ವಿಭಜನೆಯ ದುರಂತವನ್ನು ಎದುರಿಸಿದ 75 ಮಹಾನ್ ವ್ಯಕ್ತಿಗಳನ್ನು ಶ್ರೀ ಹರ್ದೀಪ್ ಎಸ್. ಪುರಿ ಗೌರವಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ದೇಶವು ‘ವಿಭಜನೆ ಕರಾಳತೆಯ ಸ್ಮರಣೆ ದಿನ’ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದ ವಿಭಜನೆಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿದರು. ಶ್ರೀ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ, ತಮ್ಮ ತವರು ನೆಲದಿಂದ ಹೊರ ಹಾಕಲ್ಪಟ್ಟವರ ಹೋರಾಟಗಳನ್ನು ಸ್ಮರಿಸಿದರು. ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
“ವಿಭಜನೆಯ ಕರಾಳತೆಯ ಸ್ಮರಣೆ ದಿನವು ದೇಶದ ವಿಭಜನೆಯ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತದ ಜನರನ್ನು ಪೂಜ್ಯಭಾವದಿಂದ ಸ್ಮರಿಸುವ ಸಂದರ್ಭವಾಗಿದೆ. ಅಲ್ಲದೆ, ಈ ದಿನವು ಸ್ಥಳಾಂತರದ ಹೊರೆಯನ್ನು ಹೊರಲು ಒತ್ತಾಯಿಸಲ್ಪಟ್ಟವರ ನೋವು ಮತ್ತು ಹೋರಾಟವನ್ನು ನೆನಪಿಸುತ್ತದೆ. ಅಂತಹ ಎಲ್ಲ ಜನರಿಗೆ ನನ್ನ ಹೃತ್ಪೂರ್ವಕ ವಂದನೆಗಳು.”
ವಸತಿ ಮತ್ತು ನಗರ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಇಂದು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ʻವಿಭಜನೆಯ ಕರಾಳತೆ ಸ್ಮರಣೆ ದಿನʼದಂದು ವಿಭಜನೆಯ ದುರಂತವನ್ನು ಎದುರಿಸಿದ 75 ಮಹಾನ್ ವ್ಯಕ್ತಿಗಳನ್ನು ಗೌರವಿಸಿದರು. ಆ ಸಮಯದಲ್ಲಿ ಸಂಭವಿಸಿದ ಕೋಮು ಉದ್ವಿಗ್ನತೆಯಿಂದಾಗಿ (ದ್ವೇಷ ಮತ್ತು ಹಿಂಸಾಚಾರ) ಸ್ಥಳಾಂತರಗೊಂಡ ಅಸಂಖ್ಯಾತ ಜನರ ಮತ್ತು ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರ ನೋವು ಮತ್ತು ಸಂಕಟವನ್ನು ಭವಿಷ್ಯದ ಪೀಳಿಗೆ ಎಂದಿಗೂ ಮರೆಯದಂತೆ ಈ ದಿನವು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ವಿಭಜನೆಯ ಕರಾಳತೆ ಸ್ಮರಣೆಯ ದಿನ
ದುರಂತಮಯ ವಿಭಜನೆಯ ವೇಳೆ ಹೋದ ಜೀವಗಳು ಮತ್ತು ಸ್ಥಳಾಂತರದ ಊಹಿಸಲಾಗದ ಯಾತನೆಯ ಬಗ್ಗೆ ಗೌರವ ಸೂಚಿಸಿದ ಸಚಿವರು, ಅಧಿಕಾರದಲ್ಲಿದ್ದವರ ತಪ್ಪು ನೀತಿಗಳು ಭಾರತದ ವಿಭಜನೆಗೆ ಕಾರಣವಾಯಿತು ಎಂದು ಹೇಳಿದರು. ನನ್ನ ಪೋಷಕರು ಈ ಮಹಾನ್ ಮಾನವ ದುರಂತದ ವಿನಾಶಕ್ಕೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದರು. 1952ರಲ್ಲಿ ಜನಿಸಿದ ನಾನು, ನನ್ನ ತಂದೆ ಹೇಗೆ ಪವಾಡಸದೃಶವಾಗಿ ಹತ್ಯಾಕಾಂಡದಿಂದ ಪಾರಾದರು ಮತ್ತು ಲಾಹೋರ್‌ನಿಂದ ಕೊನೆಯ ʻಫ್ರಾಂಟಿಯರ್ ಮೇಲ್ʼ ಹತ್ತಿದರು ಎಂಬುದನ್ನು ಕೇಳುತ್ತಾ ಬೆಳೆದಿದ್ದೇನೆ. ನನ್ನ ಪೋಷಕರು ಮತ್ತು ಕುಟುಂಬದ ಇತರ ಹಲವಾರು ಸದಸ್ಯರು ತಮ್ಮ ಜೀವನವನ್ನು ಶೂನ್ಯದಿಂದ ಪ್ರಾರಂಭಿಸಬೇಕಾಯಿತು ಎಂದು ಹೇಳಿದರು.
ವಿಭಜನೆಯ ಭಯಾನಕತೆಯ ವಸ್ತು ಪ್ರದರ್ಶನ
ಶ್ರೀ ಹರ್ದೀಪ್ ಎಸ್. ಪುರಿ ಅವರು ನಂತರ ಈ ಸಂದರ್ಭದಲ್ಲಿ ಸಂಸತ್ ಸದಸ್ಯ ಶ್ರೀ ರಾಕೇಶ್ ಸಿನ್ಹಾ ಅವರೊಂದಿಗೆ ವಿಭಜನೆಯ ಕರಾಳತೆ ಕುರಿತ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. 1947ರ ವಿಭಜನೆಯ ಹೋರಾಟದಲ್ಲಿ ಬದುಕುಳಿದವರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ವಿಭಜನಾ ವಸ್ತುಸಂಗ್ರಹಾಲಯ, ʻಐಜಿಎನ್‌ಸಿಎʼ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದವು.
***