ಬೆಂಗಳೂರು: ಶಿಕ್ಷಕರು, ಮೀನುಗಾರರು, ಕುಶಲಕರ್ಮಿಗಳು ಮತ್ತು ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳನ್ನು ಒಳಗೊಂಡಂತೆ ಕರ್ನಾಟಕದಿಂದ ಆಯ್ಕೆಯಾದ ಒಟ್ಟು 31 ವ್ಯಕ್ತಿಗಳು 15 ಆಗಸ್ಟ್ 2023 ರಂದು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ವಿಶೇಷ ಅವಕಾಶವನ್ನು ಪಡೆದಿದ್ದಾರೆ.
ವಿಶೇಷ ಅತಿಥಿಗಳಲ್ಲಿ ಕರ್ನಾಟಕದ ಆರು ಮಂದಿ ಶಿಕ್ಷಕರು, ನಾಲ್ವರು ಮೀನುಗಾರರು, ಮೂವರು ಕುಶಲಕರ್ಮಿಗಳು, ಮೂವರು ಜಲಜೀವನ ಮಿಷನ್ ಫಲಾನುಭವಿಗಳು, ಅಮೃತ ಸರೋವರ ಮತ್ತು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯ ತಲಾ ಇಬ್ಬರು ಫಲಾನುಭವಿಗಳು, 13 ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಸೇರಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣವನ್ನು ಕೇಳಲು ಆಹ್ವಾನಿತರು ಮತ್ತು ಯೋಜನೆಗಳ ಫಲಾನುಭವಿಗಳನ್ನು ಅವರ ಕುಟುಂಬದೊಂದಿಗೆ ಆಹ್ವಾನಿಸಲಾಗಿದೆ. ದೇಶದಾದ್ಯಂತ, ಎಲ್ಲಾ ವರ್ಗದ ಜನರನ್ನು ಆಹ್ವಾನಿಸುವ ಮತ್ತು ಆಚರಣೆಯ ಭಾಗವಾಗಿಸುವ ತನ್ನ ‘ಜನ ಭಾಗೀದಾರಿ’ದೃಷ್ಟಿಕೋನಕ್ಕೆ ಅನುಗುಣವಾಗಿ ಸರ್ಕಾರವು ಈ ಉಪಕ್ರಮವನ್ನು ತೆಗೆದುಕೊಂಡಿದೆ.
15 ಆಗಸ್ಟ್ 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಾಗ ದೇಶದಾದ್ಯಂತದ ಸುಮಾರು 1,800 ವಿಶೇಷ ಆಹ್ವಾನಿತರು ಸ್ವಾತಂತ್ರ್ಯೋತ್ಸವವನ್ನು ವೀಕ್ಷಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷ 75 ವರ್ಷಗಳು ಪೂರ್ಣಗೊಂಡಿದ್ದು, ವಿವಿಧ ಗ್ರಾಮಗಳ ಸರಪಂಚರು, ಶಿಕ್ಷಕರು, ದಾದಿಯರು, ರೈತರು, ಮೀನುಗಾರರು, ನವದೆಹಲಿಯಲ್ಲಿ ಕೇಂದ್ರ ವಿಸ್ಟಾ ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಶ್ರಮ ಯೋಗಿಗಳು, ಖಾದಿ ವಲಯದ ಕಾರ್ಯಕರ್ತರು, ರಾಷ್ಟ್ರ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರು, ಗಡಿ ರಸ್ತೆಗಳ ಸಂಸ್ಥೆಯ ಕಾರ್ಮಿಕರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಅಮೃತಸರೋವರ ಯೋಜನೆಗಳು ಮತ್ತು ಹರ್ ಘರ್ ಜಲ್ ಯೋಜನೆಗಳಿಗೆ ಸಹಾಯ ಮಾಡಿದ ಮತ್ತು ಕೆಲಸ ಮಾಡಿದ ಕಾರ್ಮಿಕರನ್ನು ರಾಷ್ಟ್ರ ರಾಜಧಾನಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಅವರ ಕುಟುಂಬ ಸದಸ್ಯರೊಂದಿಗೆ ಆಹ್ವಾನಿಸಲಾಗಿದೆ.
ಜಲಜೀವನ ಮಿಷನ್ ಯೋಜನೆಯಡಿ ಜಲಮಹಿಳೆಯಾಗಿ ಕೆಲಸ ಮಾಡುತ್ತಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮ ಪಂಚಾಯತ್ ನ ಶ್ರೀಮತಿ ಪುಷ್ಪಾ ಹೊನ್ನತ್ತಿ ಅವರು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿತರಾಗಿರುವವರಲ್ಲಿ ಒಬ್ಬರು.
ನವದೆಹಲಿಯಲ್ಲಿ ನಡೆಯಲಿರುವ 🇮🇳ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಹಳ್ಳಿ ಜನರನ್ನು ಆಹ್ವಾನಿಸಿರುವುದಕ್ಕೆ ಹಾವೇರಿಯ ಶ್ರೀಮತಿ ಪುಷ್ಪ ಹೊನ್ನತ್ತಿ ಅವರು @PMOIndia ಶ್ರೀ@narendramodi ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.#JalJeevanMission #HarGharJal #IDC2023 #SpecialGuestsIDC
1/2 pic.twitter.com/2XOimqf6cu
— PIB in Karnataka (@PIBBengaluru) August 11, 2023
ಹಾವೇರಿ ಜಿಲ್ಲೆ ಗುತ್ತಲ ಗ್ರಾಮದ ಸಣ್ಣ ರೈತ ಶ್ರೀ ನೀಲಪ್ಪ ಶಂಭಪ್ಪ ನೀಲಣ್ಣನವರ್ ಕೂಡ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ.
ನವ ದೆಹಲಿಯಲ್ಲಿ ನಡೆಯಲಿರುವ 🇮🇳ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವುದಕ್ಕೆ ನನಗೆ ಸಂತೋಷವಾಗಿದೆ ಎಂದು #ಹಾವೇರಿ ಜಿಲ್ಲೆಯ ಶ್ರೀ ನೀಲಪ್ಪ ಅವರು ಹರ್ಷ ವ್ಯಕ್ತಪಡಿಸಿದರು.#IDC2023 #SpecialGuestsIDC pic.twitter.com/zD8yYXJiKV
— PIB in Karnataka (@PIBBengaluru) August 11, 2023
ಚಾಮರಾಜ ನಗರ ಜಿಲ್ಲೆ, ಯಳಂದೂರು ತಾಲ್ಲೂಕು, ಅಗರ ಗ್ರಾಮ ಪಂಚಾಯತ್ ನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಪುಸ್ತಕ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ನಳಿನಾ ಕುಮಾರಿ ಅವರು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಗೆ ನವ ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಶ್ರೀಮತಿ ನಳಿನ ಕುಮಾರಿ ಅವರು ಧನ್ಯವಾದ ಅರ್ಪಿಸಿದ್ದಾರೆ.#IDC2023 #SpecialGuestsIDC pic.twitter.com/4T1TrJyEkR
— PIB in Karnataka (@PIBBengaluru) August 11, 2023
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಗ್ರಾಮದ ರೈತ ಶ್ರೀ ಎನ್.ಎಚ್. ವಿರೂಪಾಕ್ಷಮೂರ್ತಿ ಅವರನ್ನು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ #ಮಂಡ್ಯ ಜಿಲ್ಲೆಯ ಶ್ರೀ ವಿರೂಪಾಕ್ಷ ಮೂರ್ತಿ ಅವರನ್ನು ನವದೆಹಲಿಯಲ್ಲಿ ನಡೆಯಲಿರುವ 🇮🇳ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ @narendramodi ಅವರಿಗೆ ಧನ್ಯವಾದ ತಿಳಿಸಿದ್ದಾರೆ.#IDC2023 #SpecialGuestsIDC #PMKisanSammanNidhi pic.twitter.com/ZDKkwI97S2
— PIB in Karnataka (@PIBBengaluru) August 11, 2023
ಕಲಬುರ್ಗಿ ಜಿಲ್ಲೆಯ ಬೆಳಗುಂಪಿಯ ರೈತ ಶ್ರೀ ಆನಂದ ನಾಗೇಂದ್ರಪ್ಪ ಕೂಡ ವಿಶೇಷ ಅತಿಥಿಗಳ ಪಟ್ಟಿಯಲ್ಲಿದ್ದಾರೆ.
''ನಾನು ನವ ದೆಹಲಿಗೆ ಮೊದಲ ಬಾರಿಗೆ ಹೋಗುತ್ತಿದ್ದೇನೆ, ಸ್ವಾತಂತ್ರ್ಯೋತ್ಸವದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಕಾತುರನಾಗಿದ್ದೇನೆ''.
– ಶ್ರೀ ಆನಂದ್ ನಾಗೇಂದ್ರಪ್ಪ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ, ಕಲ್ಬುರ್ಗಿ ಜಿಲ್ಲೆ. #IDC2023 #SpecialGuestsIDC #PMKisanSammanNidhi pic.twitter.com/LLk4hUDYkV
— PIB in Karnataka (@PIBBengaluru) August 12, 2023
ಅಖಿಲ ಭಾರತ ಮೀನುಗಾರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿರುವ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಶ್ರೀ ಕರುಣಾಕರ್ ಎಸ್.ಸಾಲಿಯಾನ್ ಮತ್ತು ಅವರ ಪತ್ನಿ ಶ್ರೀಮತಿ ತುಂಗಾ ಕರುಣಾಕರ್ ಅವರನ್ನೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ವೀಕ್ಷಿಸಲು ನವದೆಹಲಿಗೆ ವಿಶೇಷವಾಗಿ ಆಹ್ವಾನಿಸಲಾಗಿದೆ.
"ನವ ದೆಹಲಿಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಸುಯೋಗ ದೊರಕಿದೆ''.
– ಶ್ರೀ ಕರುಣಾಕರ್ ಎಸ್. ಸಾಲ್ಯಾನ್, ಅಖಿಲ ಭಾರತೀಯ ಮೀನುಗಾರರ ಸಂಘಟನಾ ಕಾರ್ಯದರ್ಶಿ, ಉಡುಪಿ ಜಿಲ್ಲೆ. #IDC2023 #SpecialGuestsIDC pic.twitter.com/4ofarxIqDB
— PIB in Karnataka (@PIBBengaluru) August 12, 2023
''ನವ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರ್ಯೊತ್ಸವದಲ್ಲಿ ಪ್ರಧಾನ ಮಂತ್ರಿ ಶ್ರೀ@narendramodi
ಅವರು ಧ್ವಜಾರೋಹಣ ನೆರವೇರಿಸುವುದನ್ನು ಕಣ್ತುಂಬಿಕೊಳ್ಳಲು ತುಂಬಾ ಖುಷಿಯಾಗಲಿದೆ.''– ಶ್ರೀಮತಿ ತುಂಗಾ ಕರುಣಾಕರ್
ಮೀನುಗಾರಿಕೆ ಮಹಿಳೆ, ಉಡುಪಿ ಜಿಲ್ಲೆ. #IDC2023 #SpecialGuestsIDC pic.twitter.com/rJmOSRtJat— PIB in Karnataka (@PIBBengaluru) August 12, 2023
ಮೀನುಗಾರರು ಹಾಗೂ ಉಡುಪಿ ಜಿಲ್ಲಾ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಾಗೂ ಅಖಿಲ ಭಾರತ ಮೀನುಗಾರರ ಸಂಘಟನೆಯ ಕಾರ್ಯದರ್ಶಿ ಶ್ರೀ ದಯಾನಂದ ಕೆ.ಸುವರ್ಣ ಅವರು ಮೀನುಗಾರ ಸಮುದಾಯದಿಂದ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನಿತರಾಗಿರುವ ಇನ್ನೋರ್ವ ಸದಸ್ಯರು.
''ನವ ದೆಹಲಿಯಲ್ಲಿ ನಡೆಯಲಿರುವ 🇮🇳 ಸ್ವಾತಂತ್ರ್ಯೊತ್ಸವದಲ್ಲಿ ಭಾಗವಹಿಸಲು ಮೀನುಗಾರರನ್ನು ಆಹ್ವಾನಿಸಿರುವುದು ಮೀನುಗಾರರ ಮೇಲೆ ಕೇಂದ್ರ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತಿದೆ.''
– ಶ್ರೀ ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ, ಉಡುಪಿ ಜಿಲ್ಲೆ.#IDC2023 #SpecialGuestsIDC pic.twitter.com/SwXY17Mi6o
— PIB in Karnataka (@PIBBengaluru) August 12, 2023
ಚಿಕ್ಕಮಗಳೂರು ತಾಲ್ಲೂಕು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ವಿ.ಲೋಕೇಶ್ ಅವರು ಎಫ್ಪಿಒ ವಿಭಾಗದ ಆಹ್ವಾನಿತರಲ್ಲಿ ಒಬ್ಬರು.
"ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳಲ್ಲಿ 10 ಸಾವಿರ ರೈತ ಉತ್ಪಾದಕ ಸಂಘಟನೆ (ಎಫ್.ಪಿ.ಒ) ಗಳನ್ನು ರಚಿಸಬೇಕೆಂದಿರುವುದು ಸ್ವಾಗತಾರ್ಹ."
– ಶ್ರೀ ಪಿ.ವಿ. ಲೋಕೇಶ್ ಅಧ್ಯಕ್ಷರು, ರೈತ ಉತ್ಪಾದಕ ಸಹಕಾರ ಸಂಘ, ಚಿಕ್ಕಮಗಳೂರು ತಾಲೂಕು.#IDC2023 #SpecialGuestsIDC pic.twitter.com/EVZsqkm8EK
— PIB in Karnataka (@PIBBengaluru) August 12, 2023
ವಿಜಯನಗರ ಜಿಲ್ಲೆ ಕೂಡ್ಲಿಗಿಯ ರೈತ ಉತ್ಪಾದಕರ ಕಂಪನಿಯ ಸಿಇಒ ಶ್ರೀ ಜಿ ಎಸ್ ಗಿರೀಶ್ ಅವರನ್ನೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ.
''ಕೇಂದ್ರ ಸರ್ಕಾರ ರಚಿಸಿರುವ ರೈತ ಉತ್ಪಾದಕ ಸಂಘಟನೆಗಳಿಂದ ರೈತರಿಗೆ ಬೀಜ, ರಸಗೊಬ್ಬರ ಮತ್ತು ಔಷಧ ವಿತರಣೆಗೆ ಅನುಕೂಲವಾಗಿದೆ.''
– ಶ್ರೀ ಜಿ.ಎಸ್ ಗಿರೀಶ್, ಸಿಇಒ, ರೈತ ಉತ್ಪಾದಕ ಕಂಪನಿ,
ಕೂಡ್ಲಿಗಿ, ವಿಜಯನಗರ ಜಿಲ್ಲೆ.#IDC2023 #SpecialGuestsIDC pic.twitter.com/6lQN7VobE7— Central Bureau of Communication, Karnataka (@CBC_Bengaluru) August 12, 2023
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಸೂರು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಿರೀಶ್ ಕೂಡ ವಿಶೇಷ ಆಹ್ವಾನಿತರಾಗಿದ್ದಾರೆ.
"ನವ ದೆಹಲಿಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರ್ಯೋತ್ಸವಕ್ಕೆ ಜನಸಾಮಾನ್ಯರನ್ನು ಆಹ್ವಾನಿಸಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ @narendramodi ಅವರಿಗೆ ಧನ್ಯವಾದಗಳು."
-ಶ್ರೀ ಗಿರೀಶ್, ಅಧ್ಯಕ್ಷರು,
ಎಫ್.ಪಿ.ಒ, ಬ್ಯಾಡಗಿ ತಾಲೂಕು,
ಹಾವೇರಿ ಜಿಲ್ಲೆ. #IDC2023 #SpecialGuestsIDC pic.twitter.com/66cbpBmSh4— PIB in Karnataka (@PIBBengaluru) August 12, 2023
ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಪುರ ಜಿಲ್ಲೆಯ ಶ್ರೀ ಮಲ್ಲನಗೌಡ ಪಾಟೀಲ ಅವರಿಗೂ ಆಹ್ವಾನ ನೀಡಲಾಗಿದೆ.
"ನವದೆಹಲಿಯಲ್ಲಿ ನಡೆಯುವ 🇮🇳 ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹಳ್ಳಿಯ ಜನರು ಪಾಲ್ಗೊಳ್ಳುವುದು ತುಂಬಾ ಕಡಿಮೆ. ಇಂತಹ ಸಂದರ್ಭದಲ್ಲಿ ನನ್ನನ್ನು #ವಿಜಯಪುರ ಜಿಲ್ಲೆಯಿಂದ ಆಹ್ವಾನಿಸಿರುವುದಕ್ಕೆ ತುಂಬಾ ಆನಂದವಾಗಿದೆ."
– ಶ್ರೀ ಮಲ್ಲನಗೌಡ ಟಿ. ಪಾಟೀಲ್
ವಿಜಯಪುರ ಜಿಲ್ಲೆ. #IDC2023 #SpecialGuestsIDC pic.twitter.com/giJACb5C44— PIB in Karnataka (@PIBBengaluru) August 12, 2023
ಅಮೃತ ಸರೋವರದ ಫಲಾನುಭವಿಯಾದ ಕೋಲಾರ ಜಿಲ್ಲೆ ಪೆದ್ದಪಲ್ಲಿ ಗ್ರಾಮದ ಶ್ರೀಮತಿ ಮಲ್ಲರವಳ್ಳಿ ಅವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.
"ಅಮೃತ ಸರೋವರ ಯೋಜನೆಯಿಂದ ಗ್ರಾಮದಲ್ಲಿ ಕೆರೆ ಪುನಶ್ಚೇತನವಾಗಿದ್ದು, ನೀರಿನ ಸಂಗ್ರಹ ಹೆಚ್ಚಾಗಿದೆ. ಇದರಿಂದ ಕೃಷಿಗೆ ತುಂಬಾ ಅನುಕೂಲವಾಗಿದೆ."
– ಶ್ರೀಮತಿ ಮಲ್ಲರ ವಳ್ಳಿ
ಅಮೃತ ಸರೋವರ ಯೋಜನೆ ಫಲಾನುಭವಿ ಪೆದ್ದಪಲ್ಲಿ ಗ್ರಾಮ, ಕೋಲಾರ ಜಿಲ್ಲೆ. #IDC2023 #SpecialGuestsIDC pic.twitter.com/tLWEAykbcw— PIB in Karnataka (@PIBBengaluru) August 12, 2023