Monday, September 25, 2023
Homeದೇಶ“ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯ ಪ್ರಶಸ್ತಿ”ಗೆ ಹಿರಿಯ ಲೇಖಕ/ಲೇಖಕಿಯರಿಂದ ಕೃತಿಗಳಿಗಾಗಿ ಕರೆ

“ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯ ಪ್ರಶಸ್ತಿ”ಗೆ ಹಿರಿಯ ಲೇಖಕ/ಲೇಖಕಿಯರಿಂದ ಕೃತಿಗಳಿಗಾಗಿ ಕರೆ

ಪುಸ್ತಕ ಪ್ರೀತಿ ಬೆಳೆಸುವ ದೃಷ್ಥಿಯಿಂದ, ಓದುಗರ ಮುಂದೆ, ಓದಲೇಬೇಕಾದ ಕೃತಿಗಳನ್ನು ಒದಗಿಸಿದರೆ, ಸೊಗಸಾದ ಮೃಷ್ಟಾನ್ನ ಭೋಜನ ಒದಗಿಸಿದಂತೆ. ಈ ಜಾಡಿನಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಕಳೆದ ೩೧ ವರ್ಷಗಳಿಂದ, ಶ್ರೇಷ್ಠ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ೩೧ ವರ್ಷದಲ್ಲಿ, ೩೫೦ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಿ ಲೇಖಕರನ್ನು ಗೌರವಿಸಿ, ಪ್ರೋತ್ಸಾಹಿಸಿದೆ.
ಸಮಾರಂಭವು ಅಕ್ಟೋಬರ್ ರಜೆಯಲ್ಲಿ “ಉಡುಪಿಯ ಶ್ರೀ ದುರ್ಗಾ ಆದಿಶಕ್ತಿ ಸಭಾಭವನ, ದೊಡ್ಡಣಗುಡ್ಡೆ”ಯಲ್ಲಿ ನಡೆಯಲಿರುವ “ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ೩ ನೇ ಸಮಾವೇಶ” ಹಾಗೂ “ಕರಾವಳಿ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ” ದಲ್ಲಿ ಈ ಗೌರವ ಪ್ರಶಸ್ತಿಯನ್ನು ನೀಡಲಾಗುವುದು. ೫೦ ವರ್ಷ ಮೇಲ್ಪಟ್ಟ, ಕನಿಷ್ಟ ೧೦ ವಿವಿಧ ಪ್ರಕಾರಗಳ ಕೃತಿಗಳನ್ನು ರಚನೆ ಮಾಡಿರುವ ಹಿರಿಯ ಲೇಖಕರು, ಈ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಅರ್ಹರಿರುತ್ತಾರೆ. ಹಿರಿಯನ್ನು ಗೌರವಿಸಬೇಕೆಂದು, ಅವರ ಕೃತಿಗಳ ಆಯ್ಕೆ ಮಾಡಿ ಓದುಗರ ಮುಂದೆ ಪ್ರಸ್ತುತ ಪಡಿಸುವುದೆ ಈ ಸಮಾರಂಭದ ವಿಶೇಷ.
ಆಸಕ್ತಿ ಇರುವ ಲೇಖಕರು, ತಮ್ಮ ಇತ್ತೀಚಿನ ಸಂಪೂರ್ಣ ಬಯೋಡಾಟಾ ಮತ್ತು ೨ ಫೋಟೋದೊಂದಿಗೆ, ತಮ್ಮ ರಚನೆಯ ೧೦ ಅಥವಾ ಹೆಚ್ಚು ಕೃತಿಗಳನ್ನು, ಕೂಡಲೇ ಕಳುಹಿಸಲು ಕೋರಲಾಗಿದೆ. ಈ ಪ್ರಶಸ್ತಿಯು ಜಿಲ್ಲಾವಾರು ಆಯ್ಕೆಯಾಗಿರುವುದರಿಂದ, ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಕೋರಲಾಗಿದೆ. ಸಂಸ್ಥೆ ವಿಶ್ವೇಶ್ವರಯ್ಯ ಆಕರ ಗ್ರಂಥಾಲಯ ಸ್ಥಾಪಿಸಿದ್ದು, ಸದರಿ ಗ್ರಂಥಾಲಯಕ್ಕೆ ನಿಮ್ಮ ೧೦ ಕೃತಿಗಳ ಹೊರತಾಗಿ, ಹೆಚ್ಚಿನ ಬೇರೆ ಬೇರೆ ಪುಸ್ತಕಗಳನ್ನು ದಾನ ಮಾಡಬಹುದು. ಒಟ್ಟಾರೆ ಪುಸ್ತಕಗಳನ್ನು ಕಳುಹಿಸುವವರು ವಿ.ಆರ್.ಎಲ್. ಅಥವಾ ಎಸ್.ಆರ್.ಎಸ್. ರೀತಿಯ ಬಸ್ ಪಾರ್ಸೆಲ್ ಮೂಲಕ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬಹುದು ಅಥವಾ ನೇರವಾಗಿ ನಮ್ಮ ಕಛೇರಿಗೆ ತಲುಪಿಸಬಹುದು. ಇದು ಗೌರವ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಮುತ್ತಿನ ಹಾರ, ಶಾಲು ಮತ್ತು ಬ್ಯಾಡ್ಜ್ ಒಳಗೊಂಡಿರುತ್ತದೆ. ಆಹ್ವಾನ ಪತ್ರಿಕೆ ಮತ್ತು ಸ್ಮರಣ ಸಂಚಿಕೆಯಲ್ಲಿ ಲೇಖಕರ ಫೋಟೋ ಸಮೇತ ವಿವರಗಳು ದಾಖಲಾಗುತ್ತದೆ. ಸಮಾರಂಭದ ಸಂಪೂರ್ಣ ವಿಡಿಯೋ ನಮ್ಮ “ಸುರ್ವೆ ನ್ಯೂಸ್” ಯು ಟ್ಯೂಬ್ ಚಾನೆಲ್‌ನಲ್ಲಿ ಆಪ್‌ಲೌಡ್ ಸೌಲಭ್ಯವಿರುತ್ತದೆ.
ಪುಸ್ತಕ ಕಳುಹಿಸುವ ವಿಳಾಸ : ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) ನಂ. ೪೬೮/ಸುರ್ವೆ, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊ : ೯೮೪೫೩೦೭೩೨೭
RELATED ARTICLES
- Advertisment -
Google search engine

Most Popular

Recent Comments