ಒಳನಾಡು ಜಲಮಾರ್ಗಗಳ ಅಭಿವೃದ್ಧಿಗೆ ರೂ. 5,200 ಕೋಟಿಗೂ ಅಧಿಕ ಹೂಡಿಕೆ: ಸರ್ಬಾನಂದ ಸೋನೋವಾಲ್

0
26

ಬೆಂಗಳೂರು: ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ, 2023 (ಜಿಎಂಐಎಸ್)ರ ರೋಡ್‍ಶೋವನ್ನು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಆಗಸ್ಟ್ 31 ರಂದು ಗುವಾಹಟಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಜಿಎಂಐಎಸ್ 2023 ರ ಪಾತ್ರವನ್ನು ಪ್ರತಿಪಾದಿಸಿದ ಸೋನೋವಾಲ್ ಅವರು ಒಳನಾಡಿನ ಜಲಮಾರ್ಗಗಳ ಪಾತ್ರವು ಪರ್ಯಾಯ ಸಾರಿಗೆ ವಿಧಾನವಾಗಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹೇಗೆ ವಿಕಸನಗೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೋನೊವಾಲ್ ಅವರು, “ಒಳನಾಡಿನ ಜಲಮಾರ್ಗಗಳು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಶಕ್ತಿ ತುಂಬುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಒಳನಾಡು ಜಲಮಾರ್ಗ ಕ್ಷೇತ್ರವು ಸರ್ಕಾರದಂತೆ ಮಹತ್ತರವಾದ ಉತ್ತೇಜನವನ್ನು ಪಡೆದುಕೊಂಡಿದೆ. 2014 ರಿಂದ ರೂ. 5200 ಕೋಟಿ ಹೂಡಿಕೆ ಮಾಡಿದೆ. ಇದು ಹಿಂದಿನ 28 ವರ್ಷಗಳಲ್ಲಿ ಮಾಡಿದ ಹೂಡಿಕೆಗಿಂತ 9 ವರ್ಷಗಳ ಅವಧಿಯಲ್ಲಿ ಸರ್ಕಾರ ಮಾಡಿದ ಹೂಡಿಕೆಯ ಮೊತ್ತದಲ್ಲಿ 200% ಕ್ಕಿಂತ ಹೆಚ್ಚು ಗಮನಾರ್ಹ ಏರಿಕೆಯಾಗಿದೆ. ಮೋದಿ ಸರ್ಕಾರದ ಅಡಿಯಲ್ಲಿ ಒಳನಾಡು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ಅತ್ಯಂತ ಮಹತ್ವದ ಯೋಜನೆ ಎನಿಸಿದೆ. ಭಾರತದ ಒಳನಾಡಿನ ಆರ್ಥಿಕ ಸಾಮಥ್ರ್ಯವನ್ನು ಅನಾವರಣ ಮಾಡುವಲ್ಲಿ ಈ ಶುದ್ಧ, ಪರಿಣಾಮಕಾರಿ ಮತ್ತು ಆರ್ಥಿಕ ಸಾರಿಗೆ ವಿಧಾನವು ಪ್ರಮುಖವಾಗಿರುತ್ತದೆ. ಒಳನಾಡಿನ ಜಲಮಾರ್ಗಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ನಮ್ಮ ಶ್ರೀಮಂತ ಮತ್ತು ಸಂಕೀರ್ಣ ಜಲಮಾರ್ಗ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಮೂಲಕ, ನಾವು ಉದ್ಯಮಕ್ಕಾಗಿ ಸಹಕಾರಿ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ, ಅದು ನಮ್ಮ ನೆರೆಯ ದೇಶಗಳ ನಡುವೆ ಹೆಚ್ಚಿನ ಸಹಕಾರವನ್ನು ಉತ್ತೇಜಿಸುತ್ತದೆ. ಇದು ದಕ್ಷಿಣ ಏಷ್ಯಾ ಪ್ರದೇಶದ ಎಲ್ಲಾ ದೇಶಗಳು ಮತ್ತು ಭಾರತದ ರಾಜ್ಯಗಳಿಗೆ ಬೃಹತ್ ವ್ಯಾಪಾರ ಮತ್ತು ವಾಣಿಜ್ಯ ಸಾಮಥ್ರ್ಯವನ್ನು ಅನಾವರಣ ಮಾಡಲಿದೆ” ಎಂದು ಬಣ್ಣಿಸಿದರು.

ಗಮನಾರ್ಹ ಯೋಜನೆಗಳಲ್ಲಿ ಜಲಮಾರ್ಗ್ ವಿಕಾಸ್ ಮತ್ತು ಅರ್ಥ ಗಂಗಾ ಯೋಜನೆಗಳು ರೂ. 4,634 ಕೋಟಿಗಳ ದೊಡ್ಡ ಅಂದಾಜು ವೆಚ್ಚದ ಯೋಜನೆ ಬಜೆಟ್‍ನಿಂದ ಬೆಂಬಲಿತವಾಗಿದೆ. ಇದಲ್ಲದೆ, ಬ್ರಹ್ಮಪುತ್ರ ನದಿ (ಎನ್‍ಡಬ್ಲ್ಯು-2) 2020-21 ರಲ್ಲಿ ಅದರ ಅಭಿವೃದ್ಧಿಗಾಗಿ ರೂ. 474 ಕೋಟಿಗಳ ಅನುದಾನ ಪಡೆದಿದೆ. ಪಾಂಡುವಿನಲ್ಲಿ ಹಡಗು ದುರಸ್ತಿ ಸೌಲಭ್ಯಕ್ಕಾಗಿ ಗಮನಾರ್ಹ ಹಂಚಿಕೆಗಳು ರೂ. 208 ಕೋಟಿಗಳಿಗೆ ವಿಸ್ತರಿಸಿವೆ. ಈ ನಿಧಿಯು ಹೊಸ ರಾಷ್ಟ್ರೀಯ ಜಲಮಾರ್ಗಗಳಾದ ಬರಾಕ್ ನದಿ (ಎನ್‍ಡಬ್ಲ್ಯು-16) ಮತ್ತು ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗವನ್ನು ರೂ. 148 ಕೋಟಿಗಳಲ್ಲಿ ಅಭಿವೃದ್ಧಿಪಡಿಸಲು ವಿಸ್ತರಿಸುತ್ತದೆ ಮತ್ತು ಎನ್‍ಡಬ್ಲ್ಯು-3, ಎನ್‍ಡಬ್ಲ್ಯು-4, ಎನ್‍ಡಬ್ಲ್ಯು-5 ಗಾಗಿ ಮತ್ತು 13 ಇತರ ಹೊಸ ರಾಷ್ಟ್ರೀಯ ಜಲಮಾರ್ಗಗಳಿಗಾಗಿ ಒಟ್ಟು ರೂ. 267 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಈ ಹೆಚ್ಚಿದ ನಿಧಿಯು ರಾಷ್ಟ್ರೀಯ ಜಲಮಾರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಹೊಸ ಉಪಕ್ರಮಗಳ ಗುಚ್ಛವನ್ನು ವೇಗಗೊಳಿಸಿದೆ ಎಂದು ಹೇಳಿದರು.
ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ, 2023 ರ ಮುಖ್ಯಕಾರ್ಯಕ್ರಮದ ಭಾಗವಾಗಿ ಸಚಿವಾಲಯವು ಆಯೋಜಿಸುತ್ತಿರುವ ರೋಡ್‍ಶೋಗಳ ಸರಣಿಯ ಮುಂದಿನ ಮುಖ್ಯಕಾರ್ಯಕ್ರಮವು 2023ರ ಅಕ್ಟೋಬರ್ 17-19 ರ ನಡುವೆದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಈ ಹಿಂದೆ ಕೋಲ್ಕತ್ತಾ, ಮಂಗಳೂರು, ವಿಶಾಖಪಟ್ಟಣಂ ಮತು ್ತಗೋವಾದಲ್ಲಿ ಇದೇರೀತಿಯ ರೋಡ್‍ಶೋಗಳನ್ನು ಆಯೋಜಿಸಲಾಗಿತ್ತು. ಗುವಾಹಟಿಯ ನಂತರ, ಚೆನ್ನೈ, ಭುವನೇಶ್ವರ, ವಾರಣಾಸಿ, ಕೊಚ್ಚಿ, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ರೋಡ್ ಶೋಗಳನ್ನು ಆಯೋಜಿಸಲಾಗುವುದು.