ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ ಭವನದಲ್ಲಿ ಇಂದು ಸದಾಸ್ಮಿತ ಫೌಂಡೇಶನ್ ಹಾಗೂ ಮಹಾಲಕ್ಷ್ಮೀ ಎಜುಕೇಶನಲ್ ಟ್ರಸ್ಟ್ ವತಿಯಿಂದ ಉಚಿತ ಕಸೂತಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರವನ್ನು ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ರವರು ಪಾಲ್ಗೊಂಡು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಹೇಮಲತಾ ಗೋಪಾಲಯ್ಯ ರವರು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಇಂದು ನಮ್ಮ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ ವಿ ಸದಾನಂದ ಗೌಡ್ರು ನೇತೃತ್ವದ *ಸದಾಸ್ಮಿತ ಫೌಂಡೇಶನ್ ಹಾಗೂ ಮಹಾಲಕ್ಷ್ಮೀ ಎಜುಕೇಶನಲ್ ಟ್ರಸ್ಟ್ ಸಹಯೋಗದಲ್ಲಿ ನಮ್ಮ ಕ್ಷೇತ್ರದ ಮಹಿಳೆಯರಿಗೆ ಉಚಿತವಾಗಿ ಈ ತರಬೇತಿ ಕಾರ್ಯಗಾರ ಮಾಡುತ್ತಿರುವುದು ಸ್ವಾಗತಾರ್ಹ ಎಂದ ಹೇಮಲತಾ ಗೋಪಾಲಯ್ಯ ರವರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇಂಥ ಕಾರ್ಯಗಾರ ಬಹಳ ಸೂಕ್ತವಾಗಿವೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದಾಸ್ಮಿತ ಫೌಂಡೇಶನ್ ಅಧ್ಯಕ್ಷರಾದ ಶಿವರಾಂ ಡಿ ವಿ, ರಾಜ್ಯ ಒಬಿಸಿ ಅಧ್ಯಕ್ಷ ರಾದ ನರೇಂದ್ರ ಬಾಬು, ಬಿಜೆಪಿ ಉತ್ತರ ಜಿಲ್ಲಾ ಉಪಾಧ್ಯಕ್ಷ ರಾದ ಎನ್,ಜಯರಾಂ ಮುಖಂಡರಾದ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಅವಿನ್ ಆರಾಧ್ಯ ಮಾಜಿ ಬಿಬಿಎಂಪಿ ಸದಸ್ಯರಾದ ನಾಗರತ್ನ ಲೋಕೇಶ್, ಕಲ್ಲೇಶಪ್ಪ ಫೌಂಡೇಶನ್ ಪದಾಧಿಕಾರಿಗಳಾದ ಪ್ರಸನ್ನ, ಸುಧಾ, ಸೌಮ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.