ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಕುರುಬರಹಳ್ಳಿಯ ಜಯದುರ್ಗ ಕಲ್ಯಾಣ ಮಂಟಪ ದಲ್ಲೀ ಇಂದು ಎಚ್ ಎಂ ಪ್ರಸನ್ನ ಫೌಂಡೇಶನ್ ಹಾಗೂ ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಗ್ರೂಪ್ ( ರಿ ) ಸಂಯುಕ್ತಾಶ್ರಯದಲ್ಲಿ ನಗರದ ಟ್ಯಾಕ್ಷಿ ಹಾಗೂ ಆಟೋ ಚಾಲಕರಿಗೆ ಹಾಗೂ ಅವರ ಕುಟುಂಬಕ್ಕೆ ಉಚಿತ ಬೃಹತ್ ಆರೋಗ್ಯ ಶಿಬಿರ ಮತ್ತು ಉಚಿತ ಸಂಪೂರ್ಣ ದೇಹ ಪರೀಕ್ಷೆ ಯನ್ನು ಏರ್ಪಡಿಸಲಾಗಿತ್ತು. ಈ ಶಿಬಿರವನ್ನು ನಗರದ ಪ್ರತಿಷ್ಠಿತ ಆಸ್ಪತ್ರೆ ಯಾದ ಪ್ರಿಸ್ಟಿನ್ ಆಸ್ಪತ್ರೆಯ ಖ್ಯಾತ ವೈದ್ಯ
ವೈದ್ಯರಾದ ಎಚ್ ಎಮ್ ಪ್ರಸನ್ನ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎನ್ ಜಯರಾಂ ಅವರು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಗ್ರೂಪ್ ( ರಿ ) ಅಧ್ಯಕ್ಷರಾದ ಜಯಣ್ಣ, ಸ್ಥಳೀಯ ಬಿಜೆಪಿ ಮುಖಂಡರುಗಳಾದ ಶಿವಾನಂದ್ ಮೂರ್ತಿ, ಹೇಮಂತ್ ಕುಮಾರ್, ಕಲ್ಲೇಶಪ್ಪ ಡಾ, ಬಾಲಕೃಷ್ಣ ರಾಮಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಂತರ ಮಾತನಾಡಿದ ವೈದ್ಯ ಪ್ರಸನ್ನ ಅವರು ಜೀವನದಲ್ಲಿ ಸಮಾಜಕ್ಕೆ ಏನಾದ್ರೂ ಒಂದು ಕೊಡುಗೆ ಹಾಗೂ ಸೇವೆ ನೀಡಬೇಕು ಅನ್ನುವುದು ನಮ್ಮ ಅಚಲವಾದ ನಂಬಿಕೆ ಹೀಗಾಗಿ ನಮ್ಮ ಸಂಪಾದನೆಯಲ್ಲಿ ಒಂದಿಷ್ಟು ಜನಸೇವೆಗೆ ವಿನಿಯೋಗಿಸುತ್ತೇನೆ ಎಂದು ಪ್ರಸನ್ನ ಅವರು ಈ ಶಿಬಿರದಲ್ಲಿ ಬಿಪಿ ಶುಗರ್, ಇಸಿಜಿ, ಥೈರಾಯ್ಡ್, ಆರ್ಥೋ ಸೇರಿದಂತೆ ಸಂಪೂರ್ಣ ದೇಹ ಪರೀಕ್ಷೆ ಯನ್ನೂ ಉಚಿತವಾಗಿ ಮಾಡಿ ಉಚಿತವಾಗಿ ಔಷಧ ನೀಡಲಾಗುವುದು ಎಂದು ವೈದ್ಯರಾದ ಡಾ, ಎಚ್ ಎಂ ಪ್ರಸನ್ನ ತಿಳಿಸಿದರು