Wednesday, November 29, 2023
Homeದೇಶಕಾಡ್ಗಿಚ್ಚು ಸಮಸ್ಯೆ: ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಪ್ರತಿಕ್ರಿಯೆ ಸಂಗ್ರಹಣೆ

ಕಾಡ್ಗಿಚ್ಚು ಸಮಸ್ಯೆ: ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಪ್ರತಿಕ್ರಿಯೆ ಸಂಗ್ರಹಣೆ

ಕಳೆದ ಕೆಲವು ದಶಕಗಳಿಂದ ಕಾಡ್ಗಿಚ್ಚು ಅಥವಾ ಅರಣ್ಯ ಬೆಂಕಿ ವ್ಯಾಪಕವಾಗತೊಡಗಿದೆ. ಕೆನಡಾದ ಬೋರಿಯಲ್ ಅರಣ್ಯ ಮತ್ತು ಬ್ರೆಜಿಲ್‌ನ ಅಮೆಜೋನ್ ಕಾಡಿನಂತಹ ವ್ಯಾಪಕ ಮಳೆ ಬೀಳುವ ಮತ್ತು ಇಂಗಾಲವನ್ನು ಹೆಚ್ಚಾಗಿ ಹೀರಿಕೊಳ್ಳುವ ಅರಣ್ಯ ಪ್ರದೇಶಗಳಿಗೆ ಗಮನಾರ್ಹ ಹಾನಿ ಉಂಟುಮಾಡುತ್ತಿದೆ. ಮಾರ್ಲಿಲ್ಯಾಂಡ್ ವಿಶ್ವವಿದ್ಯಾಲಯದ ಹೊಸ ಅಧ್ಯಯನವು 2001ಕ್ಕೆ ಹೋಲಿಸಿದರೆ ಈಗ ಕಾಡ್ಗಿಚ್ಚು ವರ್ಷಕ್ಕೆ 3 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮರಗಳ ನಷ್ಟ ಉಂಟುಮಾಡುತ್ತಿದೆ ಎಂಬುದನ್ನು ಪತ್ತೆ ಮಾಡಿದೆ. ಇದು ಕಳೆದ 20 ವರ್ಷಗಳಲ್ಲಿ ಆಗಿರುವ ಒಟ್ಟು ಮರಗಳ ನಷ್ಟದ ಕಾಲು ಭಾಗದಷ್ಟು ನಷ್ಟವಾಗಿದೆ. ಪದೇಪದೆ ಸಂಭವಿಸುವ ಕಾಡ್ಗಿಚ್ಚು, ಅದರ ಆವರ್ತನ, ತೀವ್ರತೆ ಮತ್ತು ಭೌಗೋಳಿಕ ಹರಡುವಿಕೆಯಲ್ಲಿನ ಈ ಆತಂಕಕಾರಿ ಹೆಚ್ಚಳವು ಪರಿಸರ ವ್ಯವಸ್ಥೆಗಳ ಮೇಲಿನ ಪ್ರಭಾವ ಮತ್ತು ಮಾನವ ಚಟುವಟಿಕೆಗಳ ಸಂಭಾವ್ಯ ಕಳವಳಕ್ಕೆ ಕಾರಣವಾಗಿದೆ.

ಹವಾಮಾನ ಬದಲಾವಣೆಯು ಕಾಡ್ಗಿಚ್ಚು ಉಲ್ಬಣಕ್ಕೆ ಕಾರಣವಾಗಿದೆ. ತೀವ್ರವಾದ ಶಾಖ(ಉಷ್ಣ)ದ ಅಲೆಗಳು 150 ವರ್ಷಗಳ ಹಿಂದಿಗಿಂತ 5 ಪಟ್ಟು ಹೆಚ್ಚಾಗಿವೆ. ಭೂದೃಶ್ಯಗಳ ಈ ನಿರ್ಜಲೀಕರಣವು ಭಾರಿ ಕಾಡ್ಗಿಚ್ಚಿಗೆ ಸೂಕ್ತ ವಾತಾವರಣ ಸೃಷ್ಟಿಸುತ್ತದೆ, ಇದರ ಪರಿಣಾಮವಾಗಿ ಇಂಗಾಲ ಹೊರಸೂಸುವಿಕೆ ಹೆಚ್ಚಾಗುತ್ತದೆ ಮತ್ತು ಹವಾಮಾನ ಬದಲಾವಣೆಯ ಪ್ರಭಾವವನ್ನು ತೀವ್ರಗೊಳಿಸುತ್ತದೆ. ಭೂದೃಶ್ಯಗಳ ನಿರ್ಜಲೀಕರಣವು ಹವಾಮಾನ ಬದಲಾವಣೆಯಿಂದ ಉಂಟಾಗುವ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ.

ಭಾರತದ ಕಥೆ
ಹೆಚ್ಚುತ್ತಿರುವ ಜಾಗತಿಕ ಕಾಡ್ಗಿಚ್ಚುಗಳಿಗೆ ಭಾರತವು ತನ್ನ ಅರಣ್ಯ ಬೆಂಕಿ ನಿಗಾ ವ್ಯವಸ್ಥೆ ಹೆಚ್ಚಿಸುವ ಮೂಲಕ ಪ್ರತಿಕ್ರಿಯೆ ನೀಡಿದೆ. ಭಾರತದ 25% ಕಾಡುಗಳು ಅರಣ್ಯ ಬೆಂಕಿಗೆ ಹೆಚ್ಚು ಗುರಿಯಾಗುತ್ತಿವೆ, ಕೇವಲ 3% ಮರಗಳ ನಷ್ಟವು ಕಾಡ್ಗಿಚ್ಚಿನಿಂದಲೇ ಉಂಟಾಗುತ್ತಿದೆ. ಭಾರತೀಯ ಅರಣ್ಯ ಸಮೀಕ್ಷೆಯು ವ್ಯಾನ್ ಅಗ್ನಿ ಜಿಯೋ-ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದು ನೈಜ ಸಮಯದಲ್ಲಿ ಕಾಡ್ಗಿಚ್ಚಿನ ನಿರಂತರ ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆ(ಟ್ರ್ಯಾಕಿಂಗ್‌) ಮಾಡಲು ಕಾಡಿನ ಬೆಂಕಿಗೆ ಸಂಬಂಧಿಸಿದ ದತ್ತಾಂಶದ ಬಳಕೆದಾರ ಸ್ನೇಹಿ ಸಂವಾದಾತ್ಮಕ ವೀಕ್ಷಣೆ ಒದಗಿಸುತ್ತದೆ. ಭಾರತದಲ್ಲಿನ ಕಾಡ್ಗಿಚ್ಚುಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಪೋರ್ಟಲ್ ಒನ್ ಪಾಯಿಂಟ್ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಕಾಡ್ಗಿಚ್ಚು ನಿರ್ವಹಣೆಯು ಶೀಘ್ರದಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ವ್ಯಾಪ್ತಿಯಲ್ಲಿರಲಿದ್ದು, ಕಾಡ್ಗಿಚ್ಚುಗಳ ಸಮರ್ಥ ನೈಜ-ಸಮಯದ ನಿರ್ವಹಣೆಯನ್ನು ಖಚಿತಪಡಿಸುತ್ತದೆ.

ತಾಂತ್ರಿಕ ಮತ್ತು ನಿಯಂತ್ರಕ ಏಜೆನ್ಸಿಗಳ ಉನ್ನತೀಕರಣದ ಜತೆಗೆ ಅಧಿಕಾರಿಗಳು ಕಾಡ್ಗಿಚ್ಚು ನಿರ್ವಹಣೆ ತಂತ್ರಗಳನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಸಾಮೂಹಿಕ ಕ್ರಿಯೆಯ ಸಾಧನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ, ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಸೇರಿಸಿಕೊಳ್ಳಲು ಜಂಟಿ ಅರಣ್ಯ ನಿರ್ವಹಣೆ (JFM)ಯನ್ನು ಬಳಸಲಾಗುತ್ತದೆ. ಇದಕ್ಕಾಗಿ ಜೆಎಫ್ಎಂ ಸಮಿತಿಗಳನ್ನು ಸ್ಥಾಪಿಸಲಾಗಿದೆ – ರಕ್ಷಣೆ ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಹೆಚ್ಚಿಸಲು ದೇಶಾದ್ಯಂತ ಗ್ರಾಮ ಮಟ್ಟದಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ದೇಶಾದ್ಯಂತ 36,165 ಜೆಎಫ್ಎಂ ಸಮಿತಿಗಳಿವೆ, ಇವು 10.24 ದಶಲಕ್ಷ ಮಿಲಿಯನ್ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿವೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಭಾರತದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಮುದಾಯ-ಆಧಾರಿತ ಅಗ್ನಿಶಾಮಕ ನಿರ್ವಹಣೆ ಅಭ್ಯಾಸಗಳು ಜನಪ್ರಿಯತೆ ಗಳಿಸುತ್ತಿವೆ. ಈ ಅಭ್ಯಾಸಗಳು ಜಾಗೃತಿ ಕಾರ್ಯಕ್ರಮಗಳು, ಬೀದಿ ನಾಟಕಗಳು, ಮನೆ-ಮನೆ ಪ್ರಚಾರಗಳು, ಅಗ್ನಿಶಾಮಕ ನಿಯಂತ್ರಣ ಕೊಠಡಿಗಳು ಮತ್ತು ವಾಚ್ ಟವರ್‌ಗಳ ಮೂಲಕ ಸಮುದಾಯದ ಒಳಗೊಳ್ಳುವಿಕೆ ಮತ್ತು ಸಾಮರ್ಥ್ಯ ಹೆಚ್ಚಿಸುವುದನ್ನು ಒಳಗೊಂಡಿರುತ್ತದೆ. ಅರಣ್ಯ ಇಲಾಖೆಗೆ ಒಂದೇ ವರ್ಷದೊಳಗೆ ಬರುವ ಅಲರ್ಟ್(ಎಚ್ಚರಿಕೆ)ಗಳಲ್ಲಿ 5% ಕ್ಕಿಂತ ಕಡಿಮೆಯಾಗಿದೆ. ಜತೆಗೆ, ಕಾಡ್ಗಿಚ್ಚಿನಿಂದ ಸುಟ್ಟ ಪ್ರದೇಶವು 58%ಗಿಂತ ಕಡಿಮೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಮಣ್ಣಿನ-ಸುರಕ್ಷಿತ ಕೊಳೆತ ತೋಟಗಳನ್ನು ತೆಗೆಯುವ ಅಭ್ಯಾಸಗಳು ಮತ್ತು ತೋಟದ ಜಾತಿಗಳು ಮತ್ತು ವಯಸ್ಕ ಮರಗಳನ್ನು ಸಮರ್ಥವಾಗಿ ಕಟ್ಟುವುದರೊಂದಿಗೆ ಕಾಡಿನ ಬೆಂಕಿಯಿಂದ ಪ್ರಭಾವಿತವಾದ ಪ್ರದೇಶಗಳ ಮರುಸ್ಥಾಪನೆಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇದು 12-18 ತಿಂಗಳೊಳಗೆ ಜೀವವೈವಿಧ್ಯ ಸಾಂದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿದೆ.

ಕಠಿಣ ಹವಾಮಾನ ಪರಿಸ್ಥಿತಿಗಳು ಮತ್ತು ಹವಾಮಾನ ಘಟನೆಗಳ ಬೆಳಕಿನಲ್ಲಿ ಭಾರತವು ಕಾಡ್ಗಿಚ್ಚು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ತಯಾರಿ ನಡೆಸುತ್ತಿದೆ. ಭಾರತದ ಸಾಂಪ್ರದಾಯಿಕ ಕಾಡ್ಗಿಚ್ಚು ನಿಯಂತ್ರಣ ಮತ್ತು ಅದರ ಪರಿಣಾಮಕಾರಿತ್ವವನ್ನು ಗೌರವಿಸುವ ಜತೆಗೆ, ಭಾರತವು ನಿರಂತರವಾಗಿ ತನ್ನ ಸಾಂಪ್ರದಾಯಿಕ ಪರಿಣತಿಯನ್ನು ಉತ್ತೇಜಿಸುತ್ತಿದೆ ಮತ್ತು ಅಳವಡಿಸಿಕೊಳ್ಳುತ್ತಿದೆ, ಇದರಿಂದಾಗಿ ಅರಣ್ಯ ಬೆಂಕಿ ಮತ್ತು ನಷ್ಟಗಳು ಕಡಿಮೆಯಾಗುತ್ತವೆ. ಭಾರತವು ಸಮುದಾಯ-ಆಧಾರಿತ ಅರಣ್ಯ ಬೆಂಕಿ ನಿರ್ವಹಣೆಯನ್ನು ಪ್ರೋತ್ಸಾಹಿಸುತ್ತಿದೆ, ಸಾಧ್ಯವಾದಷ್ಟು ಬೇಗ ಕಾಡಿನ ಬೆಂಕಿಗೆ ಪ್ರತಿಕ್ರಿಯಿಸಲು ಸ್ಥಳೀಯ ಸಮುದಾಯದ ಶಕ್ತಿಯನ್ನು ಅವಲಂಬಿಸಿದೆ. ಅಗ್ನಿಶಾಮಕ ಎಚ್ಚರಿಕೆ ವ್ಯವಸ್ಥೆ, ಜಿಪಿಎಸ್ ಪತ್ತೆ ಆಧರಿತ ಅರಣ್ಯ ಬೆಂಕಿ ನಿರ್ವಹಣೆ ಮತ್ತು ಮರುಸ್ಥಾಪನೆ ಇತ್ಯಾದಿ ಆಧುನಿಕ ತಂತ್ರಜ್ಞಾನದ ಸೇರ್ಪಡೆ, ತಡೆಗಟ್ಟುವ ಕ್ರಮಗಳನ್ನು ನಿರ್ವಹಿಸುವಲ್ಲಿ ಕ್ಷೇತ್ರ ವ್ಯವಸ್ಥಾಪಕರಿಗೆ ಸಹಾಯ ಮಾಡಲು ಅಗ್ನಿಶಾಮಕ ನಿರ್ವಹಣೆಯ ನಂತರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ಮುಂದಿನ ಘಟನೆಗಳು ಮತ್ತು ಸಂಬಂಧಿತ ನಷ್ಟಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಜಿ-20ರ ಪ್ರಾಮುಖ್ಯತೆ
ಹವಾಮಾನ ಬದಲಾವಣೆಯ ಮೇಲೆ ಕಾಡ್ಗಿಚ್ಚು ಆಧಾರಿತ ಪರಿಣಾಮದ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಜಿ-20 ಜಾಗತಿಕ ಭೂಮಿ ಉಪಕ್ರಮ ಬಲಪಡಿಸಲು ಈ ವರ್ಷ ಜಿ-20 ಶೃಂಗಸಭೆಯಲ್ಲಿ ಭಾರತದ ಅಧ್ಯಕ್ಷತೆಯು ‘ಗಾಂಧಿನಗರ ಅನುಷ್ಠಾನ ಮಾರ್ಗಸೂಚಿ (GIR) ಮತ್ತು ಗಾಂಧಿನಗರ ಮಾಹಿತಿ ವೇದಿಕೆ (GIP) ಪ್ರಾರಂಭಿಸಿದೆ. ಅರಣ್ಯದ ಬೆಂಕಿಗಾಹುತಿ ಪ್ರದೇಶಗಳು ಮತ್ತು ಗಣಿಗಾರಿಕೆ-ಬಾಧಿತ ಪ್ರದೇಶಗಳ ಪರಿಸರ ಮತ್ತು ಹವಾಮಾನ ವ್ಯವಸ್ಥೆಯ ಮರುಸ್ಥಾಪನೆಯನ್ನು ವೇಗಗೊಳಿಸಲು ಭಾಗವಹಿಸುವ ದೇಶಗಳ ನಡುವೆ ಪರಸ್ಪರ ಸಹಯೋಗ ಹೆಚ್ಚಿಸುವ ಗುರಿಯುಳ್ಳ ಮಾರ್ಗಸೂಚಿ ಹೊಂದಿದೆ.
ಇದು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಆರಂಭಿಸಿದ ವಿಶಿಷ್ಟ ಪ್ರಯತ್ನವಾಗಿದೆ. ಜಿ-20 ಸದಸ್ಯ ರಾಷ್ಟ್ರಗಳು ಹವಾಮಾನ ಬಿಕ್ಕಟ್ಟುಗಳನ್ನು ಪರಿಹರಿಸಲು ದೊಡ್ಡ ಪ್ರಮಾಣದ ಸಾಮೂಹಿಕ ಕ್ರಿಯೆಯ ಪ್ರಯತ್ನಗಳನ್ನು ಕೈಗೊಳ್ಳಬೇಕು, ಸಮರ್ಥನೀಯತೆಯ ಪರಿವರ್ತನೆಯ ಸಾಧ್ಯತೆ ಮಾಡಲು ಜಾಗತಿಕ ಭೂದೃಶ್ಯವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬೇಕು ಎಂಬ ಸಹಜ ತಿಳುವಳಿಕೆ ಹೊಂದಿದ್ದಾರೆ. GIP-GIR ಉಪಕ್ರಮದ ಕಡ್ಡಾಯ ಸ್ವರೂಪವೆಂದರೆ, ಇದು ಸಮುದಾಯದ ಒಳಗೊಳ್ಳುವಿಕೆ ಮತ್ತು ಸ್ಥಳೀಯ ಜ್ಞಾನ ಹಂಚಿಕೆ ಮತ್ತು ತಂತ್ರಗಳೊಂದಿಗೆ ಸುಸ್ಥಿರ ಅರಣ್ಯ ಅಭ್ಯಾಸಗಳ ಸಕ್ರಿಯ ಅನುಷ್ಠಾನವನ್ನು ಕಾರ್ಯತಂತ್ರವಾಗಿ ನೋಡುತ್ತದೆ. ಇದು ವಿವಿಧ ದೇಶಗಳ ನಡುವೆ ಸುಸ್ಥಿರತೆ ಆಧಾರಿತ ಸಹಕಾರ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ನಿರ್ಣಾಯಕ ಮರುಸ್ಥಾಪನೆ-ಆಧಾರಿತ ಚಟುವಟಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುವ ಜ್ಞಾನದ ನಿರ್ಣಾಯಕ ಹರಿವು ಸುಧಾರಿಸಲು ಸಹಾಯ ಮಾಡುತ್ತದೆ.

RELATED ARTICLES
- Advertisment -
Google search engine

Most Popular

Recent Comments