ಅಧಿಕಾರಿಗಳ ಚಿತ್ತ ಗ್ರಾಮೀಣ ಭಾಗದತ್ತವಿರಲಿ- ಸಿ.ಚಂದನ್ ಗೌಡ
ಎಚ್.ಡಿ.ಕೋಟೆ: ಹಾವು ಕಚ್ಚಿ ತುರ್ತು ಚಿಕಿತ್ಸೆ ಸಿಗದೇ ಮಹಿಳೆ ಮೃತಪಟ್ಟ ಹಿನ್ನಲೆಯಲ್ಲಿ ತಾಲೂಕಿನ
ಕಾಡಂಚಿನಲ್ಲಿರುವ ಗೆಂಡತ್ತೂರು ಗ್ರಾಮಕ್ಕೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಭೇಟಿ ನೀಡಿ, ಮೃತ ಮಹಿಳೆ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ನೆರವು ನೀಡಿದರು.
ಬಳಿಕ ಮಾತನಾಡಿದ ಅವರು,ಹಾವು ಕಚ್ಚಿದ ಮಹಿಳೆಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರೇ,ಆಕೆಯ ಜೀವ ಉಳಿಯುತ್ತಿತ್ತು.ಆದರೆ
ಬಡ ಜನರು ಹಾಗೂ ಮಕ್ಕಳ ಚಿಕಿತ್ಸೆಗೆ ಅನುಕೂಲವಾಗಬೇಕಾದ ಕಾಡಂಚಿನ ಹಾಗೂ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.ಇದರಿಂದಾಗಿ ಚಿಕಿತ್ಸೆಗೆ ಪರದಾಡಿ ಗ್ರಾಮೀಣ ಭಾಗದ ಜನರು ನರಳುವಂತಾಗಿದೆ. ಕೂಡಲೇ ಎಚ್ .ಡಿ .ಕೋಟೆ ತಾಲೂಕಿನ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ತಹಸಿಲ್ದಾರ್ ರವರು ಗಮನಹರಿಸಿ, ಗ್ರಾಮೀಣ ಪ್ರದೇಶಕ್ಕೆ ಭೇಟಿಕೊಟ್ಟು ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿ ಕೊಡುವ ಮುಖಾಂತರ ಗ್ರಾಮೀಣ ಭಾಗದ ಜನರ ಹಿತಾಸಕ್ತಿ ಕಾಯುವಂತ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು.
ಇಂದಿನ ಆಧುನಿಕ ಪ್ರಪಂಚದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸುವವರು ಇಲ್ಲದಂತಾಗಿದೆ. ಮೂಲಭೂತ ಸೌಕರ್ಯಗಳ ವಂಚಿತ ಗ್ರಾಮಕ್ಕೆ ಮೂಲಭೂತವಾಗಿ ಬೇಕಾದಂತ ಸೌಕರ್ಯಗಳನ್ನು ಒದಗಿಸಿ ಕೊಡುವವರಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿಯಿಂದಾಗಿ ಇಂತಹ ದುರ್ಘಟನೆಗಳು ನಡೆಯುತ್ತಿದ್ದು,ಇದಕ್ಕೆ ಹೊಣೆ ಯಾರು..? ಎಂದು ಪ್ರಶ್ನಿಸಿದರು.
ಗೆಂಡತ್ತೂರು ಗ್ರಾಮದಲ್ಲೂ ಸಾಕಷ್ಡು ಸಮಸ್ಯೆಗಳಿದ್ದು,ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ ಚಂದನ್ ಗೌಡ ಅವರು, ವಿಷಜಂತುಗಳಿಂದ ಕಡಿತಕೊಳ್ಳಗಾದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದರು.
ಅಧಿಕಾರಿಗಳು ಕಾಡಂಚಲಿರುವ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಪರಿಹಾರ ಎಂಬ ಬೆಳಕು ಚೆಲ್ಲಲಿ. ವಿಷಜಂತುಗಳಿಂದ ಕಡಿತಕೊಳ್ಳಗಾದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಿ.
-ಭೂಮಿಪುತ್ರ ಸಿ. ಚಂದನ್ ಗೌಡ
ಎಚ್.ಡಿ.ಕೋಟೆ: ಹಾವು ಕಚ್ಚಿ ತುರ್ತು ಚಿಕಿತ್ಸೆ ಸಿಗದೇ ಮಹಿಳೆ ಮೃತಪಟ್ಟ ಹಿನ್ನಲೆಯಲ್ಲಿ ತಾಲೂಕಿನ
ಕಾಡಂಚಿನಲ್ಲಿರುವ ಗೆಂಡತ್ತೂರು ಗ್ರಾಮಕ್ಕೆ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಭೇಟಿ ನೀಡಿ, ಮೃತ ಮಹಿಳೆ ಕುಟುಂಬದವರಿಗೆ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಹೇಮಂತ್, ಹುಣಸೂರು ತಾಲೂಕು ಅಧ್ಯಕ್ಷ ಪ್ರತಾಪ್ ಹಾಗೂ ಗೆಂಡತ್ತೂರು ಲೋಕೇಶ್ ಗೌಡ ಉಪಸ್ಥಿತರಿದ್ದರು