Monday, September 25, 2023
Homeದೇಶಚರ್ಮಸ್ನೇಹಿ ಕೀಟಾಣುವಿನಿಂದ ರಕ್ಷಣೆಗೆ ಶೇ.90ರಷ್ಟು ನೈಸರ್ಗಿಕ ಮೂಲದ ಕಂಟೆಂಟ್ ಹೊಂದಿರುವ ಹ್ಯಾಂಡ್ ವಾಷ್ ಪೋರ್ಟ್ ಫೊಲಿಯೊ...

ಚರ್ಮಸ್ನೇಹಿ ಕೀಟಾಣುವಿನಿಂದ ರಕ್ಷಣೆಗೆ ಶೇ.90ರಷ್ಟು ನೈಸರ್ಗಿಕ ಮೂಲದ ಕಂಟೆಂಟ್ ಹೊಂದಿರುವ ಹ್ಯಾಂಡ್ ವಾಷ್ ಪೋರ್ಟ್ ಫೊಲಿಯೊ ಮರು ಬಿಡುಗಡೆ

ಐಟಿಸಿ ಸವ್ಲೊನ್ ನಿಂದ ಅತ್ಯಂತ ಆರೈಕೆ ಮಾಡುವ ಕೈಗಳಿಗೆ ಗೌರವ

ಮೈಸೂರು : ಕೀಟಾಣುವಿನಿಂದ ರಕ್ಷಣೆಗೆ ಪರಿಣಾಮಕಾರಿತನಕ್ಕೆ ಖ್ಯಾತಿ ಪಡೆದಿರುವ ಐಟಿಸಿ ಸವ್ಲೊನ್ ಮುಂದಿನ ತಲೆಮಾರಿನ ಕೈ ತೊಳೆಯುವ ಉತ್ಪನ್ನವನ್ನು ಶೇ.90ರಷ್ಟು ನ್ಯಾಚುರಲ್ ಆರಿಜಿನ್ ಕಂಟೆಂಟ್ ಪೋರ್ಟ್ ಫೊಲಿಯೊದೊಂದಿಗೆ ಬಿಡುಗಡೆ ಮಾಡಿದೆ. ಉಜ್ವಲ ಹೊಸ ಪ್ಯಾಕ್ ಗಳು ಹೊಸ ಅನುಕೂಲಗಳನ್ನು ಹೊಂದಿದ್ದು ಸವ್ಲೊನ್ ಹ್ಯಾಂಡ್ ವಾಷ್ ತನ್ನ ವಿಶ್ವಾಸಾರ್ಹ ಜೆರ್ಮ್ ಪ್ರೊಟೆಕ್ಷನ್ಗೆ ಚರ್ಮ ಸ್ನೇಹಿ ಅನುಕೂಲಗಳೊಂದಿಗೆ ಹೊಂದಿದ್ದು ಮೃದು ತೇವಾಂಶಯುಕ್ತ ಕೈಗಳು ಮತ್ತು `ನೋ ನಾಸ್ಟೀಸ್’ ಸೂತ್ರದಿಂದ ಪ್ಯಾರಾಬೆನ್ ಗಳು, ಸಿಲಿಕೋನ್ ಗಳು, ಟ್ರೈಕ್ಲೊಸಾನ್ ಮತ್ತು ಟ್ರೈಕ್ಲೊಕಾರ್ಬನ್ ಮುಕ್ತವಾಗಿರುತ್ತದೆ.

ಶೆ.90ರಷ್ಟು ನೈಸರ್ಗಿಕ ಮೂಲದ ಕಂಟೆಂಟ್ ನಿಂದ ರೂಪಿಸಿದ ಮತ್ತು ಕಿತ್ತಳೆಯ ರಸ, ಅಲೋ ವೆರಾ ಮತ್ತು ಗಿಡಮೂಲಿಕೆಗಳ ರಸದ ಅಳವಡಿಕೆಗಳಿಂದ ತಯಾರಿಸಲ್ಪಟ್ಟಿದ್ದು ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ 3 ವೇರಿಯೆಂಟ್ ಗಳನ್ನು ವಿನ್ಯಾಸಗೊಳಿಸಲಾಗಿದೆ-

ಸವ್ಲೊನ್ ಡೀಪ್ ಕ್ಲೀನ್ ಹ್ಯಾಂಡ್ ವಾಷ್ ನ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ವಿಕ್ ಲ್ಯಾದರ್- ಕ್ವಿಕ್ ರಿನ್ಸ್ ಸೂತ್ರವು ಸವ್ಲೊನ್ ನಿಂದ ಮೊಟ್ಟಮೊದಲನೆಯದಾಗಿದ್ದು ಈ ವೇರಿಯೆಂಟ್ ಸೂಪರ್ ಬಗ್ ಗಳಿಂದಲೂ ರಕ್ಷಸುತ್ತದೆ. ಈ ವಾಷ್-ಆಫ್ ಅತ್ಯಂತ ಸ್ವಚ್ಛತೆ ನೀಡುತ್ತಿದ್ದು ಉತ್ಸಾಹಕರ ಸಿಟ್ರಸ್ ಸುವಾಸನೆ ನೀಡುತ್ತದೆ.

ಸವ್ಲೊನ್ ಮಾಯಿಶ್ಚರ್ ಶೀಲ್ಡ್ ಹ್ಯಾಂಡ್ ವಾಷ್ ಕೈಗಳನ್ನು ಮೃದು ಮತ್ತು ತೇವಾಂಶಯುಕ್ತಗೊಳಿಸುವ ಮೂಲಕ ಮೃದುವಾದ ಹೂವಿನ ಸುವಾಸನೆ ಹರಡುತ್ತದೆ.

ಸವ್ಲೊನ್ ಹರ್ಬಲ್ ಸೆನ್ಸಿಟಿವ್ ಹ್ಯಾಂಡ್ ವಾಷ್ ನ ಪಿಎಚ್ ಸಮತೋಲನದ ಸೂತ್ರವು ಸೂಕ್ಷ್ಮ ಕೈಗಳಿಗೆ ಮೃದುವಾಗಿರುವಂತೆ ಕ್ಲಿನಿಕಲಿ ಸಾಬೀತಾಗಿದೆ.

ಸಾಂಕ್ರಾಮಿಕದ ನಂತರ ಆಂತರಿಕ ಕನ್ಸೂಮರ್ ಇನ್ಸೈಟ್ಸ್ ಸಿಕ್ಸ್ತ್ ಸೆನ್ಸ್ ತಂಡವು ಗುರುತಿಸಿದಂತೆ ಭಾರತೀಯ ಗ್ರಾಹಕರಲ್ಲಿ.

ಡಿಜಿಟಲ್ ಟ್ರೆಂಡ್ ಗಳ ಬೆಂಬಲದ ಆಳವಾದ ಗ್ರಾಹಕರ ಒಳನೋಟಗಳನ್ನು ಕಂಡುಕೊಳ್ಳಲಾಗಿದೆ. ಕೀಟಾಣುವಿನಿಂದ ರಕ್ಷಣೆಯು ಮುಖ್ಯವಾಗಿದ್ದರೂ ಹೊಸ ತಲೆಮಾರಿನ ಭಾರತೀಯ ಗ್ರಾಹಕರು ಈಗ ರಕ್ಷಣೆಯ ಆಚೆಗೂ ಅನುಕೂಲಗಳನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ಸಕ್ರಿಯವಾಗಿ ಚರ್ಮಸ್ನೇಹಿ ಪರಿಹಾರಗಳನ್ನು ನಿರೀಕ್ಷಿಸಲು ಪ್ರಾರಂಭಿಸುತ್ತಿದ್ದು ಅವರ ಕೈಗಳಿಗೆ ನ್ಯಾಚುರಲ್ ಕಂಟೆಂಟ್ ಮತ್ತು ಆರೈಕೆ ಬಯಸುತ್ತಾರೆ.

ಆವಿಷ್ಕಾರಕ ವಿನ್ಯಾಸದಲ್ಲಿ ಮುಂಚೂಣಿಯಲ್ಲಿರುವ ಮತ್ತು ಗ್ರಾಹಕರ ಕೇಂದ್ರಿತತೆಯಲ್ಲಿ ಸಂಚಲನಾತ್ಮಕ ಚಿಂತನೆ ಹೊಂದಿರುವ ಐಟಿಸಿ ಸವ್ಲೊನ್ ಗೆ ಮತ್ತೊಮ್ಮೆ ನಿಯಮಗಳನ್ನು ಮರು ವ್ಯಾಖ್ಯಾನಿಸುವ ಕಾಲವಾಗಿದೆ. ಸವ್ಲೊನ್ ಆರೈಕೆ ನೀಡುವ ಕೈಗಳಿಗೆ ಗೌರವಿಸುವ ಹೊಸ ಹ್ಯಾಂಡ್ ವಾಷ್ ಪ್ಯಾಕ್ ಗಳನ್ನು ಅನಾವರಣಗೊಳಿಸಿದೆ. ಆಗಿಲ್ವಿ, ಇಂಡಿಯಾ ಪರಿಕಲ್ಪನೆಯ ಈ ಜಾಹೀರಾತು ಚಿತ್ರವು ಆರೈಕೆ ಮಾಡುವ ಮತ್ತು ಪೋಷಿಸುವ ಕೈಗಳಿಗೆ ಮುಖ್ಯವಾಗಿ ತಾಯಿಯ ಕೈಗಳಿಗೆ ಗೌರವ ನೀಡುವ ಲಿರಿಕಲ್ ನೆರೇಟಿವ್ ಹೊಂದಿದ್ದು ಆರೈಕೆ ಮತ್ತು ರಕ್ಷಣೆಯ ಪ್ರಾಮುಖ್ಯತೆಯನ್ನು ಸುಂದರವಾಗಿ ಬಿತ್ತರಿಸಿದೆ. ಇದು ಪ್ರತಿ ವ್ಯಕ್ತಿಯಲ್ಲೂ ಅನುರಣಿಸುವ ಭಾವನಾತ್ಮಕ ಮತ್ತು ಸಂವೇದನಾತ್ಮಕ ಅನುಭವವಾಗಿದೆ.

ಐಟಿಸಿ ಲಿಮಿಟೆಡ್ ನ ಪರ್ಸನಲ್ ಕೇರ್ ಪ್ರಾಡಕ್ಟ್ಸ್ ಬಿಸಿನೆಸ್ ನ ಡಿವಿಷನಲ್ ಚೀಫ್ ಎಕ್ಸಿಕ್ಯೂಟಿವ್ ಸಮೀರ್ ಸತ್ಪತಿ, “ನಾವು ಸದಾ ಬದಲಾವಣೆಯೇ ಶಾಶ್ವತ ಎಂದು ಕೇಳುತ್ತಿರುತ್ತೇವೆ ಮತ್ತು ಪ್ರೀತಿ ಮತ್ತು ಆರೈಕೆಯ ಭಾವನೆಗಳು ಎಂದಿಗೂ ಬದಲಾಗದ ಶಾಶ್ವತ ಭಾವನೆಗಳಾಗಿವೆ. ಸವ್ಲೊನ್ ತನ್ನ ಮರು ರೂಪಿಸಿದ ಹೊಸ ಹ್ಯಾಂಡ್ ವಾಷ್ ಗಳ ಪೋರ್ಟ್ ಫೊಲಿಯೊ ಆರೈಕೆ ಮತ್ತು ಪೋಷಣೆ ನೀಡುವ ಕೈಗಳಿಗೆ ಸಲ್ಲಿಸುವ ಗೌರವವಾಗಿದೆ. ಇದು ಗ್ರಾಹಕರ ಅಗತ್ಯಗಳನ್ನು ಪೂರೈಸಲು ತೀಕ್ಷ್ಣ ಗ್ರಾಹಕರ ಒಳನೋಟಗಳನ್ನು ನೀಡುತ್ತದೆ ಮತ್ತು ಉದ್ದೇಶದ ಆವಿಷ್ಕಾರ ಉತ್ತೇಜಿಸುತ್ತದೆ. ಹೊಸ ನವೀಕೃತ ನೋಟದಲ್ಲಿ
ಸವ್ಲೊನ್ ಹ್ಯಾಂಡ್ ವಾಷ್ ಗಳ ಪೋರ್ಟ್ ಫೋಲಿಯೊ ವಿನ್ಯಾಸ ಮತ್ತು ಚರ್ಮಸ್ನೇಹಿ ಸೂತ್ರವನ್ನು ಪೋಷಿಸುವ ಮತ್ತು ಆರೈಸುವ ಕೈಗಳಿಗೆ ಶೇ.90ರಷ್ಟು ನೈಸರ್ಗಿಕ ಮೂಲದ ಕಂಟೆಂಟ್ ನೊಂದಿಗೆ ನೀಡುತ್ತದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ” ಎಂದರು.

ಆಗಿಲ್ವಿ ಇಂಡಿಯಾದ ಚೀಫ್ ಕ್ರಿಯೇಟಿವ್ ಆಫೀಸರ್ಸ್ ಕೈನಾಜ್ ಕರ್ಮಾಕರ್ ಮತ್ತ ಹರ್ಷದ್ ರಾಜಾಧ್ಯಕ್ಷ,“ಮನೆಯಲ್ಲಿ ಮಗು ಇರುವಾಗ ತಾಯಿಯ ಕೈಗಳು ಮಗುವಿನ ಆರೈಕೆ ಮತ್ತು ಪೌಷ್ಠಿಕತೆಗೆ ಸೂಪರ್ ಕೈಗಳಾಗುತ್ತವೆ. ಅವುಗಳನ್ನು ಪ್ರತಿ ಸಣ್ಣ ಹಾಗೂ ದೊಡ್ಡ ಕೆಲಸಕ್ಕೆ ಹೈ-ಪರ್ಫಾರ್ಮೆನ್ಸ್ ಮೋಡ್ ನಲ್ಲಿ ಇರಿಸಲಾಗುತ್ತದೆ. ಈ ಹಂತದಲ್ಲಿ ನಾವು ನಮ್ಮ ಹ್ಯಾಂಡ್ ವಾಷ್ ತನ್ನ ಉನ್ನತ ಕಾರ್ಯಕ್ಷಮತೆಯ ಪ್ರಯೋಜನಗಳೊಂದಿಗೆ `ಅತ್ಯಂತ ಹೆಚ್ಚು ಆರೈಕೆ ಮಾಡುವ ಕೈಗಳ ಆರೈಕೆ’ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಡುಕೊಂಡಿದ್ದೇವೆ. ಈ ಗುರಿಯನ್ನು ಈಡೇರಿಸಲು ನಮ್ಮ ಫ್ರಿಟ್ಜ್ ಮತ್ತು ಜಯೇಶ್ ಅವರ
ತಂಡವು ಪ್ರತಿಭಾವಂತ ನಿರ್ದೇಶಕ ಅಫ್ಶಾನ್ ಅವರೊಂದಿಗೆ ಸಹಯೋಗ ಹೊಂದಿದ್ದು ಅವರು ಈ ಐಡಿಯಾವನ್ನು ಒಂದು ಸುಂದರ ಚಿತ್ರವಾಗಿ ರೂಪಿಸಿದ್ದಾರೆ” ಎಂದರು.

ಹೊಸ ನವೀಕರಿಸಿದ ಪ್ಯಾಕ್ ಗಳು ಈಗ ರಾಷ್ಟ್ರೀಯವಾಗಿ ರೀಟೇಲ್ ಮಳಿಗೆಗಳು, ಆನ್ಲೈನ್ ಮತ್ತು ನಿಮ್ಮ ಹತ್ತಿರದ ಮಳಿಗೆಗಳಲ್ಲಿ ಲಭ್ಯ

RELATED ARTICLES
- Advertisment -
Google search engine

Most Popular

Recent Comments