Monday, September 25, 2023
Homeದೇಶಮೊಟೊರೊಲಾದಿಂದ moto e13, 8GB RAM & 128GB ಸ್ಟೊರೇಜ್ ಬಿಡುಗಡೆ

ಮೊಟೊರೊಲಾದಿಂದ moto e13, 8GB RAM & 128GB ಸ್ಟೊರೇಜ್ ಬಿಡುಗಡೆ

ಮೊಟೊರೊಲಾದಿಂದ moto e13, 8GB RAM & 128GB ಸ್ಟೊರೇಜ್ ಬಿಡುಗಡೆ ಮಾಡಿದ್ದು, ಕೇವಲ ರೂ. 8999 ರಲ್ಲಿ ಭಾರತದ ಅತ್ಯಂತ ಕೈಗೆಟಕುವ ಸ್ಮಾರ್ಟ್ಫೋನ್ ಆಗಿದೆ.

ಮಂಗಳೂರು: ಭಾರತದ ಪ್ರಮುಖ ಸ್ಮಾರ್ಟ್ಫೋನ್ ಬ್ರಾ÷್ಯಂಡ್ ಮೊಟೊರೊಲಾ ಅತ್ಯಂತ ನಿರೀಕ್ಷಿತ ಇ ಇಸರೀಸ್ ಸ್ಮಾರ್ಟ್ಫೋನ್ moto e13 ಬಿಡುಗಡೆಯನ್ನು ಘೋಷಿಸಿದ್ದು, ಆಕರ್ಷಕ 8GB RAM ಮತ್ತು 128GB ಸ್ಟೊರೇಜ್ ಅನ್ನು ಹೊಂದಿದೆ. ಇ ಸಿರೀಸ್ ಕುಟುಂಬಕ್ಕೆ ಇದು ಹೊಸ ಸೇರ್ಪಡೆಯಾಗಿದ್ದು, ತನ್ನ ಅದ್ಭುತ ಕಾರ್ಯಕ್ಷಮತೆ, ಅಮೋಘ ವಿನ್ಯಾಸ ಮತ್ತು ಹೋಲಿಕೆ ಇಲ್ಲದ ಬೆಲೆ ರೂ. 8999 ರಲ್ಲಿ ಕ್ರಾಂತಿಯನ್ನೇ ಮಾಡಿದೆ.

moto e13 ಪರಿಣಿತಿಯ ದ್ಯೋತಕವಾಗಿದ್ದು, ಅದ್ಭುತ ತಂತ್ರಜ್ಞಾನ ಮತ್ತು ಸರಾಗ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. UNISOC T606 ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿರುವ ಈ ಆಲ್ ಇನ್ ಒನ್ ಸ್ಮಾರ್ಟ್ಫೋನ್ ಅತ್ಯಂತ “ಕ್ಷಿಪ್ರ” ಅನುಭವವನ್ನು ನೀಡುತ್ತದೆ. ಇದು 8GB RAM ಮತ್ತು 128GB ಸ್ಟೊರೇಜ್ ಅನ್ನು ಹೊಂದಿದ್ದು, ಸುಲಭವಾಗಿ ಬಳಕೆದಾರರು ಮಲ್ಟಿಟಾಸ್ಕ್ ಮಾಡಬಹುದು, ಗ್ರಾಫಿಕ್ ಇಂಟೆನ್ಸಿವ್ ಆಪ್‌ಗಳನ್ನು ಬಳಸಬಹುದು ಮತ್ತು ತಮ್ಮ ಎಲ್ಲ ಮೆಚ್ಚಿನ ಕಂಟೆAಟ್ ಅನ್ನು ಯಾವುದೇ ಅಡ್ಡಿ ಇಲ್ಲದೇ ಸಂಗ್ರಹಿಸಬಹುದು.

ಮೆಚ್ಚಿಸುವುದಕ್ಕಾಗಿ ವಿನ್ಯಾಸ ಮಾಡಿರುವ moto e13 ಎಲ್ಲ ವಿಭಾಗದಲ್ಲಿ ಅದ್ಭುತವಾಗಿದೆ. ಇದು 179.5 ಗ್ರಾಂ ತೂಕ ಹೊಂದಿದೆ ಮತ್ತು ಅಲ್ಟಾç ಥಿನ್ 8.47 mm ಪ್ರೊಫೈಲ್ ಅನ್ನು ಹೊಂದಿದೆ. ಇದು ತುಂಬಾ ತೆಳ್ಳಗಿದೆ ಮತ್ತು ಸ್ಟೆöಲಿಶ್ ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ನಿಮ್ಮ ಜೀವನ ಶೈಲಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ, ಇದರ ಪ್ರೀಮಿಯಂ ಅಕ್ರಿಲಿಕ್ ಗ್ಲಾಸ್ (PMMA) ಬಾಡಿಯು ನೀವು ಎಲ್ಲೇ ಹೋದರೂ ವಿಶಿಷ್ಟವಾಗಿ ಎದ್ದು ಕಾಣುತ್ತದೆ.

ಆಕರ್ಷಕ 6.5” ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್ಫೋನ್ ಮೂಲಕ ಅದ್ಭುತ ಆಡಿಯೋ ವಿಶುವಲ್ ಪಯಣವನ್ನು ನಡೆಸಿ. ಇದು ಅದ್ಭುತ ದೃಶ್ಯ ಅನುಭವನವುö್ನ ನೀಡುತ್ತದೆ. ಅದ್ಭುತ ಡಿಸ್‌ಪ್ಲೇ ಜೊತೆಗೆ ಡಾಲ್ಬಿ ಆಟ್ಮೋಸ್ ಆಡಿಯೋ ಕೂಡ ಇದೆ. ಇದು ನಿಮ್ಮ ಮೆಚ್ಚಿನ ಹಾಡುಗಳಿಗೆ ಡೀಪ್ ಬಾಸ್, ಕ್ರಿಸ್ಟಲ್ ಕ್ಲಿಯರ್ ಸ್ಪಷ್ಟತೆ ಮತ್ತು ಸುಧಾರಿತ ಡೀಟೇಲ್ಸ್ ಅನ್ನು ನೀಡುತ್ತದೆ. ಜೊತೆಗೆ, ಅದ್ಭುತ 5000 ಎಂಎಎಚ್ ಬ್ಯಾಟರಿ ಇದ್ದು, ಹಲವು ದಿನಗಳವರೆಗೆ ಕಂಟೆಟ್ ಅನ್ನು ನೀವು ಆನಂದಿಸಬಹುದು.

moto e13 ಅನುಕೂಲಕ್ಕೆ ಹೊಸ ವ್ಯಾಖ್ಯಾನ ನೀಡುತ್ತದೆ. ಅದ್ಭುತ ವಿನ್ಯಾಸ ಮತ್ತು ಅನುಕೂಲವನ್ನು ಒದಗಿಸುವುದಕ್ಕಾಗಿ ಒಂದು ಕೈಯಲ್ಲಿ ಬಳಕೆ ಮಾಡಲು ಅನುವು ಮಾಡಿದೆ. ಸೆಗ್ಮೆಂಟ್‌ನಲ್ಲೇ ಮೊದಲ ಐಪಿ52 ವಾಟರ್ ರಿಪೆಲ್ಲೆಂಟ್ ವಿನ್ಯಾಸವನ್ನು ಇದು ಹೊಂದಿದ್ದು, ನೀವು ಪ್ರಯಾಣಿಸುತ್ತಿರುವಾಗ ನೀರು ಚೆಲ್ಲಿದರೆ ಚಿಂತೆ ಮಾಡುವ ಅಗತ್ಯವಿಲ್ಲ.

ಅಷ್ಟೇ ಅಲ್ಲ, moto e13 ಜಗತ್ತಿನ ಜೊತೆಗೆ ನೀವು ನಿರಂತರವಾಗಿ ಸಂಪರ್ಕ ಸಾಧಿಸುತ್ತೀರಿ ಎಂದು ಖಚಿತಪಡಿಸುತ್ತದೆ. ಡ್ಯೂಯೆಲ್ ಬ್ಯಾಂಡ್ ವೈಫೈ (5GHz ಮತ್ತು 2.4GHz) ಬೆಂಬಲ, ಅನುಕೂಲಕರ ಯುಎಸ್‌ಬಿ ಟೈಪ್ ಸಿ 2.0 ಕನೆಕ್ಟರ್ ಮತ್ತು ಬ್ಲೂಯಟೂತ್ 5.0 ವೈರ್‌ಲೆಸ್ ತಂತ್ರಜ್ಞಾನವನ್ನು ಇದು ಹೊಂದಿದ್ದು, ಸರಾಗ ಮತ್ತು ಲೈಟನಿಂಗ್ ಫಾಸ್ಟ್ ಕನೆಕ್ಟಿವಿಟಿಯನ್ನು ಅನುಭವಿಸಬಹುದಾಗಿದೆ.

12ಎಂಪಿ ಎಐ ಪವರ್ಡ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಿರಿ. ಆಟೋ ಸ್ಮೆಲ್ ಕ್ಯಾಪ್ಚರ್‌ನಂತ ಬುದ್ಧಿವಂತ ಫೀಚರ್‌ಗಳು ನಿಮ್ಮ ಮುಖದ ಮೇಲಿನ ನಗುವನ್ನು ಗ್ರಹಿಸುತ್ತದೆ ಮತ್ತು ಪರಿಪೂರ್ಣ ಚಿತ್ರವನ್ನು ಸೆರೆಹಿಡಿಯುತ್ತದೆ. ಇನ್ನು ಫೇಸ್ ಬ್ಯೂಟಿ ಮತ್ತು ಪೋಟ್ರೇðಟ್ ಮೋಡ್ ನಿಮ್ಮ ಫೋಟೋಗಳನ್ನು ಸ್ವಯಂಚಾಲಿತವಾಗಿ ವರ್ಧಿಸುತ್ತವೆ.

moto e13 ಬ್ಯಾಟರಿ ಬಾಳಿಕೆ ಅಥವಾ ಸ್ಕಿನ್ ಸ್ಥಳದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನಿಮ್ಮ ಜೇಬಿಗೆ ಹೊಂದುತ್ತದೆ. ಆಂಡ್ರಾಯ್ಡ್ 13 ಅನ್ನು ಹೊಂದಿರುವ ಇದು ಅದ್ಭುತ ಸಾಫ್ಟ್ವೇರ್ ಅನುಭವವನ್ನು ಒದಗಿಸುತ್ತದೆ ಮತ್ತು ಮೋಟೋ ಜೆಶ್ಚರ್‌ಗಳೂ ಇದರಲ್ಲಿವೆ. ಫ್ಲಾಶ್‌ಲೈಟ್‌ಗೆ ಚಾಪ್ ಚಾಪ್ ಮತ್ತು ಕ್ಯಾಮೆರಾಗೆ ಡಬಲ್ ಟ್ವಿಸ್ಟ್ ಸೌಲಭ್ಯವಿದೆ.

ಹೊಸ moto e13 8GB RAM ಮತ್ತು 128GB ವೇರಿಯಂಟ್ ಖರೀದಿ ಅದ್ಭುತ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ನಲ್ಲಿ ಮತ್ತು ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು Motorola.in ನಲ್ಲಿ ರೂ. 8999 ಗೆ ಲಭ್ಯವಿದೆ. ಈ ಹಿಂದೆ ಬಿಡುಗಡೆ ಮಾಡಿದ ವೇರಿಯಂಟ್ 2GB/ 4GB RAM, 64GB ಜೊತೆಗೆ ಸ್ಟೊರೇಜ್ ವೇರಿಯಂಟ್‌ನಲ್ಲೂ ಲಭ್ಯವಿದೆ.

RELATED ARTICLES
- Advertisment -
Google search engine

Most Popular

Recent Comments