ಬೆಂಗಳೂರು: 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಯೋಗದೊಂದಿಗೆ ಕಲಾ ಗ್ರಾಮ ಸಭಾಂಗಣದಲ್ಲಿ ನಡೆದ ನಾಟ್ಯಾಂಕುರ ಪರ್ಫಾಮಿಂಗ್ ಆರ್ಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಮತ್ತು ಶಿಷ್ಯರಿಂದ ‘ಭಾರತ ದರ್ಶನ’ ನೃತ್ಯ ರೂಪಕ ನಡೆಯಿತು.
ಈ ನೃತ್ಯ ರೂಪಕದಲ್ಲಿ ನಮ್ಮ ಭಾರತೀಯ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟಂ, ಕಥಕ್ಕಳ, ಒಡಿಸ್ಸಿ, ಕಥಕ್, ಮನಿಪುರಿ ಹಾಗು ಯಕ್ಷಗಾನ ಈ ಎಲ್ಲಾ ವೇಷಭೂಶಣಗಳೊಂದಿಗೆ ನಮ್ಮ ಭಾರತದ ಹೆಮ್ಮೆಯ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನೊಳಗೊಂಡ ಧ್ವಜವನ್ನು ರೂಪಿಸಿ ನಾವೆಲ್ಲರೂ ಒಂದೇ ಎನ್ನುತ್ತಾ ಭಾರತಾಂಬೆಯನ್ನು ವಂದಿಸುತ್ತಾ ಕಲಾವಿದರು ನೃತ್ಯ ಪ್ರದರ್ಶಿಸಿದರು. ನೃತ್ಯ ಸಂಯೋಜಕರಾದ ಗುರು ಬಿ. ನಾಗೇಶ್ ಮತ್ತು ಶಿಷ್ಯವೃಂದದಿಂದ ಭಾರತ ದರ್ಶನ ನೃತ್ಯ ರೂಪಕ ಪ್ರದರ್ಶಿಸಿದರು.