Friday, December 1, 2023
Homeಇದೀಗ ಬಂದ ತಾಜಾ ಸುದ್ದಿಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ,ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ (ರಿ)ಮೈನಹಳ್ಳಿ ವತಿಯಿಂದ ನೋಟ ಬುಕ್, ಕಂಪಾಸ್ ಪೆಟ್ಟಿಗೆ...

ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ,ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ (ರಿ)ಮೈನಹಳ್ಳಿ ವತಿಯಿಂದ ನೋಟ ಬುಕ್, ಕಂಪಾಸ್ ಪೆಟ್ಟಿಗೆ ಪೆನ್ನುಗಳ ವಿತರಣೆ.

ಕೊಪ್ಪಳ: ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಶ್ರೀ ಅಡಿವಿಬಸಯ್ಯ ತೋಟದ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ (ರಿ) ಮೈನಹಳ್ಳಿ ತಾ. ಜಿ. ಕೊಪ್ಪಳ ಸಂಸ್ಥೆಯ ಸಂಸ್ಥಾಪಕರಾದ ಡಾ!! ಷಣ್ಮಖಯ್ಯ ತೋಟದ ಸಾಹಿತಿ.ರಂಗಭೂಮಿ ಕಿರುತರೆ, ಧಾರವಾಹಿ ನಟರು ಮತ್ತು ಸಹೋದರರಿಂದ ಪ್ರತಿವರ್ಷದಂತೆ ತಮ್ಮ ತಂದೆ ತಾಯಿಯವರ ಸವಿ ನೆನಪಿಗಾಗಿ ಸುಮಾರು 25 ವರ್ಷದಿಂದ ತಮ್ಮ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈನಹಳ್ಳಿಯಲ್ಲಿ ಒಂದರಿಂದ ಎಂಟನೆ ತರಗತಿ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ ಬುಕ್, ಕಂಪಾಸ ಪೆಟ್ಟಿಗೆ (ಜಾಮ್ಯಟ್ರಿ ಬಾಕ್ಸ್) ,ಮತ್ತು ಪೆನ್ನುಗಳನ್ನು ವಿತರಣೆ ಮಾಡುವಂತೆ ಈ ವರ್ಷವು ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಶಂಬುಲಿಂಗನಗೌಡ್ರು ಹಲಿಗೇರಿ ವಹಿಸಿದ್ದರು. ಧ್ವಜರೋಹಣವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಮಹೇಂದ್ರಗೌಡ್ರು ಕುರಡಿಗಿ ನೆರವೇರಿಸಿದರು. ಅತಿಥಿಗಳಾಗಿ ಬಿಸರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಶ್ರೀ ಮರಿಶಾಂತವೀರ ಸ್ವಾಮಿ ಚಕ್ಕಡಿ. ಶ್ರೀ ಸಿದ್ದರಡ್ಡಿ ಡಂಬ್ರಳ್ಳಿಯವರು ಇತರ ಉರ ಗಣ್ಯ ವ್ಯಕ್ತಿಗಳು ವೇದಿಕೆ ಮೇಲಿದ್ದರು.
ಶ್ರೀ ಷಣ್ಮುಖಯ್ಯ ತೋಟದರವರು ಮಾತನಾಡುತ್ತ ಸ್ವಾತಂತ್ರ್ಯ ಸಿಕ್ಕರು ನಮಗೆ ಇನ್ನು ಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ನಮ್ಮ ದೇಶದಿಂದ ಜಾತಿ ಪದ್ದತಿ. ಲಂಚಾ ಉಗ್ರಗಾಮಿಗಳ ನಾಶವಾಗಬೇಕು ಅಂದಾಗ ಸ್ವಾತಂತ್ರ್ಯ ಸಿಗುವುದೆಂದು ಹೇಳಿದರು ನಂತರ. ಶಾಲೆಯ ಅಧ್ಯಕ್ಷರರಾದ ಮಹೇಂದ್ರ ಗೌಡ, ಶಾಂತವಿರ ಸ್ವಾಮಿ ಹಾಗೂ ಶ್ರೀ ಶಂಭು ಲಿಂಗನಗಾಡ್ರು ಸ್ವಾತಂತ್ರ್ಯ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಎಸ್.ಡಿ.ಎಮ್.ಸಿ.ಯ ಸರ್ವ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಗುರು ಹಿರಿಯರು ಯುವಕ ಮಿತ್ರರು ಹಾಜರಿದ್ದರು.

ಕಾರ್ಯಕ್ರಮದ ನಿರೂಪಣೆ. ಶ್ರೀ ಬಸವರಾಜ ಸಜ್ಜನ ನಡೆಸಿಕೊಟ್ಟರು. ಶ್ರೀ ಬಸವರಾಜ ಚಿತ್ತಾಪುರ ಮಾಸ್ತರವರು ವಂದನಾರ್ಪಣೆ ಮಾಡಿದರು.

RELATED ARTICLES
- Advertisment -
Google search engine

Most Popular

Recent Comments