ಸುಪ್ತ ಮತ್ತು ಗಮನಕ್ಕೆ ಬಾರದ ಭಾರತದ ಅದ್ಭುತ ವೈಜ್ಞಾನಿಕ ಸಾಮರ್ಥ್ಯ ಮತ್ತು ಪರಾಕ್ರಮದಿಂದ ಇಂದು ಜಗತ್ತು ದಿಗ್ಭ್ರಮೆಗೊಂಡಿದೆ. ಸೂಕ್ತ ಪರಿಸರ ಮತ್ತು ಸಕ್ರಿಯಗೊಳಿಸುವ ನಾಯಕತ್ವವನ್ನು ಒದಗಿಸಿದಾಗಲೆಲ್ಲಾ ಇಂತಹ ಬೆಳವಣಿಗೆಗೆ ಕಾರಣವಾಗುತ್ತದೆ.
ಚಾರಿತ್ರಿಕವಾದ ಆ ಸಮಯದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದರು ಮತ್ತು ಉಳಿದದ್ದು ಇತಿಹಾಸ. ಮೊದಲ ಬಾರಿಗೆ ಕೋವಿಡ್ ಲಸಿಕೆಯನ್ನು ಜಗತ್ತಿಗೆ ಉಡುಗೊರೆಯಾಗಿ ನೀಡಿರುವುದರಿಂದ ಹಿಡಿದು ಚಂದ್ರನ ಮೇಲ್ಮೈನಲ್ಲಿ ನೀರಿನ ಉಪಸ್ಥಿತಿಯ ಚಂದ್ರಯಾನ ಪುರಾವೆಗಳನ್ನು ಮನೆಗೆ ತರುವವರೆಗೆ…. ಭಾರತವನ್ನು ಸಾರ್ವತ್ರಿಕ ರಾಷ್ಟ್ರವಾಗಿ ಸ್ಥಾಪಿಸಿದ ಮೋದಿಯವರ ಗುರುತುಗಳನ್ನು ಪುರಾವೆ ಆಧಾರಿತವಾಗಿ ಲೆಕ್ಕಹಾಕಬಹುದು.
ಕಳೆದ 9 ವರ್ಷಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ [ಎಸ್.ಟಿ.ಐ] ವಲಯದಲ್ಲಿ ದಾಖಲೆ ಸಂಖ್ಯೆಯ ರಾಷ್ಟ್ರೀಯ ನೀತಿಗಳು ಹೊರ ಹೊಮ್ಮಿವೆ. ಕೆಲವು ಪ್ರಮುಖ ನೀತಿಗಳೆಂದರೆ, ಭಾರತೀಯ ಬಾಹ್ಯಾಕಾಶ ನೀತಿ (2023), ರಾಷ್ಟ್ರೀಯ ಭೌಗೋಳಿಕ ನೀತಿ (2022), ರಾಷ್ಟ್ರೀಯ ಶಿಕ್ಷಣ ನೀತಿ [ಎನ್.ಇ.ಪಿ] (2020), ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕುರಿತ ರಾಷ್ಟ್ರೀಯ ನೀತಿ (2019); ಬೋಧಕರು ಮತ್ತು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ನಾವೀನ್ಯತೆ ಮತ್ತು ನವೋದ್ಯಮ ನೀತಿ (2019); ರಾಷ್ಟ್ರೀಯ ಆರೋಗ್ಯ ನೀತಿ (2017); ಬೌದ್ಧಿಕ ಆಸ್ತಿ ಹಕ್ಕು ನೀತಿ (2016) ಹಾಗೂ ಇನ್ನಿತರೆ ನೀತಿಗಳು ಸೇರಿವೆ.
ಇದೇ ಸಂದರ್ಭದಲ್ಲಿ ಸರ್ಕಾರ ರಾಷ್ಟ್ರೀಯ ಕ್ವಾಂಟಮ್ ಮಿಷನ್ (2023), ಒಂದು ಆರೋಗ್ಯ ಅಭಿಯಾನ (2023), ರಾಷ್ಟ್ರೀಯ ಆಳ ಸಮುದ್ರ ಅಭಿಯಾನ (2021) ಇನ್ನಿತರೆ ಅಭಿಯಾನಗಳು ಸಹ ಒಳಗೊಂಡಿವೆ.
ಎಸ್.ಇ.ಆರ್.ಬಿ ದತ್ತಾಂಶದ ಪ್ರಕಾರ ಸರಾಸರಿ 10 ವರ್ಷಗಳಲ್ಲಿ ಸುಮಾರು 65% ರಷ್ಟು ಸಂಶೋಧನಾ ನಿಧಿಯನ್ನು ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳಾದ ಐಐಎಸ್ ಸಿ, ಐಐಟಿಗಳು, ಐಐಎಸ್ ಇಆರ್ ಗಳು ಒಳಗೊಂಡ ಇತರ ಸಂಸ್ಥೆಗಳಿಗೆ ನೀಡಲಾಗಿದೆ ಮತ್ತು ಕೇವಲ 11% ನಿಧಿ ರಾಜ್ಯ ವಿಶ್ವವಿದ್ಯಾಲಯಗಳಿಗೆ ಒದಗಿಸಲಾಗಿದ್ದು, ಇಲ್ಲಿ ಐಐಟಿಗಳಿಗಿಂತಲೂ ಅಧಿಕ ಸಂಖ್ಯೆಯ ಸಂಶೋಧಕರಿದ್ದಾರೆ. ಏಕೆಂದರೆ ಪ್ರಸ್ತುತ ಸಂಶೋಧನಾ ನಿಧಿಯ ವ್ಯವಸ್ಥೆಯು ಸ್ಪರ್ಧಾತ್ಮಕತೆಯನ್ನೊಳಗೊಂಡಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿಗೆ ಹೋಲಿಸಿದರೆ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಮೂಲ ಸೌಕರ್ಯ ಅತ್ಯಂತ ದುರ್ಬಲವಾಗಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ – ಉದ್ಯಮ ಪಾಲುದಾರಿಕೆ ಮತ್ತು ಅಂತರರಾಷ್ಟ್ರೀಯ ಸಹಯೋಗ ಅಸಮರ್ಪಕವಾಗಿದೆ.
ಇದೇ ದೃಷ್ಟಿಕೋನದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಜ ಪರಿವರ್ತನೆಯ ಅನುಶೋಧನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಇದು ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯಲ್ಲಿನ ದೀರ್ಘಕಾಲೀನ ಅತಿ ದೊಡ್ಡ ಸವಾಲುಗಳನ್ನಷ್ಟೇ ಬಗೆಹರಿಸುವುದಿಲ್ಲ, ದೀರ್ಘಾವಧಿಯಲ್ಲಿ ದೇಶದ ಆರ್ ಅಂಡ್ ಡಿ ದೃಷ್ಟಿಕೋನ ಮತ್ತು ಮುಂದಿನ 5 ವರ್ಷಗಳಲ್ಲಿ ಭಾರತ ಸಂಶೋಧನೆ ಮತ್ತು ಅಭಿವೃದ್ಧಿ ದೃಷ್ಟಿಕೋನದಲ್ಲಿ ನಾಯಕತ್ವ ವಹಿಸಿಕೊಳ್ಳುವ ಗುರಿ ಹೊಂದಿದೆ.
ಅನುಶೋಧನ್ ಎನ್.ಆರ್.ಎಫ್ [ಎ.ಎನ್.ಆರ್.ಎಫ್] ನೈಸರ್ಗಿಕ ವಿಜ್ಞಾನ, ಗಣಿತ ವಿಜ್ಞಾನ, ತಂತ್ರಜ್ಞಾನ, ತಾಂತ್ರಿಕತೆ, ಪರಿಸರ ಮತ್ತು ಭೂ ವಿಜ್ಞಾನ, ಆರೋಗ್ಯ, ಕೃಷಿ ವಲಯಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಉನ್ನತ ಮಟ್ಟದ ಕಾರ್ಯತಂತ್ರದ ನಿರ್ದೇಶನ ನೀಡಲಿದೆ. ಇದು ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವೈಜ್ಞಾನಿಕ ಮತ್ತು ತಾಂತ್ರಿಕ ಸಂಪರ್ಕ ಸಾಧನಗಳನ್ನು ಉತ್ತೇಜಿಸಲು, ಮೇಲ್ವಿಚಾರಣೆ ಮಾಡಲು, ಅಂತಹ ಸಂಶೋಧನೆಗಳಿಗೆ ಅಗತ್ಯವಿರುವ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಬೆಂಬಲ ನೀಡಲು ಪ್ರೋತ್ಸಾಹಿಸುತ್ತದೆ. ಎ.ಎನ್.ಆರ್.ಎಫ್ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೀಜ ಬಿತ್ತುವ ಜೊತೆಗೆ ಬೆಳವಣಿಗೆ ಮತ್ತು ಉತ್ತೇಜನ ನೀಡುತ್ತದೆ ಮತ್ತು ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಆರ್ ಅಂಡ್ ಡಿ ಪ್ರಯೋಗಾಲಯಗಳಲ್ಲಿ ಸಂಶೋಧನ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುತ್ತದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ [ಡಿಎಸ್ ಟಿ] ಎ.ಎನ್.ಆರ್.ಎಫ್ ನ ಆಡಳಿತ ವಿಭಾಗವಾಗಿದ್ದು, ಪ್ರಧಾನಮಂತ್ರಿಯವರು ಪದನಿಮಿತ್ತ ಆಡಳಿತ ಮಂಡಳಿ ಅಧ್ಯಕ್ಷರಾಗಿರುತ್ತಾರೆ. ಪ್ರಖ್ಯಾತ ಸಂಶೋಧಕರು, ವೃತ್ತಿಪರರನ್ನು ಒಳಗೊಂಡ ಆಡಳಿತ ಮಂಡಳಿಯಿಂದ ಆಡಳಿತ ನಡೆಸಲ್ಪಡುತ್ತದೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಮಂಡಳಿ ಕಾರ್ಯನಿರ್ವಹಿಸುತ್ತದೆ.
ಕೈಗಾರಿಕೆಗಳು, ಶಿಕ್ಷಣ ಮತ್ತು ಸರ್ಕಾರದ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಚಿವಾಲಯಗಳ ಜೊತೆಗೆ ವೈಜ್ಞಾನಿಕವಾಗಿ ರಾಜ್ಯ ಸರ್ಕಾರಗಳೊಂದಿಗೆ ಎ.ಎನ್.ಆರ್.ಎಫ್ ಅಂತರ್ಗತವಾಗಿ ಕಾರ್ಯನಿರ್ವಹಿಸುತ್ತದೆ. ಇದು ವೈಜ್ಞಾನಿಕ ಚೌಕಟ್ಟನ್ನು ರಚಿಸುವುದರ ಮೇಲೆ ಕೇಂದ್ರೀಕೃತವಾಗಿದ್ದು, ಆರ್ ಅಂಡ್ ಡಿ ಯಲ್ಲಿ ಉದ್ಯಮದ ಸಹಯೋಗ, ಹೆಚ್ಚಿನ ವೆಚ್ಚಗಳನ್ನು ನಿಯಂತ್ರಿಸುವ ಪ್ರಕ್ರಿಯೆಯಡಿ ಕಾರ್ಯನಿರ್ವಹಿಸುತ್ತದೆ.
ಎ.ಎನ್.ಆರ್.ಎಫ್ ಒಟ್ಟು 50,000 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಐದು ವರ್ಷಗಳ ಅವಧಿ (2023-28)ಯಲ್ಲಿ ಕಾರ್ಯನಿರ್ವಹಿಸಲಿದೆ. ಎ.ಎನ್.ಆರ್.ಎಫ್ ನ 50,000 ಕೋಟಿ ರೂಪಾಯಿ ಮೂರು ಘಟಕಗಳಿಗೆ ಹಂಚಿಕೆಯಾಗಿದೆ. ಎಸ್.ಇ.ಆರ್.ಬಿ ನಿಧಿ 4000 ಕೋಟಿ ರೂಪಾಯಿ, ಎ.ಎನ್.ಆರ್.ಎಫ್ ನಿಧಿ 10,000 ಕೋಟಿ ರೂಪಾಯಿ, ಇದರಲ್ಲಿ 10% ಹಣ (1000 ಕೋಟಿ ರೂಪಾಯಿ) ನಾವೀನ್ಯತೆಯ ನಿಧಿಯಾಗಿ ಮೀಸಲಿಡಲಾಗಿದೆ. ನಾವೀನ್ಯತೆಯ ನಿಧಿಯನ್ನು ಖಾಸಗಿ ಸಹಭಾಗಿತ್ವದಡಿ ಆರ್ ಅಂಡ್ ಡಿ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತದೆ ಮತ್ತು ಉಳಿದ 36,000 ಕೋಟಿ ರೂಪಾಯಿ ಮೊತ್ತವನ್ನು ಕೈಗಾರಿಕೆಗಳು, ಪರೋಪಕಾರಿಗಳು, ಸಂಘಟನೆಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಕೊಡುಗೆಯಾಗಿ ನೀಡಲಿವೆ.
ಕೇಂದ್ರ ಸರ್ಕಾರ ಎಸ್.ಇ.ಆರ್.ಬಿಗೆ ಪ್ರತಿ ವರ್ಷ 800 ಕೋಟಿ ರೂಪಾಯಿ ನಿಧಿಯನ್ನು ಪ್ರಸ್ತುತ ಒದಗಿಸುತ್ತಿದ್ದು, ಖಾಸಗಿ ವಲಯದಿಂದ ಯಾವುದೇ ಕೊಡುಗೆ ದೊರೆಯುತ್ತಿಲ್ಲ. ಎ.ಎನ್.ಆರ್.ಎಫ್ ಗೆ ಸರ್ಕಾರ ಪ್ರಸ್ತಾವಿತ 800 ಕೋಟಿ ರೂಪಾಯಿಯಿಂದ 2800 ಕೋಟಿ ರೂಪಾಯಿ (3.5 ಪಟ್ಟು)ಗೆ ಹೆಚ್ಚಿಸುತ್ತಿದೆ. ಎ.ಎನ್.ಆರ್.ಎಫ್ ಗೆ ಖಾಸಗಿ ವಲಯದಿಂದ ಮುಂದಿನ ಐದು ವರ್ಷಗಳಿಗೆ 36,000 ಕೋಟಿ ರೂಪಾಯಿ ( 7200 ಕೋಟಿ ರೂ ಪ್ರತಿವರ್ಷ) ದೊರೆಯಲಿದೆ.
ಎ.ಎನ್.ಆರ್.ಎಫ್ ಭಾರತ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವ ಹೊಂದಲು ಪರಮೋಚ್ಛ ಪರಿವರ್ತನಾ ಹೆಜ್ಜೆ ಇಟ್ಟಿದೆ ಮತ್ತು ಬರುವ ವರ್ಷಗಳಲ್ಲಿ ತಂತ್ರಜ್ಞಾನ ವಲಯದಲ್ಲಿ ಭಾರತ ಸ್ವಾವಲಂಬಿ ಸಾಧಿಸಲು ಸಹಕಾರಿಯಾಗಲಿದೆ.
[ ಲೇಖಕರು ರಾಜ್ಯ ಸಚಿವರು [ಸ್ವತಂತ್ರ್ಯ ಕಾರ್ಯಭಾರ], ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಧಾನಮಂತ್ರಿಯವರ ಕಾರ್ಯಾಲಯದ ರಾಜ್ಯ ಸಚಿವರು: ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ]
***