Thursday, November 30, 2023
Homeದೇಶಅಂತರ್ಗತ, ನಿರ್ಣಾಯಕ, ಮಹತ್ವಾಕಾಂಕ್ಷಿ ಮತ್ತು ಕಾರ್ಯ-ಆಧಾರಿತ ಆದ್ಯತೆಯ ಕ್ಷೇತ್ರಗಳಿಗೆ ಒತ್ತು: ಅಲ್ಕೇಶ್ ಕುಮಾರ್ ಶರ್ಮಾ

ಅಂತರ್ಗತ, ನಿರ್ಣಾಯಕ, ಮಹತ್ವಾಕಾಂಕ್ಷಿ ಮತ್ತು ಕಾರ್ಯ-ಆಧಾರಿತ ಆದ್ಯತೆಯ ಕ್ಷೇತ್ರಗಳಿಗೆ ಒತ್ತು: ಅಲ್ಕೇಶ್ ಕುಮಾರ್ ಶರ್ಮಾ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತ ಸರ್ಕಾರ

ಜಿ-20 ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪು (ಡಿಇಡಬ್ಲ್ಯುಜಿ) ಮೂರು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿದೆ, ಅವುಗಳೆಂದರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ ಮತ್ತು ಡಿಜಿಟಲ್ ಕೌಶಲ್ಯ ಮತ್ತು ಇದುವರೆಗೆ, ಈ ಆದ್ಯತೆಯ ಕ್ಷೇತ್ರಗಳಲ್ಲಿ ಒಮ್ಮತವನ್ನು ಮೂಡಿಸಲು ಕ್ರಮವಾಗಿ ಲಕ್ನೋ, ಹೈದರಾಬಾದ್ ಮತ್ತು ಪುಣೆಯಲ್ಲಿ ಸಭೆಗಳನ್ನು ನಡೆಸಿದೆ

ಜಿ-20 ಡಿಇಡಬ್ಲ್ಯುಜಿ ಯ ನಾಲ್ಕನೇ ಮತ್ತು ಅಂತಿಮ ಸಭೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು

ಜಿ-20 ಅಧ್ಯಕ್ಷ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಂತರ್ಗತ, ನಿರ್ಣಾಯಕ, ಮಹತ್ವಾಕಾಂಕ್ಷಿ ಮತ್ತು ಕಾರ್ಯ-ಆಧಾರಿತ ಆದ್ಯತೆಯ ಕ್ಷೇತ್ರಗಳಿಗೆ ಒತ್ತು ನೀಡಿದರು ಮತ್ತು ಜ್ಞಾನದ ಫಲಿತಾಂಶಗಳು ಜಾಗತಿಕ ಡಿಜಿಟಲ್ ಆರ್ಥಿಕತೆಗೆ ಗಣನೀಯವಾಗಿ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಜಿ-20 ಸದಸ್ಯರು, 9 ಆಹ್ವಾನಿತ ದೇಶಗಳು ಮತ್ತು 5 ಅಂತರರಾಷ್ಟ್ರೀಯ ಸಂಸ್ಥೆಗಳಾದ ಒಇಸಿಡಿ, ಐಟಿಯು, ಯುಎನ್ಡಿಪಿ, ವಿಶ್ವ ಬ್ಯಾಂಕ್ ಮತ್ತು ಯುನೆಸ್ಕೋ ದಿಂದ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಇಂದು ಸಭೆಯಲ್ಲಿ ಭಾಗವಹಿಸಿದ್ದರು.

ಡಿಜಿಟಲ್ ಆರ್ಥಿಕ ಸಚಿವರ ಸಭೆ (ಡಿಇಎಂಎಂ) 19 ಆಗಸ್ಟ್ 2023 ರಂದು ನಡೆಯಲಿದೆ

ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ (ಡಿಐಎ) ಶೃಂಗಸಭೆಯನ್ನು ಆಗಸ್ಟ್ 17-19, 2023 ರಂದು ಆಯೋಜಿಸಲಾಗಿದೆ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತವು ಡಿಸೆಂಬರ್ 1, 2022 ರಿಂದ ನವೆಂಬರ್ 30, 2023 ರವರೆಗೆ ಜಿ-20 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಭಾರತದ ಜಿ-20 ಅಧ್ಯಕ್ಷತೆಯ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜಿ-20 ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪನ್ನು (ಡಿಇಡಬ್ಲ್ಯುಜಿ) ಮುನ್ನಡೆಸುತ್ತಿದೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ ಮತ್ತು ಡಿಜಿಟಲ್ ಕೌಶಲ್ಯ ಎಂಬ ಮೂರು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿದೆ. ಕಳೆದ 8 ತಿಂಗಳುಗಳಲ್ಲಿ, ಜಿ-20 ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ನಡುವೆ ಆದ್ಯತೆಗಳು ಮತ್ತು ಪ್ರಮುಖ ಅಂಶಗಳನ್ನು ಕುರಿತು ವ್ಯಾಪಕವಾದ ಚರ್ಚೆಗಳನ್ನು ನಡೆಸಲಾಗಿದೆ.
ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪಿನ ಮೊದಲ, ಎರಡನೇ ಮತ್ತು ಮೂರನೇ ಸಭೆಗಳನ್ನು ಲಕ್ನೋ, ಹೈದರಾಬಾದ್ ಮತ್ತು ಪುಣೆಯಲ್ಲಿ ಕ್ರಮವಾಗಿ ಫೆಬ್ರವರಿ 2023, ಏಪ್ರಿಲ್ 2023 ಮತ್ತು ಜೂನ್ 2023 ರಲ್ಲಿ ಆಯೋಜಿಸಲಾಯಿತು. ಈ ಸಭೆಗಳ ಭಾಗವಾಗಿ, ಜಿ-20 ಮತ್ತು ಆಸಕ್ತ ದೇಶಗಳ ಭಾಷಣಕಾರರು ಮತ್ತು ಭಾಗವಹಿಸುವ ಜಾಗತಿಕ ಮತ್ತು ಭಾರತೀಯ ತಜ್ಞರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ಪ್ರಾಥಮಿಕವಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳುವುದರ ಮೇಲೆ ಮತ್ತು ರಾಷ್ಟ್ರೀಯ, ಕೈಗಾರಿಕಾ ಮತ್ತು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದರ ಮೇಲೆ ಮತ್ತು ಡಿಜಿಟಲ್ ಆರ್ಥಿಕತೆಯ ಆದ್ಯತೆಯ ಕ್ಷೇತ್ರಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುವುದರ ಮೇಲೆ ಕೇಂದ್ರೀಕರಿಸಿವೆ.


ಜಿ-20 ಡಿಇಡಬ್ಲ್ಯುಜಿ ರ ನಾಲ್ಕನೇ ಮತ್ತು ಅಂತಿಮ ಸಭೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಜಿ-20 ಡಿಇಡಬ್ಲ್ಯುಜಿ ರ ಸಹ-ಅಧ್ಯಕ್ಷ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸುಶೀಲ್ ಪಾಲ್ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಜಿ-20 ಡಿಇಡಬ್ಲ್ಯುಜಿ ರ ಅಧ್ಯಕ್ಷ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಂತರ್ಗತ, ನಿರ್ಣಾಯಕ, ಮಹತ್ವಾಕಾಂಕ್ಷಿ ಮತ್ತು ಕಾರ್ಯ-ಆಧಾರಿತ ಆದ್ಯತೆಯ ಕ್ಷೇತ್ರಗಳಿಗೆ ಒತ್ತು ನೀಡಿದರು. “ಜಿ-20 ಡಿಜಿಟಲ್ ಆರ್ಥಿಕತೆ ಸಚಿವರ ಘೋಷಣೆ” ಕರಡಿಗೆ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಳ್ಳುವಲ್ಲಿ ಕೊಡುಗೆ ನೀಡಿದ ಜಿ-20 ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ಜ್ಞಾನದ ಫಲಿತಾಂಶಗಳು ಜಾಗತಿಕ ಡಿಜಿಟಲ್ ಆರ್ಥಿಕತೆಗೆ ಗಣನೀಯವಾಗಿ ಸಹಾಯ ಮಾಡುತ್ತವೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು. ನಂತರ, ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕರಡು “ಜಿ-20 ಡಿಜಿಟಲ್ ಆರ್ಥಿಕ ಸಚಿವರ ಘೋಷಣೆ” ಕುರಿತು ವಿವರವಾದ ಚರ್ಚೆಗಳು ನಡೆದವು. ಡಿಇಡಬ್ಲ್ಯುಜಿ ಯಲ್ಲಿನ ಚರ್ಚೆಗಳು ನಾಳೆಯವರೆಗೆ ಅಂದರೆ ಆಗಸ್ಟ್ 17, 2023 ರವರೆಗೆ ಮುಂದುವರಿಯುತ್ತವೆ. ಆಗಸ್ಟ್ 19, 2023 ರಂದು ನಿಗದಿಪಡಿಸಲಾದ ಡಿಜಿಟಲ್ ಆರ್ಥಿಕ ಸಚಿವರ ಸಭೆಯಲ್ಲಿ (ಡಿಇಎಂಎಂ) ಪರಿಗಣನೆ ಮತ್ತು ಸ್ವೀಕಾರಕ್ಕಾಗಿ ಘೋಷಣೆಯನ್ನು ತೆಗೆದುಕೊಳ್ಳಲಾಗುತ್ತದೆ.


ಜಿ-20 ಸದಸ್ಯ ರಾಷ್ಟ್ರಗಳ 100 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳು ಮತ್ತು 5 ಅಂತರರಾಷ್ಟ್ರೀಯ ಸಂಸ್ಥೆಗಳಾದ ಒಇಸಿಡಿ, ಐಟಿಯು, ಯುಎನ್ಡಿಪಿ, ವಿಶ್ವ ಬ್ಯಾಂಕ್ ಮತ್ತು ಯುನೆಸ್ಕೋ ದಿಂದ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದರು ಮತ್ತು 200 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಆಗಸ್ಟ್ 19, 2023 ರೊಳಗೆ ಡಿಇಎಂಎಂ ಗೆ ಸೇರುವ ನಿರೀಕ್ಷೆಯಿದೆ.
ಅಲ್ಲದೆ, ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ (ಡಿಐಎ) ಶೃಂಗಸಭೆಯನ್ನು ಆಗಸ್ಟ್ 17-19, 2023 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುವುದು. ಶೃಂಗಸಭೆಯು ಸ್ಟಾರ್ಟಪ್ಗಳು, ಇನ್ಕ್ಯುಬೇಟರ್ಗಳು, ವೇಗವರ್ಧಕಗಳು, ಕಾರ್ಪೊರೇಟ್ಗಳು, ರಾಜ್ಯ ಸರ್ಕಾರಗಳು ಇತ್ಯಾದಿಗಳನ್ನು ಒಳಗೊಂಡ ರೋಮಾಂಚಕ ಪ್ರದರ್ಶನವನ್ನು ಹೊಂದಿರುತ್ತದೆ. 24 ದೇಶಗಳಿಂದ 110 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ.

RELATED ARTICLES
- Advertisment -
Google search engine

Most Popular

Recent Comments