Monday, September 25, 2023
Homeದೇಶಕಲ್ಲಿದ್ದಲು ಸಾರಿಗೆಯಲ್ಲಿ ಮಹತ್ತರ ಬದಲಾವಣೆ ಮಾಡಲು ಮೊದಲ ಮೈಲಿ ಸಂಪರ್ಕವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ...

ಕಲ್ಲಿದ್ದಲು ಸಾರಿಗೆಯಲ್ಲಿ ಮಹತ್ತರ ಬದಲಾವಣೆ ಮಾಡಲು ಮೊದಲ ಮೈಲಿ ಸಂಪರ್ಕವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕಾರಣವಾಗುತ್ತದೆ

885 ಎಂಟಿ ಸಾಮರ್ಥ್ಯದ 67 ಎಫ್ಎಂಸಿ ಯೋಜನೆಗಳು ಪ್ರಕ್ರಿಯೆಯಲ್ಲಿವೆ

ಕಲ್ಲಿದ್ದಲು ಸಚಿವಾಲವು ಮಲ್ಟಿಮೋಡಲ್ ಸಂಪರ್ಕವನ್ನು ಅಭಿವೃದ್ಧಿಪಡಿಸಲು ರೂ.26000 ಕೋಟಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಆತ್ಮನಿರ್ಭರ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು, ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಗಣಿಗಳ ಬಳಿ ರೈಲ್ವೆ ಸೈಡಿಂಗ್ ಮೂಲಕ ಆರಂಭದ ಮೊದಲ ಮೈಲಿ ಸಂಪರ್ಕ (ಫಸ್ಟ್ ಮೈಲ್ ಕನೆಕ್ಟಿವಿಟಿ – ಎಫ್ಎಂಸಿ) ವನ್ನು ಒಳಗೊಂಡಿರುವ ರಾಷ್ಟ್ರೀಯ ಕಲ್ಲಿದ್ದಲು ಸಾಗಾಣಿಕೆ ಯೋಜನೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. . ಎಫ್ಎಂಸಿ ಯೋಜನೆಗಳ ಅಡಿಯಲ್ಲಿ ಯಾಂತ್ರೀಕೃತ ಕಲ್ಲಿದ್ದಲು ಸಾಗಣೆ ಮತ್ತು ಲೋಡಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಕಲ್ಲಿದ್ದಲು ಸಚಿವಾಲಯವು ಯೋಜನೆಯನ್ನು ಸಿದ್ಧಪಡಿಸಿದೆ.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಿರಂತರ ಅನ್ವೇಷಣೆಯಲ್ಲಿ, ಎಫ್ಎಂಸಿ ಪರಿಕಲ್ಪನೆಯು ವಿನೂತನ ರೀತಿಯ ಬದಲಾವಣೆಯಾಗಿ ಹೊರಹೊಮ್ಮಿದೆ. ಈ ಅದ್ಭುತ ವಿಧಾನವು ಕಲ್ಲಿದ್ದಲು ಸಾಗಣೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದೆ ಮತ್ತು ಪರಿಸರದ ಮೇಲೆ ಶಾಶ್ವತವಾದ ಮತ್ತು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

ಫಸ್ಟ್ ಮೈಲ್ ಕನೆಕ್ಟಿವಿಟಿಯು ಹತ್ತಿರದ ರೈಲ್ವೇ ಸೈಡಿಂಗ್ಗೆ ಕನ್ವೇಯರ್ಗಳು ಅಥವಾ ರಸ್ತೆಗಳನ್ನು ಬಳಸುವ ಮೂಲಕ ಗಣಿಗಾರಿಕೆ ಪ್ರದೇಶಗಳಲ್ಲಿ ಕಲ್ಲಿದ್ದಲಿನ ರಸ್ತೆ ಸಾರಿಗೆಯ ಅವಶ್ಯಕತೆಯನ್ನು ತೆಗೆದುಹಾಕುತ್ತದೆ. ಕನ್ವೇಯರ್ ಬೆಲ್ಟ್ ಅಥವಾ ರಸ್ತೆಯ ಮೂಲಕ ಹತ್ತಿರದ ರೈಲ್ವೇ ಸೈಡಿಂಗ್ಗೆ ಕಲ್ಲಿದ್ದಲನ್ನು ಸಾಗಿಸುವ ಮೂಲಕ, ಎಫ್ಎಂಸಿ ರಸ್ತೆಯಲ್ಲಿ ಟ್ರಕ್ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ವಾಯು ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ರಸ್ತೆ ಹಾನಿಯಂತಹ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಹಾಗು ಇದು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕಾರಣವಾಗುತ್ತದೆ.

 

ಎನ್ ಸಿ ಎಲ್ ನಲ್ಲಿ (ಫಸ್ಟ್ ಮೈಲ್ ಕನೆಕ್ಟಿವಿಟಿ – ಎಫ್ಎಂಸಿ) ಯೋಜನೆ ಮೊದಲ ಮೈಲಿ ಸಂಪರ್ಕ

ಕಲ್ಲಿದ್ದಲಿನ ~1ಬಿಟಿ ಯಾಂತ್ರೀಕೃತ ನಿರ್ವಹಣೆಯ ಸಾಮರ್ಥ್ಯವನ್ನು ಸಾಧಿಸಲು 885 ಎಂಟಿ ಸಾಮರ್ಥ್ಯದೊಂದಿಗೆ ಒಟ್ಟು 67 ಎಫ್ಎಂಸಿ ಯೋಜನೆಗಳನ್ನು (59 – ಸಿಐಎಲ್, 5- ಎಸ್ಸಿಸಿಎಲ್ & 3 – ಎನ್ ಎಲ್ ಸಿ ಐ ಎಲ್) ಮೂರು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಗತಿಶಕ್ತಿಯ ಉದ್ದೇಶಕ್ಕೆ ಅನುಗುಣವಾಗಿ ಮಲ್ಟಿಮೋಡಲ್ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಕಲ್ಲಿದ್ದಲು ಸಚಿವಾಲಯವು 26000 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೊಂಡಿದೆ.

ಇದಲ್ಲದೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಹಸಿರು ವಾತಾವರಣಕ್ಕೆ ಎಫ್ ಎಂಸಿ ಕೊಡುಗೆ ನೀಡುತ್ತದೆ. ಫಸ್ಟ್ ಮೈಲ್ ಕನೆಕ್ಟಿವಿಟಿಯನ್ನು ಅಳವಡಿಸಿಕೊಳ್ಳುವ ಮೂಲಕ, ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗಳು ದೀರ್ಘಾವಧಿಯಲ್ಲಿ ಹೆಚ್ಚು ಆರ್ಥಿಕವಾಗಿ ಕಾರ್ಯಸಾಧ್ಯವಾಗುತ್ತವೆ. ತಂತ್ರಜ್ಞಾನ-ಚಾಲಿತ ಪ್ರಕ್ರಿಯೆಗಳ ಅನುಷ್ಠಾನವು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಜೊತೆಗೆ ನಡೆಸುವ ವೆಚ್ಚವನ್ನು ಕಡಿಮೆ ಮಾಡುತ್ತದೆ, ಕಲ್ಲಿದ್ದಲು ವಲಯದ ಒಟ್ಟಾರೆ ಲಾಭದಾಯಕತೆಗೆ ಕೊಡುಗೆ ನೀಡುತ್ತದೆ. ಸುಸ್ಥಿರ ಸಾರಿಗೆಯತ್ತ ಈ ಬದಲಾವಣೆಯು ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕಲ್ಲಿದ್ದಲು ತೆರವು ಮತ್ತು ವಿತರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯವು ರೈಲ್ವೆ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದೆ. ಪ್ರಸ್ತುತ, ಕಲ್ಲಿದ್ದಲು ವಿತರಣಾ ಸಾಮರ್ಥ್ಯಗಳ ವಿಸ್ತರಣೆಗಾಗಿ ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ 13 ರೈಲ್ವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ, ಅವು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ಕಲ್ಲಿದ್ದಲು ಸಾರಿಗೆಯ ಮೊದಲ ಮೈಲಿ ಸಂಪರ್ಕವು ಸಾರಿಗೆ ಸವಾಲುಗಳನ್ನು ಎದುರಿಸುವ ಮತ್ತು ದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪರಿಸರ ಪ್ರಜ್ಞೆಯ ಸಮಾಜಗಳನ್ನು ನಿರ್ಮಿಸುವಲ್ಲಿ ಆಶಾಕಿರಣವಾಗಿ ಹೊರಹೊಮ್ಮುತ್ತದೆ. ಪರಿಸರದ ಮೇಲೆ ಎಫ್ಎಂಸಿ ಯ ಪ್ರಭಾವವು ಬಹುಮುಖಿ ಮತ್ತು ದೂರಗಾಮಿಯಾಗಿದೆ:

ಕಡಿಮೆಯಾಗುವ ಇಂಗಾಲದ ಪರಿಣಾಮ : ಸಾರಿಗೆ ವ್ಯವಸ್ಥೆಗಳನ್ನು ಉತ್ತಮಗೊಳಿಸುವುದು ಮತ್ತು ಪಳೆಯುಳಿಕೆ ಇಂಧನ-ಚಾಲಿತ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲು, ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು: ಪರಿಸರ ಸ್ನೇಹಿ ಸಾರಿಗೆ ಜಾಲಗಳನ್ನು ಸ್ಥಾಪಿಸುವುದು ನೈಸರ್ಗಿಕ ಆವಾಸಸ್ಥಾನಗಳು ಮತ್ತು ಜೈವಿಕ ವೈವಿಧ್ಯತೆಯ ರಕ್ಷಣೆಯನ್ನು ಉತ್ತೇಜಿಸುತ್ತದೆ, ಭವಿಷ್ಯದ ಪೀಳಿಗೆಗೆ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುತ್ತದೆ.

ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು: ಕಡಿಮೆಯಾದ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯು ಉಸಿರಾಟದ ಕಾಯಿಲೆಗಳು ಮತ್ತು ಒತ್ತಡ-ಸಂಬಂಧಿತ ಕಾಯಿಲೆಗಳ ಹರಡುವಿಕೆಯನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕ ಆರೋಗ್ಯದ ಮೇಲೆ ಸಕಾರತ್ಮಕ ಪರಿಣಾಮವನ್ನು ಬೀರುತ್ತದೆ.

**

RELATED ARTICLES
- Advertisment -
Google search engine

Most Popular

Recent Comments