ಐಆರ್ 4.0, ಇಂಧನ ಪರಿವರ್ತನೆ ಮತ್ತು ಹೊಸ ಯುಗದ ತಂತ್ರಜ್ಞಾನಗಳಿಂದ ಚಾಲಿತವಾದ ‘ಕೆಲಸದ ಭವಿಷ್ಯ’ ಎಂಬ ಸ್ಪಷ್ಟ ಬೃಹತ್ ಜಾಗತಿಕ ಬದಲಾವಣೆಯ ಮಧ್ಯದಲ್ಲಿ ನಾವಿದ್ದೇವೆ. ಈ ಹೊಸ ತಂತ್ರಜ್ಞಾನಗಳು ‘ಕೆಲಸ’, ‘ಕೆಲಸದ ಸ್ಥಳ’ ಮತ್ತು ‘ಕಾರ್ಮಿಕ ಬಲ’ ಮಟ್ಟದಲ್ಲಿ ಬದಲಾವಣೆಗಳನ್ನು ತರುತ್ತಿವೆ. ಉನ್ನತ ಮಟ್ಟದ ಅರಿವು ಮತ್ತು ಸಾಮಾಜಿಕ-ಭಾವನಾತ್ಮಕ ಕೌಶಲ್ಯಗಳ ಅಗತ್ಯವಿರುವ ಹೊಸ ಉದ್ಯೋಗಗಳ ಆಗಮನದಿಂದ ಗುರುತಿಸಲ್ಪಟ್ಟ ಕ್ಷೇತ್ರಗಳಾದ್ಯಂತ ಉದ್ಯೋಗದ ಸಂಯೋಜನೆಯಲ್ಲಿ ಒಂದು ಮಾದರಿ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ. ‘ಕೆಲಸದ ಭವಿಷ್ಯ’ಕ್ಕೆ ಹೊಂದಿಕೊಳ್ಳುವ ಬಗ್ಗೆ ಎಲ್ಲಾ ಸಮಾಜೋಆರ್ಥಿಕ ಕ್ಷೇತ್ರಗಳಲ್ಲಿ ಸಾಕಷ್ಟು ಆಶಾವಾದ ಮತ್ತು ಸಂದೇಹವಿದೆ.
ಈ ಪ್ರಮಾಣದ ಜಾಗತಿಕ ರೂಪಾಂತರಗಳಿಗೆ ಆಳವಾದ ಚರ್ಚೆಗಳ ಅಗತ್ಯವಿರುತ್ತದೆ ಮತ್ತು ಜಾಗತಿಕ ಜಿಡಿಪಿಯ ಶೇ.85 ಮತ್ತು ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರತಿನಿಧಿಸುವ ಜಿ-20, ಅದರ ಎಲ್ಲಾ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳೊಂದಿಗೆ ‘ಕೆಲಸದ ಭವಿಷ್ಯ’ವನ್ನು ಚರ್ಚಿಸಲು ಸೂಕ್ತ ವೇದಿಕೆಯಾಗಿದೆ. ಜಾಗತಿಕ ಒಳಿತಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು, ರಾಷ್ಟ್ರಗಳ ಪೂರಕ ಸಾಮರ್ಥ್ಯಗಳೊಂದಿಗೆ, ‘ಕೆಲಸದ ಭವಿಷ್ಯ’ದಿಂದ ಹೊರಹೊಮ್ಮುವ ಪ್ರವೃತ್ತಿಯನ್ನು ನಿರ್ವಹಿಸಲು ಜಿ-20 ಒಂದು ಚೌಕಟ್ಟನ್ನು ರೂಪಿಸಬಹುದಾಗಿದೆ. ಭಾರತದ ಜಿ-20 ಅಧ್ಯಕ್ಷತೆಯು ಜಿ-20 ಕೌಶಲ್ಯಗಳ ಕಾರ್ಯತಂತ್ರ ಮತ್ತು ಅದರ ಸಂಬಂಧಿತ ಅಂಶಗಳನ್ನು ನಿರ್ಮಿಸುವ ಸಾಮರ್ಥ್ಯ, ಆಜೀವ ಕಲಿಕೆ ಮತ್ತು ಮೇಲ್ವಿಚಾರಣೆಯನ್ನು ಚರ್ಚೆಗಳ ಮಹತ್ವದ ಅಂಶವಾಗಿ ಇರಿಸಿದೆ, ಹೀಗಾಗಿ ಇಡೀ ಜಗತ್ತಿಗೆ ಈ ಚರ್ಚೆಗಳ ಪ್ರಸ್ತುತತೆಯನ್ನು ಹೇಳಿದೆ. ಇದು ಜಿ- 20 ಕ್ಕೆ ಮತ್ತು ವಾಸ್ತವವಾಗಿ ಜಗತ್ತಿಗೆ, ಕಲಿಯುವವರು ಜೀವನದಲ್ಲಿ ಏಳಿಗೆ ಕಾಣಲು, ಸಮಾಜಕ್ಕೆ ಕೊಡುಗೆ ನೀಡಲು ಮತ್ತು ಉದಯೋನ್ಮುಖ ಉದ್ಯೋಗ ಮಾರುಕಟ್ಟೆಗಳಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಲು ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಗಳನ್ನು ಮರುರೂಪಿಸುವ ಕಾರ್ಯವನ್ನು ಅಳವಡಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
ಆಟೊಮೇಷನ್, ಬಿಗ್ ಡೇಟಾ, ಕೃತಕ ಬುದ್ಧಿಮತ್ತೆ ಮತ್ತು ಇತರ ತಂತ್ರಜ್ಞಾನಗಳ ಮೂಲಕ ನಮ್ಮ ಸುತ್ತಲಿನ ತ್ವರಿತ ತಾಂತ್ರಿಕ ಪ್ರಗತಿಯಿಂದಾಗಿ ‘ಕೆಲಸದ ಭವಿಷ್ಯ’ದ ಕೆಲವು ಪ್ರಮುಖ ಅಂಶಗಳು ಗೋಚರಿಸುತ್ತವೆ. ಇದು ಉತ್ಪಾದಕತೆಯಲ್ಲಿ ಅಪಾರ ಬೆಳವಣಿಗೆಯನ್ನು ಶಕ್ತಗೊಳಿಸಿದ್ದರೂ, ಮತ್ತೊಂದು ಕಡೆ, ಇದು ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯ ವ್ಯಾಪ್ತಿ, ಗಾತ್ರ ಮತ್ತು ಸೇರ್ಪಡೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2050 ರ ಹೊತ್ತಿಗೆ ಕೆಲವು ಪ್ರಮುಖ ಆರ್ಥಿಕತೆಗಳಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆಯು ಶೇ.25 ಕ್ಕಿಂತ ಕಡಿಮೆ ಇರಲಿದೆ ಎಂಬುದು ಎಚ್ಚರಿಕೆಯ ಗಂಟೆಯಾಗಿದೆ. ಜಿ-20 ಅಡಿಯಲ್ಲಿ ಶಿಕ್ಷಣ ಮತ್ತು ಕಾರ್ಮಿಕ ಕಾರ್ಯಕಾರಿ ಗುಂಪಿನ ಚರ್ಚೆಗಳು ಸಾಮೂಹಿಕ ಜಿ-20 ಕೌಶಲ್ಯಗಳ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವ ಸೂಚಕಗಳು ಮತ್ತು ಶಾಲೆಯಲ್ಲಿ ಮತ್ತು ಟಿವಿಇಟಿಯಲ್ಲಿ ನಿರಂತರ ಕಲಿಕೆಯ ಉದ್ದಕ್ಕೂ ಶಿಕ್ಷಣ ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಮಾರ್ಗಗಳು ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿವೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ) 2020, ಎಲ್ಲಾ ಹಂತಗಳಲ್ಲಿ ಕೌಶಲ್ಯ ಮತ್ತು ವೃತ್ತಿ ಶಿಕ್ಷಣದ ಸಂಯೋಜನೆಗಾಗಿ ತಡೆರಹಿತ ಶೈಕ್ಷಣಿಕ ಅರ್ಹತೆಗಳ ಸಂಚಯ ಮತ್ತು ವರ್ಗಾವಣೆಗಳಂತಹ ಕಾರ್ಯವಿಧಾನಗಳ ಮೂಲಕ, ವೃತ್ತಿ ಶಿಕ್ಷಣದಿಂದ ಸಾಮಾನ್ಯ ಶಿಕ್ಷಣದವರೆಗಿನ ಮಾರ್ಗಗಳು ಮತ್ತು ಕೌಶಲ್ಯಗಳ ವಿತರಣೆಯ ಏಕೀಕರಣ, ವಿವಿಧ ಸಚಿವಾಲಯಗಳು / ಇಲಾಖೆಗಳು / ರಾಜ್ಯಗಳಾದ್ಯಂತ ಹರಡಿರುವ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಕ್ಕೆ ಒಂದು ವ್ಯಾಪಕವಾದ ಚೌಕಟ್ಟನ್ನು ಒದಗಿಸುತ್ತದೆ. ಇದು ಕಲಿಕೆಯನ್ನು ಹೆಚ್ಚು ಅಭ್ಯಾಸ ಆಧಾರಿತ, ಆರೋಗ್ಯಕರವನ್ನಾಗಿಸುವ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ನಮ್ಮ ಶಿಕ್ಷಣ ಮತ್ತು ಕೌಶಲ್ಯ ಸಂಸ್ಥೆಗಳು ಆರ್ಥಿಕತೆ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿನ ಬದಲಾವಣೆಗೆ ಸ್ಥಿತಿಸ್ಥಾಪಕತತ್ವದ ಮತ್ತು ಹೊಂದಿಕೊಳ್ಳುವ ವ್ಯಕ್ತಿಗಳನ್ನು ಸಿದ್ಧಪಡಿಸುವುದನ್ನು ಇದು ಸಾಧ್ಯವಾಗಿಸುತ್ತದೆ.
‘ಕೆಲಸದ ಭವಿಷ್ಯಕ್ಕಾಗಿ’ ಕಾರ್ಮಿಕಬಲವನ್ನು ಸಿದ್ಧಪಡಿಸುವುದು ಬಹು ಆಯಾಮದ ಮತ್ತು ಬಹು-ಪಾಲುದಾರರ ಜವಾಬ್ದಾರಿಯಾಗಿದೆ. ಡೊಮೈನ್ ಮತ್ತು ಸಾಫ್ಟ್ ಸ್ಕಿಲ್‌ಗಳ ಜೊತೆಗೆ, ಶಿಕ್ಷಣ-ಕೌಶಲ್ಯ ಪೂರಕ ವ್ಯವಸ್ಥೆಯು ಹೊಸ ಯುಗದ ಆರ್ಥಿಕತೆಗೆ ಅವರನ್ನು ಸಿದ್ಧಪಡಿಸಲು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಕೌಶಲ್ಯಗಳನ್ನು ತುಂಬಬೇಕು. ಆಟೋಮೇಷನ್ ನಿಂದಾಗಿ ಉತ್ಪಾದನಾ ಸ್ಥಳ ಮತ್ತು ಗ್ರಾಹಕರನ್ನು ತೊಡಗಿಸಿಕೊಳ್ಳುವಿಕೆಯ ವಿಧಾನಗಳಲ್ಲಿ ಬದಲಾವಣೆಗಳ ಕಾರಣದಿಂದಾಗಿ ಉತ್ಪಾದನೆ ಮತ್ತು ಸೇವಾ ವಲಯಗಳೆರಡರಲ್ಲೂ ಕ್ರಿಯಾತ್ಮಕ ಕೌಶಲ್ಯ ಮೌಲ್ಯಮಾಪನ ಮತ್ತು ನಿರೀಕ್ಷೆಯ ಅಗತ್ಯವನ್ನು ನಾವು ಹಿಂದೆಂದಿಗಿಂತಲೂ ಹೆಚ್ಚಾಗಿ ನೋಡುತ್ತೇವೆ. ಕೌಶಲ್ಯದ ಮೂಲಸೌಕರ್ಯವನ್ನು ಉರುಹೊಡೆಯುವಿಕೆ ಮತ್ತು ಸಿದ್ಧಾಂತ (ಥಿಯರಿ) ದಿಂದ ವರ್ಗಾವಣೆ ಮಾಡಬಹುದಾದ ಉದ್ಯೋಗ ಕೌಶಲ್ಯಗಳ ಮೇಲೆ ಹೆಚ್ಚಿನ ಗಮನವನ್ನು ಹೊಂದಿರುವ ಸಂಪರ್ಕಿತ ಜಗತ್ತನ್ನು ಅರ್ಥಮಾಡಿಕೊಳ್ಳಲು ಮೇಲ್ದರ್ಜೆಗೇರಿಸಬೇಕಾಗುತ್ತದೆ. ಸ್ಥಳೀಯ/ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಭಾಗೀದಾರರಿಗೆ ಅಗತ್ಯವಿರುವ ಕೌಶಲ್ಯ ಮತ್ತು ಪ್ರೇರಣೆಯೊಂದಿಗೆ ಈ ರೂಪಾಂತರವನ್ನು ನಡೆ ಮತ್ತು ನುಡಿಯಲ್ಲಿ ಕಾರ್ಯಗತಗೊಳಿಸಲು ನಾವು ಅನುಷ್ಠಾನ ಪಾಲುದಾರರ ಸಾಮರ್ಥ್ಯವನ್ನು ಮುಂದುವರಿಸಬೇಕು. ತಂತ್ರಜ್ಞಾನಗಳ ಜೊತೆಗೆ, ‘ಕೆಲಸದ ಭವಿಷ್ಯ’ಕ್ಕೆ ಸೇರ್ಪಡೆ ಮಾಡಲು ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಹೊಸ ಪ್ರಯತ್ನದ ಅಗತ್ಯವಿದೆ, ಉದಾಹರಣೆಗೆ ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆ, ಹಿಂದುಳಿದ ವಿಭಾಗಗಳು/ಭೌಗೋಳಿಕತೆಗೆ ಕೌಶಲ್ಯದ ಪ್ರವೇಶ ಮತ್ತು ಹೊಸ ಆರ್ಥಿಕತೆಯೊಂದಿಗೆ ಮುಖ್ಯವಾಹಿನಿಯು ಕಷ್ಟಕರವೆಂದು ಭಾವಿಸುವ ವಿಭಾಗಗಳಿಗೆ ಸಹಾಯ ಮಾಡುವುದು.
ಭಾರತ ನೇತೃತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು (ಗ್ಲೋಬಲ್ ಸೌತ್) ಕೆಲಸದ ಭವಿಷ್ಯಕ್ಕಾಗಿ ತಮ್ಮ ಶಿಕ್ಷಣ-ಕೌಶಲ್ಯ ವ್ಯವಸ್ಥೆಯನ್ನು ನವೀಕರಿಸಲು ಅಗತ್ಯವಾದ ಸುಧಾರಣೆಗಳನ್ನು ಕೈಗೊಳ್ಳುವುದರಿಂದ, ಜಿ-20 ಅಡಿಯಲ್ಲಿ ವಿಭಿನ್ನ ಜನಸಂಖ್ಯೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ವಿವಿಧ ದೇಶಗಳ ನಡುವೆ ಸಹಯೋಗ ಮತ್ತು ಚಲನಶೀಲತೆಯ ಪೂರಕ ಅವಕಾಶಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ.
ನಮ್ಮ ಶಿಕ್ಷಣ ಮತ್ತು ಕೌಶಲ್ಯ ಸಂಸ್ಥೆಗಳು ಆರ್ಥಿಕಕತೆ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿನ ಬದಲಾವಣೆ ಹೊಂದಿಕೊಳ್ಳುವ ವ್ಯಕ್ತಿಗಳನ್ನು ಸಿದ್ಧಪಡಿಸಲು ಸಾಧ್ಯವಾಗಿಸುತ್ತದೆ : ಅತುಲ್ ಕುಮಾರ್ ತಿವಾರಿ
RELATED ARTICLES