ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 12- ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ಕೇಂದ್ರ ಸರ್ಕಾರದ ವತಿಯಿಂದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 15ರಂದು ಪ್ರತಿ ಮನೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸುವುದು ಸೇರಿದಂತೆ
ಆಗಸ್ಟ್15ರೊಳಗೆ ಮಣ್ಣು ಅಥವಾ
ಮಣ್ಣಿನ ದೀಪ ಹಿಡಿದು ಪಂಚಪ್ರಾಣ ಪ್ರತಿಜ್ಞೆ ಕೈಗೊಳ್ಳುವುದು ಮತ್ತು ಅದರ ಭಾವಚಿತ್ರ ತೆಗೆದು www.yuva.gov.in ಗೆ ಕಳಿಸುವುದು, ವೀರಯೋಧರ ಸ್ಮರಣಾರ್ಥ ವಿಶೇಷ ಶಿಲಾಫಲಕಗಳನ್ನು ಸ್ಥಾಪಿಸುವುದು,
ಅಮೃತ ಮಹೋತ್ಸವದ ನೆನಪಿಗಾಗಿ 75 ಸಸಿ ನೆಡುವ ಕಾರ್ಯಕ್ರಮ, ವೀರಯೋಧರ ಸ್ಮರಣೆ, ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿ ಜಿಲ್ಲಾದ್ಯಂತ ಹಮ್ಮಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು,
ಅಭಿಯಾನದಲ್ಲಿ ಶಾಲಾ ಮಕ್ಕಳೂ ಸೇರಿದಂತೆ ಪ್ರತಿಯೊಬ್ಬ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ. ಎನ್. ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.