ಕವನ (ಬಾವಗೀತೆ)
ಚೆಲುವ ಕನ್ನಡ ನಾಡು
ಸುಂದರ ಗಂಧದ ಬೀಡು
ಗಾಳಿ ಬೀಸುವ ಹಸಿರು ವನಗಳು
ಕಲೆಯ ನದಿಯ ದೇವಾಲಯ
ಶಾಂತವಾಗಿ ಹರಿವ ಹೇಮಾವತಿ
ಧುಮುಕಿ ನೆಗೆವ ಶರಾವತಿ
ಜೋಗದಲ್ಲಿ ಜಲಪಾತ ಇರುವುದು
ಕೊಡಗಿನಲ್ಲಿ ಕಾವೇರಿ ಹುಟ್ಟುವುದು
ಕಪಿಲೆ ಗೋದಾವರಿ ತುಂಗಭದ್ರೆ
ನಮ್ಮ ದಾಹ ಹಿಂಗಿಸೋ ನದಿಗಳೇ
ನೀವೇ ನಮ್ಮ ಜೀವನ
ಸೃಷ್ಟಿ ಸೊಬಗಿನ ಚೇತನ
ಹಾಸನ ಜಿಲ್ಲೆಯ ಹಲ್ಮಿಡಿ ಶಾಸನ
ಬೇಲೂರು ಶಿಲ್ಪವು ಕೆತ್ತನೆ ವೈಭವ
ಮೈಸೂರಿನಲ್ಲಿ ರಾಜರ ಅರಮನೆ
ತ್ಯಾಗ ಅಹಿಂಸೆಯ ಗೊಮ್ಮಟಗಿರಿಯು
ಪಟ್ಟದಕಲ್ಲು ಐಹೊಳೆ ಹಂಪೆ
ಚಿತ್ರದುರ್ಗದ ಕಲ್ಲಿನ ಕೋಟೆ
ಇದುವೆ ನಮ್ಮ ಸಂಸ್ಕೃತಿ
ನಾಡು ನುಡಿಯ ಸಂಸ್ತುತಿ
—
ಗೊರೂರು ಅನಂತರಾಜು
ಹಾಸನ