಿ ಪ್ರದರ್ಶನವನ್ನು ನೀಡಿದ್ದಾಳೆ . ಅಲ್ಲದೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಮುಖ್ಯ ವೇದಿಕೆ ಗಳಲ್ಲಿ ತಮ್ಮ ಪ್ರತಿಭೆ ಯನ್ನು ತೋರಿದ್ದಾರೆ.
ಗೈಡ್ ನಲ್ಲಿ ಕೂಡ ಉತ್ತಮ ಸಾಧನೆ ಮಾಡಿದ್ದಾಳೆ ಗೈಡ್ ನಲ್ಲಿ ಈಗಾಗಲೇ ರಾಜ್ಯ ಪುರಸ್ಕಾರ ವನ್ನು ಸನ್ಮಾನ್ಯ ರಾಜ್ಯಪಾಲ ರಿಂದ ಪಡೆದಿರುತ್ತಾಳೆ.
ಜೊತೆಗೆ ಎನ್ ಸಿ ಸಿ ಯಲ್ಲು ಕೊಡ ಸೇವೆಯನ್ನು ಸಲ್ಲಿಸಿಸುತ್ತಿದ್ದಾಳೆ
ಇವಳದು ಬಹುಮುಖ ಪ್ರತಿಭೆ ಇವಳಿಗೆ ಶುಭವಾಗಲಿ